ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎನ್ನುವುದು ಇಲ್ಲರ ಕನಸಾಗಿರುತ್ತದೆ, ಆದರೆ ಮನೆಕಟ್ಟಲು ಎಲ್ಲರ ಬಳಿ ಅನುಕೂಲ ಇರುವುದಿಲ್ಲ. ಮನೆ ಕಟ್ಟಲು ಆಸೆ ಇರುವವರಿಗೆ ಸರ್ಕಾರವೇ ಸಹಾಯ ಮಾಡುತ್ತದೆ, ಮನೆಯನ್ನು ಕಟ್ಟುವ ಜನರಿಗೆ ಆರ್ಥಿಕ ಸಹಾಯ ಮಾಡಲು ಪಿಎಮ್ ಅವಾಸ್ ಯೋಜನೆಯನ್ನು (PM Awas Yojana) ಜಾರಿಗೆ ತರಲಾಗಿದೆ.
ಈ ಯೋಜನೆಗೆ (Scheme) ಆಯ್ಕೆ ಆಗುವ ಫಲಾನುಭವುಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಇದೀಗ ಈ ಯೋಜನೆಯ ಫಲ ಪಡೆಯುವವರಿಗೆ ಸಹಾಯ ಸಿಗುವ ಮೊತ್ತವನ್ನು ಜಾಸ್ತಿ ಮಾಡಲಾಗಿದ್ದು, ಅರ್ಹರಿಗೆ ಸರ್ಕಾರದಿಂದ 5 ಲಕ್ಷ ರೂಪಾಯಿ ಸಹಾಯ ಸಿಗುತ್ತದೆ.
ಈ ಯೋಜನೆಗೆ ಅರ್ಜಿ ಹಾಕುವುದು ಹೇಗೆ ಎಂದು ತಿಳಿಸುತ್ತೇವೆ ಪೂರ್ತಿಯಾಗಿ ನೋಡಿ..
ನಿಮ್ಮ ಹತ್ತಿರ ಈ 7 ಪ್ರಮುಖ ದಾಖಲೆಗಳು ಇದ್ದರೆ, ಯಾವುದೇ ಜಮೀನು ನಿಮ್ಮ ಸ್ವಂತ ಆಗೋದು ಗ್ಯಾರಂಟಿ
ಪ್ರಧಾನ ಮಂತ್ರಿ ಅವಾಸ್ ಯೋಜನೆಯ (PM Awas Yojana) ನಿಯಮಗಳಲ್ಲಿ ಈಗ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಯ ಅನುಸಾರ ಈಗ ಪ್ರತಿಯೊಬ್ಬರಿಗು ಪ್ರಧಾನಮಂತ್ರಿ ಅವಾಸ್ ಯೋಜನೆಯ ಪ್ರಯೋಜನ ಸಿಗುವುದಿಲ್ಲ.
ಹಾಗೆಯೇ ಈ ಪ್ರಯೋಜನ ಸಿಗುವವರಿಗೆ ಸರ್ಕಾರ ನೀಡುವ ಸಹಾಯಧನದ ಮೊತ್ತವನ್ನು ಕೂಡ ಈಗ ಹೆಚ್ಚಿಸಲಾಗಿದ್ದು, 3 ಲಕ್ಷಕ್ಕಿಂತ ಜಾಸ್ತಿ ಸಿಗಲಿದೆ. 3 ಲಕ್ಷ ಅಥವಾ 5 ಲಕ್ಷ ಸಹಾಯಧನ ಸಿಗುತ್ತದೆ. 2023ರ ಈ ವರ್ಷದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನೆ ಇಲ್ಲದವರಿಗೆ ಆಶ್ರಯ ಸಿಗಬೇಕು ಎಂದು ಯೋಜನೆ ಮಾಡಿದ್ದಾರೆ.
2023-24 ವರ್ಷದಲ್ಲಿ ನಮ್ಮ ರಾಜ್ಯದಲ್ಲಿ ನಿರಾಶ್ರಿತರೇ ಇರಬಾರದು ಎಂದು ಪ್ರಧಾನ ಮಂತ್ರಿಗಳು ನಿರ್ಧಾರ ಮಾಡಿದ್ದು, ಇದರ ಫಲ ಜನರಿಗೆ ಸಿಗಲಿದೆ. ಈಗ ವಿಶ್ವದ ಎಲ್ಲೆಡೆ ಹಣದುಬ್ಬರ ನಡೆಯುತ್ತಿದೆ, ಹಾಗಿದ್ದರೂ ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಆಯ್ಕೆಯಾಗುವ ಫಲಾನುಭವಿಗಳಿಗೆ 3 ರಿಂದ 5 ಲಕ್ಷದವರೆಗು ಹಣ ಸಹಾಯ ಮಾಡುವ ಪ್ಲಾನ್ ಮಾಡಿದೆ ಸರ್ಕಾರ.
ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು, ಇಲ್ಲವಾದರೆ ಕಾರ್ಡ್ ಅಮಾನ್ಯವಾಗಬಹುದು
ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹರು, ಇದರ ಪ್ರಯೋಜನ ಪಡೆಯಬಹುದು. ಆದರೆ ಈ ಯೋಜನೆಯ ಮೂಲಕ ಸಹಾಯ ಪಡೆಯಲು ಜನರಿಗೆ ಕೆಲವು ನಿಯಮಗಳನ್ನು ಮಾಡಲಾಗಿದೆ, ಅದನ್ನು ಪಾಲಿಸಿದರೆ ಮಾತ್ರ ನಿಮಗೆ ಸರ್ಕಾರದ ಈ ಪ್ರಯೋಜನ ಸಿಗುತ್ತದೆ.
ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಮೂಲಕ ಸರ್ಕಾರದ ಸಹಾಯ ಪಡೆಯಲು ಇರುವ ಕೆಲವು ಷರತ್ತುಗಳು ಇವು.. ಮೊದಲಿಗೆ ನಿಮ್ಮ ಹತ್ತಿರ ಸ್ವಂತ ಮನೆ ಇರಬಾರದು, ಸ್ವಂತ ವಾಹನ ಇರಬಾರದು, ನಿಮಗೆ ಸರ್ಕಾರಿ ಕೆಲಸ ಇರಬಾರದು ಇದಿಷ್ಟು ನೀವು ಅರ್ಹತೆ ಪಡೆಯುವ ನಿಯಮಗಳಾಗಿದ್ದು, ಇದನ್ನೆಲ್ಲಾ ಅನುಸರಿಸಿದರೆ ನೀವು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತೀರಿ. ಈ ಎಲ್ಲಾ ಅರ್ಹತೆಯನ್ನು ನೀವು ಹೊಂದಿದ್ದರೆ, ಪ್ರಧಾನ ಮಂತ್ರಿ ಅವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಪ್ರತಿ ತಿಂಗಳು 10 ಸಾವಿರ ಪಡೆಯಿರಿ! ಈ ಜನಪ್ರಿಯ ಎಲ್ಐಸಿ ಪಾಲಿಸಿ ಯೋಜನೆ ಬಗ್ಗೆ ನಿಮಗೆ ಗೊತ್ತಾ?
ನೀವು ಅರ್ಜಿ ಹಾಕಿದ ನಂತರ, ನೀವು ಕೊಟ್ಟ ಮಾಹಿತಿ ಪರಿಶೀಲನೆ ಮತ್ತು ಸ್ಥಳದ ಪರಿಶೀಲನೆಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಲ್ಲವನ್ನು ಚೆಕ್ ಮಾಡಲು ಬರುತ್ತಾರೆ.. ಆಗ ನೀವು ಎಲ್ಲಿ ಮನೆ ಕಟ್ಟುತ್ತೀರೋ, ಆ ಭೂಮಿಯನ್ನು ತೋರಿಸಬೇಕು.
ಅಧಿಕಾರಿಗಳು ಎಲ್ಲವನ್ನು ಪರಿಶೀಲಿಸಿ, ಎಲ್ಲವೂ ಸರಿ ಇದೆ ಎಂದು ಅನ್ನಿಸಿದರೆ, ಅವರು ನಿಮ್ಮ ಅರ್ಜಿಯನ್ನು ಫಾರ್ವರ್ಡ್ ಮಾಡಿ, ಮುಂದಿನ ಪ್ರಕ್ರಿಯೆ ಶುರು ಮಾಡುತ್ತಾರೆ. ಮುಂದಿನ ಒಂದು ತಿಂಗಳ ಒಳಗಿನಿಂದ ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಹಣ ಬರುವುದಕ್ಕೆ ಶುರು ಆಗುತ್ತದೆ..
ಈ ಹಣ ಕಂತುಗಳಲ್ಲಿ ಬರಲಿದ್ದು, ಮೊದಲ ಕಂತಿನಲ್ಲಿ ₹50,000.. ಎರಡನೇ ಕಂತಿನಲ್ಲಿ 1 ಲಕ್ಷ, ಬಳಿಕ ಪೂರ್ತಿ 5 ಲಕ್ಷವನ್ನು ಕೊಡಲಾಗುತ್ತದೆ. ಹಾಗಾಗಿ ಅರ್ಹತೆ ಇರುವ ಎಲ್ಲರು ತಪ್ಪದೇ ಈ ಯೋಜನೆಯ ಫಲವನ್ನು ಪಡೆಯಿರಿ.
Get 5 lakhs From government to Build Your new house by Awas Yojana
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.