ನಿಮ್ಮ ಊರಲ್ಲೇ ಪೆಟ್ರೋಲ್ ಬಂಕ್ ಶುರು ಮಾಡಿ! ಇಲ್ಲಿದೆ ಬಂಡವಾಳ ಮತ್ತು ಲಾಭದ ಲೆಕ್ಕಾಚಾರ
ಪೆಟ್ರೋಲ್ ಇಲ್ಲದೆ ಯಾವ ಗಾಡಿಯು ಓಡುವುದಿಲ್ಲ. ಇತ್ತೀಚಿಗೆ ಎಲೆಕ್ಟ್ರಿಕ್ ವಾಹನ (electric vehicle) ಗಳ ಬೇಡಿಕೆ ಜಾಸ್ತಿ ಆಗುತ್ತಿದ್ದರೂ ಕೂಡ ಪೆಟ್ರೋಲ್ ಅಥವಾ ಡೀಸೆಲ್ ಇಂಧನದ ವಾಹನಗಳಂತೂ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಮಾರಾಟವಾಗುತ್ತಲೇ ಇದೆ.
ಇದನ್ನೇ ನೀವು ಅಡ್ವಾಂಟೇಜ್ ಆಗಿ ತೆಗೆದುಕೊಂಡು ಸ್ವಂತ ಪೆಟ್ರೋಲ್ ಬಂಕ್ (petrol bunk business) ಶುರು ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸಬಹುದು. ಹೇಗೆ ಗೊತ್ತಾ?
ಯಾವುದೇ ಬಡ್ಡಿ ಇಲ್ಲದೆ ಇಂತಹ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ ಸೌಲಭ್ಯ
ಪೆಟ್ರೋಲ್ ಬಂಕ್ ಡೀಲರ್ ಶಿಪ್ ತೆಗೆದುಕೊಳ್ಳಿ (Petrol bunk dealership)
ಪೆಟ್ರೋಲ್ ಬಂಕ್ ನಲ್ಲಿ ಎರಡು ವಿಧ, ಕೆಲವು ಸರ್ಕಾರಿ ಪೆಟ್ರೋಲ್ ಬಂಕ್ ಆಗಿದ್ದರೆ ಕೆಲವು ಪ್ರೈವೇಟ್ ಪೆಟ್ರೋಲ್ ಬಂಕ್ ಆಗಿರುತ್ತವೆ. ಉದಾಹರಣೆಗೆ ಇಂಡಿಯನ್ ಆಯಿಲ್, ಹಿಂದುಸ್ತಾನ ಪೆಟ್ರೋಲಿಯಂ, ಭಾರತ್ ಆಯಿಲ್ ಮೊದಲಾದವು ಸರ್ಕಾರಿ ಪೆಟ್ರೋಲ್ ಬಂಕ್ ಗಳಾಗಿವೆ
ಇನ್ನು ರಿಲಯನ್ಸ್, ಎಸ್ ಆರ್ ಮೊದಲಾದವು ಪ್ರೈವೇಟ್ ಪೆಟ್ರೋಲ್ ಬಂಕ್ ಗಳಾಗಿವೆ. ನೀವು ಈ ಪೆಟ್ರೋಲ್ ಬಂಕ್ ಡೀಲರ್ಶಿಪ್ ಪಡೆದುಕೊಂಡು ಸ್ವಂತ ಉದ್ಯಮವನ್ನು ಆರಂಭಿಸಬಹುದು.
ಎಲ್ಲಿ ಪೆಟ್ರೋಲ್ ಬಂಕ್ ತೆರೆಯಬಹುದು?
ಪೆಟ್ರೋಲ್ ಬಂಕ್ ಔಟ್ಲೆಟ್ ಗಳಲ್ಲಿ ಎರಡು ಪ್ರಕಾರ, ಒಂದು ಹೈವೇಗಳಲ್ಲಿ ಇರುವ ರೆಗ್ಯುಲರ್ ರಿಟೇಲ್ ಪೆಟ್ರೋಲ್ ಬಂಕ್ ಹಾಗೂ ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಇರುವ ರೂರಲ್ ರಿಟೇಲ್ ಪೆಟ್ರೋಲ್ ಬಂಕ್. ಇವುಗಳಲ್ಲಿ ನೀವು ನಿಮ್ಮ ಸಮೀಪದ ಪೆಟ್ರೋಲ್ ಬಂಕ್ ಔಟ್ಲೆಟ್ ಅನ್ನು ಆಯ್ದುಕೊಳ್ಳಬಹುದು.
ಪೋಸ್ಟ್ ಆಫೀಸ್ನಲ್ಲಿ 2 ಲಕ್ಷ ಹಣ ಫಿಕ್ಸೆಡ್ ಇಟ್ಟರೆ ಬರುವ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಈ ಅರ್ಹತೆಗಳು ಬೇಕು!
* ಹೈವೇಯಲ್ಲಿ ಆದರೆ ಟೋಲ್ ಗೇಟ್ ಗಿಂತ ಒಂದು ಕಿಲೋಮೀಟರ್ ದೂರದಲ್ಲಿ ಪೆಟ್ರೋಲ್ ಬಂಕ್ ಆರಂಭಿಸಿದರೆ ಮಾತ್ರ ಪರ್ಮಿಷನ್ ಸಿಗುತ್ತೆ.
* ಹಳ್ಳಿಗಳಲ್ಲಿ ಕನಿಷ್ಠ 300 ಸ್ಕ್ವೇರ್ ಫೀಟ್ ಹಾಗೂ ಹೈವೇಗಳಲ್ಲಿ ಕನಿಷ್ಠ 500 ಸ್ಕ್ವೇರ್ ಫೀಟ್ ಜಾಗ ಬೇಕು.
* ಪೆಟ್ರೋಲ್ ಬಂಕ್ ಆರಂಭಿಸಲು ಜಾಗ ನಿಮ್ಮದೇ ಹೆಸರಿನಲ್ಲಿ ಇರಬೇಕು ಅಥವಾ 30 ವರ್ಷಗಳವರೆಗೆ ಲೀಸ್ ಅಗ್ರಿಮೆಂಟ್ ಮಾಡಿಕೊಂಡಿರಬೇಕು
* ನೀವು ಯಾವ ಪೆಟ್ರೋಲ್ ಬಂಕ್ ಆರಂಭಿಸುತ್ತೀರಿ ಎಂಬುದನ್ನು ಮೊದಲು ತೀರ್ಮಾನ ಮಾಡಿ ನಂತರ ಆಯಾ ಪೆಟ್ರೋಲ್ ಕಂಪನಿಗಳ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದವರ ಸಂಖ್ಯೆ ಜಾಸ್ತಿ ಇದ್ದರೆ ಲಾಟರಿ ಆಯ್ಕೆ ಮಾಡುವುದರ ಮೂಲಕ ಡೀಲರ್ಶಿಪ್ ಕೊಡಲಾಗುವುದು.
ಯಾವುದೇ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡವರಿಗೆ ರಾತ್ರೋ-ರಾತ್ರಿ ಭರ್ಜರಿ ಸುದ್ದಿ!
* ಪೆಟ್ರೋಲ್ ಬಂಕ್ ಆರಂಭಿಸಲು ಪರ್ಮಿಷನ್ ಸಿಕ್ಕ ನಂತರ ಜಿಎಸ್‌ಟಿ ನಂಬರ್ ಪಡೆದುಕೊಳ್ಳಬೇಕು ಹಾಗೂ ನಿಮ್ಮ ಪೆಟ್ರೋಲ್ ಬಂಕ್ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಕರೆಂಟ್ ಅಕೌಂಟ್ ಆರಂಭಿಸಬೇಕು.
* 22ರಿಂದ 50 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು.
ಇವಿಷ್ಟು ಪೆಟ್ರೋಲ್ ಬಂಕ್ ಡೀಲರ್ಶಿಪ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ಅರ್ಹತೆಗಳು, ಇನ್ನೂ ಹೆಚ್ಚಿನ ಮಾಹಿತಿಗಾಗಿ ಪೆಟ್ರೋಲ್ ಬಂಕ್ ಡೀಲರ್ಶಿಪ್ ಕೊಡುವ ಕಂಪನಿಗಳ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.
ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬೆಳ್ಳಂಬೆಳ್ಳಗೆ ಸಿಹಿ ಸುದ್ದಿ! ಬಂಪರ್ ಕೊಡುಗೆ
Start a petrol station Business in your town, Here is the profit calculation