ಮಹಿಳೆಯರಿಗೆ ಈ ಹೊಸ ಯೋಜನೆಯಲ್ಲಿ ಸಿಗಲಿದೆ 20 ಲಕ್ಷ ಸಾಲ! ಇಲ್ಲಿದೆ ಅಪ್ಲೈ ಮಾಡಲು ಡೈರೆಕ್ಟ್ ಲಿಂಕ್

ಈ ಯೋಜನೆಯ ಮೂಲಕ ಮಹಿಳೆಯರು ಹಾಗೂ ಬ್ಯುಸಿನೆಸ್ ಪ್ಲಾನ್ (Business Idea) ಹೊಂದಿರುವ ಯಾರೇ ಆದರೂ ಸರ್ಕಾರದ ಸಹಾಯ ಪಡೆಯಬಹುದು.

Bengaluru, Karnataka, India
Edited By: Satish Raj Goravigere

ಕೇಂದ್ರ ಸರ್ಕಾರವು ನಮ್ಮ ದೇಶದ ಜನರು ಆರ್ಥಿಕವಾಗಿ ಒಳ್ಳೆಯ ಸ್ಥಿತಿಗೆ ತಲುಪಬೇಕು, ಸ್ವಂತ ಉದ್ಯಮ (Own Business) ಸ್ವಂತ ಉದ್ಯೋಗ ಶುರು ಮಾಡಿ, ಆರ್ಥಿಕವಾಗಿ ಲಾಭ ಪಡೆಯಬೇಕು ಎನ್ನುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಹಲವು ಜನರು ಸ್ವಂತ ಉದ್ಯಮ ಶುರು ಮಾಡಬೇಕು ಎಂದು ಕನಸು ಕಾಣುತ್ತಿದ್ದರು ಕೂಡ, ಬಂಡವಾಳಕ್ಕೆ ಹಣವಿಲ್ಲದೇ, ಸುಮ್ಮನಿದ್ದಾರೆ. ಅಂಥವರಿಗಾಗಿ ಕೇಂದ್ರ ಸರ್ಕಾರವು ಸಹಾಯ ಆಗುವ ಹಾಗೆ ಇನ್ನೊಂದು ಯೋಜನೆಯನ್ನು ಜಾರಿಗೆ ತಂದಿದೆ.

Such Women will get 20 lakh loan in this new scheme

ನಿಮ್ಮ ಕನಸಿನ ಬ್ಯುಸಿನೆಸ್ ಶುರು ಮಾಡಬೇಕು, ಬ್ಯುಸಿನೆಸ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಒಂದು ಯೋಜನೆಯ ಹೆಸರು ಪಿಎಮ್ ಮುದ್ರಾ ಸಾಲ (Mudra Loan) ಯೋಜನೆ ಆಗಿದೆ. ಇದು ವಿಶೇಷವಾಗಿ ಸಣ್ಣ ಉದ್ಯಮಗಳನ್ನು ಹೆಚ್ಚಿಸಿ, ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ.

ಗೋಲ್ಡ್ ಲೋನ್ ಬೇಕಾದ್ರೆ ಇನ್ಮುಂದೆ ಸಿಬಿಲ್ ಸ್ಕೋರ್ ಬೇಕಾಗಿಲ್ಲ! ಕಡಿಮೆ ಬಡ್ಡಿಗೆ ಸಾಲ ಗ್ಯಾರೆಂಟಿ

ಈ ಯೋಜನೆಯ ಮೂಲಕ ಮಹಿಳೆಯರು ಹಾಗೂ ಬ್ಯುಸಿನೆಸ್ ಪ್ಲಾನ್ (Business Idea) ಹೊಂದಿರುವ ಯಾರೇ ಆದರೂ ಸರ್ಕಾರದ ಸಹಾಯ ಪಡೆಯಬಹುದು. ಆರ್ಥಿಕ ಸಹಾಯ ಸಿಗುತ್ತದೆ.

ಮುದ್ರಾ ಯೋಜನೆಯನ್ನು ಪಿಎಮ್ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೆ ತಂದಿತು. ಈ ಯೋಜನೆಯ ಮೂಲಕ ಮೊದಲಿಗೆ ನಿಮ್ಮ ಬ್ಯುಸಿನೆಸ್ ಶುರು ಮಾಡುವುದಕ್ಕೆ 10 ಲಕ್ಷ ಸಾಲ ಸಿಗುತ್ತಿತ್ತು.

ಆದರೆ ಈಗ ಸಾಲದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ವರ್ಷ 2024-25ರ ಬಜೆಟ್ ಮಂಡನೆಯಾದ ನಂತರ ಕೇಂದ್ರ ಸರ್ಕಾರವು ಈ ಲೋನ್ ನ (Loan) ಮೊತ್ತವನ್ನು ಹೆಚ್ಚಿಸಿದೆ. ಹಾಗಾಗಿ ನೀವು ಈ ಒಂದು ಲೋನ್ ಪಡೆಯಬಹುದು. ಹಾಗಿದ್ದಲ್ಲಿ ಮುದ್ರ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ.

ಚೆಕ್ ಬರೆಯುವಾಗ Only ಅಂತ ಬರೆಯೋದು ಯಾಕೆ? ಬರೆಯದೇ ಇದ್ರೆ ಏನಾಗುತ್ತೆ! ಇಲ್ಲಿದೆ ಡೀಟೇಲ್ಸ್

ಮುದ್ರಾ ಯೋಜನೆಯಲ್ಲಿ ಸಿಗಲಿದೆ 20 ಲಕ್ಷ ಸಾಲ:

ಮೊದಲಿನ ಹಾಗೆ 10 ಲಕ್ಷ ಅಲ್ಲ, ಇನ್ನುಮುಂದೆ ಮುದ್ರಾ ಯೋಜನೆಯ ಮೂಲಕ ನಿಮ್ಮ ಬ್ಯುಸಿನೆಸ್ ಶುರು ಮಾಡುವುದಕ್ಕೆ, 20 ಲಕ್ಷದವರೆಗೂ ಸಾಲ ಸೌಲಭ್ಯ ಸಿಗುತ್ತದೆ. ಇನ್ನು ನಮ್ಮ ದೇಶದ 24 ರಿಂದ 70 ವರ್ಶಗಳ ಒಳಗಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದರೆ ಅರ್ಜಿದಾರರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ ಇದಿಷ್ಟು ಮಾಹಿತಿಗಳನ್ನು ಕೊಟ್ಟು, ಮುದ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಈ ಪಕ್ಷಿ ಸಾಕಾಣಿಕೆ ಮಾಡಿದ್ರೆ ವರ್ಷಕ್ಕೆ ಬರೋಬ್ಬರಿ 300 ಮೊಟ್ಟೆ ಕೊಡುತ್ತೆ; ಲಕ್ಷ ಲಕ್ಷ ಆದಾಯ ಗಳಿಸಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಈ Loan ಪಡೆಯಲು ನೀವು ಬ್ಯಾಂಕ್ ಗೆ ಭೇಟಿ ನೀಡಿ, ಬ್ಯುಸಿನೆಸ್ ಬಗ್ಗೆ ಅಧಿಕಾರಿಗಳಿಗೆ ಪೂರ್ತಿ ಮಾಹಿತಿ ಕೊಡಬೇಕು.

*ನಿಮ್ಮ ಬ್ಯುಸಿನೆಸ್ ಪ್ಲಾನ್ ಆಧರಿಸಿ 10 ಲಕ್ಷದಿಂದ 20 ಲಕ್ಷದ ವರೆಗೂ ಸಾಲ ನೀಡಲಾಗುತ್ತದೆ.

*ನಿಮ್ಮ ಬ್ಯುಸಿನೆಸ್ ಗೆ ಅಗತ್ಯವಿರುವ 75% ಹಣ ಬ್ಯಾಂಕ್ ಇಂದ ಸಿಗುತ್ತದೆ, 25% ಹಣವನ್ನು ನಿಮ್ಮ ಕೈಯಿಂದ ಖರ್ಚು ಮಾಡಬೇಕು.

*ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಲು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.

*mudra.org.in ಈ ವೆಬ್ಸೈಟ್ ಮೂಲಕ ಅಪ್ಲಿಕೇಶನ್ ಪಡೆದು ಫಿಲ್ ಮಾಡಿ, ಅದನ್ನು ಬ್ಯಾಂಕ್ ಗೆ ಸಲ್ಲಿಸಿ ಲೋನ್ (Bank Loan) ಪಡೆಯಬಹುದು..

Such Women will get 20 lakh loan in this new scheme