ಬ್ಯಾಂಕ್ ಖಾತೆ ಹೊಂದಿರುವವರಿಗೆ ರಾತ್ರೋ ರಾತ್ರಿ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ! ಜನರಿಗೆ ಸಂತೋಷದ ಸುದ್ದಿ!
ಕೇಂದ್ರ ಸರ್ಕಾರವು (Central Government) ಜನರಿಗೆ ಉಪಯೋಗ ಆಗುವ ಹಾಗೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತದೆ. ಇದರಿಂದ ಸಾಮಾನ್ಯ ವರ್ಗದ ಜನರು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರವು ಬ್ಯಾಂಕ್ ಅಕೌಂಟ್ ಹೊಂದಿರುವ ಎಲ್ಲಾ ಜನರಿಗೆ ಪ್ರಮುಖವಾದ ಗುಡ್ ನ್ಯೂಸ್ ನೀಡಿದ್ದು, ಈ ಸುದ್ದಿಯಿಂದ ಜನರಿಗೆ ಸಂತೋಷವಾಗಿದೆ.
ವಿಶೇಷವಾಗಿ ಪ್ರತಿದಿನ ಪ್ರಯಾಣ ಮಾಡುವಂಥ ಜನರಿಗೆ ಇದು ನೆಮ್ಮದಿಯ ಸುದ್ದಿ ಆಗಿದೆ.. ಕೇಂದ್ರ ಸರ್ಕಾರವು ಎಲ್ಲಾ ಬ್ಯಾಂಕ್ ಗಳಿಗೆ ಒಂದು ಪ್ರಮುಖವಾದ ಆದೇಶ ನೀಡಿದೆ ಅದೇನು ಎಂದರೆ, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC), ಇದು ಬೇರೆ ಎಲ್ಲಾ ಕಾರ್ಡ್ ಗಳಿಗೆ ಡಿಫಾಲ್ಟ್ ಆಯ್ಕೆ ಆಗಿರಬೇಕು.
ಈ ಹೊಸ ಕಾರ್ಡ್ ಗಳನ್ನು ಜನರಿಗೆ ಕೊಡುವುದು, ಹಳೆ ಕಾರ್ಡ್ ಗಳನ್ನು ಮತ್ತೆ ನೀಡುವುದು, ಅಥವಾ NCMC ಒಂದೇ ಆಯ್ಕೆ ಆಗಿರುತ್ತಾ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಒಂದು ವೇಳೆ ಹಳೆ ಕಾರ್ಡ್ ಇರುವವರಿಗೆ ಹೊಸ ಕಾರ್ಡ್ ಪಡೆಯಬೇಕು ಎಂದರೆ, ಅವರಿಗೆ NCMC ಮೊಬಿಲಿಟಿ ಕಾರ್ಡ್ ಪಡೆಯುವ ಆಯ್ಕೆ ಜನರಿಗೆ ಸಿಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕಡಿಮೆ ಬೆಲೆಗೆ ಹರಾಜಿನಲ್ಲಿ ಮನೆ ಖರೀದಿಸಿ! ಸ್ವಂತ ಮನೆ ಮಾಡಿಕೊಳ್ಳೋಕೆ ಇದು ಒಳ್ಳೆ ಟೈಮ್.
ಈ ಕಾರ್ಡ್ ನಲ್ಲಿ ಸಂಪರ್ಕರಹಿತ ಅಥವಾ ಸಮೀಪದ ಕ್ಷೇತ್ರ ಕಾರ್ಯ (NFC) ಅನುಕೂಲ ಸಹ ಇರುತ್ತದೆ. ಇದರಿಂದಾಗಿ ರುಪೇ ಕಾರ್ಡ್ ಗಳಲ್ಲಿ ಈ ರೀತಿಯ ಕಾರ್ಡ್ ಗಳನ್ನು ಹೆಚ್ಚಾಗಿ ನೀಡಬಹುದು ಎನ್ನಲಾಗಿದೆ.. NMCC ಸೇವೆ ಆಕ್ಟಿವೇಟ್ ಆಗಿರುವ ಕಾರ್ಡ್ ಗಳನ್ನು ರುಪೇ ನೆಟ್ವರ್ಕ್ ಇಂದ ಕೊಡಲಾಗುತ್ತಿದೆ..
ಈಗ ರುಪೇ ಕಾರ್ಡ್ ಜೊತೆಗಿರುತ್ತದೆ.
ಮುಂಬರುವ ದಿನಗಳಲ್ಲಿ ಬ್ಯಾಂಕ್ ಇಂದ ಸಿಗುವ ಎಲ್ಲಾ ಕಾರ್ಡ್ ಗಳಲ್ಲಿ NMCC ಸೇವೆ ಇರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಫ್ಲೈನ್ ವ್ಯಾಲೆಟ್ ಗಳು ಇದರಲ್ಲಿ ಲಭ್ಯವಿದೆ, ಹಾಗೆಯೇ ಪ್ರೈವೇಟ್ ಬ್ಯಾಂಕ್ ಗಳು NFC ಇಂದ ಕೆಲಸ ಮಾಡುವ NCMC ಕಾರ್ಡ್ ಗಳನ್ನು ಕೊಡುತ್ತಿಲ್ಲ ಎನ್ನಲಾಗಿದ್ದು, ಇದರಿಂದಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಆನ್ಲೈನ್ ಪೇಮೆಂಟ್ ಮಾಡೋರಿಗೆ ಹೊಸ ನಿಯಮ! ಇನ್ಮುಂದೆ ಹಣ ಕಳಿಸೋದು ಇನ್ನಷ್ಟು ಸುಲಭ
NCMC ಕಾರ್ಡ್ (NCMC Card) ಅಂದರೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (National Common Mobility Card) ಫೀಚರ್ ಇರುವ ಡೆಬಿಟ್ ಕಾರ್ಡ್ ನಿಮಗೆ ಟ್ರಾವೆಲ್ ಕಾರ್ಡ್ (Travel Card) ಆಗಿ ಕೂಡ ಕೆಲಸ ಮಾಡುತ್ತದೆ. ಈ ಕಾರ್ಡ್ ಅನ್ನು ಮೆಟ್ರೋ, ರೈಲ್ವೆ ಸ್ಟೇಶನ್ ಟ್ರೇನ್ ಗಳು ಮತ್ತು ಬಸ್ ಗಳಲ್ಲಿ ಕೂಡ ಬಳಸಬಹುದು. ಈ ಕಾರ್ಡ್ ಇರುವವರಿಗೆ ರುಪೇ ವಾಲೆಟ್ ಸೇವೆಗಳು ಕೂಡ ಲಭ್ಯವಿರುತ್ತದೆ.
ಎಲ್ಲಾ ಗ್ಯಾರಂಟಿ ಯೋಜನೆಗೆ ಪೈಪೋಟಿ ನೀಡಲು ಬಂದಿದೆ ಕೇಂದ್ರ ಸರ್ಕಾರದ ಹೊಸ ಯೋಜನೆ. ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಶುರು!
ರುಪೇ ವಾಲೆಟ್ ನಲ್ಲಿ 2000 ರೂಪಾಯಿವರೆಗು ಹಣ ಇಟ್ಟುಕೊಳ್ಳಬಹುದು. ಇದರಲ್ಲಿಯೇ ಟ್ರಾವೆಲ್ ಮತ್ತು ಆನ್ಲೈನ್ ಪೇಮೆಂಟ್ ಮಾಡಬಹುದು. ಪಾರ್ಕಿಂಗ್ ಮತ್ತು ಟೋಲ್ ಪೇಮೆಂಟ್ ಕೂಡ ಮಾಡಬಹುದು. ಇಂಥ ಹಲವು ಪ್ರಯೋಜನ ಪಡೆಯಬಹುದು.
Good news to bank account holders by central government
Our Whatsapp Channel is Live Now 👇