ಈ ಬಿಸಿನೆಸ್ ಮಾಡಿದರೆ ಬಂಡವಾಳ ಹಾಕಲು ಸರ್ಕಾರವೇ ಕೊಡಲಿದೆ ದುಡ್ಡು
- ಪ್ರತಿಯೊಬ್ಬರಿಗೂ ಬೇಕಾಗಿರುವ ಈ ವಸ್ತುವಿನ ಬಿಸಿನೆಸ್ ಆರಂಭಿಸಿ
- ಮುದ್ರಾ ಲೋನ್ ಮೂಲಕ ಬಂಡವಾಳಕ್ಕೆ ಬೇಕಾದಷ್ಟು ಹಣ ಪಡೆಯಬಹುದು
- ಲಕ್ಷ ಆದಾಯ ಬರುವ ಟ್ರ್ಯಾಕ್ ಸೂಟ್ ಬಿಸಿನೆಸ್ ಮಾಡಿ
Business Loan : ಯಾವುದೇ ಒಂದು ಸ್ವಂತ ಉದ್ಯಮ (Own Business) ಆರಂಭಿಸಬೇಕು ಅಂದ್ರೆ ಅದಕ್ಕೆ ಚಾಣಕ್ಯತೆ ಅಥವಾ ಬುದ್ಧಿವಂತಿಕೆ, ಪರಿಶ್ರಮ, ಸ್ಥಳಾವಕಾಶ, ಮಾನವ ಸಂಪನ್ಮೂಲ ಇದೆಲ್ಲದಕ್ಕಿಂತ ಹೆಚ್ಚಾಗಿ ಬಂಡವಾಳ ಬೇಕೇ ಬೇಕು. ಬಂಡವಾಳ ಹೂಡಿಕೆ ಮಾಡಲು ನೀವು ಸಿದ್ಧರಿದ್ದರೆ ಕೈತುಂಬ ಹಣ ಗಳಿಸಬಹುದಾದ ಉತ್ತಮ ಬ್ಯುಸಿನೆಸ್ ಐಡಿಯಾವನ್ನು (Business Idea) ನಾವು ಈ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ.
ಪ್ರತಿಯೊಬ್ಬರಿಗೂ ಇದು ಬೇಕೇ ಬೇಕು
ಚಳಿಗಾಲ ಆರಂಭವಾಗಿದೆ. ಹಾಗಾಗಿ ಚಳಿಗಾಲದಲ್ಲಿ ಪ್ರತಿಯೊಬ್ಬರು ಚಳಿಯಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ವಿಶೇಷವಾದ ಬಟ್ಟೆಯನ್ನು ಧರಿಸುತ್ತಾರೆ ಅವುಗಳಲ್ಲಿ ಟ್ರ್ಯಾಕ್ ಸೂಟ್ ಕೂಡ ಒಂದು ಮನೆಯಲ್ಲಿ ಇರುವವರು ಅಥವಾ ಆಫೀಸ್ ಕೆಲಸಕ್ಕೆ ಹೋಗುವವರು, ಶಾಲಾ ಕಾಲೇಜಿಗೆ ಹೋಗುವ ಮಕ್ಕಳು, ಪ್ರತಿಯೊಬ್ಬರೂ ಕೂಡ ಟ್ರ್ಯಾಕ್ಸ್ ಅನ್ನು ಚಳಿಗಾಲದಲ್ಲಿ ಧರಿಸುತ್ತಾರೆ.
ಇದನ್ನೇ ನೀವು ಬಿಸಿನೆಸ್ ಆಗಿ ಮಾಡಿಕೊಳ್ಳಬಹುದು. ಅಂದರೆ ಟ್ರ್ಯಾಕ್ ಸೂಟ್ ಮಾರಾಟ ಮಾಡುವ ಉದ್ಯಮವನ್ನು ಆರಂಭಿಸಬಹುದು, ವಿಶೇಷ ಅಂದ್ರೆ ಸರ್ಕಾರವೇ ಇದಕ್ಕೆ ಬೆಂಬಲ ನೀಡುತ್ತಿದೆ.
ಈ ಬ್ಯಾಂಕ್ ನಲ್ಲಿ ಹಣ ಫಿಕ್ಸೆಡ್ ಇಟ್ಟರೆ ಬಡ್ಡಿಯೇ 5% ಸಿಗಲಿದೆ! ಯಾವ ಬ್ಯಾಂಕ್ ಗೊತ್ತಾ?
ಟ್ರ್ಯಾಕ್ ಸೂಟ್ ಬಿಸಿನೆಸ್ ಆರಂಭಿಸಲು ಎಷ್ಟು ಬಂಡವಾಳ ಬೇಕು ?
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವರದಿಯ ಪ್ರಕಾರ ಟ್ರ್ಯಾಕ್ ಸೂಟ್ ಉದ್ಯಮ ಆರಂಭಿಸಲು ಕನಿಷ್ಠ 8.71 ಲಕ್ಷ ಬೇಕು ಇದರಲ್ಲಿ ಸುಮಾರು 4.46 ಲಕ್ಷ ರೂಪಾಯಿಗಳು ಸಲಕರಣೆಗಳನ್ನು ಖರೀದಿ ಮಾಡಲು ಹಾಗೂ 4.25 ಲಕ್ಷ ರೂಪಾಯಿಗಳನ್ನು ಇತರ ಖರ್ಚುಗಳಿಗಾಗಿ ಮೀಸಲಿಡಬೇಕು.
ಬ್ರಾಂಡಿಂಗ್ ಮುಖ್ಯ
ನೀವು ಟ್ರ್ಯಾಕ್ ಸೂಟ್ ತಯಾರಿಸುವ ಉದ್ಯಮವನ್ನು ಆರಂಭಿಸುವುದಾದರೆ ಅದಕ್ಕೆ ನಿಮ್ಮದೇ ಆಗಿರುವ ಬ್ರಾಂಡಿಂಗ್ ಮಾಡಿಕೊಳ್ಳಬೇಕು. ಅಂದರೆ ಟ್ರ್ಯಾಕ್ ಸೂಟ್ ಮೇಲೆ ನಿಮ್ಮ ಉದ್ಯಮದ ಹೆಸರನ್ನು ಪ್ರಿಂಟ್ ಮಾಡಬೇಕು. ಈ ಮೂಲಕ ಮಾರ್ಕೆಟ್ನಲ್ಲಿ ನಿಮ್ಮದೇ ಆಗಿರುವ ಬ್ರಾಂಡಿಂಗ್ ಕ್ರಿಯೇಟ್ ಆಗುತ್ತದೆ.
ಇನ್ನು ಟ್ರ್ಯಾಕ್ ಸೂಟ್ ತಯಾರಿಸುವ ಬಿಸಿನೆಸ್ ಆರಂಭಿಸಿದರೆ ಆನ್ಲೈನ್ ಮೂಲಕ ನೀವು ಸೇಲ್ ಮಾಡಬಹುದು ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತನ್ನು ಕೊಡುವುದರ ಮೂಲಕ ಜನರನ್ನು ಹೆಚ್ಚು ಆಕರ್ಷಿಸಬಹುದು ಅಥವಾ ನಿಮ್ಮದೇ ಆಗಿರುವ ಒಂದು ಶಾಪ್ ಓಪನ್ ಮಾಡಿ ಅಲ್ಲಿಯೂ ಸೇಲ್ ಮಾಡಬಹುದು.
ICICI ಬ್ಯಾಂಕ್ ನಲ್ಲಿ 40 ಲಕ್ಷ ಹೋಮ್ ಲೋನ್ ಪಡೆದರೆ EMI ಎಷ್ಟು ಕಟ್ಟಬೇಕಾಗುತ್ತೆ?
ಈ ರೀತಿ ನಿಮ್ಮಿಂದಲೇ ಬಟ್ಟೆ ತಯಾರಾಗಿ ನೀವೇ ಮಾರಾಟ ಮಾಡಿದರೆ ನಿಮಗೆ ಹೆಚ್ಚು ಮಾರ್ಜಿನ್ ಇಟ್ಟುಕೊಂಡು ಕಡಿಮೆ ಬೆಲೆಗೆ ಬಟ್ಟೆಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇದರಿಂದಾಗಿ ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯವನ್ನು ಸುಲಭವಾಗಿ ಗಳಿಸಬಹುದು.
ಬಂಡವಾಳಕ್ಕೆ ಮುದ್ರಾ ಲೋನ್
ಇನ್ನು ಇಷ್ಟೆಲ್ಲ ಖರ್ಚು ಮಾಡಿ ಈ ಉದ್ಯಮ ಹೇಗೆ ಆರಂಭಿಸುವುದು ಅಂತ ಯೋಚನೆ ಮಾಡುತ್ತಿದ್ದರೆ ಬಂಡವಾಳಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿರುವ ಮುದ್ರಾ ಯೋಜನೆಯ ಮೂಲಕ ಸಾಲ ಸೌಲಭ್ಯ (Mudra Loan) ಪಡೆದುಕೊಳ್ಳಬಹುದು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ದಾಖಲೆಗಳನ್ನು ನೀಡದೆ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು. ಈ ಮೂಲಕ ನೀವು ನಿಮ್ಮ ಸ್ವಂತ ಉದ್ಯಮದ (Own Business) ಕನಸನ್ನು ನನಸಾಗಿಸಿಕೊಳ್ಳಬಹುದು.
government will provide you money to invest for Your Business