ಈ ಯೋಜನೆ ಅಡಿ ರಾಜ್ಯದ ರೈತರಿಗೆ ಸಿಗಲಿದೆ 10,000 ರೂಪಾಯಿ! ಈ ರೀತಿ ಪಡೆದುಕೊಳ್ಳಿ

ರಾಜ್ಯ ಸರ್ಕಾರದ ಈ ಯೋಜನೆಯಡಿಯಲ್ಲಿ ರೈತರ ಖಾತೆಗೆ 10,000 ಜಮಾ ಆಗಲಿದೆ, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಒಬ್ಬ ಕೃಷಿಕ (farmer) ಸುಲಭವಾಗಿ, ಸರಿಯಾದ ರೀತಿಯಲ್ಲಿ ಬೆಳೆ ಬೆಳೆಯಬೇಕು, ತನ್ನ ಕೃಷಿ ಚಟುವಟಿಕೆ (agriculture activities) ಗಳನ್ನು ಮಾಡಬೇಕು ಎಂದಾದರೆ ಅದಕ್ಕೆ ಸರಿಯಾಗಿ ಮಳೆ ಬೇಕು. ಆದರೆ ಈ ಬಾರಿ ಹಿಂಗಾರು ಮತ್ತು ಮುಂಗಾರು ಎರಡು ಸಮಯದಲ್ಲೂ ಮಳೆಯ ಅಭಾವ ಎದುರಾಗಿದ್ದು ಕೃಷಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ವಸ್ತುಗಳ ಬೆಲೆ ಕೂಡ ಗಗನಕ್ಕೆ ಏರುತ್ತಿದೆ. ಹೀಗಾಗಿ ಸರ್ಕಾರ ರೈತರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಸಂಕಷ್ಟಕ್ಕೆ ಸ್ವಲ್ಪಮಟ್ಟಿನ ಪರಿಹಾರ ನೀಡುತ್ತದೆ ಎನ್ನಬಹುದು.

ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್; ಏಪ್ರಿಲ್ ತಿಂಗಳ ಲಿಸ್ಟ್ ಬಿಡುಗಡೆ

ಈ ಯೋಜನೆ ಅಡಿ ರಾಜ್ಯದ ರೈತರಿಗೆ ಸಿಗಲಿದೆ 10,000 ರೂಪಾಯಿ! ಈ ರೀತಿ ಪಡೆದುಕೊಳ್ಳಿ - Kannada News

ಸಿರಿಧಾನ್ಯ ಬೆಳೆಗೆ ರೈತರಿಗೆ ಪ್ರೋತ್ಸಾಹ ನೀಡಿದ ಸರ್ಕಾರ!

ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಬಜೆಟ್ (state government budget) ನಲ್ಲಿ ಸಿರಿಧಾನ್ಯ ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತ ಸಿರಿ ಯೋಜನೆಯ ಬಗ್ಗೆ ಪ್ರಸ್ತಾವನೆ ಮಾಡಲಾಗಿತ್ತು. ಈಗ ಈ ಯೋಜನೆಯನ್ನು ಪ್ರಚುರಪಡಿಸಲಾಗಿದ್ದು, ರೈತರಿಗೆ ಈ ಯೋಜನೆಯ ಮೂಲಕ 10,000 ಸಹಾಯಧನ ನೀಡಲಾಗುವುದು.

ಸಿರಿಧಾನ್ಯ ಬೆಳೆಗಳು, ಅದರಲ್ಲೂ ಮುಖ್ಯವಾಗಿ ರಾಗಿ ಬೆಳೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಇದನ್ನು ಬೆಳೆಯುವ ರೈತರು ಸರ್ಕಾರದಿಂದ ಸಹಾಯಧನ ಪಡೆಯಬಹುದು. ಸರ್ಕಾರ 2024ರ ಬಜೆಟ್ ನಲ್ಲಿ ರೈತ ಸಿರಿ ಯೋಜನೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಮೀಸಲಿಟ್ಟಿದೆ ಈ ಹಿನ್ನೆಲೆಯಲ್ಲಿ ರಾಗಿ ಬೆಳೆಯುವ ರೈತರು ಹತ್ತು ಸಾವಿರ ರೂಪಾಯಿಗಳ ಸಹಾಯಧನ ಪಡೆದುಕೊಳ್ಳುವಂತೆ ಆಗಿದೆ.

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ ಈ ಕೆಲಸ ಮಾಡುವುದು ಕಡ್ಡಾಯ!

ಸಹಾಯಧನ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು!

* ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳಾಗಿರಬೇಕು
* ರೈತರ ಆಗಿರಬೇಕು ಮತ್ತು ಉಳುಮೆ ಮಾಡುವ ಸ್ವಂತ ಜಮೀನು ಹೊಂದಿರಬೇಕು
* ಕನಿಷ್ಠ ಒಂದು ಹೆಕ್ಟರ್ ಜಮೀನು (Agriculture Land) ಹೊಂದಿರುವ ರೈತರು ಸಿರಿ ಧಾನ್ಯ ಬೆಳೆಯಲು ಸಹಾಯಧನ ಪಡೆದುಕೊಳ್ಳಲು ಅರ್ಹರು.

farmerಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

* ರೈತರ ಭೂಮಿಯ ಪತ್ರ ಅಥವಾ ಪಹಣಿ ಪತ್ರ
* ಆಧಾರ್ ಕಾರ್ಡ್
* ಕಾಯಂ ನಿವಾಸದ ಪ್ರಮಾಣ ಪತ್ರ
* ವೋಟರ್ ಐಡಿ
* ಇತ್ತೀಚಿನ ಭಾವಚಿತ್ರ
* ಬ್ಯಾಂಕ್ ಖಾತೆ ವಿವರ

ಗೃಹಲಕ್ಷ್ಮಿ ಮರು ಪರಿಶೀಲನೆ ಪಟ್ಟಿ ಬಿಡುಗಡೆ! ಇದ್ರಲ್ಲಿ ಹೆಸರು ಇದ್ರೆ ಮಾತ್ರ ಹಣ ಜಮಾ

ರೈತ ಸಿರಿ ಯೋಜನೆ (raita siri Yojana) ಯ ಅಡಿಯಲ್ಲಿ ಸಿರಿಧಾನ್ಯ ಬೆಳೆ ಬೆಳೆಯಲು ಇಂದಿನ ಯುವ ರೈತರಿಗೂ ಕೂಡ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ಸಹಾಯಧನ ನೀಡುತ್ತಿದೆ.

ಸರ್ಕಾರದಿಂದ ಸಿಗುವ 10,000ಗಳ ಸಹಾಯಧನವನ್ನು ಪಡೆದುಕೊಳ್ಳಲು ಹತ್ತಿರದ ರೈತ ಕೇಂದ್ರ ಅಥವಾ ತೋಟಗಾರಿಕಾ ಇಲಾಖೆಗೆ ಹೋಗಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

Farmers of the state will get 10,000 rupees under this scheme

Follow us On

FaceBook Google News