Gold Price: ಚಿನ್ನದ ಖರೀದಿ ಪ್ಲ್ಯಾನ್ ಇದ್ಯಾ! ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ?
Gold Price Today: ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ರೂಪಾಯಿ ದುರ್ಬಲತೆಯಿಂದ ಬೆಳ್ಳಿ ಹಾಗೂ ಚಿನ್ನದ ಬೆಲೆ ಇಂದು ಸ್ವಲ್ಪ ಏರಿಕೆ ಕಂಡಿವೆ. ಹೂಡಿಕೆದಾರರು ಸುರಕ್ಷಿತ ಆಸ್ತಿಗಳತ್ತ ಮುಖ ಮಾಡುತ್ತಿದ್ದಾರೆ.
- 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಗಳಲ್ಲಿ ಏರಿಕೆ
- ಬೆಳ್ಳಿ ದರ ಕಿಲೋಗೆ ₹100ರಷ್ಟು ಹೆಚ್ಚಳ
- ಜಿಯೋಪಾಲಿಟಿಕ್ಸ್ ಪರಿಣಾಮದಿಂದ ಬೆಲೆ ಜಿಗಿತ
Gold Price Today: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಮತ್ತೆ ಚಟುವಟಿಕೆ ಜೋರಾಗಿದೆ. ಹೂಡಿಕೆದಾರರು ಅಪಾಯಕರ ಹೂಡಿಕೆಗಳ ಬದಲು ಸುರಕ್ಷಿತ ಆಸ್ತಿಗಳಾದ ಚಿನ್ನ–ಬೆಳ್ಳಿಯತ್ತ ಮೊರೆ ಹೋಗುತ್ತಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇದಕ್ಕೆ ಜೊತೆಯಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತಿರುವುದೂ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಸೋಮವಾರದಿಂದಲೇ ಏರಿಕೆಯಲ್ಲಿ ಇರುವ ಬಂಗಾರ, ಬುಧವಾರವೂ ಸ್ವಲ್ಪ ಹೆಚ್ಚಳವನ್ನು ದಾಖಲಿಸಿದೆ.
ವಿಶೇಷವಾಗಿ ಅಮೆರಿಕಾ–ವೆನಿಜುಲಾ ನಡುವಿನ ರಾಜಕೀಯ ಬೆಳವಣಿಗೆಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಉಂಟುಮಾಡಿದ್ದು, ಇದರ ನೇರ ಪರಿಣಾಮ ಚಿನ್ನದ ದರಗಳ ಮೇಲೆ ಬಿದ್ದಿದೆ.
22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ವ್ಯತ್ಯಾಸ
24 ಕ್ಯಾರೆಟ್ ಬಂಗಾರ ಶುದ್ಧತೆಯಲ್ಲಿ ಅತ್ಯುತ್ತಮವಾಗಿದ್ದು, ಸಾಮಾನ್ಯವಾಗಿ ಹೂಡಿಕೆ ಉದ್ದೇಶಕ್ಕೆ ಹೆಚ್ಚು ಬಳಸಲಾಗುತ್ತದೆ. ಇದರ ಶುದ್ಧತೆ ಸುಮಾರು 99.9% ಇರುವುದರಿಂದ ಬೆಲೆ ಸಹಜವಾಗಿಯೇ ಹೆಚ್ಚು ಇರುತ್ತದೆ. ನಾಣ್ಯಗಳು ಮತ್ತು ಬಿಸಿನೆಸ್ ಹೂಡಿಕೆಗಳಿಗೆ 24 ಕ್ಯಾರೆಟ್ ಚಿನ್ನ ಹೆಚ್ಚು ಬೇಡಿಕೆ ಹೊಂದಿದೆ.
ಇದಕ್ಕೆ ವಿರುದ್ಧವಾಗಿ, 22 ಕ್ಯಾರೆ ಟ್ ಬಂಗಾರದಲ್ಲಿ ಸ್ವಲ್ಪ ಮಿಶ್ರಲೋಹಗಳು ಸೇರಿರುತ್ತವೆ. ಇದರಿಂದ ಇದು ಹೆಚ್ಚು ಬಲಿಷ್ಠವಾಗಿದ್ದು, ಆಭರಣ ತಯಾರಿಕೆಗೆ ಸೂಕ್ತವಾಗಿದೆ. ದೈನಂದಿನ ಬಳಕೆಗೆ 22 ಕ್ಯಾರೆಟ್ ಆಭರಣಗಳು (Gold Jewellery) ಹೆಚ್ಚು ಉಪಯುಕ್ತವಾಗಿದ್ದರೂ, ಬೆಲೆ 24 ಕ್ಯಾರಟ್ಗಿಂತ ಕಡಿಮೆಯಿರುತ್ತದೆ.
ಇಂದಿನ ಮಾರುಕಟ್ಟೆ ಚಿತ್ರಣ:
ಜನವರಿ 7ರ ಬೆಳಗ್ಗೆ 6:30ರ ಹೊತ್ತಿಗೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ₹1.38 ಲಕ್ಷದ ಮಟ್ಟ ತಲುಪಿದೆ. ಬೆಳ್ಳಿಯ ದರ ಕೂಡ ಚುರುಕಾಗಿದ್ದು, ಬಹುತೇಕ ನಗರಗಳಲ್ಲಿ ಕಿಲೋಗೆ ₹100ರಷ್ಟು ಹೆಚ್ಚಳ ಕಂಡಿದೆ. ಮುಂದಿನ ದಿನಗಳಲ್ಲೂ ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನನುಸರಿಸಿ ಬೆಲೆಗಳಲ್ಲಿ ಏರಿಳಿತ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (10 ಗ್ರಾಂಗೆ)
| ನಗರ | 24 ಕ್ಯಾರಟ್ (₹) | 22 ಕ್ಯಾರಟ್ (₹) |
|---|---|---|
| ಹೈದರಾಬಾದ್ | 1,38,830 | 1,27,260 |
| ವಿಜಯವಾಡ | 1,38,830 | 1,27,260 |
| ದೆಹಲಿ | 1,38,980 | 1,27,410 |
| ಮುಂಬೈ | 1,38,830 | 1,27,260 |
| ವಡೋದರ | 1,38,880 | 1,27,310 |
| ಕೋಲ್ಕತ್ತಾ | 1,38,830 | 1,27,260 |
| ಚೆನ್ನೈ | 1,38,830 | 1,27,260 |
| ಬೆಂಗಳೂರು | 1,38,830 | 1,27,260 |
| ಕೇರಳ | 1,38,830 | 1,27,260 |
| ಪುಣೆ | 1,38,830 | 1,27,260 |
ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕಿಲೋಗೆ)
| ನಗರ | ಬೆಳ್ಳಿ ದರ (₹) |
|---|---|
| ಹೈದರಾಬಾದ್ | 2,71,100 |
| ವಿಜಯವಾಡ | 2,71,100 |
| ದೆಹಲಿ | 2,53,100 |
| ಚೆನ್ನೈ | 2,71,100 |
| ಕೋಲ್ಕತ್ತಾ | 2,53,100 |
| ಕೇರಳ | 2,71,100 |
| ಮುಂಬೈ | 2,53,100 |
| ಬೆಂಗಳೂರು | 2,53,100 |
| ವಡೋದರ | 2,53,100 |
| ಅಹ್ಮದಾಬಾದ್ | 2,53,100 |
ಗಮನಿಸಿ: ಮೇಲ್ಕಂಡ ಚಿನ್ನ ಮತ್ತು ಬೆಳ್ಳಿ ದರಗಳು ಮಾರುಕಟ್ಟೆ ಅವಲಂಬಿತವಾಗಿದ್ದು, ಖರೀದಿಸುವ ಮೊದಲು ಸ್ಥಳೀಯ ಜುವೆಲ್ಲರ್ ಬಳಿ ಇತ್ತೀಚಿನ ದರ ಪರಿಶೀಲಿಸುವುದು ಉತ್ತಮ.




