ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ಸಾಲ ಸೌಲಭ್ಯ
ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದಾರೆ. ಅದು ಅಲ್ಲದೆ ಸ್ವಯಂ ಉದ್ಯೋಗ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಜಾಸ್ತಿಯಾಗಿದೆ. ಇದಕ್ಕೆ ಪೂರಕವಾಗಿ ಕೆಲವು ಪ್ರಮುಖ ಬ್ಯಾಂಕ್ ಗಳು ಮಹಿಳೆಯರಿಗಾಗಿ ವಿಶೇಷ ಸಾಲ ಯೋಜನೆಯನ್ನು (Loan Scheme) ಪರಿಚಯಿಸಿವೆ.
ಅವುಗಳಲ್ಲಿ ಮುಖ್ಯವಾಗಿ ದೇಶದ ಅತಿ ದೊಡ್ಡ ರಾಷ್ಟ್ರ ಬ್ಯಾಂಕ್ ಆಗಿರುವ ಎಸ್‌ಬಿಐ ಸ್ತ್ರೀ ಶಕ್ತಿ ಯೋಜನೆಯನ್ನು ಆರಂಭಿಸಿದ್ದು ಮಹಿಳೆಯರು ಈ ಯೋಜನೆಯಲ್ಲಿ 25 ಲಕ್ಷಗಳವರೆಗೆ ಸಾಲ ಸೌಲಭ್ಯ (Loan) ಪಡೆದುಕೊಳ್ಳಲು ಸಾಧ್ಯವಿದೆ.
ಕೇವಲ 500 ರೂಪಾಯಿ ಹೂಡಿಕೆ ಮಾಡಿ ಲಕ್ಷಗಟ್ಟಲೆ ಹಣ ಗಳಿಸುವ ಪೋಸ್ಟ್ ಆಫೀಸ್ ಸ್ಕೀಮ್ ಇದು
ಎಸ್ ಬಿ ಐ ಸ್ತ್ರೀ ಶಕ್ತಿ ಯೋಜನೆ! (SBI shree Shakti scheme)
ಸಶಕ್ತ ಮಹಿಳೆಯರಿಗಾಗಿ ಅವರ ಅಭಿವೃದ್ಧಿಗಾಗಿ sbi ಸ್ತ್ರೀಶಕ್ತಿ ಯೋಜನೆ ಆರಂಭಿಸಿದ್ದು ಸ್ವಾವಲಂಬಿ ಜೀವನ ನಡೆಸಲು ಮಹಿಳೆಯರಿಗೆ ಸಹಾಯಕವಾಗಿದೆ ಎನ್ನಬಹುದು. ಸ್ವಂತ ಉದ್ಯಮ ಮಾಡುವ ಮಹಿಳೆಯರು ಯಾವುದೇ ಅಡಮಾನ ಇಲ್ಲದೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸ್ತ್ರೀಶಕ್ತಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದು.
ಸ್ತ್ರೀಶಕ್ತಿ ಯೋಜನೆಯ ಪ್ರಯೋಜನಗಳು!
ಪಾರ್ಟ್ನರ್ ಶಿಪ್ ಆಧಾರದಲ್ಲಿ ಉದ್ಯಮ ಮಾಡುವ ಮಹಿಳೆಯರು 50 ಪರ್ಸೆಂಟ್ ಗಿಂತ ಹೆಚ್ಚಿನ ಪಾರ್ಟಿ ಪಡೆದುಕೊಂಡಿದ್ದರೆ ಅಂತವರಿಗೆ ಸಾಲ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಮಹಿಳೆಯರು 50,000 ದಿಂದ 25 ಲಕ್ಷಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು. ಇನ್ನು ಯಾವುದೇ ಅಡಮಾನ ಇಡುವ ಅಗತ್ಯ ಇಲ್ಲ.
ಡೈರಿ ವ್ಯಾಪಾರ, ಬಟ್ಟೆ ಅಂಗಡಿ, ಬ್ಯೂಟಿ ಪಾರ್ಲರ್, ಬ್ಯೂಟಿ ಪ್ರಾಡೆಕ್ಟ್ ಶಾಪ್, ಗುಡಿ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ನೀಡಲಾಗುವುದು.
ಈ ಒಂದು ಚಿಕ್ಕ ಮಿಷನ್ ಮನೆಗೆ ತನ್ನಿ ಸಾಕು, ಪ್ರತಿ ತಿಂಗಳಿಗೆ 60,000 ಆದಾಯ ಫಿಕ್ಸ್!
ಸ್ತ್ರೀ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು!
* ಭಾರತದ ಕಾಯಂ ನಿವಾಸಿಗಳಾಗಿರಬೇಕು
* ಮಹಿಳೆಯರಿಗೆ ಮೀಸಲಾಗಿರುವ ಯೋಜನೆ ಇದಾಗಿದೆ
* ಸಾಲು ಪಡೆಯಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
* ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತಿರುವವರು ಈ ಯೋಜನೆ ಅಡಿಯಲ್ಲಿ ಸಾಲ ಪಡೆಯಬಹುದು.
ನಿಮ್ಮ ಊರಲ್ಲೇ ಪೆಟ್ರೋಲ್ ಬಂಕ್ ಶುರು ಮಾಡಿ! ಇಲ್ಲಿದೆ ಬಂಡವಾಳ ಮತ್ತು ಲಾಭದ ಲೆಕ್ಕಾಚಾರ
ಎಸ್ ಬಿ ಐ ನ ಸ್ತ್ರೀಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಮಹಿಳೆಯರ ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಖಾಯಂ ನಿವಾಸದ ಪುರಾವೆ
ಸ್ವಂತ ಉದ್ಯಮ ಮಾಡುವ ಬಗ್ಗೆ ಪ್ರಮಾಣ ಪತ್ರ
ಬ್ಯಾಂಕ್ ಸ್ಟೇಟ್ಮೆಂಟ್
ಕಳೆದ ಎರಡು ವರ್ಷಗಳ ವ್ಯಾಪಾರ ವಹಿವಾಟಿನ ಲೆಕ್ಕಾಚಾರ
ಮೊಬೈಲ್ ಸಂಖ್ಯೆ
ಪಾಸ್ ಪೋರ್ಟ್ ಅಳತೆಯ ಫೋಟೋ
ಯಾವುದೇ ಬಡ್ಡಿ ಇಲ್ಲದೆ ಇಂತಹ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ ಸೌಲಭ್ಯ
ಎಸ್ ಬಿ ಐ ನ ಸ್ತ್ರೀಶಕ್ತಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ (Loan) ಪಡೆದುಕೊಳ್ಳಲು ನೇರವಾಗಿ ಎಸ್ ಬಿ ಐ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಉದ್ಯಮ ಅಥವಾ ವ್ಯಾಪಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಅಗತ್ಯ ಇರುವ ದಾಖಲೆಗಳನ್ನು ಕೊಟ್ಟರೆ ಅವುಗಳನ್ನ ಪರಿಶೀಲನೆ ಮಾಡಿ ನಂತರ ಸಾಲ ಸೌಲಭ್ಯ ಮಂಜೂರು ಮಾಡಲಾಗುತ್ತದೆ.
25 lakh loan facility will be available to women having State Bank account