ಚಿನ್ನದ ಬೆಲೆ ಭಾರೀ ಕುಸಿತ! ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಮುನ್ನವೇ ಚಿನ್ನದ ದರ ಇಳಿಕೆ - Gold Rate Today

ಬೆಂಗಳೂರಿನಲ್ಲಿ ಚಿನ್ನದ ಬೆಲೆ ನಾಲ್ಕು ದಿನಗಳಲ್ಲಿ ಭಾರೀ ಇಳಿಕೆ ಕಂಡಿದೆ. ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಮುನ್ನ ಬಂಗಾರ ಖರೀದಿಗೆ ಇದು ಒಳ್ಳೆಯ ಸಮಯ. ಆದರೆ ಬೆಳ್ಳಿ ದರ ಮಾತ್ರ ಏರಿಕೆಯಲ್ಲಿದೆ.

  • ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ
  • 100 ಗ್ರಾಂಗೆ ₹18,000 ದರ ಕುಸಿತ
  • ಬೆಳ್ಳಿ ದರ ಕಿಲೋಗೆ ₹1,100 ಏರಿಕೆ

Gold Rate Today : ಚಿನ್ನದ ಬೆಲೆ ಇಳಿಕೆಯಿಂದ ಬೆಂಗಳೂರಿನ ಚಿನ್ನಾಭರಣ (Gold Jewellery) ಪ್ರಿಯರಿಗೆ ಹರ್ಷದ ಸುದ್ದಿ. ಕಳೆದ ನಾಲ್ಕು ದಿನಗಳಿಂದ ಬಂಗಾರದ ದರ ನಿರಂತರ ಕುಸಿಯುತ್ತಿದ್ದು, 100 ಗ್ರಾಂಗೆ ಸುಮಾರು ₹18,000 ಇಳಿಕೆಯಾಗಿದೆ.

ಈ ಬದಲಾವಣೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿ, ವಾಣಿಜ್ಯ, ಯುದ್ಧದ ತಗ್ಗುವಿಕೆ, ಅಮೆರಿಕಾ ಆರ್ಥಿಕ ಡೇಟಾ ಹಾಗೂ ಫೆಡರಲ್ ರಿಸರ್ವ್ ಬಡ್ಡಿದರ ನಿರ್ಧಾರಗಳಿಂದ ಪ್ರಭಾವಿತವಾಗಿದೆ.

ಇಂಡಿಪೆಂಡೆನ್ಸ್ ಡೇ ಸಂದರ್ಭದಲ್ಲಿ ಬಂಗಾರದ ಬೆಲೆ ಸ್ಥಿರವಾಗಿದ್ದರೂ, ಈಗ ಕೃಷ್ಣಾಷ್ಟಮಿ ಮತ್ತು ಗಣೇಶ ಹಬ್ಬದ ಮುನ್ನ ಚಿನ್ನ ಖರೀದಿಸಲು ಸುವರ್ಣಾವಕಾಶ ಸಿಕ್ಕಿದೆ. ಆದರೆ, ಬೆಳ್ಳಿ ದರ ಮಾತ್ರ ಏರಿಕೆಯಲ್ಲಿ ಸಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಬೆಳ್ಳಿ ಕಿಲೋಗೆ ₹1,100 ಏರಿಕೆಯಾಗಿದೆ.

ಇದನ್ನೂ ಓದಿ: ಜಗತ್ತಿನ 5 ಮಿನಿ ಫೋನ್‌ಗಳಿವು! ಬೇಕಾದ್ರೆ ಬೆಂಕಿ ಪೆಟ್ಟಿಗೆಯಲ್ಲೂ ಇಡಬಹುದು

ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಹೀಗಿದೆ:

ಬೆಂಗಳೂರು ಮತ್ತು ಚೆನ್ನೈ: 24 ಕ್ಯಾರಟ್ 10 ಗ್ರಾಂ – ₹1,01,340, 22 ಕ್ಯಾರಟ್ 10 ಗ್ರಾಂ – ₹92,890

ದೆಹಲಿ: 24 ಕ್ಯಾರಟ್ 10 ಗ್ರಾಂ – ₹1,01,490, 22 ಕ್ಯಾರಟ್ 10 ಗ್ರಾಂ – ₹93,040

ಮುಂಬೈ: 24 ಕ್ಯಾರಟ್ 10 ಗ್ರಾಂ – ₹1,01,340, 22 ಕ್ಯಾರಟ್ 10 ಗ್ರಾಂ – ₹92,890

ಹೈದರಾಬಾದ್: 24 ಕ್ಯಾರಟ್ 10 ಗ್ರಾಂ – ₹1,01,340, 22 ಕ್ಯಾರಟ್ 10 ಗ್ರಾಂ – ₹92,890

ಇದನ್ನೂ ಓದಿ: ಜಾಮೀನಿಲ್ಲದೆ 4 ಲಕ್ಷ ಸಾಲ! ಸ್ಟೇಟ್ ಬ್ಯಾಂಕ್ ನಿಂದ ಸ್ವಾತಂತ್ರ್ಯ ದಿನಾಚರಣೆ ಆಫರ್

ಬೆಳ್ಳಿ ದರ:

ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ: ಕಿಲೋಗೆ ₹1,16,100

ಹೈದರಾಬಾದ್, ಕೇರಳ, ಚೆನ್ನೈ: ಕಿಲೋಗೆ ₹1,26,100

ಬಂಗಾರದ ಇತ್ತೀಚಿನ ದರ ತಿಳಿಯಲು 8955664433ಕ್ಕೆ ಮಿಸ್‌ ಕಾಲ್ ನೀಡಬಹುದು. ಹಬ್ಬದ ಸಮಯದಲ್ಲಿ ಇಂದಿನ ದರವು ಖರೀದಿದಾರರಿಗೆ ದೊಡ್ಡ ಅವಕಾಶವಂತಾಗಿದೆ.

Gold Price Falls in Bengaluru, Perfect Time to Buy

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories