ರೈತರಿಗೆ ಸರ್ಕಾರದಿಂದ ಸಿಗುತ್ತೆ 25,000 ಸಹಾಯಧನ! ಪಡೆದುಕೊಳ್ಳುವುದಕ್ಕೆ ಹೀಗೆ ಮಾಡಿ
ಸರ್ಕಾರ ರೈತರು ಹೊಂದಿರುವ ಜಮೀನಿನ (Agriculture Land) ಆಧಾರದ ಮೇಲೆ ಇದು ರೈತರಿಗೆ ಸಹಾಯಧನವನ್ನು ನೀಡುತ್ತದೆ
ಸರ್ಕಾರಗಳು ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಬೆಳವಣಿಗೆ ಆಗಬೇಕು ಎಲ್ಲಾ ಕ್ಷೇತ್ರದಲ್ಲಿ ಇರುವ ಜನರು ಕೂಡ ಅಭಿವೃದ್ಧಿ ಕಾಣಬೇಕು ಎನ್ನುವ ಕಾರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ.
ಇತ್ತೀಚಿಗೆ ಜಗತ್ತು ಕಂಡ ತಾಂತ್ರಿಕ ಬೆಳವಣಿಗೆ (technology development) ಕಾರಣದಿಂದಾಗಿ ಕಾರ್ಮಿಕರು ಸಿಗದೇ ಬಹಳ ಕಷ್ಟದಲ್ಲಿರುವ ಒಂದು ಕ್ಷೇತ್ರ ಎಂದರೆ ಕೃಷಿ (Agriculture) ಎನ್ನಬಹುದು.
ಜಗತ್ತಿನ ಎಲ್ಲರಿಗೆ ಅನ್ನ ನೀಡುವ ರೈತರ ಜೀವನವು ಯಾವಾಗಲೂ ಒಂದೇ ತರ ಇರುವುದಿಲ್ಲ, ಮಳೆ ಹೆಚ್ಚಾದರೂ ಕಷ್ಟ.. ಕಡಿಮೆ ಬಂದರೂ ಕಷ್ಟ. ಬೆಲೆಗಳಲ್ಲಿ ಏರುಪೇರು ಉತ್ತಮ ಬೆಳೆಯಾದಾಗ ಬೆಲೆ ಇಲ್ಲ ಉತ್ತಮ ಬೆಲೆ ಇದ್ದಾಗ ಬೆಳೆ ಸರಿಯಾಗಿ ಬರುವುದಿಲ್ಲ
ಎಲ್ಲಾ ಮಹಿಳೆಯರಿಗೂ ಸಿಗುತ್ತೆ ಉಚಿತ ಟೂಲ್ ಕಿಟ್ ಜೊತೆಗೆ 15,000 ರೂಪಾಯಿ! ಅರ್ಜಿ ಸಲ್ಲಿಸಿ
ಇದರ ಜೊತೆಗೆ ರೋಗಗಳು ಹಾಗೂ ಮಧ್ಯವರ್ತಿಗಳ ಕಾಟ ಇದನ್ನೆಲ್ಲವನ್ನು ಬಿಟ್ಟಿನಿಂತು ರೈತರು ಅಭಿವೃದ್ಧಿ ಕಾಣಬೇಕೆಂದರೆ ಬಹಳ ಕಷ್ಟ, ಹಾಗಾಗಿ ಸರ್ಕಾರ ರೈತರಿಗೆ ಯಾವಾಗಲೂ ನೆರವಾಗುವಂತಹ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ.
ಇದೇ ಸಾಲಿನಲ್ಲಿ ಈಗ ಇನ್ನೊಂದು ಯೋಜನೆ ರೈತರ ನೆರವಿಗೆ ಬಂದಿದೆ ಇದರ ಹೆಸರು ಕಿಸಾನ್ ಆಶೀರ್ವಾದ ಯೋಜನೆ (Kisan Aashirwad Yojana). ಹೆಸರೇ ಹೇಳುವಂತೆ ರೈತರಿಗೆ ನೆರವಾಗಲೆಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ರೈತರು ಹೊಂದಿರುವ ಜಮೀನಿನ (Agriculture Land) ಆಧಾರದ ಮೇಲೆ ಇದು ರೈತರಿಗೆ ಸಹಾಯಧನವನ್ನು ನೀಡುತ್ತದೆ, ಈ ಸಹಾಯಧನವನ್ನು ಪಡೆದುಕೊಂಡ ರೈತರು ತಮ್ಮ ಜಮೀನಿನಲ್ಲಿ ಯಾವ ತರಹದ ಅಭಿವೃದ್ಧಿಗಳನ್ನು ಮಾಡಬೇಕು ಅದನ್ನು ಮಾಡಬಹುದು.
ಮಹಿಳೆಯರೇ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬೇಕು ಅಂದ್ರೆ ಈ ದಾಖಲೆ ಕಡ್ಡಾಯ!
ಈ ಯೋಜನೆಯ ಅಡಿಯಲ್ಲಿ ರೈತರಿಗೆ ತಾವು ಹೊಂದಿರುವ ಜಾಗದ ಆಧಾರದ ಮೇಲೆ ಸಹಾಯಧನ ಸಿಗಲಿದೆ, ರೈತರು ಒಂದು ಎಕರೆ ಜಮೀನನ್ನು ಹೊಂದಿದ್ದರೆ 5000 ಅವರಿಗೆ ಸಿಗಲಿದೆ. ಇದು ಗರಿಷ್ಠ ಐದು ಎಕರೆಗಳ ತನಕ ಜಾಗ ಇರುವ ರೈತರಿಗೆ (Farmer) ಮಾಡಿರುವ ಯೋಜನೆಯಾಗಿದೆ.
ಒಂದು ಎಕರೆಗೆ 5000 ಗಳಂತೆ ಎರಡು ಎಕರೆಗೆ ರೂ.10,000 3 ಎಕರೆ ಜಾಗ ಇದ್ದಲ್ಲಿ ಹದಿನೈದು ಸಾವಿರ ರೂಪಾಯಿಗಳು ನಾಲ್ಕು ಎಕರೆ ಜಾಗ ಇದ್ದಲ್ಲಿ 20000 ಹಾಗೂ ಗರಿಷ್ಠ ಎಂದರೆ 5 ಎಕರೆ ಜಾಗ ಇದ್ದವರಿಗೆ 25000 ತನಕದ ಸಹಾಯಧನ ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಅಕೌಂಟ್ (Bank Account) ಸೇರಲಿದೆ.
ಈ ಬ್ಯಾಂಕ್‌ನಲ್ಲಿ ನಿಮ್ಮ ಅಕೌಂಟ್ ಇದ್ರೆ 10 ನಿಮಿಷದಲ್ಲಿ ಪಡೆಯಿರಿ 10 ಲಕ್ಷ ರೂ. ಸಾಲ
ಈ ಯೋಜನೆಯನ್ನು ಪಡೆಯಬೇಕು ಎಂದಾದಲ್ಲಿ ರೈತರು ತಮ್ಮ ಸಮೀಪದ ರೈತ ಕೇಂದ್ರಗಳಿಗೆ ಭೇಟಿ ನೀಡಬೇಕು, ಭೇಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಅರ್ಜಿ ಸಲ್ಲಿಸಬೇಕಾದಾಗ ಬೇಕಾಗುವ ದಾಖಲೆಗಳು ಎಂದರೆ ರೈತರ ಪಹಣಿ ಪತ್ರ ಮತ್ತು ಆಧಾರ್ ಕಾರ್ಡ್ ಬ್ಯಾಂಕ್ ದಾಖಲೆಗಳ ವಿವರಗಳು ಮತ್ತು ರೈತರ ವಿಳಾಸಕ್ಕೆ ಇರುವ ದಾಖಲೆಗಳು ಆಗಿದೆ.
ಪ್ರಸ್ತುತ ಯೋಜನೆ ಜಾರ್ಖಂಡ್ ರಾಜ್ಯದಲ್ಲಿ ಜಾರಿಗೆ ಬಂದಿದ್ದು ಅಲ್ಲಿನ ರೈತರು ಇದರ ಲಾಭವನ್ನು ಪಡೆಯಲು ಆರಂಭಿಸಿದ್ದಾರೆ ಇದೇ ರೀತಿ ಬೇರೆ ರಾಜ್ಯದ ಜನಗಳಿಗೂ ಕೂಡ ಈ ಯೋಜನೆ ಶೀಘ್ರವಾಗಿ ಬರಲಿ ಎನ್ನುವುದು ನಮ್ಮ ಹಾರೈಕೆಯಾಗಿದೆ.
ಹೊಸ ಮನೆ ಕಟ್ಟುವ ಇಂತಹವರಿಗೆ ಕೇಂದ್ರ ಸರ್ಕಾರದಿಂದಲೇ ಸಿಗಲಿದೆ 30 ಲಕ್ಷ!
Farmers will get 25,000 subsidy from the government, Do this to get it