120Km ರೇಂಜ್ ನೀಡಲಿರುವ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಗೆ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್
Electric Bike : ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಓಡಾಟ ಅತ್ಯಂತ ವೇಗವಾಗಿ ಸಾಗುತ್ತಿದೆ. ಸಣ್ಣ ಕಂಪನಿಗಳಿಂದ ಹಿಡಿದು ದೊಡ್ಡ ಬ್ರಾಂಡ್ ಗಳು ಕೂಡ ಈಗ ಎಲೆಕ್ಟ್ರಿಕ್ ವಾಹನದ ತಯಾರಿಯಲ್ಲಿ ತೊಡಗಿವೆ. ಉತ್ತಮ ಫೀಚರ್ಸ್ ಜೊತೆ ಮಾರುಕಟ್ಟೆ ಕಬ್ಜ ಮಾಡಲು ಅನೇಕ ಕಂಪನಿಗಳು ತಮ್ಮ ಹೊಸ ಮಾಡೆಲ್ ಗಳನ್ನೂ ಬಿಡುಗಡೆ ಮಾಡಲು ಮುಂದಾಗಿವೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಮಾರುಕಟ್ಟೆ ನಿರಂತರವಾಗಿ ಹೆಚ್ಚುತ್ತಿದೆ. ಪ್ರತಿದಿನ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಪ್ರವೇಶಿಸುತ್ತಿದೆ. ವಿಶೇಷವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಈಗ ಹೀರೋ ಸಂಸ್ಥೆ ಕೂಡ ಇದೆ ಕೆಲಸಕ್ಕೆ ಮುಂದಾಗುತ್ತಿದೆ.

ಪ್ರಸ್ತುತ ಭರ್ಜರಿ ಮೈಲೇಜ್ ನೀಡುವ ಭಾರತದ ಟಾಪ್ 5 ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಲಿಸ್ಟ್ ಇಲ್ಲಿದೆ!
ಇದೀಗ ಭಾರತದ ಅತಿದೊಡ್ಡ ಅಟೋಮೊಬೈಲ್ ಕಂಪನಿ ಹೀರೋ ತನ್ನ ಪೆಟ್ರೋಲ್/ಡೀಸೆಲ್ ವಾಹನಗಳಿಂದಾಗಿ ಮಾರುಕಟ್ಟೆಯಲ್ಲಿ ಬಹಳ ಜನಪ್ರಿಯವಾಗಿದೆ. ಈಗ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಪ್ರವೇಶಿಸಿ ಹಲವಾರು ಸಮಯಗಳೇ ಕಳೆದಿವೆ ಕಂಪನಿಯು ಈ ಹಿಂದೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು (Electric Scooter) ಬಿಡುಗಡೆ ಮಾಡಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿ ಮಾರಾಟವಾಗುತ್ತಿವೆ.
ನಮಗೆಲ್ಲ ತಿಳಿದಿರುವಂತೆ ಭಾರತದ ಅತ್ಯಂತ ಫೇಮಸ್ ಬೈಕ್ ಗಳಲ್ಲಿ ಒಂದಾದ ಹೀರೋ ಸ್ಪ್ಲೆಂಡರ್ ಬೈಕ್ (Hero Splendor Bike) ಅತ್ಯಂತ ಜನಪ್ರಿಯ ಮಾದರಿಗಳಲ್ಲಿಒಂದು ಎಂದು ಎಣಿಸಲಾಗಿದೆ. ಕಳೆದ ಕೆಲವು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್ ಚಾಲನೆಯಲ್ಲಿದೆ. ತನ್ನ ಪೆಟ್ರೋಲ್ ಆವೃತ್ತಿಯ ಭಾರೀ ಯಶಸ್ಸನ್ನು ನೋಡಿದ ಕಂಪನಿಯು ಈಗ ಅದನ್ನು ಎಲೆಕ್ಟ್ರಿಕ್ ಮಾಡುವ ಸುದ್ದಿ ಈಗಾಗಲೇ ಕೇಳಿಬಂದಿತ್ತು. ಈಗ ಆ ಸುದ್ದಿಗೆ ಮತ್ತೊಂದು ಪುಷ್ಟಿ ಸಿಕ್ಕಿದೆ.
2025ಕ್ಕೆ ವರ್ಷಾರಂಭದಲ್ಲಿ ಅಬ್ಬರಿಸಲು ಬರಲಿವೆ 9 ಲಕ್ಷ ಬೆಲೆಬಾಳುವ ಈ 3 ಹೊಸ ಕಾರುಗಳು
ಸದ್ಯ ಈ ಬೈಕಿನ ಹಲವು ಡಿಸೈನ್ ಫೋಟೋಗಳು ಈಗಾಗಲೇ ವೈರಲ್ ಆಗುತ್ತಿವೆ, ಮೂಲಗಳ ಪ್ರಕಾರ ಈ ಬೈಕ್ 9 kWh ಬ್ಯಾಟರಿ ಜೊತೆ ಬರಲಿದೆ ಎನ್ನಲಾಗುತ್ತಿದೆ.. ಇದಲ್ಲದೆ, ಇದು ತುರ್ತು ಪರಿಸ್ಥಿತಿಯಲ್ಲಿ ಬಳಸಬಹುದಾದ 2 kWh ನ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಅನ್ನು ಸಹ ಒದಗಿಸಲಾಗುತ್ತದೆ.
ಇನ್ನು ಬೈಕ್ ನಲ್ಲಿ ಚಾರ್ಜ್ ಮಾಡಲು ಪೋರ್ಟ್ ಸೇರಿದಂತೆ ಕೆಲ ಹೊಸ ಫೀಚರ್ ಗಳನ್ನೂ ಕೂಡ ಸೇರಿಸಲಾಗಿದೆ. ಒಟ್ಟಾರೆಯಾಗಿ 120 ರಿಂದ 180 Km ವರೆಗೆ ಈ ಬೈಕ್ ಒಮ್ಮೆ ಚಾರ್ಜ್ ಮಾಡಿದಾಗ ಓಡುವ ಸಾಮರ್ಥ್ಯ ಹೊಂದಿರಲಿದೆ.
ರತನ್ ಟಾಟಾ ಕನಸಿನ ಕಾರು ಟಾಟಾ ನ್ಯಾನೋ ಎಲೆಕ್ಟ್ರಿಕ್ ಮಾದರಿ ಎಂಟ್ರಿ, ಎಷ್ಟಿರಲಿದೆ ಬೆಲೆ ಗೊತ್ತಾ?
ಹಾಗೆಯೆ ಬೆಲೆ ಬಗ್ಗೆ ಗಮನಹರಿಸುವುದಾದರೆ ಹೊಸ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಸುಮಾರು ಒಂದೂವರೆ ಲಕ್ಷದೊಳಗೆ ಲಭ್ಯವಾಗುವ ಸಾಧ್ಯತೆ ಇದೆ. ಇನ್ನೆರಡು ತಿಂಗಳಲ್ಲಿ ಕಂಪನಿ ಘೋಷಣೆ ಮಾಡುವ ಸಾದ್ಯತೆ ಇದೆ
Good news for those who were waiting for the Hero Splendor electric bike