ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ 3 ವರ್ಷದ ಅವಧಿಗೆ ಸಿಗಲಿದೆ 3 ಲಕ್ಷ ಸಾಲ!
SBI Bank Loan : ಕೇವಲ ಉದ್ಯೋಗದಲ್ಲಿರುವವರಿಗೆ ಮಾತ್ರವಿಲ್ಲದೆ ಸ್ವಂತ ಉದ್ಯಮ ಮಾಡುವವರೆಗೂ ಕೂಡ ಪರ್ಸನಲ್ ಲೋನ್ ಸಿಗುತ್ತದೆ
SBI Bank Loan : ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾವು ಬ್ಯಾಂಕ್ನಿಂದ ಸಾಲ (bank loan) ತೆಗೆದುಕೊಳ್ಳುವುದು ಸಾಮಾನ್ಯ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಕೆಲಸ ಮಾಡುತ್ತಿರುವವರಿಗು ಕೂಡ ವೈಯಕ್ತಿಕ ಸಾಲ (personal loan) ಸೌಲಭ್ಯ ದೊರಕುತ್ತದೆ.
ಹೀಗೆ ಬ್ಯಾಂಕ್ ನಿಂದ ಸಾಲ ತೆಗೆದುಕೊಳ್ಳುವಾಗ ನಾವು ಗಮನಿಸಬೇಕಾದ ಮುಖ್ಯ ವಿಚಾರ ಅಂದ್ರೆ ಬಡ್ಡಿದರ ಎಷ್ಟು? ಹಾಗೂ ಎಷ್ಟು ಮರುಪಾವತಿ ಅವಧಿ ಇರುತ್ತದೆ ಎಂಬುದು.
ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ರೀತಿಯ ಬಡ್ಡಿ ದರದಲ್ಲಿ ಲೋನ್ (Loan) ಒದಗಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಪರ್ಸನಲ್ ಲೋನ್ ಹೆಚ್ಚು ಪ್ರಚಲಿತದಲ್ಲಿದ್ದು ಕೇವಲ ಉದ್ಯೋಗದಲ್ಲಿರುವವರಿಗೆ ಮಾತ್ರವಿಲ್ಲದೆ ಸ್ವಂತ ಉದ್ಯಮ ಮಾಡುವವರೆಗೂ ಕೂಡ ಪರ್ಸನಲ್ ಲೋನ್ ಸಿಗುತ್ತದೆ.
ಈ ಲಿಸ್ಟ್ ನಲ್ಲಿ ಹೆಸರಿಲ್ಲದೆ ಇದ್ರೆ ಸಿಗಲ್ಲ ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ! ಚೆಕ್ ಮಾಡಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ದೇಶದ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿದ್ದು ತನ್ನ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ಬೇರೆ ಬೇರೆ ರೀತಿಯ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ. ಅವುಗಳಲ್ಲಿ ಪರ್ಸನಲ್ ಅಥವಾ ವಯಕ್ತಿಕ ಸಾಲ ಕೂಡ ಒಂದಾಗಿದ್ದು, ಅತ್ಯಂತ ಸುಲಭವಾಗಿ ಎಸ್‌ಬಿಐ ನಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದಾಗಿದೆ. ಇತರ ಬ್ಯಾಂಕುಗಳಿಗೆ ಹೋಲಿಸಿದರೆ sbi ಬಹಳ ಬೇಗ ಸಾಲ ಮಂಜೂರು ಮಾಡುತ್ತದೆ ಎನ್ನಬಹುದು.
ಎಸ್ ಬಿ ಐ ನಲ್ಲಿ ಕಡಿಮೆ ಇಎಂಐ ಪಾವತಿ ಮಾಡಬಹುದು!
ಗ್ರಾಹಕರಿಗೆ ಕೇವಲ 11.15 ಪರ್ಸೆಂಟ್ ನಿಂದ 12.65% ಬಡ್ಡಿ ತರದೊಂದಿಗೆ ವೈಯಕ್ತಿಕ ಸಾಲವನ್ನು ಎಸ್ಬಿಐ ಬ್ಯಾಂಕ್ ನಲ್ಲಿ (SBI Bank) ಪಡೆದುಕೊಳ್ಳಬಹುದು. ಸರ್ಕಾರಿ ನೌಕರಿಯಲ್ಲಿ ಇರುವವರಿಗೆ 11.30% ಇಂದ 13% ವರೆಗಿನ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
ಇನ್ನು ಬ್ಯಾಂಕ್ ನಲ್ಲಿ ಸಾಲ ಮಾಡುವಾಗ ಕ್ರೆಡಿಟ್ ಸ್ಕೋರ್ (credit score) ಎನ್ನುವುದು ಬಹಳ ಮುಖ್ಯವಾಗಿರುವ ವಿಚಾರ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಪಾಯಿಂಟ್ 750ಕ್ಕಿಂತ ಜಾಸ್ತಿ ಇದ್ದರೆ ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಇಲ್ಲವಾದರೆ ಸಾಲ ಸುಲಭವಾಗಿ ಸಿಗುವುದಿಲ್ಲ. ಜೊತೆಗೆ ಬಡ್ಡಿ ದರವು ಜಾಸ್ತಿ ಇರುತ್ತದೆ.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಸರಕಾರದಿಂದ ಸಿಗಲಿದೆ 15,000 ವಿದ್ಯಾರ್ಥಿ ವೇತನ
ಎಸ್ ಬಿ ಐ ನಲ್ಲಿ ಇದೀಗ ಮೂರು ಲಕ್ಷ ರೂಪಾಯಿಗಳನ್ನು ಮೂರು ವರ್ಷಗಳ ಅವಧಿಗೆ ತೆಗೆದುಕೊಳ್ಳಬಹುದು ಇದಕ್ಕೆ ಪ್ರತಿ ತಿಂಗಳು ಪಾವತಿ ಮಾಡಬೇಕಾದ ಇಎಂಐ ಎಂಬುದನ್ನು ನೋಡೋಣ.
3,00,000ಗಳನ್ನು ಮೂರು ವರ್ಷಗಳ ಅವಧಿಗೆ ಎಸ್‌ಬಿಐ ನಲ್ಲಿ ಲೋನ್ ತೆಗೆದುಕೊಂಡರೆ, 11.15% ಬಡ್ಡಿದರ ನಿಗದಿಪಡಿಸಲಾಗಿದೆ ಎಂದು ಭಾವಿಸಿ. ಅಲ್ಲಿಗೆ ಪ್ರತಿ ತಿಂಗಳು ಪಾವತಿ ಮಾಡಬೇಕಾದ ಇಎಮ್ಐ ದರ 9843ರೂ.ಗಳು. ಅಂದರೆ ಮೂರು ಲಕ್ಷ ರೂಪಾಯಿಗಳಿಗೆ 3,09,038 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಲಾಸ್ಟ್ ಡೇಟ್! ಇಲ್ಲವೇ ಕಾರ್ಡ್ ಕ್ಯಾನ್ಸಲ್ ಆಗುತ್ತೆ
ಎಸ್ ಬಿ ಐ ನಲ್ಲಿ 10 ಲಕ್ಷ ರೂಪಾಯಿ ಲೋನ್ ತೆಗೆದುಕೊಂಡರೆ ಪಾವತಿಸಬೇಕಾದ EMI ಮೊತ್ತ ಎಷ್ಟು?
ಐದು ವರ್ಷಗಳ ಅವಧಿಗೆ 10 ಲಕ್ಷ ರೂಪಾಯಿಗಳನ್ನು 11.15 ಪರ್ಸೆಂಟ್ ತೆಗೆದುಕೊಂಡರೆ, ಪ್ರತಿ ತಿಂಗಳು ನೀವು ಪಾವತಿ ಮಾಡಬೇಕಾದ ಇಎಂಐ ಮೊತ್ತ ರೂಪಾಯಿ 21,817.
3 lakh loan for a period of 3 years for those who have a State Bank account