ಪ್ರತಿ ತಿಂಗಳು ಸಿಗಲಿದೆ ₹5000 ರೂಪಾಯಿ ಪೆನ್ಶನ್, ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ಈ ಒಂದು ಯೋಜನೆ ಇಂದ ಪ್ರತಿ ತಿಂಗಳು ಸಿಗಲಿದೆ ₹5000 ಪೆನ್ಶನ್! ಇಂತಹ ಚಾನ್ಸ್ ಬಿಡಬೇಡಿ!

ಕೇಂದ್ರ ಸರ್ಕಾರವು ನಮ್ಮ ದೇಶದ ಬಡಜನರು ಆರ್ಥಿಕವಾಗಿ ಅತಿಯಾಗಿ ಕಷ್ಟಪಡುವುದು ಬೇಡ ಎಂದು ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಮೂಲಕ ಪೆನ್ಶನ್ ಸೌಲಭ್ಯ ಕೊಡುವುದು ಹಾಗೂ ಇನ್ನಿತರ ಸೌಲಭ್ಯಗಳನ್ನು ಕೂಡ ಕೊಡುತ್ತಿದೆ.

ಅಂಥ ಯೋಜನೆಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲ ಆಗುವ ಹಾಗೆ ನಿವೃತ್ತಿ ನಂತರ ಪ್ರತಿ ತಿಂಗಳು ಪೆನ್ಶನ್ ಪಡೆಯಬಹುದಾದ ಯೋಜನೆ ಅಟಲ್ ಪೆನ್ಶನ್ ಯೋಜನೆ ಆಗಿದೆ.

ಈ ಒಂದು ಯೋಜನೆಯನ್ನು ಕೇಂದ್ರ ಸರ್ಕಾರವು 2015ರಲ್ಲಿ ಜಾರಿಗೆ ತಂದಿತು. ಈ ಯೋಜನೆಯ ಮೂಲಕ ಸರ್ಕಾರವು ಕಷ್ಟಪಡುತ್ತಿರುವ ಅಸಂಘಟಿತ ವಲಯದ ಕಾರ್ಮಿಕರು 60 ವರ್ಷದ ನಂತರ ಪ್ರತಿ ತಿಂಗಳು ನಿಶ್ಚಿತವಾಗಿ ಪೆನ್ಶನ್ ಪಡೆಯುವ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ.

This is a scheme where you can get 5000 every month if you invest just 7 rupees a day

ಇದಕ್ಕಾಗಿ ನೀವು ಪ್ರತಿ ತಿಂಗಳು ಕಡಿಮೆ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಬಂದರೆ, 60 ವರ್ಷದ ಬಳಿಕ ಇದರ ಸೌಲಭ್ಯ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ..

ರೈತರಿಗೆ ಮತ್ತೊಂದು ಯೋಜನೆ ಮೂಲಕ ಸಿಗಲಿದೆ 3 ಲಕ್ಷ ತನಕ ಸಾಲ! ಕಡಿಮೆ ಬಡ್ಡಿಗೆ ಬಂಪರ್ ಕೊಡುಗೆ

ಅನೌಪಚಾರಿಕ ವೃತ್ತಿ ಮಾಡುತ್ತಿರುವವರಿಗೆ ಇದು ಉತ್ತಮವಾದ ಯೋಜನೆ ಆಗಿದೆ. ಕೆಲಸ ಮಾಡುತ್ತಾ, ಚೆನ್ನಾಗಿರುವಾಗಲೇ ಇಂತಿಷ್ಟು ಮೊತ್ತ ಎಂದು ಪ್ರತಿ ತಿಂಗಳು ಕಡಿಮೆ ಹಣವನ್ನು ಸೇವ್ ಮಾಡುತ್ತಾ ಬಂದರೆ, ವಯಸ್ಸಾದ ಕಾಲಕ್ಕೆ, ನಿವೃತ್ರಿ ಹೊಂದುವ ವೇಳೆ ಯಾವುದೇ ಚಿಂತೆ ಇಲ್ಲದೇ ಇರಬಹುದು. ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷವಾದ ನಂತರ ಈ ಒಂದು ಪೆನ್ಶನ್ ಪ್ರತಿ ತಿಂಗಳು ಬರಲಿದ್ದು, ಆ ಹಣದಿಂದ ಅವರು ಕುಟುಂಬವನ್ನು ಪೋಷಿಸಬಹುದು..

18 ರಿಂದ 40 ವರ್ಷಗಳ ಒಳಗಿರುವವರು ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳು ಹಣ ಉಳಿತಾಯ ಮಾಡಬಹುದು. ನೀವು ತಿಂಗಳಿಗೆ ಎಷ್ಟು ಮೊತ್ತ ಪಾವತಿ ಮಾಡುತ್ತೀರೋ, ಅದರ ಮೇಲೆ ಪ್ರತಿ ತಿಂಗಳು ನಿಮಗೆ ಎಷ್ಟು ಪೆನ್ಶನ್ ಬರುತ್ತದೆ ಎನ್ನುವುದು ನಿರ್ಧಾರ ಆಗಲಿದೆ.

ತಿಂಗಳಿಗೆ 1000, 2000, 3000, 4000 ಮತ್ತು 5000 ರೂಪಾಯಿಗಳನ್ನು ಪೆನ್ಶನ್ ಪಡೆಯಬಹುದು. ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಭವಿಷ್ಯ ಉತ್ತಮವಾಗಿಸಿಕೊಳ್ಳಲು ಈಗಿನಿಂದಲೇ ಈ ಒಂದು ಯೋಜನೆಯಲ್ಲಿ ಹೂಡಿಕೆ ಶುರು ಮಾಡಬಹುದು.

ಮನೆಯಿಲ್ಲದ ಬಡ ಮಹಿಳೆಯರಿಗೆ ಸಿಗಲಿದೆ ಉಚಿತ ಮನೆ, ಕೇಂದ್ರದ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿ

ಪಿಎಮ್ ಅಟಲ್ ಯೋಜನೆಯಲ್ಲಿ ಹೂಡಿಕೆ ಮಾಡುವ 18 ರಿಂದ 40 ವರ್ಷಗಳ ಒಳಗಿನ ವ್ಯಕ್ತಿ, 42 ರೂಪಾಯಿ ಇಂದ 210 ರೂಪಾಯಿಗಳನ್ನು ಪಾವತಿ ಮಾಡಬೇಕು. ನಿಮಗೆ 60 ವರ್ಷ ತುಂಬುವವರೆಗೂ ಈ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.

ತಿಂಗಳಿಗೆ 210 ರೂಪಾಯಿಗಳನ್ನು ಪಾವತಿ ಮಾಡಿಕೊಂಡು ಬಂದರೆ, 60 ವರ್ಷದ ನಂತರ ಪ್ರತಿ ತಿಂಗಳು 5000 ಪೆನ್ಶನ್ ಪಡೆಯಬಹುದು. 40 ನೇ ವರ್ಷದಲ್ಲಿ ಹೂಡಿಕೆ ಶುರು ಮಾಡುವವರು ತಿಂಗಳಿಗೆ ₹1454 ರೂಪಾಯಿ ಪ್ರೀಮಿಯಂ ಕಟ್ಟಬೇಕು. ಈ ಯೋಜನೆಯಲ್ಲಿ ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿದರೆ ಒಳ್ಳೆಯದು, ಹೆಚ್ಚಿನ ಲಾಭ ಗಳಿಸಬಹುದು.

Pension of 5000 rupees per month, Apply for Central Govt Pension Scheme

Related Stories