ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ಯೋ ಇಲ್ವೋ ಕುಳಿತಲ್ಲಿಯೇ ತಿಳಿದುಕೊಳ್ಳಿ
ನಿಮ್ಮ ಬ್ಯಾಂಕ್ ಖಾತೆ (Bank Account) ಹಾಗೂ ಅದಕ್ಕೆ ಆಧಾರ್ ಕಾರ್ಡ್ ಲಿಂಕ್ (bank account Aadhaar Card link) ಆಗುವುದು ಬಹಳ ಮುಖ್ಯ.
ಇಂದು ಯಾವುದೇ ಬ್ಯಾಂಕಿಂಗ್ ಚಟುವಟಿಕೆ (banking activities) ಇರಬಹುದು ಅಥವಾ ಸರ್ಕಾರದ ಯೋಜನೆ (government scheme) ಪ್ರಯೋಜನ ಪಡೆದುಕೊಳ್ಳುವುದಕ್ಕೆ ಇರಬಹುದು ನಿಮ್ಮ ಬ್ಯಾಂಕ್ ಖಾತೆ (Bank Account) ಹಾಗೂ ಅದಕ್ಕೆ ಆಧಾರ್ ಕಾರ್ಡ್ ಲಿಂಕ್ (bank account Aadhaar Card link) ಆಗುವುದು ಬಹಳ ಮುಖ್ಯ.
ಆಧಾರ್ ಕಾರ್ಡ್ (Aadhaar Card) ಎನ್ನುವುದು ಭಾರತೀಯ ನಾಗರಿಕನಿಗೆ ಕೊಡಲಾದ ವಿಶಿಷ್ಟ ಗುರುತಿನ ಚೀಟಿ. ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ವಿವರಗಳು ಅಡಕವಾಗಿರುತ್ತವೆ.
ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 8000 ರೂಪಾಯಿ ಸ್ಕಾಲರ್ಶಿಪ್; ಕೂಡಲೇ ಅಪ್ಲೈ ಮಾಡಿ
ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದಾಗ ಬ್ಯಾಂಕಿನ ವ್ಯವಹಾರಗಳು ಸುಲಭವಾಗುತ್ತವೆ. ಸರ್ಕಾರದ ಯೋಜನೆಗಳು ನಿಮ್ಮ ಕೈ ಸೇರುತ್ತವೆ. ಅದರಲ್ಲೂ ಇತ್ತೀಚಿಗೆ ರಾಜ್ಯ ಸರ್ಕಾರ ಆರಂಭಿಸಿರುವ ಗ್ಯಾರಂಟಿ ಯೋಜನೆಗಳ (state government guarantee schemes) ಪ್ರಯೋಜನ ಪಡೆದುಕೊಳ್ಳುವುದಕ್ಕೆ ಆಧಾರ್ ಕಾರ್ಡ್ ಲಿಂಕ್ ಎನ್ನುವುದು ಕಡ್ಡಾಯವಾಗಿದೆ.
ಆಧಾರ್ ಕಾರ್ಡ್ ಲಿಂಕ್ ಆಗದೆ ಅನ್ನಭಾಗ್ಯ ಯೋಜನೆ (AnnaBhagya Yojana) ಯ ಅಡಿಯಲ್ಲಿ ಸಿಗುವ ಹಣವಾಗಲಿ ಅಥವಾ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸಿಗುವ ಎರಡು ಸಾವಿರ ರೂಪಾಯಿಗಳಾಗಲಿ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ ಒಂದು ವೇಳೆ ನೀವು ಬ್ಯಾಂಕ್ ಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಂಡಿದ್ದರೆ ತಕ್ಷಣ ಅದನ್ನು ಪರಿಶೀಲಿಸಿ.
ಆಸ್ತಿ, ಜಮೀನು ದಾಖಲೆಗಳಿಗೂ ಆಧಾರ್ ಲಿಂಕ್ ಕಡ್ಡಾಯ; ಇದ್ರಿಂದ ಏನು ಲಾಭ ಗೊತ್ತಾ?
ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಲಿಂಕ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ! (How to check Aadhaar Card link status)
https://resident.uidai.gov.in/bank-mapper ಮೊದಲಿಗೆ ಈ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ. ಬಳಿಕ check Aadhar Bank seeding status ಎನ್ನುವ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
ನಂತರ ನೀವು 12 ಅಂಕೆಗಳಿರುವ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಕೆಳಗಡೆ ಕಾಣಿಸುವ ಸೆಕ್ಯೂರಿಟಿ ಕೋಡ್ (security code) ಹಾಕಿ.
ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ಇನ್ಮುಂದೆ 6 ತಿಂಗಳು ಕಾಯಲೇಬೇಕು
ನಿಮ್ಮ ಮೊಬೈಲ್ (mobile) ಸಂಖ್ಯೆಗೆ ಒಂದು ಓಟಿಪಿ (OTP) ಕಳುಹಿಸಲಾಗುತ್ತದೆ ಅದನ್ನು ಇಲ್ಲಿ ನಮೂದಿಸಿ. ಈಗ ನಿಮ್ಮ ಆಧಾರ್ ಸಂಖ್ಯೆಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಅದು ಆಕ್ಟಿವ್ ಇದೆಯೋ ಇಲ್ಲವೋ ಎನ್ನುವ ಮಾಹಿತಿ ಡಿಸ್ಪ್ಲೇ ಆಗುತ್ತದೆ.
ಒಂದು ಒಳ್ಳೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗದೆ ಇದ್ದರೆ ಲಿಂಕ್ ಆಗಿಲ್ಲ ಎನ್ನುವುದು ಕೂಡ ಕಾಣಿಸುತ್ತದೆ. ಆದರೆ ನೀವು ತಕ್ಷಣ ನಿಮ್ಮ ಖಾತೆ ಇರುವ ಬ್ಯಾಂಕ್ ಶಾಖೆಗೆ ಹೋಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.
Find out whether Aadhaar is linked to your bank account or not