ಪಿಯುಸಿ ಪಾಸಾಗಿರುವ ಹೆಣ್ಣುಮಕ್ಕಳಿಗೆ ಸಿಗುತ್ತೆ 2.50 ಲಕ್ಷ ವಿದ್ಯಾರ್ಥಿ ವೇತನ! ಅಪ್ಲೈ ಮಾಡಿ
ಲಾರಿಯಲ್ ಇಂಡಿಯಾ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ (Education scholarship for girl student) ನೀಡುವುದರ ಮೂಲಕ ವಿದ್ಯಾರ್ಥಿನಿಯರ ಶಿಕ್ಷಣ ಉತ್ತಮಗೊಳಿಸಲು ಸಹಕರಿಸುತ್ತದೆ
ನೀವು ದ್ವಿತೀಯ ಪಿಯುಸಿ (2nd PUC) ಮುಗಿಸಿದ್ದೀರಾ? ಉತ್ತಮ ಅಂಕದೊಂದಿಗೆ ಪಾಸಾಗಿದ್ದೀರಾ? ಪದವಿ ಓದಬೇಕು ಅನ್ನುವ ಆಸೆ ಇದೆಯಾ? ಹಾಗಾದ್ರೆ ದುಡ್ಡಿಗಾಗಿ ಟೆನ್ಶನ್ ಮಾಡುವ ಲೋರಿಯಲ್ ಇಂಡಿಯನ್ 2023ರ (loreal Indian scholarship 2023) ಸ್ಕಾಲರ್ಶಿಪ್ ನೀವು ಪಡೆದುಕೊಳ್ಳಬಹುದು.
ಇದಕ್ಕೆ ವರ್ಷ ಪೂರ್ತಿ 2.50 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಸಿಗುತ್ತದೆ ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
ಕೋಳಿ ಫಾರ್ಮ್ ಮಾಡೋಕೆ ಬೇಕಿರುವ ಪರವಾನಿಗೆ ಹಾಗೂ ಸರ್ಕಾರದ ಸಹಾಯಧನ ಮಾಹಿತಿ
ಲಾರಿಯಲ್ ಇಂಡಿಯಾ ಫಾರ್ ಯಂಗ್ ವೂಮೆನ್ ಇನ್ ಸೈನ್ಸ್ ಸ್ಕಾಲರ್‌ಶಿಪ್ 2023 ! (Loreal India for young women in science scholarship 2023)
ಲಾರಿಯಲ್ ಇಂಡಿಯಾ ಫ್ರೆಂಚ್ (French) ಮೂಲದ ಕಂಪನಿಯಾಗಿದ್ದು ಕಾಸ್ಮೆಟಿಕ್ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿರುವ ಕಂಪನಿ ಆಗಿದೆ. ಈ ಕಂಪನಿ ತನ್ನ CSR ಚಟುವಟಿಕೆಯ ಅಂಗವಾಗಿ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ (Education scholarship for girl student) ನೀಡುವುದರ ಮೂಲಕ ವಿದ್ಯಾರ್ಥಿನಿಯರ ಶಿಕ್ಷಣ ಉತ್ತಮಗೊಳಿಸಲು ಸಹಕರಿಸುತ್ತದೆ.
ಈಗಾಗಲೇ 12ನೇ ತರಗತಿ ಮುಗಿಸಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿನಿಯರಿಗೆ ಲೋರಿಯಲ್ ಇಂಡಿಯಾ ದೊಡ್ಡ ಮೊತ್ತದ ಹಣವನ್ನು ವಿದ್ಯಾರ್ಥಿ ವೇತನವಾಗಿ ನೀಡುತ್ತಿದೆ
ಇದು ವಿದ್ಯಾರ್ಥಿನಿಯರಿಗೆ, ಅಂದರೆ ಹೆಣ್ಣು ಮಕ್ಕಳಿಗೆ ಮಾತ್ರ ಮೀಸಲಾಗಿರುವ ಸ್ಕಾಲರ್ಶಿಪ್ ಆಗಿದ್ದು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಮನೆ ಇಲ್ಲದವರಿಗೆ ಸ್ವಂತ ಮನೆ ಕಟ್ಟಲು ಸರ್ಕಾರದಿಂದ 1.5 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ
ಯಾರಿಗೆ ಸಿಗಲಿದೆ ವಿದ್ಯಾರ್ಥಿ ವೇತನ? (Who Can apply)
ದ್ವಿತೀಯ ಪಿಯುಸಿ ಮುಗಿಸಿ ಮೆಡಿಕಲ್ (Medical), ಇಂಜಿನಿಯರಿಂಗ್ (Engineering), ಫುಡ್ ಸೈನ್ಸ್ (Food Sience) ಮೊದಲದ ವೃತ್ತಿಪರ ಕೋರ್ಸ್ ಮಾಡುವವರಿಗೆ ಈ ವಿದ್ಯಾರ್ಥಿ ವೇತನ ಲಭ್ಯವಾಗುತ್ತದೆ.
ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯಲು ಕಾಲೇಜು ವೆಚ್ಚ ಹಾಗೂ ಇತರ ಖರ್ಚುಗಳಿಗಾಗಿ ಲೋರಿಯಲ್ ಇಂಡಿಯನ್ 2.50 ಲಕ್ಷ ರೂಪಾಯಿಗಳಷ್ಟು ಸಹಾಯಧನ ನೀಡುತ್ತಿದೆ.
ಲೋರಿಯಲ್ ಇಂಡಿಯಾದ ಸ್ಕಾಲರ್ಶಿಪ್ (Eligibility to get scholarship)
*2022 23ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
*ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರ ಕುಟುಂಬ 6 ಲಕ್ಷಕ್ಕಿಂತ ಹೆಚ್ಚಿಗೆ ವಾರ್ಷಿಕ ಆದಾಯ ಹೊಂದಿರಬಾರದು.
*2023 24ನೇ ಸಾಲಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆಯಲು ಕಾಲೇಜಿಗೆ ಸೇರ್ಪಡೆಗೊಂಡಿರಬೇಕು.
*ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ್ದು ಒಂದು ವರ್ಷದ ನಂತರ ಪದವಿಗೆ ಸೇರಿಕೊಂಡಿದ್ದರೆ ಅಂತವರಿಗೆ ಈ ವಿದ್ಯಾರ್ಥಿ ವೇತನ ಸಿಗುವುದಿಲ್ಲ.
*ದ್ವಿತೀಯ ಪಿಯುಸಿಯಲ್ಲಿ ಪಿಸಿಎಮ್, ಪಿಸಿಬಿ, ಪಿಸಿಎಂಬಿ ವಿಭಾಗದಲ್ಲಿ ಕನಿಷ್ಠ 85% ಅಂಕಗಳನ್ನು ಪಡೆದಿರಬೇಕು.
ಚೆಕ್ ಮೂಲಕ ಹಣದ ವ್ಯವಹಾರ ಮಾಡುವವರಿಗೆ ಹೊಸ ನಿಯಮ! ಬಂತು ಹೊಸ ರೂಲ್ಸ್
ಲೋರಿಯಲ್ ಇಂಡಿಯಾದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents needed)
ಆಧಾರ್ ಕಾರ್ಡ್ (Aadhaar Card)
ಬ್ಯಾಂಕ್ ಪಾಸ್ ಬುಕ್ ದಾಖಲೆ (Bank Account Details)
ಆದಾಯ ಪ್ರಮಾಣ (Income Certificate
10ನೇ ತರಗತಿಯ ಮಾರ್ಕ್ಸ್ ಕಾರ್ಡ್
ದ್ವಿತೀಯ ಪಿಯುಸಿಯ ಮಾರ್ಕ್ಸ್ ಕಾರ್ಡ್
ಲೋರಿಯಲ್ ಇಂಡಿಯಾದ ಶಿಷ್ಯವೇತನ ಪಡೆದುಕೊಳ್ಳಲು ಹೀಗೆ ಅರ್ಜಿ ಸಲ್ಲಿಸಿ! (How to apply)
https://www.buddy4study.com/page/loreal-india-for-young-women-in-science-scholarships ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆದುಕೊಳ್ಳುತ್ತದೆ. ಸ್ಕ್ರೋಲ್ ಡೌನ್ ಮಾಡಿದರೆ ಅಪ್ಲೈ ಆನ್ಲೈನ್ (apply online) ಎನ್ನುವ ಆಯ್ಕೆ ಕಾಣಿಸುತ್ತದೆ. ಅಲ್ಲಿ ನಿಮ್ಮ ಹೆಸರು ಮೊಬೈಲ್ ಸಂಖ್ಯೆ ಮತ್ತೆ ಮಾಹಿತಿಗಳನ್ನು ನೀಡಿ ಆನ್ಲೈನ್ ರಿಜಿಸ್ಟ್ರೇಷನ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು ಗೊತ್ತಾ? ಹಣ ಇಡುವುದಕ್ಕೂ ಇದೆ ಮಿತಿ
Girls who pass PUC will get 2.50 lakh Education scholarship