ಈ ಪಕ್ಷಿ ಸಾಕಾಣಿಕೆ ಮಾಡಿದ್ರೆ ವರ್ಷಕ್ಕೆ ಬರೋಬ್ಬರಿ 300 ಮೊಟ್ಟೆ ಕೊಡುತ್ತೆ; ಲಕ್ಷ ಲಕ್ಷ ಆದಾಯ ಗಳಿಸಿ

ಪಸಂಟ್ ಪಕ್ಷಿಯ ಸಾಕಾಣಿಕೆ ನಿಮಗೆ ಲಕ್ಷಗಟ್ಟಲೇ ಲಾಭ ತಂದುಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವು ಕೂಡ ಈ ಒಂದು ಬ್ಯುಸಿನೆಸ್ ಶುರು ಮಾಡಬಹುದು.

pheasant bird business : ನಮಗೆಲ್ಲ ಗೊತ್ತಿರುವ ಹಾಗೆ ಈಗ ಹೆಚ್ಚಿನ ಜನರು ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಲು ಬಯಸುವುದಿಲ್ಲ. ಬದಲಾಗಿ ತಾವೇ ಸ್ವಂತ ಉದ್ಯೋಗ (Own Business) ಅಥವಾ ಉದ್ಯಮ ಮಾಡಿಕೊಂಡು, ಉತ್ತಮವಾಗಿ ಹಣ ಸಂಪಾದನೆ ಮಾಡಬೇಕು, ಕೆಲವು ಜನರಿಗೆ ಕೆಲಸ ಕೊಡಬೇಕು, ತಾವು ಬೆಳೆಯಬೇಕು ಎಂದು ಬಯಸುತ್ತಾರೆ.

ಅಂಥವರಿಗೆ ಅನೇಕ ಆಯ್ಕೆಗಳಿಗೆ. ಅವುಗಳ ಪೈಕಿ, ಜಾನುವಾರು ಸಾಕಾಣಿಕೆ ಒಂದು. ಕುರಿ, ಕೋಳಿ, ಹಸು, ಮೇಕೆ ಇವುಗಳ ಸಾಕಾಣಿಕೆ (Sheep, Goat, Cow Farming) ಮಾಡುವ ಮೂಲಕ ನೀವು ಹೆಚ್ಚು ಹಣ ಗಳಿಸಬಹುದು.

ಈ ಕೆಲವು ಸಾಕಾಣಿಕೆಯ ಆಯ್ಕೆಗಳ ಜೊತೆಗೆ ಮತ್ತೊಂದು ಪ್ರಮುಖವಾರ ಆಯ್ಕೆ ಇದೆ. ಇದು ಪಸಂಟ್ ಪಕ್ಷಿಗಳ ಸಾಕಾಣಿಕೆ. ಹೌದು, ಇತ್ತೀಚಿನ ದಿನಗಳಲ್ಲಿ ಈ ಪಕ್ಷಿಗಳ ಸಾಕಾಣಿಕೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಬಹಳಷ್ಟು ಜನರು ಇದರ ಮಾಂಸ ಹಾಗೂ ಮೊಟ್ಟೆಗಳನ್ನು ಪೌಷ್ಟಿಕಾಂಶಕ್ಕಾಗಿ ಸೇವನೆ ಮಾಡುತ್ತಿದ್ದಾರೆ.

If this bird is farmed, it will give 300 eggs per year, Earn lakhs of income

ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ₹5 ಲಕ್ಷ ಇಟ್ಟರೆ ಬರೋಬ್ಬರಿ ₹15 ಲಕ್ಷ ಸಿಗುತ್ತೆ! ಬಂಪರ್ ಯೋಜನೆ

ಹಾಗಾಗಿ ಪಸಂಟ್ ಪಕ್ಷಿಯ ಸಾಕಾಣಿಕೆ ನಿಮಗೆ ಲಕ್ಷಗಟ್ಟಲೇ ಲಾಭ ತಂದುಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವು ಕೂಡ ಈ ಒಂದು ಬ್ಯುಸಿನೆಸ್ ಶುರು ಮಾಡಬಹುದು.

ಈ ಪಸಂಟ್ ಪಕ್ಷಿಗಳ ಬಗ್ಗೆ ಹೇಳುವುದಾದರೆ, ಇವು ಕಾಡಿನ ಪಕ್ಷಿಗಳಾಗಿವೆ. ಈ ಪಕ್ಷಿಗಳ ಗಾತ್ರವೇ ತುಂಬಾ ಚಿಕ್ಕದಾಗಿದೆ. ಆದರೆ ಇವುಗಳು ವರ್ಷಕ್ಕೆ 250 ರಿಂದ 300 ಮೊಟ್ಟೆಗಳನ್ನು ಇಡುತ್ತವೆ. ಹಾಗೆಯೇ ಇವುಗಳ ಮಾಂಸಕ್ಕೆ ಕೂಡ ಭಾರಿ ಬೇಡಿಕೆ ಇದೆ.

ಪಸಂಟ್ ಪಕ್ಷಿಗಳ ಮಾಂಸ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದುಬಂದಿದ್ದು, ಹೆಚ್ಚಿನ ಜನರು ಈ ಪಕ್ಷಿಯ ಮಾಂಸ ಸೇವನೆ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಇದು ಈಗ ಲಾಭದಾಯಕವಾದ ಬ್ಯುಸಿನೆಸ್ ಆಗಿ ಮಾರ್ಪಾಡಾಗಿದೆ. ನಿಮ್ಮ ಮನೆ ಎದುರು ಒಂದು ಶೆಡ್ ನಿರ್ಮಿಸಿ, ಪಸಂಟ್ ಪಕ್ಷಿಯ ಸಾಕಾಣಿಕೆ ಮಾಡಬಹುದು.

ಈ ಪಕ್ಷಿಗಳ ಗಾತ್ರ ಚಿಕ್ಕದು, ಹಾಗೆಯೇ ಇವುಗಳ ಸಾಕಾಣಿಕೆಗೆ ಹೆಚ್ಚು ಕೂಡ ಬೇಕಾಗುವುದಿಲ್ಲ. ಈ ಪಕ್ಷಿಗಳು extinct ಆಗುತ್ತಿರುವ ಕಾರಣ ಇವುಗಳಿಗೆ ಹೆಚ್ಚು ಬೇಡಿಕೆ ಇದೆ. ಶುರುವಿನಲ್ಲಿ ನೀವು 10 ಪಸಂಟ್ ಪಕ್ಷಿಗಳಿಂದ ಸಾಕಾಣಿಕೆ ಶುರು ಮಾಡಬಹುದು, 10 ಪಕ್ಷಿಗಳು ಎಂದರೆ ವರ್ಷಕ್ಕೆ 3000 ಮೊಟ್ಟೆ (Eggs) ಸಿಗುತ್ತದೆ. ಇವುಗಳನ್ನು ಮಾರಾಟ ಮಾಡಿ, ಲಕ್ಷಗಟ್ಟಲೇ ಲಾಭ ಪಡೆಯಬಹುದು. ಕೋಳಿ ಮೊಟ್ಟೆಗಿಂತ ಪಸಂಟ್ ಪಕ್ಷಿ ಮೊಟ್ಟೆಗೆ ಬೆಲೆ ಜಾಸ್ತಿ ಆಗಿದೆ. ಈ ಪಕ್ಷಿಗಳ ಬೆಳವಣಿಗೆ ಕೂಡ ಬೇಗ ಆಗುತ್ತದೆ, 1 ತಿಂಗಳ ಅವಧಿಯ ಒಳಗೆ ಈ ಪಕ್ಷಿಗಳು 200 ಗ್ರಾಮ್ ತೂಕದಷ್ಟು ಬೆಳೆಯುತ್ತದೆ.

ಪ್ರತಿ ತಿಂಗಳು ಸಿಗಲಿದೆ ₹5000 ರೂಪಾಯಿ ಪೆನ್ಶನ್, ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿ

ಆದರೆ ಈ ಪಕ್ಷಿಗಳು ಕಾಡಿನ ಪಕ್ಷಿ ಆಗಿರುವುದರಿಂದ ಇವುಗಳನ್ನು ಸಾಕಲು ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕು. ಕುರಿ, ಕೋಳಿ ಅಥವಾ ಇನ್ಯಾವುದೇ ಜಾನುವಾರು ಸಾಕಾಣಿಕೆಗಿಂತ ಪಸಂಟ್ ಪಕ್ಷಿ ಸಾಕಾಣಿಕೆಗೆ ಖರ್ಚಾಗುವ ಹಣ ಕೂಡ ಕಡಿಮೆ..

ಈ ಹಕ್ಕಿಗಳ ಮಾರಾಟಕ್ಕೆ ಕೂಡ ಭಾರಿ ಬೇಡಿಕೆ ಇರುವುದರಿಂದ, ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಾರೆ, 300 ಗ್ರಾಮ್ ಇರುವ ಒಂದು ಪಕ್ಷಿಗೆ 300 ರೂಪಾಯಿಯವರೆಗು ಬೆಲೆ ಇದೆ. ಹಾಗಾಗಿ ಇದು ನಿಮಗೆ ಒಳ್ಳೆಯ ಲಾಭ ತಂದುಕೊಡುತ್ತದೆ.

If this bird is farmed, it will give 300 eggs per year, Earn lakhs of income

Related Stories