Business News

ಈ ಯೋಜನೆಯಲ್ಲಿ 25 ವರ್ಷ ಕರೆಂಟ್ ಬಿಲ್ ಕಟ್ಟೋ ತಾಪತ್ರಯ ಇಲ್ಲ! ಈ ರೀತಿ ಅರ್ಜಿ ಸಲ್ಲಿಸಿ

Solar Panel Scheme : ಪಿಎಮ್ ನರೇಂದ್ರ ಮೋದಿ ಅವರು ನಮ್ಮ ದೇಶದ ಪ್ರಧಾನಮಂತ್ರಿ ಆದಾಗಿನಿಂದ ನಮ್ಮ ದೇಶ ಸಾಕಷ್ಟು ಬದಲಾವಣೆ ಮತ್ತು ಬೆಳವಣಿಗೆ ಎರಡನ್ನು ಕಂಡಿದೆ. ಮೋದಿ ಅವರು ನಮ್ಮ ದೇಶದ ಜನರು ಕಷ್ಟದಲ್ಲಿ ಇರಬಾರದು, ಎಲ್ಲಾ ಅನುಕೂಲಗಳು ಅವರಿಗೆ ಸಿಗಬೇಕು ಎಂದು ಅನೇಕ ಯೋಜನೆಗಳನ್ನು ದೇಶದ ಜನರಿಗಾಗಿ ಜಾರಿಗೆ ತರುತ್ತಿದ್ದಾರೆ.

ಅದರಲ್ಲೂ ಮಧ್ಯಮವರ್ಗದವರಿಗೆ ಮತ್ತು ಬಡಜನರಿಗೆ ಅನುಕೂಲ ಅಗುವಂಥ ಯೋಜನೆಗಳು ಬರುತ್ತಲಿವೆ.

There is no need to pay the Electricity bill anymore, Smart meter facility has come

ಅಪ್ಡೇಟ್ ಮಾಡದಿದ್ರೆ ಆಧಾರ್ ಕಾರ್ಡ್ ಕ್ಯಾನ್ಸಲ್ ಆಗಲಿದೆಯೇ? ಇಲ್ಲಿದೆ ಪ್ರಮುಖ ಮಾಹಿತಿ

ಮತ್ತೊಂದು ಹೊಸ ಯೋಜನೆ

ಈಗಾಗಲೇ ಅನೇಕ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತರುತ್ತಲಿದ್ದು, ಇದೀಗ ದೇಶದ ಜನರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತರುವುದಕ್ಕೆ ಮುಂದಾಗಿದ್ದಾರೆ.

ಈ ಯೋಜನೆ ಇಂದ ಜನರಿಗೆ ಇನ್ನಷ್ಟು ಅನುಕೂಲ ಸಿಗಲಿದೆ. ಹಾಗಿದ್ದಲ್ಲಿ ಆ ಯೋಜನೆ ಯಾವುದು? ಅದರಿಂದ ಏನೆಲ್ಲಾ ಉಪಯೋಗ ಆಗುತ್ತದೆ? ತಿಳಿಸಿಕೊಡುತ್ತೆವೆ ನೋಡಿ..

ಪಿಎಮ್ ಸೂರ್ಯ ಘರ್ ಯೋಜನೆ

ಕೇಂದ್ರ ಸರ್ಕಾರ ಪರಿಚಯಿಸುತ್ತಿರುವ ಈ ಹೊಸ ಯೋಜನೆಯ ಹೆಸರು ಸೂರ್ಯ ಘರ್ ಯೋಜನೆ (Surya Ghar Yojana) ಆಗಿದೆ. ಈ ಯೋಜನೆಯ ಮೂಲಕ 1 ಕೋಟಿ ಮನೆಗಳಿಗೆ ಸೋಲಾರ್ ಪ್ಯಾನೆಲ್ ಹಾಕಿಸಲು ಸರ್ಕಾರ ಸಹಾಯ ಮಾಡುತ್ತದೆ. ಸೋಲಾರ್ ಪ್ಯಾನೆಲ್ ಅಳವಡಿಕೆಗಾಗಿ 18 ಸಾವಿರದಿಂದ 78 ಸಾವಿರದವರೆಗು ಜನರಿಗೆ ಸಹಾಯಧನ ನೀಡಲಿದೆ ಸರ್ಕಾರ. ಈ ಯೋಜನೆಯ ಸೌಲಭ್ಯವನ್ನು ಎಲ್ಲರೂ ಪಡೆಯಬಹುದು.

ಸರ್ಕಾರ ಮಾಡಿರುವ ಪ್ಲಾನ್ ನ ಅನುಸಾರ ಸುಮಾರು 1 ಕೋಟಿ ಮನೆಗಳಿಗೆ ಸೂರ್ಯಘರ್ ಯೋಜನೆಯ ಸೌಲಭ್ಯ ನೀಡಬೇಕು ಎಂದುಕೊಂಡಿದೆ. ಒಂದು ಸಾರಿ ನಿಮ್ಮ ಮನೆಯಲ್ಲಿ ಸೋಲಾರ್ ಪ್ಯಾನೆಲ್ (Solar Panel) ಅಳವಡಿಕೆ ಮಾಡಿದರೆ, 25 ವರ್ಷಗಳ ಕಾಲ ವಿದ್ಯುತ್ ಬಿಲ್ (Electricity Bill) ಕಟ್ಟುವ ಅವಶ್ಯಕತೆ ಇರುವುದಿಲ್ಲ.

ಜೊತೆಗೆ ನಿಮ್ಮ ಮನೆಯಲ್ಲಿ ಬಳಸಿ ಹೆಚ್ಚುವರಿ ಆಗುವ ವಿದ್ಯುತ್ ಅನ್ನು ಸರ್ಕಾರಿ ಸಂಸ್ಥೆಗಳಿಗೆ ಮಾರಿ, ಅದರಿಂದಲು ಹಣ ಗಳಿಸಬಹುದು. ಸೂರ್ಯ ಘರ್ ಯೋಜನೆ ಇಂದ ಇಷ್ಟೆಲ್ಲಾ ಉಪಯೋಗವಿದೆ.

ಒಂದು ಲಕ್ಷದ ಗಡಿಯಲ್ಲಿ ಬೆಳ್ಳಿ ಬೆಲೆ, ಕಡಿಮೆಯಾಗದ ಚಿನ್ನದ ಬೆಲೆ! ಇಲ್ಲಿದೆ ಇತ್ತೀಚಿನ ದರಗಳ ವಿವರ

Solar electricity, Solar Panelಅರ್ಜಿ ಸಲ್ಲಿಕೆ ಹೇಗೆ?

*ಮೊದಲಿಗೆ ಈ https://pmsuryaghar.gov.in/ ಲಿಂಕ್ ಗೆ ಭೇಟಿ ನೀಡಿ

*ಇಲ್ಲಿ ಮೇಲ್ಛಾವಣಿ ಸೌರಕ್ಕಾಗಿ ಅನ್ವಯಿಸು ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ

*ಬಳಿಕ ನಿಮ್ಮ ರಾಜ್ಯದ ಹೆಸರು, ವಿದ್ಯುತ್ ವಿತರಣೆ ಮಾಡುವ ಕಂಪನಿಯ ಹೆಸರು ಎರಡನ್ನು ಸೆಲೆಕ್ಟ್ ಮಾಡಿ. ನಂತರ ನಿಮ್ಮ ಹೆಸರು, ವಿದ್ಯುತ್ ಗ್ರಾಹಕರ ಸಂಖ್ಯೆ, ಫೋನ್ ನಂಬರ್, ಇಮೇಲ್ ಎಲ್ಲವನ್ನು ನಮೂದಿಸಿ

*ಬಳಿಕ ಗ್ರಾಹಕರ ಸಂಖ್ಯೆ ಮತ್ತು ಫೋನ್ ನಂಬರ್ ಮೂಲಕ ಲಾಗಿನ್ ಮಾಡಿ

*ಫಾರ್ಮ್ ನಲ್ಲಿರುವ ಸ್ಟೆಪ್ಸ್ ಫಾಲೋ ಮಾಡಿ, ಮೇಲ್ಚಾವಣಿ ಸೌರವನ್ನು ಅನ್ವಯಿಸಿ

ಗಂಡನ ಆಸ್ತಿಯಲ್ಲಿ ಅರ್ಧ ಪಾಲು ಹೆಂಡತಿಗೆ ಸಿಗುತ್ತಾ? ಹೊಸ ನಿಯಮ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

*ಇಷ್ಟು ಪ್ರಕ್ರಿಯೆ ಮುಗಿದ ನಂತರ ನಿಮ್ಮ ವಿದ್ಯುತ್ ವಿತರಣಾ ಕಂಪನಿಯ ಜೊತೆಗೆ ರಿಜಿಸ್ಟರ್ ಆಗಿರುವ ಯಾವುದೇ ಸೆಲ್ಲರ್ ಇಂದ ನಿಮ್ಮ ಮನೆಯ ಮೇಲ್ಚಾವಣಿಯಲ್ಲಿ ಸೌರಫಲಕವನ್ನು ಅಳವಡಿಸಬಹುದು.

*ಸೌರಫಲಕ ಅಳವಡಿಸಿದ ನಂತರ ನೆಟ್ ಮೀಟರ್ ಪಡೆಯಲು ನಿಮ್ಮ ಎಲ್ಲಾ ವಿವರಗಳ ಜೊತೆಗೆ ಅರ್ಜಿ ಸಲ್ಲಿಸಬೇಕು

*ನೆಟ್ ಮೀಟರ್ ಹಾಕಿದ ಬಳಿಕ, ವಿದ್ಯುತ್ ವಿತರಣಾ ಕಂಪನಿ ಎಲ್ಲವನ್ನು ಒಮ್ಮೆ ಪರಿಶೀಲಿಸಿ, ಬಳಿಕ ನಿಮಗೆ ಕಮಿಷನ್ ಪ್ರಮಾಣಪತ್ರ ಕೊಡುತ್ತದೆ.

*ಆಯೋಗದಿಂದ ನಿಮಗೆ ಒಂದು ವರದಿ ಬರುತ್ತದೆ, ಅದನ್ನು ಪಡೆದ ನಂತರ ಪೋರ್ಟಲ್ ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ (Bank Account Details) ಮತ್ತು ರದ್ದು ಮಾಡಿರುವ ಚೆಕ್ ಅನ್ನು ಸಲ್ಲಿಸಬೇಕಾಗುತ್ತದೆ. ನಂತರ 30 ದಿನಗಳ ಒಳಗೆ ಸಬ್ಸಿಡಿ ಮೊತ್ತ ನಿಮ್ಮ ಬ್ಯಾಂಕ್ ಅಕೌಂಟ್ ತಲುಪುತ್ತದೆ.

Free Electricity Solar Panel Scheme Details

Our Whatsapp Channel is Live Now 👇

Whatsapp Channel

Related Stories