ಚೆಕ್ ಬರೆಯುವಾಗ Only ಅಂತ ಬರೆಯೋದು ಯಾಕೆ? ಬರೆಯದೇ ಇದ್ರೆ ಏನಾಗುತ್ತೆ! ಇಲ್ಲಿದೆ ಡೀಟೇಲ್ಸ್
ಚೆಕ್ ಬರೆಯುವಾಗ (Cheque) ಕೆಲವು ತಪ್ಪುಗಳನ್ನು ಮಾಡಬಾರದು, ಆ ರೀತಿ ಆದಾಗ ಚೆಕ್ ಕ್ಯಾನ್ಸಲ್ ಆಗಬಹುದು. ಅಥವಾ ಚೆಕ್ ಬೌನ್ಸ್ (Cheque Bounce) ಪ್ರಕರಣಕ್ಕೆ ಕೂಡ ಸಿಕ್ಕಿಕೊಳ್ಳುವ ಹಾಗೆ ಆಗಬಹುದು.
ಈಗ ಭಾರತ ಡಿಜಿಟಲ್ ಇಂಡಿಯಾ (Digital India) ಆಗಿದೆ. ಜನರು ಸುಲಭವಾಗಿ ಯುಪಿಐ ಪೇಮೆಂಟ್ ಆಪ್ ಗಳನ್ನು (UPI Payment) ಬಳಸಿ ಹಣಕಾಸು ವರ್ಗಾವಣೆ ಮಾಡುತ್ತಿರಬಹುದು. ಈಗ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹಣಕಾಸು ವರ್ಗಾವಣೆ ಮಾಡುವುದು ಕೆಲವೇ ಕೆಲವು ಸೆಕೆಂಡ್ಸ್ ಗಳ ಕೆಲಸ. ಇದರಿಂದ ನಿಮ್ಮ ಕೆಲಸ ಇನ್ನಷ್ಟು ಸುಲಭ ಆಗಿದೆ ಎಂದರೆ ತಪ್ಪಲ್ಲ. ಆದರೆ ಕೆಲವು ಪ್ರಮುಖ ಹಣಕಾಸಿನ ಚಟುವಟಿಕೆಗಳಿಗೆ ಈಗಲೂ ಕೂಡ ಚೆಕ್ ಮೂಲಕ ವ್ಯವಹಾರ ಮಾಡಬೇಕಾಗುತ್ತದೆ.
ಆದರೆ ನೀವು ಚೆಕ್ ಕೊಡುವಾಗ ಕೆಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಚೆಕ್ ಬರೆಯುವಾಗ (Cheque) ಕೆಲವು ತಪ್ಪುಗಳನ್ನು ಮಾಡಬಾರದು, ಆ ರೀತಿ ಆದಾಗ ಚೆಕ್ ಕ್ಯಾನ್ಸಲ್ ಆಗಬಹುದು. ಅಥವಾ ಚೆಕ್ ಬೌನ್ಸ್ (Cheque Bounce) ಪ್ರಕರಣಕ್ಕೆ ಕೂಡ ಸಿಕ್ಕಿಕೊಳ್ಳುವ ಹಾಗೆ ಆಗಬಹುದು.
ಈ ಪಕ್ಷಿ ಸಾಕಾಣಿಕೆ ಮಾಡಿದ್ರೆ ವರ್ಷಕ್ಕೆ ಬರೋಬ್ಬರಿ 300 ಮೊಟ್ಟೆ ಕೊಡುತ್ತೆ; ಲಕ್ಷ ಲಕ್ಷ ಆದಾಯ ಗಳಿಸಿ
ಚೆಕ್ ಬೌನ್ಸ್ ಇಂದ ಕೋರ್ಟ್ ಗೆ ಹೋಗುವ ಹಾಗೆ ಆದರೆ, ಜೈಲು ಸೇರುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಚೆಕ್ ವಿಚಾರಕ್ಕೆ ಬಂದರೆ ನೀವು ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ. ಈ ಬಗ್ಗೆ ಇಂದು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ..
ಮೊದಲಿಗೆ ಚೆಕ್ ಬೌನ್ಸ್ ಆಗೋದು ಯಾವ ಕಾರಣಕ್ಕೆ ಎಂದು ನೋಡುವುದಾದರೆ. ಚೆಕ್ ಬರೆಯುವಾಗ ನಮ್ಮಿಂದ ಆಗುವ ಸಣ್ಣ ಪುಟ್ಟ ತಪ್ಪುಗಳೇ ಚೆಕ್ ಬೌನ್ಸ್ ಗೆ ದಾರಿ ಮಾಡಿಕೊಡಬಹುದು..ಚೆಕ್ ಬರೆಯುವಾಗ, ತಿದ್ದಿ ತಿದ್ದಿ ಬರೆಯಬಾರದು, ಹೆಸರು ಬರೆಯುವಾಗ ಕಾಟ್ ಮಾಡಿ ಬರೆಯಬಾರದು, ಮತ್ತೆ ಬರೆಯುವುದು ಮಾಡಬಾರದು.
ಒಂದು ವೇಳೆ ಇಂಥ ತಪ್ಪುಗಳು ನಡೆದರೇ ಆಗ ಚೆಕ್ ಬೌನ್ಸ್ ಆಗುವ ಸಾಧ್ಯತೆಗಳು ಇರುತ್ತದೆ. ಈ ರೀತಿ ಆದರೆ ನಿಮ್ಮ ಮೇಲೆ ಪೊಲೀಸ್ ಕೇಸ್ ದಾಖಲಾಗುವ ಸಾಧ್ಯತೆ ಸಹ ಇರುತ್ತದೆ. ಹಾಗಾಗಿ ಹುಷಾರಾಗಿರಿ.
ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ₹5 ಲಕ್ಷ ಇಟ್ಟರೆ ಬರೋಬ್ಬರಿ ₹15 ಲಕ್ಷ ಸಿಗುತ್ತೆ! ಬಂಪರ್ ಯೋಜನೆ
ಚೆಕ್ ಬರೆಯುವಾಗ Only ಎಂದು ಬರೆಯುವುದು ಯಾಕೆ?
ಯಾವುದೇ ಸಮಯದಲ್ಲಿ ನೀವು ಚೆಕ್ ಬರೆಯುವಾಗ, ಚೆಕ್ ಮೇಲೆ ಎಷ್ಟು ಮೊತ್ತ ಎಂದು ಬರೆದ ನಂತರ ಮೊದಲು ಅಂಕಿ ಅಂಶಗಳಲ್ಲಿ ಬರೆದು, ನಂತರ ಅಕ್ಷರಗಳಲ್ಲಿ ಎಷ್ಟು ಮೊತ್ತ ಎಂದು ಬರೆದ ನಂತರ Only ಅಥವಾ ಮಾತ್ರ ಎಂದು ಬರೆಯಬೇಕು.
ಇದು ಕಡ್ಡಾಯದ ನಿಯಮದ ಆಗಿದೆ, ಇದರ ಹಿಂದೆ ಒಂದು ಮುಖ್ಯವಾದ ಉದ್ದೇಶ ಇದ್ದು, ಈ ರೀತಿಯಾಗಿ ನೀವು ಮಾತ್ರ ಅಥವಾ only ಎಂದು ಬರೆಯದೇ ಹೋದರೆ, ಚೆಕ್ ಪಡೆದವರು ಅದರ ಮೇಲಿರುವ ಮೊತ್ತವನ್ನು ಜಾಸ್ತಿ ಬರೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ನೀವು ಮೋಸ ಹೋಗಬಹುದು. ಹಾಗಾಗಿ Only ಎಂದು ಬರೆಯಲೇಬೇಕು. Only ಎಂದು ಬರೆಯದೇ ಇರುವ ಚೆಕ್ ಅನ್ನು ಬ್ಯಾಂಕ್ ನಲ್ಲಿ (Bank) ಸ್ವೀಕರಿಸುವುದಿಲ್ಲ.
ಪ್ರತಿ ತಿಂಗಳು ಸಿಗಲಿದೆ ₹5000 ರೂಪಾಯಿ ಪೆನ್ಶನ್, ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿ
ಜನರು ಮೋಸ ಹೋಗಬಾರದು ಎನ್ನುವ ಕಾರಣಕ್ಕೆ RBI ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಪಾಲಿಸುವುದರಿಂದ ನೀವು ಮೋಸ ಹೋಗುವುದು ಕೂಡ ತಪ್ಪುತ್ತದೆ. ನಿಮ್ಮ ಹಣ ವ್ಯರ್ಥವಾಗಿ, ಇನ್ನೊಬ್ಬರ ಪಾಲಾಗುವುದು ಬೇಡ ಎನ್ನುವ ಕಾರಣಕ್ಕೆ RBI ಈ ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದು, ನಿಮ್ಮ ಸುರಕ್ಷತೆಗಾಗಿ ಈ ನಿಯಮಗಳನ್ನು ಪಾಲಿಸಿ.
Why write Only when writing a cheque, What happens if you don’t write