ಆಧಾರ್ ಕಾರ್ಡಿನಲ್ಲಿ ಅಡ್ರೆಸ್ ತಿದ್ದುಪಡಿಗೆ ಇನ್ಮುಂದೆ ನೂತನ ವ್ಯವಸ್ಥೆ ಜಾರಿ! ಇಲ್ಲಿದೆ ಪೂರ್ತಿ ಡೀಟೇಲ್ಸ್
ಆಧಾರ್ ನಲ್ಲಿ ನಮ್ಮ ಬಗ್ಗೆ ಸರಿಯಾದ ಮಾಹಿತಿ ಇರುವ ಹಾಗೆ ನೋಡಿಕೊಳ್ಳಬೇಕು. ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ತಪ್ಪಾಗಿದ್ದರೆ, ನಿಮಗೆ ಸಮಸ್ಯೆ ಎದುರಾಗುತ್ತದೆ.
ಆಧಾರ್ ಕಾರ್ಡ್ (Aadhaar Card) ಈಗ ಭಾರತೀಯರಾದ ನಮ್ಮೆಲ್ಲರ ಬಳಿ ಇರಲೇಬೇಕಾದ ಒಂದು ಗುರುತಿನ ಚೀಟಿ ಆಗಿದೆ. ಆಧಾರ್ ಅನ್ನು ನಾವು ಬ್ಯಾಂಕ್ ಅಕೌಂಟ್ (Bank Account), ಪ್ಯಾನ್ ಕಾರ್ಡ್ (Pan Card), ರೇಷನ್ ಕಾರ್ಡ್ (Ration Card) ಇಂಥ ಎಲ್ಲಾ ಪ್ರಮುಖವಾದ ದಾಖಲೆಗಳ ಜೊತೆಗೆ ಲಿಂಕ್ ಮಾಡಿದ್ದೇವೆ. ಹಾಗಾಗಿ ಆಧಾರ್ ಕಾರ್ಡ್ ಅನ್ನು ಬಹಳ ಹುಷಾರಾಗಿ ಇಟ್ಟುಕೊಳ್ಳಬೇಕು.
ಹಾಗೆಯೇ ಆಧಾರ್ ನಲ್ಲಿ ನಮ್ಮ ಬಗ್ಗೆ ಸರಿಯಾದ ಮಾಹಿತಿ ಇರುವ ಹಾಗೆ ನೋಡಿಕೊಳ್ಳಬೇಕು. ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ತಪ್ಪಾಗಿದ್ದರೆ, ನಿಮಗೆ ಸಮಸ್ಯೆ ಎದುರಾಗುತ್ತದೆ. ಹಾಗೆಯೇ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದು ತಪ್ಪಿ ಹೋಗುತ್ತದೆ.
ಹೌದು, ಆಧಾರ್ ಕಾರ್ಡ್ ನಲ್ಲಿ ಮಾಹಿತಿ ತಪ್ಪಿದ್ದರೆ ತಿದ್ದುಪಡಿ ಮಾಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಇದರಲ್ಲಿ ಪ್ರಮುಖವಾಗಿ ನಿಮ್ಮ ಅಡ್ರೆಸ್ ಅನ್ನು ಕೂಡ ನೋಡಿಕೊಳ್ಳಬೇಕು, ಅಡ್ರೆಸ್ ನಲ್ಲಿ ತಪ್ಪಿದ್ದರೆ, ಅದನ್ನು ಸರಿಪಡಿಸಿ.
ಮೊದಲೆಲ್ಲಾ ಅಡ್ರೆಸ್ ಸರಿಪಡಿಸುವುದಕ್ಕೆ ಹೊಸ ದಾಖಲೆ ನೀಡಿ, ಕಚೇರಿಗೆ ಅಲೆದಾಡಬೇಕಿತ್ತು. ಆದರೆ ಈಗ ಆ ರೀತಿ ಇಲ್ಲ. ಅಡ್ರೆಸ್ ಅಪ್ಡೇಟ್ ಮಾಡಲು UIDAI ಹೊಸದೊಂದು ವಿಧಾನವನ್ನು ಜಾರಿಗೆ ತಂದಿದ್ದು, ಇದರ ಮೂಲಕ ನೀವು ಸುಲಭವಾಗಿ ಅಡ್ರೆಸ್ ಅಪ್ಡೇಟ್ ಮಾಡಿಸಬಹುದು. ಇದಕ್ಕಾಗಿ ನಿಮ್ಮ ಮನೆಯವರ ಒಪ್ಪಿಗೆ ಇದ್ದರೆ ಸಾಕು..
ದಿಢೀರ್ ಇಳಿಕೆಯಾದ ಚಿಕನ್ ಬೆಲೆ, ಪ್ರಸ್ತುತ 1 ಕೆ.ಜಿ ಚಿಕನ್ ರೇಟ್ ಎಷ್ಟಿದೆ ಗೊತ್ತಾ? ಮಾಂಸಾಹಾರಿಗಳಿಗೆ ಭರ್ಜರಿ ಸುದ್ದಿ
UIDAI ಹೊಸ ವಿಧಾನ:
ಆಧಾರ್ ಕಾರ್ಡ್ ಸಂಬಂಧಿಸಿದ ಹಾಗೆ ಯಾವುದೇ ಹೊಸ ಅಪ್ಡೇಟ್ ಅಥವಾ ನಿರ್ಧಾರವನ್ನು UIDAI ತೆಗೆದುಕೊಳ್ಳುತ್ತದೆ. ಇದೀಗ UIDAI ಹೊಸದೊಂದು ಅಪ್ಡೇಟ್ ನೀಡಿದ್ದು, ಇದರ ಅನುಸಾರ ನೀವು ಆಧಾರ್ ಕಾರ್ಡ್ ನಲ್ಲಿ ಅಡ್ರೆಸ್ ಅಪ್ಡೇಟ್ ಮಾಡುವುದಕ್ಕಾಗಿ ಎಲ್ಲಿಗೂ ಹೋಗಬೇಕಿಲ್ಲ. ಮನೆಯ ಹಿರಿಯರ ಒಪ್ಪಿಗೆ ಇದ್ದರೆ ಸಾಕು, ಇದಕ್ಕಾಗಿ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಕೂಡ ನೀಡದೇ, ಮನೆಯಲ್ಲೇ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ನಲ್ಲಿ ಅಡ್ರೆಸ್ ಅಪ್ಡೇಟ್ ಮಾಡಿಕೊಳ್ಳಬಹುದು. ಇದು UIDAI ನೀಡಿರುವ ಹೊಸ ಅಪ್ಡೇಟ್ ಆಗಿದೆ.
ಈ ಕೋಳಿಯ ಒಂದು ಮೊಟ್ಟೆ ಬೆಲೆ ₹100 ರೂಪಾಯಿ! ಸಾಕಾಣಿಕೆ ಮಾಡಿದ್ರೆ ಲೈಫ್ ಸೆಟ್ಲ್ ಆಗೋದು ಪಕ್ಕಾ!
ಹೊಸ ವ್ಯವಸ್ಥೆ:
ಆಧಾರ್ ನಲ್ಲಿ ಅಡ್ರೆಸ್ ಅಪ್ಡೇಟ್ ಮಾಡುವುದಕ್ಕೆ ಬಂದಿರುವ ಈ ಹೊಸ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ, ಇದರ ಮೂಲಕ ವೆಬ್ಸೈಟ್ ನಲ್ಲಿ ಕುಟುಂಬದ ಜೊತೆಗೆ ಸಂಬಂಧದ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಗಂಡ, ಮಗ, ಸೊಸೆ, ಮಗಳು ಈ ರೀತಿಯಾಗಿ ಸಂಬಂಧ ಏನು ಎಂದು ತಿಳಿಸಬೇಕು.
ಇದಕ್ಕಾಗಿ ದಾಖಲೆಯನ್ನು ಅಪ್ಲೋಡ್ ಮಾಡಬೇಕು. ನಂತರ ಕುಟುಂಬದ ಮುಖ್ಯ ಸದಸ್ಯರ ಫೋನ್ ನಂಬರ್ ಗೆ ಬರುವ OTP ನಮೂದಿಸುವ ಮೂಲಕ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಅಡ್ರೆಸ್ ಅಪ್ಡೇಟ್ ಮಾಡಬಹುದು. ಕುಟುಂಬದ ಜೊತೆಗೆ ನಿಮ್ಮ ಸಂಬಂಧ ಕನ್ಫರ್ಮ್ ಮಾಡಲು ರೇಷನ್ ಕಾರ್ಡ್, ಮ್ಯಾರೇಜ್ ಸರ್ಟಿಫಿಕೇಟ್, ಪಾಸ್ ಪೋರ್ಟ್ ಅಥವಾ ಇನ್ಯಾವುದೇ ದಾಖಲೆ ಕೊಡಬೇಕಾಗುತ್ತದೆ.
ಮಹಿಳೆಯರಿಗೆ ಈ ಹೊಸ ಯೋಜನೆಯಲ್ಲಿ ಸಿಗಲಿದೆ 20 ಲಕ್ಷ ಸಾಲ! ಇಲ್ಲಿದೆ ಅಪ್ಲೈ ಮಾಡಲು ಡೈರೆಕ್ಟ್ ಲಿಂಕ್
ಈ ರೀತಿ ಎಲ್ಲಾ ಪ್ರೊಸಿಜರ್ ಗಳನ್ನು ಫಾಲೋ ಮಾಡಿ, ಅದರ ಜೊತೆಗೆ ಆ ಕುಟುಂಬದ ಜೊತೆಗೆ ನಿಮಗೆ ಸಂಬಂಧ ಇದೆ ಎನ್ನುವ ಬಗ್ಗೆ ಮನೆಯ ಮುಖ್ಯಸ್ಥರಿಂದ ಒಂದು ದೃಢೀಕರಣ ಪತ್ರ ತೆಗೆದುಕೊಂಡು, ಅದನ್ನು ವೆಬ್ಸೈಟ್ ನಲ್ಲಿ ದಾಖಲೆಗಳ ಜೊತೆಗೆ ಸೇರಿಸಿ, ಅಪ್ಲೋಡ್ ಮಾಡಬೇಕು.
ಇದಿಷ್ಟು ಕೆಲಸವನ್ನು ಮಾಡಿದರೆ, UIDAI ನಿಮ್ಮ ಅಪ್ಲಿಕೇಶನ್ ಅನ್ನು ವೆರಿಫೈ ಮಾಡುತ್ತದೆ. ಎಲ್ಲಾ ಮಾಹಿತಿ ಮತ್ತು ದಾಖಲೆಗಳು ಸರಿ ಇದ್ದರೆ, 30 ದಿನಗಳ ಒಳಗೆ ಆಧಾರ್ ಕಾರ್ಡ್ ನಲ್ಲಿ ಅಡ್ರೆಸ್ ಅಪ್ಡೇಟ್ ಆಗುತ್ತದೆ.
New system for correction of address in Aadhaar card will be implement