ಹೂಡಿಕೆ ಮಾಡಲು ಬಯಸುವವರಿಗೆ ಪೋಸ್ಟ್ ಆಫೀಸ್ ಯೋಜನೆಗಳು (Post Office Scheme) ಉತ್ತಮವಾದ ಆಯ್ಕೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ನಿಮ್ಮ ಸುರಕ್ಷಿತವಾಗಿ ಇರಬೇಕು ಜೊತೆಗೆ ಒಳ್ಳೆಯ ರಿಟರ್ನ್ಸ್ ಕೂಡ ಪಡೆಯಬೇಕು ಎಂದರೆ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.
ಇಲ್ಲಿ ನಿಮಗೆ ಹೂಡಿಕೆ ಮಾಡುವುದಕ್ಕಾಗಿ, ವಿವಿಧ ಆಯ್ಕೆಗಳು ಕೂಡ ಲಭ್ಯವಿದೆ. ನಿಮ್ಮ ಹಣಕ್ಕೆ ಸರ್ಕಾರವೇ ಸುರಕ್ಷತೆ ಕೊಡುತ್ತದೆ ಎಂದರೂ ತಪ್ಪಲ್ಲ. ಹಾಗಾಗಿ ಇದು ಬೆಸ್ಟ್ ಆಪ್ಶನ್.
ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಕೆಲವು ಯೋಜನೆಗಳಲ್ಲಿ ನಿಮಗೆ ನಿಜಕ್ಕೂ ಒಳ್ಳೆಯ ರಿಟರ್ನ್ಸ್ ಸಿಗುತ್ತದೆ. ಸಾಮಾನ್ಯವಾಗಿ ಹೂಡಿಕೆ ಇಂದ ಬರುವ ಆದಾಯಕ್ಕೆ ನೀವು ಟ್ಯಾಕ್ಸ್ ಪಾವತಿ ಮಾಡಬೇಕು, ಆದರೆ ಪೋಸ್ಟ್ ಆಫೀಸ್ ನ ಕೆಲವು ಹೂಡಿಕೆಯ ಯೋಜನೆಗಳಲ್ಲಿ ಟ್ಯಾಕ್ಸ್ ಪಾವತಿ ಇಂದ ಕೂಡ ಬಿಡುಗಡೆ ಪಡೆಯಬಹುದು. ಹಾಗಾಗಿ ಇಲ್ಲಿ ಹೂಡಿಕೆ ಮಾಡುವುದು ನಿಮಗೆ ಲಾಭದಾಯಕ. ಪೋಸ್ಟ್ ಆಫೀಸ್ ನ POTD ಯೋಜನೆಯಲ್ಲಿ ಈ ಥರ ನಿಮಗೆ ಲಾಭ ಸಿಗಲಿದ್ದು, ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ.
ಪ್ರತಿ ತಿಂಗಳು ಸಿಗಲಿದೆ ₹5000 ರೂಪಾಯಿ ಪೆನ್ಶನ್, ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿ
ಪೋಸ್ಟ್ ಆಫೀಸ್ FD ಯೋಜನೆ:
ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದಾದರೆ, Fixed Deposit ಯೋಜನೆಗಳು ಒಳ್ಳೆಯ ಆಯ್ಕೆ ಆಗಿದೆ. ಇಲ್ಲಿ ನಿಮಗೆ ವಿವಿಧ ಸಮಯದ FD ಯೋಜನೆಗಳು ಜಾರಿಯಲ್ಲಿದೆ. 1 ವರ್ಷ, 2 ವರ್ಷ, 3 ವರ್ಷ ಹಾಗೂ 5 ವರ್ಷಗಳ FD ಯೋಜನೆಗಳು ಲಭ್ಯವಿದ್ದು, ಇದರಲ್ಲಿ ನೀವು ಹೂಡಿಕೆ ಮಾಡಬಹುದು.
ನಿಮ್ಮ ಹಣ ಡಬಲ್ ಆಗಬೇಕು ಎಂದರೆ, 5 ವರ್ಷಗಳ FD ಯೋಜನೆ ಉತ್ತಮವಾದ ಆಯ್ಕೆ ಆಗಿದೆ..ಈ ಅವಧಿಗೆ 7.5% ಬಡ್ಡಿದರ ಲಭ್ಯವಿದ್ದು, 5 ವರ್ಷಕ್ಕೆ ಹೂಡಿಕೆ ಮಾಡಿ, 5 ವರ್ಷ ತುಂಬುವುದರ ಒಳಗ ಮತ್ತೆ ವಿಸ್ತರಿಸಿದರೆ ನಿಮ್ಮ ಹಣ ಡಬಲ್ ಆಗುತ್ತದೆ. ಇಲ್ಲಿ ನಿಮಗೆ ತೆರಿಗೆ ಪ್ರಯೋಜನ ಕೂಡ ಸಿಗುತ್ತದೆ.
ಇಲ್ಲಿ 5 ಲಕ್ಷ ಹೂಡಿಕೆ ಮಾಡಿದ ಸಿಗುವ ಮೊತ್ತ ಎಷ್ಟು?
ಒಂದು ವೇಳೆ ನೀವು 5 ವರ್ಷಗಳ Fixed Deposit ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತೀರಿ ಎನ್ನುವುದಾದರೆ, ಈ ಯೋಜನೆಯಲ್ಲಿ ನೀವು 5 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ, 7.5% ಬಡ್ಡಿದರ ಬೀಳುತ್ತದೆ. ಜೊತೆಗೆ 5 ವರ್ಷ FD ಮುಗಿಯುವ ವೇಳೆಗೆ ₹2,24,974 ರೂಪಾಯಿಗಳು ಬಡ್ಡಿ ಮೊತ್ತವಾಗಿ ನಿಮ್ಮ ಕೈಗೆ ಸಿಗುತ್ತದೆ. ಹೀಗೆ 5 ವರ್ಷಗಳ ಅಂತ್ಯಕ್ಕೆ ಒಟ್ಟು ₹7,24,974 ರೂಪಾಯಿಗಳನ್ನು ರಿಟರ್ನ್ಸ್ ಪಡೆಯಬಹುದು.
ಮನೆಯಿಲ್ಲದ ಬಡ ಮಹಿಳೆಯರಿಗೆ ಸಿಗಲಿದೆ ಉಚಿತ ಮನೆ, ಕೇಂದ್ರದ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿ
ಇದೇ ಯೋಜನೆಯನ್ನು ನೀವು ವಿಸ್ತರಿಸುತ್ತಾ ಹೋದರೆ ಹೆಚ್ಚು ಲಾಭ ಪಡೆಯುತ್ತೀರಿ. 1 ಸಾರಿ ಇನ್ನು 5 ವರ್ಷಗಳ ಕಾಲ ವಿಸ್ತರಣೆ ಮಾಡಿದರೆ, ₹5,51,175 ರೂಪಾಯಿಗಳ ಬಡ್ಡಿದರ ಪಡೆಯುತ್ತೀರಿ. ಹೀಗೆ ನಿಮಗೆ ರಿಟರ್ನ್ಸ್ ವೇಳೆ ಒಟ್ಟು ₹10,51,175 ರೂಪಾಯಿ ರಿಟರ್ನ್ಸ್ ರೂಪದಲ್ಲಿ ಸಿಗುತ್ತದೆ.
ಇಲ್ಲಿ 15 ಲಕ್ಷ ಪಡೆಯಲು ಇನ್ನು 5 ವರ್ಷ. ಅಂದರೆ ಒಟ್ಟು 15 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. 15 ವರ್ಷ ಹೂಡಿಕೆಗೆ ₹10,24,149 ರೂಪಾಯಿಗಳು ಬಡ್ಡಿ ರೂಪದಲ್ಲಿ ಸಿಗಲಿದೆ. ಒಟ್ಟು ₹15,24,149 ರೂಪಾಯಿಗಳು ಈ ರೀತಿಯಾಗಿ ರಿಟರ್ನ್ಸ್ ಪಡೆಯಬಹುದು.
If you put 5 lakh in this scheme of post office, you will get 15 lakh
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.