ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ! ಕೇಂದ್ರ ಸರ್ಕಾರದ ಯೋಜನೆ

Loan Scheme : ಉದ್ಯೋಗ ಮಾಡಲು ಬಯಸುವವರಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಯೋಜನೆ ಅಡಿಯಲ್ಲಿ 20 ಸಾವಿರ ರೂಪಾಯಿಗಳ ಸಾಲ (Loan) ಪಡೆಯಬಹುದು.

Loan Scheme : ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿರುವ ಹಾಗೂ ಯಾವುದೇ ಕಾರಣಕ್ಕೂ ಬೇಡಿಕೆ ಕಡಿಮೆಯಾಗದ ಒಂದು ಕಸುಬು ಅಂದ್ರೆ ಅದು ಹೊಲಿಗೆ (sewing business) ಮೂಲಕ ಉಡುಪುಗಳನ್ನು ತಯಾರಿಸುವುದು.

ಅದರಲ್ಲೂ ಹೆಚ್ಚಾಗಿ ಮಹಿಳೆಯರು ಹೊಲಿಗೆಯನ್ನು ಕಲಿತು ತಮ್ಮದೇ ಆಗಿರುವ ಸ್ವಂತ ಉದ್ಯಮ (own business) ವನ್ನು ಆರಂಭಿಸುತ್ತಾರೆ. ಈ ರೀತಿ ಉದ್ಯಮ ಆರಂಭಿಸಲು ಬಯಸುವ ಮಹಿಳೆಯರಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಅಡಿಯಲ್ಲಿ ಹೊಲಿಗೆಯಂತ್ರ ವಿತರಣೆ ಮಾಡಲಾಗುತ್ತಿದೆ. ಜೊತೆಗೆ ತರಬೇತಿಯನ್ನು ಕೊಡಲಾಗುವುದು.

ಉಚಿತ ಮನೆ ಪಡೆಯಲು ಅರ್ಜಿ ಆಹ್ವಾನ; ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಿರಿ

Application invited for free sewing machine distribution in this scheme

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ

ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕ ಉದ್ಯಮವನ್ನು ಮಾಡಿಕೊಂಡು ಬರುತ್ತಿರುವವರು ಪ್ರಧಾನಮಂತ್ರಿಯ ವಿಶ್ವಕರ್ಮ ಯೋಜನೆಯಡಿಯಲ್ಲಿ ಸಾಲ (loan) ಸೌಲಭ್ಯವನ್ನು ಪಡೆದುಕೊಂಡು ತಮ್ಮ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಳ್ಳಬಹುದು.

ಸುಮಾರು 18ಕ್ಕೂ ಹೆಚ್ಚಿನ ಉದ್ಯಮಗಳಿಗೆ ನೆರವಾಗುವಂತಹ ವಿಶ್ವಕರ್ಮ ಯೋಜನೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು 2023 ಸೆಪ್ಟೆಂಬರ್ 17ರಂದು ಚಾಲನೆ ನೀಡಿದರು. ಯೋಜನೆಯ ಅಡಿಯಲ್ಲಿ ಸಬ್ಸಿಡಿ ಸಾಲ, ತರಬೇತಿ (training) ವಿಶ್ವಕರ್ಮ ಐಡಿ ವಿತರಣೆ ಮೊದಲಾದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಇದರಿಂದಾಗಿ ಹೊಸ ಉದ್ಯಮ ಆರಂಭಿಸುವವರು ಹಾಗೂ ಈಗಾಗಲೇ ಉದ್ಯಮ ಮಾಡುತ್ತಿರುವವರು ತಮ್ಮ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಳ್ಳಲು ಸಹಾಯಕವಾಗುತ್ತದೆ.

ಈ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರಿಗೆ ಸಿಹಿ ಸುದ್ದಿ; ಸಾಲದ ಮೇಲಿನ ಬಡ್ಡಿ ಇಳಿಕೆ

ಕೇಂದ್ರ ಸರ್ಕಾರದ ವತಿಯಿಂದ ಹೊಲಿಗೆ ಯಂತ್ರ ವಿತರಣೆ!

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಈಗ ಇನ್ನಷ್ಟು ವಿಸ್ತರಿಸಲಾಗುತ್ತಿದ್ದು, ಸ್ವಂತ ಹೊಲಿಗೆ ಯಂತ್ರ ಇಟ್ಟುಕೊಂಡು ಉದ್ಯೋಗ ಮಾಡಲು ಬಯಸುವವರಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಯೋಜನೆ ಅಡಿಯಲ್ಲಿ 20 ಸಾವಿರ ರೂಪಾಯಿಗಳ ಸಾಲ (Loan) ಪಡೆಯಬಹುದು.

ಜೊತೆಗೆ 15,000ಗಳನ್ನು ಕೇಂದ್ರ ಸರ್ಕಾರ ನೇರವಾಗಿ ಫಲಾನುಭವಿಗಳ ಖಾತೆಗೆ ಜಮ್ಮು ಮಾಡುತ್ತದೆ ಇದರಿಂದ ಹೊಲಿಗೆ ಯಂತ್ರಕ್ಕೆ ಅಗತ್ಯವಾಗಿರುವ ಟೂಲ್ ಕಿಟ್ ಖರೀದಿಸಬಹುದು.

Free sewing machineಹೊಲಿಗೆ ಯಂತ್ರ ಖರೀದಿಗೆ ಸಹಾಯಧನ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು!

*ಭಾರತೀಯ ಪ್ರಜೆಯಾಗಿರಬೇಕು
*18 ವರ್ಷದ ಮೇಲ್ಪಟ್ಟ ಯಾವುದೇ ಮಹಿಳೆ ಅಥವಾ ಪುರುಷರು ಸಲ್ಲಿಸಬಹುದು
*ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಟೈಲರಿಂಗ್ ವೃತ್ತಿ ಮಾಡಿಕೊಳ್ಳಲು ನೋಂದಾಯಿಸಿಕೊಳ್ಳಬೇಕಾಗಿರುವುದು ಮುಖ್ಯ.
*ಹೊಸ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.

ಚಿನ್ನದ ಬೆಲೆ ಇಳಿಕೆ! ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್; ಇಲ್ಲಿದೆ ಡೀಟೇಲ್ಸ್

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents to apply)

ಆಧಾರ್ ಕಾರ್ಡ್
ವಿಶ್ವಕರ್ಮ ಐಡಿ
ವಿಳಾಸದ ಪುರಾವೆ
ಆದಾಯ ಪ್ರಮಾಣ ಪತ್ರ
ಟೈಲರಿಂಗ್ ವೃತ್ತಿ ಬಗ್ಗೆ ದೃಡೀಕರಣ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಪಾಸ್ ಪೋರ್ಟ್ ಅಳತೆಯ ಫೋಟೋ

ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡೋಕು ಮುನ್ನ ತಿಳಿದಿರಬೇಕಾದ ವಿಚಾರಗಳಿವು

ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply)

https://pmvishwakarma.gov.in/ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬೇಕು.

ವಿಶ್ವಕರ್ಮ ಐಡಿ ಪಡೆದು ಹತ್ತಿರದ ಸಿ ಎಸ್ ಸಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ.

ಅರ್ಹ ಅಭ್ಯರ್ಥಿಗೆ ಅರ್ಜಿ ಸಲ್ಲಿಸಿದ ನಂತರ ಏಪ್ರಿಲ್ ತಿಂಗಳಿನಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳುವುದಕ್ಕೆ ಹದಿನೈದು ಸಾವಿರ ರೂಪಾಯಿಗಳನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುವುದು.

ಮಹಿಳೆಯರಿರಬಹುದು ಅಥವಾ ಪುರುಷರು ಇರಬಹುದು ಹೊಲಿಗೆ ತರಬೇತಿ ಪಡೆದುಕೊಂಡಿದ್ದರೆ ಅಥವಾ ಹೊಲಿಗೆ ವೃತ್ತಿ ಮಾಡಲು ಆಸಕ್ತಿ ಹೊಂದಿದ್ದರೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ನಿಜಕ್ಕೂ ಸಹಾಯಕಾರಿಯಾಗಲಿದೆ. ಯಾಕಂದ್ರೆ ಯಾವುದೇ ಹೆಚ್ಚುವರಿ ಹಣ ಖರ್ಚು ಮಾಡುವ ಅಗತ್ಯ ಇಲ್ಲದೆ ನೀವು ಸುಲಭವಾಗಿ ಯಂತ್ರ ಖರೀದಿ ಮಾಡಬಹುದು.

Free Sewing Machine Distribution for Women by Scheme of Central Govt

Related Stories