ಬಡವರ ಸ್ವಂತ ಮನೆ ಕನಸು ನನಸಾಗುವ ಕಾಲ ಬಂತು! ಸರ್ಕಾರದಿಂದ ಮನೆ ಭಾಗ್ಯ; ಹೊಸ ಯೋಜನೆ
Home Loan : ಪಿಎಮ್ ಆವಾಸ್ ಯೋಜನೆಯ ಮೂಲಕ ಕೋಟ್ಯಾಂತರ ಜನರು ಸಾಲ ಪಡೆದು ಸ್ವಂತ ಮನೆ ಮಾಡಿಕೊಂಡಿದ್ದಾರೆ. ನೀವು ಕೂಡ ಸರ್ಕಾರದ ಈ ಸೌಲಭ್ಯವನ್ನು ಪಡೆಡಿಕೊಳ್ಳಬಹುದು.
Home Loan Subsidy : ಬದುಕಿನಲ್ಲಿ ಬಹುತೇಕ ಜನರ ಆಸೆ ತಮಗಾಗಿ ಒಂದು ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎನ್ನುವುದಾಗಿರುತ್ತದೆ. ಎಲ್ಲರೂ ದುಡಿಯುವುದು ಕೂಡ ತಮ್ಮ ತಲೆಯ ಮೇಲೆ ಒಂದು ಸ್ವಂತ ಸೂರು ಇರಲಿ ಎನ್ನುವ ಕಾರಣಕ್ಕಾಗಿಯೇ.
ಆದರೆ ಈಗ ಪ್ರಪಂಚ ಹೋಗುತ್ತಿರುವ ರೀತಿ ಹಾಗೂ ಖರ್ಚುಗಳನ್ನು ನೋಡಿದರೆ ಮನೆ ಕಟ್ಟುವುದು ಸುಲಭ ಅಂತು ಅಲ್ಲ. ಎಷ್ಟೇ ಹಣವಿದ್ದರು ಮನೆ ಕಟ್ಟಲು ಸಾಕಾಗುತ್ತದೆ ಎಂದು ಕೂಡ ಅನ್ನಿಸುವುದಿಲ್ಲ. ಆದರೆ ಜನರಲ್ಲಿರುವ ಆಸೆ ಮಾತ್ರ ಕಡಿಮೆ ಆಗಿಲ್ಲ.
ಮನೆ ಬಾಡಿಗೆಗೆ ಕೊಟ್ಟಿರೋ ಮನೆ ಓನರ್‌ಗಳಿಗೆ ಬಿಗ್ ಅಪ್ಡೇಟ್! ಮೊದಲು ಹೊಸ ನಿಯಮ ತಿಳಿಯಿರಿ
ಸ್ವಂತ ಮನೆಗೆ ಲೋನ್ ಮೊರೆ
ಹಲವು ಜನರಿಗೆ ಸ್ವಂತ ಮನೆ ಮಾಡಬೇಕೆಂದು ಆಸೆ ಇದ್ದರು ಹಣದ ಕೊರತೆ ಇರುವವರು ಬ್ಯಾಂಕ್ ಇಂದ ಸಾಲ (Bank Loan) ಪಡೆದು ಅಥವಾ ಹೊರಗಡೆ ಸಾಲ ಪಡೆದು ಸ್ವಂತ ಮನೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇದು ಒಳ್ಳೆಯ ಆಯ್ಕೆ ಎಂದುಕೊಂಡರು ಸಹ, ಲೋನ್ ಪಡೆದರೆ ಅದಕ್ಕಾಗಿ ಬೀಳುವ ಬಡ್ಡಿದರವನ್ನು ಕಟ್ಟುವುದು ಕೂಡ ಒಂದು ರೀತಿ ಹೊರೆಯೇ ಆಗಿರುತ್ತದೆ. ಹಾಗಾಗಿ ಕೇಂದ್ರ ಸರ್ಕಾರವು ಸ್ವಂತ ಮನೆ ಕನಸು ಹೊಂದಿರುವವರಿಗಾಗಿ ಒಂದು ಗುಡ್ ನ್ಯೂಸ್ ನೀಡಿದೆ.
ಪಿಎಮ್ ಆವಾಸ್ ಯೋಜನೆ
ಹೌದು, ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವವರು ಪಿಎಮ್ ಆವಾಸ್ ಯೋಜನೆಯ ಮೂಲಕ ಸರ್ಕಾರದಿಂದ ಸಾಲ ಪಡೆದು, ಮನೆ ಕಟ್ಟಿಕೊಳ್ಳಬಹುದು. ಇದು ಸಬ್ಸಿಡಿ ಸಾಲ (Subsidy Loan) ಆಗಿದ್ದು, ಇದಕ್ಕಾಗಿ ಹೆಚ್ಚಿನ ಬಡ್ಡಿ ಬೀಳುವುದಿಲ್ಲ, ನಿಮಗೆ ಹೊರೆಯು ಆಗುವುದಿಲ್ಲ.
ಈಗಾಗಲೇ ಪಿಎಮ್ ಆವಾಸ್ ಯೋಜನೆಯ ಮೂಲಕ ಕೋಟ್ಯಾಂತರ ಜನರು ಸಾಲ ಪಡೆದು ಸ್ವಂತ ಮನೆ ಮಾಡಿಕೊಂಡಿದ್ದಾರೆ. ನೀವು ಕೂಡ ಸರ್ಕಾರದ ಈ ಸೌಲಭ್ಯವನ್ನು ಪಡೆಡಿಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಿಗ್ ಅಪ್ಡೇಟ್! ರಾತ್ರೋ ರಾತ್ರಿ ಬಡ್ಡಿದರದಲ್ಲಿ ಬದಲಾವಣೆ
ಪಿಎಮ್ ಆವಾಸ್ ಯೋಜನೆಯ ಅರ್ಹತೆಗಳು
*ಅರ್ಜಿ ಹಾಕುವವರು ಭಾರತದಲ್ಲಿ ಹುಟ್ಟಿ ಬೆಳೆದವರೇ ಆಗಿರಬೇಕು
*18 ವರ್ಷ ಮೇಲ್ಪಟ್ಟ ಯಾರಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
*ಅರ್ಜಿ ಹಾಕುವವರ ಹತ್ತಿರ ಬೇರೆ ಸ್ವಂತ ಮನೆ ಇರಬಾರದು, ಈ ಮೊದಲು ಮನೆ ಕಟ್ಟುವುದಕ್ಕೆ ಸರ್ಕಾರದ ಬೇರೆ ಯಾವುದೇ ಯೋಜನೆಯ ಸಹಾಯ ಪಡೆದಿರಬಾರದು
*ಒಮ್ಮೆ ಮಾತ್ರ ಈ ಯೋಜನೆಯ ಸೌಲಭ್ಯ ಸಿಗುತ್ತದೆ, ಪದೇ ಪದೇ ಸಿಗುವುದಿಲ್ಲ.
*GST ಕಟ್ಟುವವರಿಗೆ ಟ್ಯಾಕ್ಸ್ ಕಟ್ಟುವವರಿಗೆ ಈ ಸೌಲಭ್ಯ ಸಿಗುವುದಿಲ್ಲ.
*ನಗರ ಪ್ರದೇಶ ಅಥವಾ ಹಳ್ಳಿ ಎಲ್ಲೇ ಸ್ವಂತ ಮನೆ ಇದ್ದರು ಅರ್ಜಿ ಹಾಕಲು ಆಗೋದಿಲ್ಲ
*ಅರ್ಜಿ ಹಾಕುವ ವ್ಯಕ್ತಿ ಅಥವಾ ಆತನ ಮನೆಯಲ್ಲಿ ಯಾರಿಗಾದರೂ ಸರ್ಕಾರಿ ಕೆಲಸವಿದ್ದರೆ ಅಂಥವರು ಅರ್ಜಿ ಸಲ್ಲಿಸುವ ಹಾಗಿಲ್ಲ.
*ಪಿಎಮ್ ಆವಾಸ್ ಯೋಜನೆಯಲ್ಲಿ 2.5 ಲಕ್ಷದವರೆಗೂ ಸಾಲ ಪಡೆಯಬಹುದು..
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 20,000 ರೂಪಾಯಿ! ಮುಗಿಬಿದ್ದ ಜನ
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ನೀವು ಈ ಯೋಜನೆಯ ಮೂಲಕ ಸಾಲ (Home Loan) ಪಡೆಯಬೇಕು ಎಂದರೆ ಮೊದಲಿಗೆ https://pmaymis.gov.in/ ಈ ಲಿಂಕ್ ಗೆ ಭೇಟಿ ನೀಡಿ ಅಪ್ಲೈ ಮಾಡಬಹುದು. ಅದರಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಜೊತೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ. ಶೀಘ್ರದಲ್ಲೇ ನಿಮಗೆ ಲೋನ್ ಮೂಲಕ 2.5 ಲಕ್ಷ ಸಾಲ ಸಿಗುತ್ತದೆ.
Government Home Loan Subsidy Scheme Details