ರೈತರೇ, ಮಳೆಗಾಲದಲ್ಲಿ ಈ ಬೆಳೆಗಳನ್ನು ಬೆಳೆಯಿರಿ, ಕೈತುಂಬಾ ಆದಾಯ ಗಳಿಸಿ! ಇಲ್ಲಿದೆ ಮಾಹಿತಿ

ಈ ಎರಡು ಸಸ್ಯಗಳಿಗೆ ಹೆಚ್ಚು ನಿರ್ವಹಣೆ ಮಾಡುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಮಳೆಗಾಲದಲ್ಲಿ ಇವುಗಳು ಒಳ್ಳೆಯ ಫಲ ಕೊಡುತ್ತದೆ

Bengaluru, Karnataka, India
Edited By: Satish Raj Goravigere

ರೈತರು (Farmer) ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಅವರು ಪಡುವ ಶ್ರಮಕ್ಕೆ ತಕ್ಕ ಆದಾಯ (Income) ಬರುವುದಿಲ್ಲ. ಅಂಥ ರೈತರಿಗೆ ಸಾಮಾನ್ಯವಾಗಿ ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು ಎನ್ನುವುದು ಸರಿಯಾಗಿ ಗೊತ್ತಿರುವುದಿಲ್ಲ. ಅದರ ತಿಳುವಳಿಕೆ ಇಲ್ಲದೇ ಯಾವುದೋ ಬೆಳೆಯನ್ನು ಇನ್ಯಾವುದೋ ಸಮಯದಲ್ಲಿ ಬೆಳೆದು, ಹಾನಿ ಉಂಟು ಮಾಡಿಕೊಳ್ಳುತ್ತಾರೆ. ಹಾಗಾಗಿ ಇಂದು ಮಳೆಗಾಲದಲ್ಲಿ ಯಾವ ಬೆಳೆ ಬೆಳೆದರೆ, ಒಳ್ಳೆಯ ಆದಾಯ ಸಿಗುತ್ತದೆ ಎಂದು ತಿಳಿಸಲಿದ್ದೇವೆ ನೋಡಿ..

ಮಳೆಗಾಲ ಎಂದರೆ, ಈ ವೇಳೆ ನಾವು ಯಾವುದೇ ಬೆಳೆಗೆ ಹೆಚ್ಚಾಗಿ ಮುತುವರ್ಜಿ ವಹಿಸಿ, ನೀರು ಹಾಕುವ ಅವಶ್ಯ ಇರುವುದಿಲ್ಲ. ಹಾಗಾಗಿ ಈ ಕಾಲದಲ್ಲಿ ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿಯನ್ನು ಬೆಳೆಯಬಹುದು.

Grow these crops in rainy season, earn huge income

ಈ ಎರಡು ಸಸ್ಯಗಳಿಗೆ ಹೆಚ್ಚು ನಿರ್ವಹಣೆ ಮಾಡುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಮಳೆಗಾಲದಲ್ಲಿ ಇವುಗಳು ಒಳ್ಳೆಯ ಫಲ ಕೊಡುತ್ತದೆ, ಮೆಣಸಿನಕಾಯಿ ಮತ್ತು ಕೊತ್ತಂಬರಿ ಬೆಳೆಯಲು ಮರಳು ಮಿಶ್ರಣ ಆಗಿರುವ ಲೋಮ್ ಮಣ್ಣು ಅಥವಾ ಕೆಂಪು ಮಣ್ಣು ಬೇಕಾಗುತ್ತದೆ.

ಆಧಾರ್ ಕಾರ್ಡಿನಲ್ಲಿ ಅಡ್ರೆಸ್ ತಿದ್ದುಪಡಿಗೆ ಇನ್ಮುಂದೆ ನೂತನ ವ್ಯವಸ್ಥೆ ಜಾರಿ! ಇಲ್ಲಿದೆ ಪೂರ್ತಿ ಡೀಟೇಲ್ಸ್

ಮಳೆಗಾಲದಲ್ಲಿ ರೈತರಿಗೆ ಲಾಭ ತಂದುಕೊಡುವ ಮತ್ತೆರಡು ಬೆಳೆಗಳು ಮೂಲಂಗಿ ಮತ್ತು ಸೌತೆಕಾಯಿ. ಇವುಗಳ ಕೃಷಿಗೆ ಹೆಚ್ಚು ಜಾಗ ಬೇಕಾಗುವುದಿಲ್ಲ. ಹಾಗೆಯೇ 1 ತಿಂಗಳ ಅವಧಿಗೆ ಫಲ ಕೊಡುವ ಬೆಳೆಗಳಿವು. ಜೊತೆಗೆ ಒಳ್ಳೆಯ ಲಾಭವನ್ನು ಕೂಡ ತಂದುಕೊಡುತ್ತದೆ.

ಬದನೆಕಾಯಿ ಮತ್ತು ಟೊಮೊಟೊ ಕೂಡ ಎಲ್ಲಾ ಕಾಲದಲ್ಲಿ ಕೂಡ ಲಾಭ ಕೊಡುವಂಥ ಬೆಳೆ ಆಗಿದೆ. ಇವುಗಳನ್ನು ಚಳಿ, ಮಳೆ ಎರಡು ಕಾಲಗಳಲ್ಲಿ ಬೆಳೆಯಬಹುದು. ಪ್ರಸ್ತುತ ಟೊಮೊಟೊ ಬೆಲೆ ಜಾಸ್ತಿ ಆಗುತ್ತಿದ್ದು, ಪ್ರಸ್ತುತ ಈ ಬೆಲೆ ಬೆಳೆದು ಲಾಭ ಪಡೆಯಬಹುದು.

ಈ ಮಾನ್ಸೂನ್ ಸಮಯ ಬೀನ್ಸ್ ಬೆಳೆಯುವುದಕ್ಕೆ ಕೂಡ ಸೂಕ್ತವಾದ ಸಮಯ ಆಗಿದೆ. ಈ ಗಿಡ ಬೆಳೆಯುವುದು ಬಳ್ಳಿ ಇಂದ, ಗೋಡೆಗಳ ಆಧಾರ ಪಡೆದು ಬೆಳೆಯುತ್ತದೆ. ಮಳೆಗಾಲದಲ್ಲಿ ಒಳ್ಳೆಯ ಇಳುವರಿ ಕೊಡುತ್ತದೆ. ಹಾಗೆಯೇ ಸೋರೆಕಾಯಿ ಕೂಡ ಮಳೆಗಾಲಕ್ಕೆ ಉತ್ತಮವಾದ ಬೆಳೆ, ಇನ್ನು ಪಾಲಕ್ ಕೃಷಿ ಕೂಡ ಒಳ್ಳೆಯದು.

ಈ ಎರಡು ಬೆಳೆಯನ್ನು ಲೋಮ್ ಮಣ್ಣಿನಲ್ಲಿ ಬೆಳೆಯಬಹುದು. ಮತ್ತೊಂದು ಲಾಭ ತರುವ ಬೆಳೆ ತೊಂಡೆಕಾಯಿ ಆಗಿದೆ. ಇದು ಎಲ್ಲಾ ಕಾಲದಲ್ಲೂ ಬೆಳೆಯುವ ಬೆಳೆ ಆಗಿದ್ದು, ಹೆಚ್ಚು ನಿರ್ವಹಣೆ ಮತ್ತು ನೀರಿನ ಅಗತ್ಯವಿಲ್ಲ.

ದಿಢೀರ್ ಇಳಿಕೆಯಾದ ಚಿಕನ್ ಬೆಲೆ, ಪ್ರಸ್ತುತ 1 ಕೆ.ಜಿ ಚಿಕನ್ ರೇಟ್ ಎಷ್ಟಿದೆ ಗೊತ್ತಾ? ಮಾಂಸಾಹಾರಿಗಳಿಗೆ ಭರ್ಜರಿ ಸುದ್ದಿ

ಮಳೆಗಾಲದಲ್ಲಿ ನೀರು ಹಾಕುವ ಅಗತ್ಯವೇ ಇರುವುದಿಲ್ಲ. ಇವುಗಳನ್ನು ನೀವು ಚೆನ್ನಾಗಿ ನಿರ್ವಹಿಸಿದರೆ, ಎರಡು ಮೂರು ವರ್ಷಕ್ಕೆ ಕೈತುಂಬ ಆದಾಯ ಗ್ಯಾರೆಂಟಿ. ತೊಂಡೆಕಾಯಿಯ ರೇಟ್ ಯಾವಾಗಲೂ ಉತ್ತಮವಾಗಿಯೇ ಇರುತ್ತದೆ. ಬೆಳೆಗಳ ಆಯ್ಕೆ ಹೇಗಿರಬೇಕು. ಆದರೆ ಇದನ್ನು ಹೊರತಿಪಡಿಸಿ ಇನ್ನಷ್ಟು ವಿಷಯಗಳನ್ನು ಕೂಡ ನೀವು ಗಮನದಲ್ಲಿ ಇಟ್ಟುಕೊಂಡಿರಬೇಕು. ಅವುಗಳು ಏನೇನು ಎಂದು ನೋಡುವುದಾದರೆ..

ವ್ಯವಸಾಯ ಮಾಡುವುದಕ್ಕೆ ಆ ಬೆಳೆಗೆ ಒಳ್ಳೆಯ ಇಳುವರಿ ಕೊಡುವ ಬೀಜ ಅರಿಸಬೇಕು, ವ್ಯವಸಾಯ ಮಾಡುವ ಮೊದಲು ಮಣ್ಣಿನ ಪರೀಕ್ಷೆ ಮಾಡಿಸಬೇಕು, ನೀರಾವರಿ ಮತ್ತು ಕಳೆ ಬಗ್ಗೆ ಗಮನ ಹರಿಸಿ. ಬೆಳೆಗೆ ವಿಮೆ ಮಾಡಿಸಿಕೊಳ್ಳಿ, ಸರಿಯಾದ ವೇಳೆಯಲ್ಲಿ ಕೊಯ್ಲು ಮಾಡಿ..ಹಾಗೆಯೇ ಒಳ್ಳೆಯ ಬೆಳೆಗೆ ಇಳುವರಿ ಬಂದಿರುವ ಪದಾರ್ಥಗಳನ್ನು ಮಾರಾಟ ಮಾಡಿ. ಇದರಿಂದ ಒಳ್ಳೆಯ ಲಾಭ ಗಳಿಸಿ.

Grow these crops in rainy season, earn huge income