Gold Price: ಚಿನ್ನದ ಬೆಲೆ ಮೂರನೇ ದಿನವೂ ಕುಸಿತ! ಹೊಸ ವರ್ಷಕ್ಕೆ ಚಿನ್ನ ಬೆಳ್ಳಿ ದರ ಇಳಿಕೆ
Gold News Today: ಹೊಸ ವರ್ಷದ ಆರಂಭದಲ್ಲೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, ಮೂರನೇ ದಿನವೂ ದರ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಹೂಡಿಕೆದಾರರು ಮತ್ತು ಗ್ರಾಹಕರಿಗೆ ಇದು ಬಿಗ್ ರಿಲೀಫ್ ಸುದ್ದಿ.
- ಚಿನ್ನದ ಬೆಲೆ ಮೂರನೇ ದಿನವೂ ಕುಸಿತ
- ಬೆಂಗಳೂರಿನಲ್ಲಿ ಚಿನ್ನ ಬೆಲೆ ಇಳಿಕೆ ಕಡೆಗೆ
- ಬೆಳ್ಳಿ ದರ, ಕಿಲೋ ಬೆಳ್ಳಿ ₹2.38 ಲಕ್ಷ ಮಟ್ಟಕ್ಕೆ
Gold Price Today: ಹೊಸ ವರ್ಷಕ್ಕೆ ಕಾಲಿಟ್ಟ ಕೂಡಲೇ ಚಿನ್ನ–ಬೆಳ್ಳಿ ಖರೀದಿದಾರರಿಗೆ ನಿರಾಳ ಸುದ್ದಿ ಲಭಿಸಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಹೊಸ ವರ್ಷದ ಮೊದಲ ದಿನವೂ ಅದೇ ಪ್ರವೃತ್ತಿ ಮುಂದುವರಿದಿದೆ. ಡಾಲರ್ ಬಲಗೊಳ್ಳುವಿಕೆ ಈ ಇಳಿಕೆಗೆ ಪ್ರಮುಖ ಕಾರಣವೆಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ.
ಈ ವಾರದಲ್ಲಿ ಒಟ್ಟಾರೆ ಚಿನ್ನದ ದರವು ಸುಮಾರು ₹5,000ರಷ್ಟು ಕಡಿಮೆಯಾಗಿರುವುದು ಗಮನಾರ್ಹ. ಇದರಿಂದ ಆಭರಣ ಖರೀದಿ (Buy Gold Jewellery) ಯೋಚನೆಯಲ್ಲಿದ್ದ ಗ್ರಾಹಕರು ಮತ್ತೆ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ.
ಬೆಂಗಳೂರು ಚಿನ್ನದ ದರ: ಗ್ರಾಹಕರಿಗೆ ಅನುಕೂಲ
ಕರ್ನಾಟಕ ರಾಜಧಾನಿ ಬೆಂಗಳೂರು (Karnataka, Bengaluru) ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರ ಇಳಿಕೆಯ ಪರಿಣಾಮ ಸ್ಪಷ್ಟವಾಗಿ ಕಾಣುತ್ತಿದೆ. ವಿಶೇಷವಾಗಿ ಮದುವೆ ಹಾಗೂ ಹಬ್ಬದ ಖರೀದಿಗೆ ಮುಂದಾಗುತ್ತಿರುವ ಕುಟುಂಬಗಳಿಗೆ ಈ ದರ ಕುಸಿತ ಸ್ವಲ್ಪ ಆರ್ಥಿಕ ಸಡಿಲಿಕೆ ತಂದಿದೆ.
ಬೆಂಗಳೂರು ಚಿನ್ನದೆ ಬೆಲೆ
24 ಕ್ಯಾರೆಟ್ (10 ಗ್ರಾಂ): ₹1,34,880
22 ಕ್ಯಾರೆಟ್ (10 ಗ್ರಾಂ): ₹1,23,640
18 ಕ್ಯಾರೆಟ್ (10 ಗ್ರಾಂ): ₹1,01,160 ಮಟ್ಟದಲ್ಲಿ ಚಿವಹಿವಾಟಾಗುತ್ತಿದೆ.
ದೇಶದ ಪ್ರಮುಖ ನಗರಗಲ್ಲಿ ಚಿನ್ನದ ದರ
| ನಗರ | 24 ಕ್ಯಾರೆಟ್ | 22 ಕ್ಯಾರೆಟ್ | 18 ಕ್ಯಾರೆಟ್ |
|---|---|---|---|
| ಚೆನ್ನೈ | 1,36,140 | 1,24,790 | 1,04,090 |
| ಮುಂಬೈ | 1,34,880 | 1,23,640 | 1,01,160 |
| ದೆಹಲಿ | 1,35,030 | 1,23,790 | 1,01,320 |
| ಕೊಲ್ಕತಾ | 1,34,880 | 1,23,640 | 1,01,160 |
| ಬೆಂಗಳೂರು | 1,34,880 | 1,23,640 | 1,01,160 |
| ಹೈದರಾಬಾದ್ | 1,34,880 | 1,23,640 | 1,01,160 |
| ವಿಜಯವಾಡ | 1,34,880 | 1,23,640 | 1,01,160 |
| ಕೇರಳ | 1,34,880 | 1,23,640 | 1,01,160 |
| ಪೂಣೆ | 1,34,880 | 1,23,640 | 1,01,160 |
| ವಡೋದರಾ | 1,34,930 | 1,23,690 | 1,01,210 |
| ಅಹಮದಾಬಾದ್ | 1,34,930 | 1,23,690 | 1,01,210 |
22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ವ್ಯತ್ಯಾಸ ಏನು?
ಬಹುತೇಕ ಗ್ರಾಹಕರಿಗೆ ಗೊಂದಲ ಉಂಟುಮಾಡುವ ವಿಷಯವೇ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ವ್ಯತ್ಯಾಸ.
24 ಕ್ಯಾರೆಟ್ ಚಿನ್ನ ಶುದ್ಧತೆಯಲ್ಲಿ ಅತ್ಯುತ್ತಮವಾಗಿದ್ದು (99.9%), ಹೂಡಿಕೆ ಉದ್ದೇಶಕ್ಕೆ ಹೆಚ್ಚು ಸೂಕ್ತ. ಆದರೆ ಇದು ಮೃದುವಾಗಿರುವುದರಿಂದ ನೇರವಾಗಿ ಆಭರಣ ತಯಾರಿಕೆಗೆ ಕಡಿಮೆ ಬಳಸಲಾಗುತ್ತದೆ.
22 ಕ್ಯಾರೆಟ್ ಚಿನ್ನದಲ್ಲಿ ಸುಮಾರು 91.6% ಶುದ್ಧ ಚಿನ್ನವಿದ್ದು, ಉಳಿದ ಭಾಗದಲ್ಲಿ ಬೆಳ್ಳಿ ಅಥವಾ ತಾಮ್ರ ಮಿಶ್ರಣ ಇರುತ್ತದೆ. ಇದರಿಂದ ಆಭರಣಗಳು ಗಟ್ಟಿಯಾಗಿದ್ದು ದೈನಂದಿನ ಬಳಕೆಗೆ ಅನುಕೂಲ.
ಆದ್ದರಿಂದ ಹೂಡಿಕೆಗಾಗಿ 24 ಕ್ಯಾರೆಟ್, ಆಭರಣಕ್ಕಾಗಿ 22 ಕ್ಯಾರೆಟ್ ಚಿನ್ನವನ್ನು ಆಯ್ಕೆ ಮಾಡುವುದು ಸೂಕ್ತವೆಂದು ತಜ್ಞರ ಸಲಹೆ.
ಬೆಳ್ಳಿ ದರದಲ್ಲೂ ಇಳಿಕೆ
ಚಿನ್ನದ ಜೊತೆಗೆ ಬೆಳ್ಳಿ ದರದಲ್ಲೂ ಇಳಿಕೆ ಕಂಡುಬಂದಿದೆ. ಇಂದು
ಬೆಂಗಳೂರು: ₹2,38,900 (ಪ್ರತಿ ಕಿಲೋ)
ಮುಂಬೈ / ದೆಹಲಿ / ಕೊಲ್ಕತಾ / ಪೂಣೆ / ವಡೋದರಾ / ಅಹಮದಾಬಾದ್: ₹2,38,900
ಚೆನ್ನೈ / ಹೈದರಾಬಾದ್ / ವಿಜಯವಾಡ / ಕೇರಳ: ₹2,56,900 ದರದಲ್ಲಿ ಬೆಳ್ಳಿ ವಹಿವಾಟು ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ದರ ಹೇಗಿರಬಹುದು?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಅಸ್ಥಿರತೆ ಮುಂದುವರಿದರೂ, ದರ ಇಳಿಕೆಯಾಗುತ್ತಿರುವ ಸಮಯದಲ್ಲಿ ಹೂಡಿಕೆದಾರರು ಮತ್ತೆ ಚಿನ್ನದತ್ತ ಮುಖ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




