ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ 50 ಲಕ್ಷ ಸಹಾಯಧನ! ತಕ್ಷಣ ಅರ್ಜಿ ಸಲ್ಲಿಸಿ

Story Highlights

ಸರ್ಕಾರ ಅತಿ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಅಡಮಾನವನ್ನು ಇಟ್ಟುಕೊಳ್ಳದೆ ಸಾಲ ಸೌಲಭ್ಯ (loan facility) ಒದಗಿಸುತ್ತದೆ.

ಸಾಮಾನ್ಯವಾಗಿ ದೊಡ್ಡ ಉದ್ಯಮಗಳನ್ನ ಮಾಡುವುದಿದ್ದರೆ ಫ್ಯಾಕ್ಟರಿ (factory) ಅಥವಾ ಕಂಪನಿ (company) ಆರಂಭಿಸುವುದಿದ್ದರೆ ಮಾತ್ರ ಸರ್ಕಾರದಿಂದ ಅಥವಾ ಬ್ಯಾಂಕ್ನಿಂದ (Bank Loan) ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆಯಬಹುದು ಎಂದು ಹಲವರು ಭಾವಿಸುತ್ತಾರೆ.

ಆದರೆ ನಿಮಗೆ ಗೊತ್ತಾ ನಿರುದ್ಯೋಗಿಗಳು (unemployed) ಕೃಷಿ ಚಟುವಟಿಕೆಯಲ್ಲಿ ಅಥವಾ ಕೃಷಿಯ ಉಪಕಸುಬಿನಲ್ಲಿ ತೊಡಗಿಕೊಂಡರೆ ಅವರು ಕೂಡ 50 ಲಕ್ಷ ರೂಪಾಯಿಗಳ ವರೆಗೂ ಸರ್ಕಾರದಿಂದ ಸಾಲ (Loan) ಪಡೆಯಬಹುದು.

ಮಹಿಳೆಯರ ಬಳಿ ಈ ದಾಖಲೆ ಇದ್ರೆ ಸಾಕು ಕೇಂದ್ರ ಸರ್ಕಾರವೇ ಕೊಡುತ್ತೆ 3 ಲಕ್ಷ ರೂಪಾಯಿ!

ಹೌದು, ನೀವು ಹೈನುಗಾರಿಕೆ ಮೀನುಗಾರಿಕೆ, ಮೇಕೆ ಸಾಕಾಣಿಕೆ, ಕೋಳಿ ಫಾರ್ಮಿಂಗ್ ಹೀಗೆ ಬೇರೆ ಬೇರೆ ರೀತಿಯ ಕೃಷಿ ಉಪಕಸುಬು ಆರಂಭಿಸುವುದಾದರೆ ಸರ್ಕಾರ ಅತಿ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಅಡಮಾನವನ್ನು ಇಟ್ಟುಕೊಳ್ಳದೆ ಸಾಲ ಸೌಲಭ್ಯ (loan facility) ಒದಗಿಸುತ್ತದೆ. ಇನ್ನು ಮೇಕೆ ಸಾಕಾಣಿಕೆ ಮಾಡುವುದಾದರೆ 50 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.

ಮೇಕೆ ಸಾಕಾಣಿಕೆಗೆ 50 ಲಕ್ಷ ಸಹಾಯಧನ (loan for goat farming)

ಭಾರತ ಕೃಷಿ ಪ್ರಧಾನ ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದಿಗೂ ಕೋಟ್ಯಾಂತರ ರೈತರು ತಮ್ಮ ಜೀವನವನ್ನು ಕೃಷಿ ಚಟುವಟಿಕೆ ಮಾಡಿಕೊಂಡೆ ಸಾಗಿಸುತ್ತಿದ್ದಾರೆ. ಕೃಷಿ ಉದ್ಯಮ ಆರಂಭಿಸಿದರೆ ಅದರಿಂದ ಹೆಚ್ಚು ಲಾಭವನ್ನು ಕೂಡ ಪಡೆಯಬಹುದು.

ಇನ್ನು ಗದ್ದೆಗಳಲ್ಲಿ ಫಸಲು ಬೆಳೆಯುವುದರ ಜೊತೆಗೆ ಸಾಕಷ್ಟು ರೈತರು ಪಶು ಸಂಗೋಪನೆಯಂತಹ ಉಪಕಸುಬುಗಳನ್ನು ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಸರ್ಕಾರ ಹೆಚ್ಚಿನ ಮೊತ್ತದ ಹಣವನ್ನು ಸಾಲವಾಗಿ ನೀಡುತ್ತದೆ. ನೀವು ಮೇಕೆ ಸಾಕಾಣಿಕೆಗೆ 50 ಲಕ್ಷ ರೂಪಾಯಿಗಳ ಸಾಲ ಪಡೆದುಕೊಂಡರೆ 50% ವರೆಗೂ ಸಬ್ಸಿಡಿ ಪಡೆದುಕೊಳ್ಳಲು ಸಾಧ್ಯವಿದೆ.

ಕೆನರಾ ಬ್ಯಾಂಕ್ ಅಕೌಂಟ್ ಹೊಂದಿದ್ರೆ ಇಲ್ಲಿದೆ ಬಂಪರ್ ಕೊಡುಗೆ! ನಿಮ್ಮ ಹಣ ಡಬಲ್ ಆಗುವ ಸ್ಕೀಮ್

Goat Farming Business Ideaಸಬ್ಸಿಡಿ ಸಾಲ ಪಡೆಯಲು ಬೇಕಾಗಿರುವ ದಾಖಲೆಗಳು! (Needed the documents)

ಅರ್ಜಿ ಸಲ್ಲಿಸುವ ರೈತರ ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ (Bank Account)
ಸ್ವಂತ ಜಮೀನು ಹೊಂದಿದ್ದರೆ ಪಹಣಿ ಪತ್ರ (RTC)
ಈ ರೀತಿ ಮೊದಲಾದ ದಾಖಲೆಗಳನ್ನು ನೀಡಿ ನೀವು ಸಾಲ ಸೌಲಭ್ಯ ಪಡೆಯಬಹುದು.

ಬಿಪಿಎಲ್ ರೇಷನ್ ಕಾರ್ಡ್ ಇದ್ರೆ ಉಚಿತ ಗ್ಯಾಸ್ ಕನೆಕ್ಷನ್; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಸಾಲ ಸೌಲಭ್ಯವನ್ನು ಎಲ್ಲಿ ಪಡೆಯಬಹುದು?

ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯ ಪಡೆಯಲು ಹತ್ತಿರದ ಪಶು ವೈದ್ಯಕೀಯ ಕೇಂದ್ರಕ್ಕೆ ಹೋಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅಗತ್ಯ ಇರುವ ದಾಖಲೆಗಳನ್ನು ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು. ಇನ್ನು ಪಶು ವೈದ್ಯಕೀಯ ಕೇಂದ್ರದಲ್ಲಿ ಅರ್ಜಿ ನಮೂನೆ ತೆಗೆದುಕೊಂಡು ಅದನ್ನು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ. ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ಕೇವಲ ವಾರದಿಂದ 15 ದಿನಗಳ ಒಳಗೆ ಸಾಲ ಮಂಜೂರು ಮಾಡಲಾಗುತ್ತದೆ ಹಾಗೂ ಮಂಜೂರಾದ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ಸಾಲ ಸೌಲಭ್ಯ

Get 50 lakh subsidy Loan for Goat Farming from the government

Related Stories