ಕೇವಲ 500 ರೂಪಾಯಿ ಹೂಡಿಕೆ ಮಾಡಿ ಲಕ್ಷಗಟ್ಟಲೆ ಹಣ ಗಳಿಸುವ ಪೋಸ್ಟ್ ಆಫೀಸ್ ಸ್ಕೀಮ್ ಇದು
ಭಾರತದಲ್ಲಿ ಇಂದು ಅಂಚೆ ಕಚೇರಿಯಲ್ಲಿ ಹೂಡಿಕೆ (post office investment) ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ, ಇದಕ್ಕೆ ಮುಖ್ಯ ಕಾರಣ ಸರ್ಕಾರ ಬೆಂಬಲಿತ ಅಂಚೆ ಕಚೇರಿಯಲ್ಲಿ ಅತಿ ಉತ್ತಮವಾಗಿರುವ ಯೋಜನೆಗಳನ್ನು ಪರಿಚಯಿಸಲಾಗಿದೆ.
ಇವುಗಳಿಂದ ಹೆಚ್ಚು ಬಡ್ಡಿ ಪಡೆದುಕೊಂಡು ಉತ್ತಮ ಆದಾಯವನ್ನು ಗಳಿಸಬಹುದು. ಪೋಸ್ಟ್ ಆಫೀಸ್ನಲ್ಲಿ ಇರುವ ಪ್ರಮುಖ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಈ ಒಂದು ಚಿಕ್ಕ ಮಿಷನ್ ಮನೆಗೆ ತನ್ನಿ ಸಾಕು, ಪ್ರತಿ ತಿಂಗಳಿಗೆ 60,000 ಆದಾಯ ಫಿಕ್ಸ್!
Post office savings account
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆದರೆ ಕೇವಲ ಐನೂರು ರೂಪಾಯಿಗಳಲ್ಲಿ ಠೇವಣಿ ಆರಂಭಿಸಬಹುದು. ವರ್ಷದ ಕೊನೆಯಲ್ಲಿ ನಾಲ್ಕು% ಬಡ್ಡಿ ದರದಲ್ಲಿ ಬಡ್ಡಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಉಳಿತಾಯ ಖಾತೆಯನ್ನು ಜಂಟಿಯಾಗಿಯೂ ಆರಂಭಿಸಬಹುದು. ಬ್ಯಾಂಕುಗಳಂತೆ (Bank) ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ಆರಂಭಿಸಿದರೆ, ಎಟಿಎಂ, ಆನ್ಲೈನ್ ಬ್ಯಾಂಕಿಂಗ್ (Online Banking) ಮೊದಲಾದ ಪ್ರಯೋಜನ ಪಡೆದುಕೊಳ್ಳಬಹುದು, ಜೊತೆಗೆ ಆದಾಯ ತೆರಿಗೆ ರಿಯಾಯಿತಿ ಕೂಡ ಸಿಗುತ್ತದೆ.
ನಿಮ್ಮ ಊರಲ್ಲೇ ಪೆಟ್ರೋಲ್ ಬಂಕ್ ಶುರು ಮಾಡಿ! ಇಲ್ಲಿದೆ ಬಂಡವಾಳ ಮತ್ತು ಲಾಭದ ಲೆಕ್ಕಾಚಾರ
ಅಂಚೆ ಕಚೇರಿಯ ಮರುಕಳಿಸುವ ಠೇವಣಿ!
ಅಂಚೆ ಕಚೇರಿಯಲ್ಲಿ ಆರ್ ಡಿ ಖಾತೆಯನ್ನು ಎರಡರಿಂದ ಐದು ವರ್ಷಗಳ ಅವಧಿಗೆ ತೆರೆಯಬಹುದು. ಕನಿಷ್ಠ ನೂರು ರೂಪಾಯಿಯಿಂದ ಖಾತೆ ಆರಂಭಿಸಬಹುದು. ಹಾಗೂ ಗರಿಷ್ಠ ಮಿತಿ ಇಲ್ಲ. ಪ್ರಸ್ತುತ ಆರ್ ಡಿ ಖಾತೆಗೆ 6.7 ಪರ್ಸೆಂಟ್ ನಷ್ಟು ಬಡ್ಡಿದರ ನೀಡಲಾಗುವುದು.
ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಣೆ ಮಾಡಲಾಗುತ್ತದೆ. ಇನ್ನು ಒಂದು ವರ್ಷದವರೆಗೆ ಆರ್‌ಡಿ ಠೇವಣಿಯನ್ನು ಮಿಸ್ ಮಾಡದೆ ಪಾವತಿ ಮಾಡಿದರೆ 50% ವರೆಗೆ ಠೇವಣಿ ಹಣದ ಮೇಲೆ ಸಾಲ ಸೌಲಭ್ಯ (Loan) ಪಡೆಯಬಹುದು.
ಯಾವುದೇ ಬಡ್ಡಿ ಇಲ್ಲದೆ ಇಂತಹ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ ಸೌಲಭ್ಯ
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್!
ಕನಿಷ್ಠ 1000 ರೂಪಾಯಿಗಳನ್ನು ಠೇವಣಿ ಇಟ್ಟು ಟೈಮ್ ಡೆಪಾಸಿಟ್ ಆರಂಭಿಸಬಹುದು. ಇದನ್ನು ಒಂದು ವರ್ಷ ಎರಡು ವರ್ಷ ಮೂರು ವರ್ಷ ಮತ್ತು 5 ವರ್ಷಗಳ ಅವಧಿಗೆ ಠೇವಣಿ ಇಡಬಹುದು.
ಇದರ ಬಡ್ಡಿದರ ನೋಡುವುದಾದರೆ, ವರ್ಷದ ಖಾತೆ -ಒಂದು ವರ್ಷದ ಅವಧಿಗೆ 6.9%, 2 ವರ್ಷಗಳ ಖಾತೆ -7%, 3 ವರ್ಷಗಳ ಖಾತೆ-7.1%, 5 ವರ್ಷಗಳ ಖಾತೆ-7.5% ಬಡ್ಡಿದರ ನೀಡಲಾಗುವುದು. ಐದು ವರ್ಷಗಳ ಮುಕ್ತಾಯದ ಹೊತ್ತಿಗೆ ಪಡೆಯುವ ಆದಾಯದ ಮೇಲೆ ಆದಾಯ ತೆರಿಗೆ 80 ಸಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದು.
ಪೋಸ್ಟ್ ಆಫೀಸ್ನಲ್ಲಿ 2 ಲಕ್ಷ ಹಣ ಫಿಕ್ಸೆಡ್ ಇಟ್ಟರೆ ಬರುವ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ!
ಇದರಲ್ಲಿ ಸಾವಿರ ರೂಪಾಯಿ ಇಂದ ಒಂಬತ್ತು ಲಕ್ಷ ರೂಪಾಯಿಗಳ ವರೆಗೆ ಒಂಟಿ ಖಾತೆಯಲ್ಲಿ ಹೂಡಿಕೆ ಮಾಡಬಹುದು ಜಂಟಿ ಖಾತೆಯಲ್ಲಿ ಹೂಡಿಕೆ ಮಾಡಿದರೆ 15 ಲಕ್ಷ ರೂಪಾಯಿಗಳ ಮಿತಿ ಇದೆ. ಐದು ವರ್ಷಗಳ ಅವಧಿಗೆ 7.4% ಬಡ್ಡಿದರ ನೀಡಲಾಗುವುದು.
POMIS ನಲ್ಲಿ ಒಂಟಿ ಖಾತೆ ತೆರೆದು 9 ಲಕ್ಷ ಹೂಡಿಕೆ ಮಾಡುವುದಾದರೆ ಪ್ರತಿ ತಿಂಗಳು 5530 ರೂಪಾಯಿಗಳನ್ನು ಪಾವತಿ ಮಾಡಬೇಕು. ಇದರಿಂದ ನೀವು ಪ್ರತಿ ತಿಂಗಳು ನಿಮ್ಮ ಠೇವಣಿ ಆಧಾರದ ಮೇಲೆ ಆದಾಯ ಗಳಿಸಬಹುದು.
ಅಂಚೆ ಕಚೇರಿಯ ಭವಿಷ್ಯ ನಿಧಿ ಯೋಜನೆ!
PPF ನಲ್ಲಿ ಹೂಡಿಕೆ ಮಾಡಿಯು ನೀವು ಉತ್ತಮ ಲಾಭ ಗಳಿಸಬಹುದು. ವರ್ಷಕ್ಕೆ 1.5 ಲಕ್ಷ ರೂಪಾಯಿಗಳಿಗೆ ಆದಾಯ ತೆರಿಗೆ ವಿನಾಯಿತಿ ಕೊಡಲಾಗುವುದು. ಕನಿಷ್ಠ 500 ರೂಪಾಯಿಗಳಿಂದ ಖಾತೆ ಆರಂಭಿಸಿ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. 15 ವರ್ಷಗಳ ಮೆಚುರಿಟಿ ಅವಧಿ ಇರುತ್ತದೆ ಈ ಯೋಜನೆಯಲ್ಲಿ ಸಿಗುವ ಬಡ್ಡಿದರ 7.1%.
ನಿಮ್ಮ ಸ್ವಂತ ಜಾಗವಾದ್ರೂ ಮನೆ ಕಟ್ಟುವುದಕ್ಕೆ ಬೇಕು ಪರ್ಮಿಷನ್; ಸರ್ಕಾರದ ಹೊಸ ರೂಲ್ಸ್
ಇದರ ಜೊತೆಗೆ ಭಾರತೀಯ ಅಂಚೆ ಕಚೇರಿಯಲ್ಲಿ ನೀವು ಇನ್ನೂ ಸಾಕಷ್ಟು ಯೋಜನೆಗಳ ಅಡಿಯಲ್ಲಿ ಹೂಡಿಕೆ ಮಾಡಿ ಯಾವುದೇ ಮಾರುಕಟ್ಟೆ ಅಪಾಯವಿಲ್ಲದೆ ಉತ್ತಮ ರಿಟರ್ನ್ ಪಡೆದುಕೊಳ್ಳಲು ಸಾಧ್ಯವಿದೆ.
post office scheme where you can earn lakhs by investing just 500 rupees
Our Whatsapp Channel is Live Now 👇