ಮಹಿಳೆಯರೇ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬೇಕು ಅಂದ್ರೆ ಈ ದಾಖಲೆ ಕಡ್ಡಾಯ!

Story Highlights

ಮಹಿಳೆಯರು ತಮ್ಮ ಮನೆಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ (Free Gas Connection) ಹಾಗೂ ಉಚಿತ ಸಿಲಿಂಡರ್ (Free Gas Cylinder) ಪಡೆದುಕೊಳ್ಳಲು ಸಾಧ್ಯವಾಗಿದೆ.

ಮಹಿಳಾ ಸಬಲೀಕರಣಕ್ಕಾಗಿ (women empowerment) ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರಿಗೆ ಸಹಾಯ ಹಸ್ತ ಚಾಚಿದೆ ಎನ್ನಬಹುದು.

ಮಹಿಳೆಯರು ಅದರಲ್ಲೂ ಗ್ರಾಮೀಣ ಭಾಗದಲ್ಲಿ ವಾಸಿಸುವ ಮಹಿಳೆಯರು ಜೀವನ ನಡೆಸಲು ಕಷ್ಟಪಡಬೇಕಾಗುತ್ತದೆ, ಒಂದು ಕಡೆ ಸರಿಯಾಗಿ ಇಂಧನದ ವ್ಯವಸ್ಥೆ ಇಲ್ಲದೆ ಕಟ್ಟಿಗೆ ಒಲೆಯಿಂದ ಅಡುಗೆ ಮಾಡುವ ಪರಿಸ್ಥಿತಿ ಇದ್ದರೆ ಇನ್ನೊಂದು ಕಡೆ ಆರ್ಥಿಕವಾಗಿಯೂ ಸಾಕಷ್ಟು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.

ಆದರೆ ಈಗ ಈ ಸಮಸ್ಯೆಗೆ ಫುಲ್ ಸ್ಟಾಪ್ ಇಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಈ ಕಾರಣಕ್ಕಾಗಿ ಜಾರಿಗೆ ತರಲಾಗಿದೆ, ಇದುವರೆಗೆ ಲಕ್ಷಾಂತರ ಮಹಿಳೆಯರು ತಮ್ಮ ಮನೆಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ (Free Gas Connection) ಹಾಗೂ ಉಚಿತ ಸಿಲಿಂಡರ್ (Free Gas Cylinder) ಪಡೆದುಕೊಳ್ಳಲು ಸಾಧ್ಯವಾಗಿದೆ.

ಈ ಬ್ಯಾಂಕ್‌ನಲ್ಲಿ ನಿಮ್ಮ ಅಕೌಂಟ್ ಇದ್ರೆ 10 ನಿಮಿಷದಲ್ಲಿ ಪಡೆಯಿರಿ 10 ಲಕ್ಷ ರೂ. ಸಾಲ

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ! (Benefits of Pradhan mantri Ujjwala Yojana)

ಈ ಯೋಜನೆಯ ಅಡಿಯಲ್ಲಿ ಮಹಿಳೆಯರ ಹೆಸರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡಲಾಗುವುದು. ಒಂದು ಉಚಿತ ಗ್ಯಾಸ್ ಸ್ಟವ್, ಗ್ಯಾಸ್ ಲೈಟರ್ ಮತ್ತು ಒಂದು ಗ್ಯಾಸ್ ಸಿಲಿಂಡರ್ ಕಿಟ್ ನೀಡಲಾಗುವುದು.

ಇದರ ಜೊತೆಗೆ ಸಬ್ಸಿಡಿ (subsidy) ಕೂಡ ನೀಡಲಾಗುವುದು. 900 ರೂಪಾಯಿಗಳ ಸಿಲೆಂಡರ್ ಅನ್ನು ಉಜ್ವಲ ಯೋಜನೆಯ ಫಲಾನುಭವಿಗಳು 300 ರೂಪಾಯಿ ಸಬ್ಸಿಡಿ ಜೊತೆಗೆ ಕೇವಲ 603 ರೂಪಾಯಿಗಳನ್ನು ಪಾವತಿ ಮಾಡಿ ಸಿಲೆಂಡರ್ ಪಡೆಯಬಹುದು.

ಗ್ಯಾಸ್  ಸಿಲೆಂಡರ್ 12 ತಿಂಗಳು ಖರೀದಿ ಮಾಡಬಹುದಾಗಿದೆ ಅದಕ್ಕಿಂತ ಹೆಚ್ಚಿಗೆ ಖರೀದಿ ಮಾಡಿದರೆ ಉಚಿತ ಗ್ಯಾಸ್ ಸಿಲಿಂಡರ್ ಸಿಗುವುದಿಲ್ಲ. ಮೊದಲು ಒಂದು ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿತ್ತು ಈಗ ಎರಡು ಎಲ್ಪಿಜಿ ಗ್ಯಾಸ್ ಸಿಲಿಂಡರ್ ನೀಡಲಾಗುತ್ತದೆ. ಗ್ಯಾಸ್ ಸಿಲಿಂಡರ್ ಖರೀದಿ ಮಾಡುವಾಗ ಸಂಪೂರ್ಣ ಮೊತ್ತವನ್ನು ಪಾವತಿಸಬೇಕು ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುತ್ತದೆ.

ಹೊಸ ಮನೆ ಕಟ್ಟುವ ಇಂತಹವರಿಗೆ ಕೇಂದ್ರ ಸರ್ಕಾರದಿಂದಲೇ ಸಿಗಲಿದೆ 30 ಲಕ್ಷ!

Gas Cylinder subsidyಯಾರಿಗೆ ಸಿಗುತ್ತೆ ಉಚಿತ ಗ್ಯಾಸ್ ಸಿಲಿಂಡರ್?

* 18 ವರ್ಷ ವಯಸ್ಸಾಗಿರುವ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು
* ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು ಬಿಪಿಎಲ್ ಕಾರ್ಡ್ ಹೊಂದಿರಬೇಕು
* ಸರ್ಕಾರಿ ನೌಕರಿಯಲ್ಲಿ ಇರುವವರು ಅಥವಾ ಆದಾಯ ತೆರಿಗೆ ಪಾವತಿ ಮಾಡುವವರು ಅರ್ಜಿ ಸಲ್ಲಿಸುವಂತಿಲ್ಲ
* ಈಗಾಗಲೇ ಗ್ಯಾಸ್ ಕನೆಕ್ಷನ್ ಇದ್ರೆ ಮತ್ತೆ ಉಚಿತ ಗ್ಯಾಸ್ ಕನೆಕ್ಷನ್ ಸಿಗುವುದಿಲ್ಲ.
* ನಗರ ಪ್ರದೇಶದಲ್ಲಿ ವಾರ್ಷಿಕ ಆದಾಯ 2 ಲಕ್ಷ ರೂಪಾಯಿ ಹಾಗೂ ಗ್ರಾಮೀಣ ಭಾಗದಲ್ಲಿ ವಾರ್ಷಿಕ ಆದಾಯ ಒಂದು ಲಕ್ಷ ರೂಪಾಯಿ ಮೀರದೆ ಇದ್ದರೆ ಅಂತವರಿಗೆ ಉಚಿತ ಗ್ಯಾಸ್ ಕನೆಕ್ಷನ್ ಸಿಗುತ್ತದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ 3 ವರ್ಷದ ಅವಧಿಗೆ ಸಿಗಲಿದೆ 3 ಲಕ್ಷ ಸಾಲ!

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಇಂತಿವೆ!

ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಮನೆಯ ಸ್ವಯಂ ವಿಳಾಸ
ಬ್ಯಾಂಕ್ ಖಾತೆಯ ವಿವರ
ಜಾತಿ ಪ್ರಮಾಣ ಪತ್ರ
ಪಾಸ್ ಪೋರ್ಟ್ ಅಳತೆಯ ಫೋಟೋ

ಈ ಯೋಜನೆ ಅಡಿ ರಾಜ್ಯದ ರೈತರಿಗೆ ಸಿಗಲಿದೆ 10,000 ರೂಪಾಯಿ! ಈ ರೀತಿ ಪಡೆದುಕೊಳ್ಳಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದಾದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿ ನಿಮಗೆ 3 ಗ್ಯಾಸ್ ವಿತರಕರ ಹೆಸರುಗಳು ಕಾಣಿಸುತ್ತವೆ. ಹೆಚ್ ಪಿ (HP), ಇಂಡೇನ್ (Inden) ಭಾರತ್ ಗ್ಯಾಸ್ (Bharat Gas) ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ.

ನಂತರ ನೇರವಾಗಿ ಅದೇ ವೆಬ್ಸೈಟ್ಗೆ ಭೇಟಿ ನೀಡಬಹುದು. ಅಲ್ಲಿ ನಿಮ್ಮ ಆಯ್ಕೆಗೆ ಅನುಸಾರವಾಗಿ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಉಚಿತ ಗ್ಯಾಸ್ ಕನೆಕ್ಷನ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಲಿಂಕ್ https://www.pmuy.gov.in/index.aspx

ಇನ್ನು ನೀವು ಆಫ್ಲೈನ್ನಲ್ಲಿ ಮೇಲೆ ತಿಳಿಸಲಾದ ಮೂರು ಗ್ಯಾಸ್ ವಿತರಕರಲ್ಲಿ ಯಾವುದೇ ಕಚೇರಿಗೆ ಭೇಟಿ ನೀಡಿ ಖುದ್ದಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

get free gas cylinders, but this document is mandatory

Related Stories