ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಧಮಾಕಾ: ಎಲೆಕ್ಟ್ರಾನಿಕ್ಸ್‌ನಿಂದ ಉಡುಪಿನವರೆಗೂ ಭಾರಿ ರಿಯಾಯಿತಿ

ಫ್ಲಿಪ್‌ಕಾರ್ಟ್ ಬಿಗ್ ಬ್ಯಾಂಗ್ ದೀಪಾವಳಿ ಸೇಲ್ ಅಕ್ಟೋಬರ್ 11ರಿಂದ ಆರಂಭವಾಗಲಿದೆ. ಎಸ್ಬಿಐ ಮತ್ತು ಅಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಸಿದರೆ ಹೆಚ್ಚುವರಿ ರಿಯಾಯಿತಿ ಮತ್ತು ಆಕರ್ಷಕ ಬೋನಸ್‌ಗಳು ಲಭ್ಯ.

Flipkart Diwali Sale: ಈ ದೀಪಾವಳಿಗೆ ಗ್ರಾಹಕರಿಗೆ ಮತ್ತೊಂದು ದೊಡ್ಡ ಸರ್ಪ್ರೈಸ್ ನೀಡಲು ಫ್ಲಿಪ್‌ಕಾರ್ಟ್ ಸಜ್ಜಾಗಿದೆ. “ಬಿಗ್ ಬ್ಯಾಂಗ್ ದೀಪಾವಳಿ ಸೇಲ್ 2025” ಅಕ್ಟೋಬರ್ 11ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಬ್ಲಾಕ್ ಸದಸ್ಯರಿಗೆ ಅಕ್ಟೋಬರ್ 10ರಿಂದಲೇ ಮುಂಚಿತ ಪ್ರವೇಶ ದೊರೆಯಲಿದೆ.

ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ಫೋನ್‌ಗಳು, ಉಡುಪುಗಳು, ಟ್ಯಾಬ್ಲೆಟ್‌ಗಳು, ಗೃಹೋಪಕರಣಗಳು ಸೇರಿದಂತೆ ಅನೇಕ ವಿಭಾಗಗಳಲ್ಲಿ ಶೇಕಡಾ 80ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.

ಈ ಬಾರಿ ಖರೀದಿಗೆ ಬರುವ ಗ್ರಾಹಕರು ತಮ್ಮ ಎಸ್ಬಿಐ ಅಥವಾ ಅಕ್ಸಿಸ್ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ ಹೆಚ್ಚುವರಿ 10% ತಕ್ಷಣದ ರಿಯಾಯಿತಿ ಪಡೆಯಬಹುದು ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ಫ್ಲಿಪ್‌ಕಾರ್ಟ್ ಬ್ಲಾಕ್ ಸದಸ್ಯತ್ವದ ಶುಲ್ಕವೂ ಈಗ ಕಡಿಮೆ ಮಾಡಲಾಗಿದೆ. ಹಿಂದಿನ ₹1,499 ಬದಲಿಗೆ ಈಗ ₹1,249 ಕ್ಕೆ ಲಭ್ಯ. ಈ ಸದಸ್ಯತ್ವದೊಂದಿಗೆ ಗ್ರಾಹಕರು ವಿಶೇಷ ಬೋನಸ್‌ಗಳು, ಉಚಿತ ಡೆಲಿವರಿ ಮತ್ತು ಪ್ರೀಮಿಯಂ ಆಫರ್‌ಗಳನ್ನು ಪಡೆಯುತ್ತಾರೆ.

ಸೇಲ್ ಅವಧಿಯಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ದೊಡ್ಡ ಗೃಹೋಪಕರಣಗಳವರೆಗೆ ಪ್ರೀಮಿಯಂ ಬ್ರಾಂಡ್‌ಗಳ ಉತ್ಪನ್ನಗಳನ್ನು ಅಚ್ಚರಿಯ ಬೆಲೆಯಲ್ಲಿ ಪಡೆಯಬಹುದು. ಜೊತೆಗೆ ಉಚಿತ EMI, ಎಕ್ಸ್ಚೇಂಜ್ ಬೋನಸ್, ಮತ್ತು ಸೂಪರ್ ಕಾಯಿನ್ ರಿವಾರ್ಡ್ಸ್ ಕೂಡ ಲಭ್ಯವಿದೆ.

ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಯುಪಿಐ ಆಧಾರಿತ ಪಾವತಿ ಆಫರ್‌ಗಳು ಮತ್ತು ಹೆಚ್ಚುವರಿ ಡಿಜಿಟಲ್ ಕ್ಯಾಶ್‌ಬ್ಯಾಕ್‌ಗಳನ್ನೂ ನೀಡುತ್ತಿದೆ. ಹೀಗಾಗಿ ಈ ದೀಪಾವಳಿ ಖರೀದಿಯ ಹಬ್ಬವಾಗಲಿದ್ದು, ಬಜೆಟ್‌ನಲ್ಲೇ ದೊಡ್ಡ ಖರೀದಿ ಮಾಡಲು ಬಯಸುವವರಿಗೆ ಇದು ಸುವರ್ಣಾವಕಾಶ.

Flipkart Diwali Sale 2025, Big Discounts and Early Access

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories