ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 8000 ರೂಪಾಯಿ ಸ್ಕಾಲರ್ಶಿಪ್; ಕೂಡಲೇ ಅಪ್ಲೈ ಮಾಡಿ

Education Scholarship : ಸರ್ಕಾರಿ ಯೋಜನೆಗಳು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ (scholarship for students) ನೀಡುವುದರ ಮೂಲಕ ಆರ್ಥಿಕ ಸಹಾಯವನ್ನು ಮಾಡುತ್ತಿವೆ.

Bengaluru, Karnataka, India
Edited By: Satish Raj Goravigere

Education Scholarship : ದೇಶದಲ್ಲಿ ಸಾಕಷ್ಟು ಹಿಂದುಳಿದ ಕುಟುಂಬದ (backward class) ಮಕ್ಕಳು ಅಥವಾ ಬಡ ಕುಟುಂಬದಲ್ಲಿ ಜನಿಸಿದ ಮಕ್ಕಳು ಬಹಳ ಬುದ್ಧಿವಂತರಾಗಿದ್ದರು ಕೂಡ ವಿದ್ಯಾಭ್ಯಾಸ (education) ವನ್ನು ಮುಂದುವರಿಸಲು ಆರ್ಥಿಕ ಸಮಸ್ಯೆ ( financial problems) ಅವರನ್ನು ಮುಂದೆ ಹೋಗದಂತೆ ತಡೆಯುತ್ತದೆ. ಇದೇ ಕಾರಣಕ್ಕೆ ಎಂದು ನಮ್ಮ ದೇಶದಲ್ಲಿ ಕೋಟ್ಯಂತರ ಮಕ್ಕಳು ಸರಿಯಾಗಿ ವಿದ್ಯಾಭ್ಯಾಸ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮಕ್ಕಳಿಗೆ ಅದರಲ್ಲೂ ಓದಲು ಆಸಕ್ತಿ ಇರುವ ಹಾಗೂ ಬುದ್ಧಿವಂತ ಮಕ್ಕಳಿಗೆ, ಸರಿಯಾದ ಶಿಕ್ಷಣ ಸಿಗಬೇಕು ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಎನ್ನುವ ಕಾರಣಕ್ಕೆ, ಸಾಕಷ್ಟು ಕಂಪನಿಗಳು (private companies) ಹಾಗೂ ಸರ್ಕಾರಿ ಯೋಜನೆಗಳು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ (scholarship for students) ನೀಡುವುದರ ಮೂಲಕ ಆರ್ಥಿಕ ಸಹಾಯವನ್ನು ಮಾಡುತ್ತಿವೆ.

The central government brought a new scholarship scheme for students

ಆಸ್ತಿ, ಜಮೀನು ದಾಖಲೆಗಳಿಗೂ ಆಧಾರ್ ಲಿಂಕ್ ಕಡ್ಡಾಯ; ಇದ್ರಿಂದ ಏನು ಲಾಭ ಗೊತ್ತಾ?

ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಯಾವುದೇ ಸಮಸ್ಯೆ ಇಲ್ಲದೆ ಮುಂದುವರಿಸಲು ಸಾಧ್ಯವಾಗುತ್ತದೆ. ಇದೀಗ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಸ್ಕಾಲರ್ಶಿಪ್ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿ ನೀಡಿದ್ದೇವೆ.

ಡಾ. ಭೀಮರಾವ್ ಅಂಬೇಡ್ಕರ್ ಮೆರಿಟೋರಿಯಸ್ ಪರಿಷ್ಕೃತ ವಿದ್ಯಾರ್ಥಿ ವೇತನ! (Dr Bhimrao Ambedkar meritorious scholarship)
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ 2023- 24ನೇ ಸಾಲಿನ ವಿದ್ಯಾರ್ಥಿ ವೇತನ ನೀಡಲು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಆರ್ಥಿಕ ಸಹಾಯ ಪಡೆದುಕೊಳ್ಳಬಹುದು.

ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು? (Who Can apply)

ಪರಿಶಿಷ್ಟ ಜಾತಿಗೆ (SC/ST) ಸೇರಿದ ಕುಟುಂಬದ ಮಕ್ಕಳು, 2A, 2B ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ ನಗರ ಪ್ರದೇಶದ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ 70%, ದ್ವಿತೀಯ ಪಿಯುಸಿಯಲ್ಲಿ 75% ಹಾಗೂ ಪದವಿಯಲ್ಲಿ 65% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, 10ನೇ ತರಗತಿಯಲ್ಲಿ 60%, ದ್ವಿತೀಯ ಪಿಯುಸಿಯಲ್ಲಿ 70% ಹಾಗೂ ಪದವಿಯಲ್ಲಿ 60% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ಕುಟುಂಬದ ಆದಾಯ ನಾಲ್ಕು ಲಕ್ಷ ಮೀರಬಾರದು.

ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ಇನ್ಮುಂದೆ 6 ತಿಂಗಳು ಕಾಯಲೇಬೇಕು

Education Scholarshipಎಷ್ಟು ಸಿಗಲಿದೆ ಸ್ಕಾಲರ್ಶಿಪ್? (Scholarship amount)

10ನೇ ತರಗತಿ ಉತ್ತೀರ್ಣರಾಗಿ ಪಿಯುಸಿ ವಿದ್ಯಾಭ್ಯಾಸ ಮಾಡುವವರಿಗೆ 8000 ರೂ. ದ್ವಿತೀಯ ಪಿಯುಸಿ ಮುಗಿಸಿ ಪದವಿ ಶಿಕ್ಷಣ ಪಡೆಯುವವರಿಗೆ 8 ರಿಂದ 10 ಸಾವಿರ ರೂಪಾಯಿಗಳು, ಪದವಿ ಶಿಕ್ಷಣ ಮುಗಿಸಿರುವವರಿಗೆ 9 ರಿಂದ 12 ಸಾವಿರ ರೂಪಾಯಿಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುವುದು.

ಇನ್ಮುಂದೆ ಡ್ರೈವಿಂಗ್ ಲೈಸನ್ಸ್ ಪಡೆಯೋಕೆ ಡ್ರೈವಿಂಗ್ ಟೆಸ್ಟ್ ಅಗತ್ಯವಿಲ್ಲ! ನಿಯಮದಲ್ಲಿ ಬದಲಾವಣೆ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents to get scholarship)

ವಿದ್ಯಾರ್ಥಿಯ ಆಧಾರ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ
ಪಾಲಕರ ಗುರುತಿನ ಚೀಟಿ
ಆದಾಯ ಪ್ರಮಾಣ
ಜಾತಿ ಪ್ರಮಾಣ ಪತ್ರ
ಮುಂದಿನ ವಿದ್ಯಾಭ್ಯಾಸಕ್ಕೆ ಯಾವ ಕಾಲೇಜ್ ಸೇರುತ್ತಿರೋ ಆ ಕಾಲೇಜಿನ ರಶೀದಿ ಅಥವಾ ಕಾಲೇಜಿಗೆ ಸೇರಿದ ದಾಖಲೆಗಳು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (last date to apply) ಜನವರಿ 31 2024. ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಸದ್ಯ ಈ ಸ್ಕಾಲರ್ಶಿಪ್ ಹರಿಯಾಣ ರಾಜ್ಯದಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿದೆ. ಸದ್ಯದಲ್ಲಿಯೇ ಸಾಮಾಜಿಕ ಕಲ್ಯಾಣ ಇಲಾಖೆ ಕರ್ನಾಟಕದಲ್ಲಿಯೂ ಕೂಡ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಈ ಸ್ಕಾಲರ್ಶಿಪ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.

Such students will get a Education scholarship of 8000 rupees