Gold Loan : ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಹಾಗೆ ನಮ್ಮ ಬದುಕಿನಲ್ಲಿ ಯಾವಾಗ ಯಾವ ರೀತಿ ಬದಲಾವಣೆ ಅಥವಾ ಸಮಸ್ಯೆಗಳು ಎದುರಾಗುತ್ತದೆ ಎಂದು ಊಹೆ ಮಾಡಿಕೊಳ್ಳೋಕೆ ಕೂಡ ಸಾಧ್ಯವಿಲ್ಲ ಎಂದು ಹೇಳಿದರೆ ಖಂಡಿತ ತಪ್ಪಲ್ಲ.
ಅಂಥ ಸಮಯದಲ್ಲಿ ತಕ್ಷಣಕ್ಕೆ ಬೇರೆಯವರ ಬಳಿ ಸಾಲ ಸಿಗೋದು ಕಷ್ಟ, ಇನ್ನು ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ (Personal Loan) ಪಡೆಯಬಹುದು. ಆದರೆ ಇದರ ಪ್ರೊಸಿಜರ್ ಗಳು ಜಾಸ್ತಿ ಇರುತ್ತದೆ. ಹಾಗೆಯೇ ನೂರೆಂಟು ಕಂಡೀಷನ್ ಗಳು ಕೂಡ ಇರುತ್ತದೆ.
ಮುಖ್ಯವಾಗಿ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿರಬೇಕು. ಅದರ ಜೊತೆಗೆ ಪರ್ಸನಲ್ ಲೋನ್ ಮೇಲೆ ಬಡ್ಡಿದರ ಕೂಡ ಜಾಸ್ತಿ ಇರುತ್ತದೆ. ಹಾಗಾಗಿ ಪರ್ಸನಲ್ ಲೋನ್ ಪಡೆಯುವುದು ಅಷ್ಟೇನು ಒಳ್ಳೆಯ ಆಪ್ಶನ್ ಅಲ್ಲ. ಆದರೆ ನಿಮಗೆ ತಕ್ಷಣವೇ ಹಣಕಾಸಿನ ಅವಶ್ಯಕತೆ ಇದೆ, ಹಣ ಬೇಕೇ ಬೇಕು ಎನ್ನುವುದಾದರೆ ನಿಮಗೆ ಮತ್ತೊಂದು ಆಯ್ಕೆ ಇದೆ.
ಚೆಕ್ ಬರೆಯುವಾಗ Only ಅಂತ ಬರೆಯೋದು ಯಾಕೆ? ಬರೆಯದೇ ಇದ್ರೆ ಏನಾಗುತ್ತೆ! ಇಲ್ಲಿದೆ ಡೀಟೇಲ್ಸ್
ಈ ರೀತಿ ಮಾಡುವ ಮೂಲಕ ನೀವು ಸುಲಭವಾಗಿ ತಕ್ಷಣವೇ ಅಗತ್ಯ ಇರುವಷ್ಟು ಸಾಲ ಪಡೆದುಕೊಳ್ಳಬಹುದು. ಈ ಲೋನ್ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ..
ಇಂದು ನಾವು ನಿಮಗೆ ಮಾಹಿತಿ ಕೊಡುತ್ತಿರುವುದು ಗೋಲ್ಡ್ ಲೋನ್ ಬಗ್ಗೆ. ಹೌದು, ನೀವು ಚಿನ್ನವನ್ನು ಅಡವಿಟ್ಟು (Gold Loan) ನಿಮಗೆ ಅಗತ್ಯ ಇರುವಷ್ಟು ಮೊತ್ತವನ್ನು ಸಾಲ ಪಡೆಯಬಹುದು. 10% ಗಿಂತ ಕಡಿಮೆ ಬಡ್ಡಿದರದಲ್ಲಿ ನಿಮಗೆ ಗೋಲ್ಡ್ ಲೋನ್ ಸಿಗುತ್ತದೆ.
ಹಾಗೆಯೇ ನೀವು ಪ್ಲೆಡ್ಜ್ ಮಾಡುವ ಚಿನ್ನ ಕೂಡ ಬ್ಯಾಂಕ್ ಲಾಕರ್ ನಲ್ಲಿ ಸುರಕ್ಷಿತವಾಗಿ ಇರುತ್ತದೆ. ಚಿನ್ನದ ಮೇಲಿನ ಸಾಲ ಅಲ್ಪಾವರಧಿ ಸಾಲ ಆಗಿದ್ದು, ಇದನ್ನು ಹೇಗೆ ಪಡೆಯುವುದು ಎನ್ನುವ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ.
ಈ ಪಕ್ಷಿ ಸಾಕಾಣಿಕೆ ಮಾಡಿದ್ರೆ ವರ್ಷಕ್ಕೆ ಬರೋಬ್ಬರಿ 300 ಮೊಟ್ಟೆ ಕೊಡುತ್ತೆ; ಲಕ್ಷ ಲಕ್ಷ ಆದಾಯ ಗಳಿಸಿ
ಗೋಲ್ಡ್ ಲೋನ್ ಗೆ ಬೇಡ ಕ್ರೆಡಿಟ್ ಸ್ಕೋರ್:
ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್ ಗಳಲ್ಲಿ ನಿಮಗೆ ಪರ್ಸನಲ್ ಲೋನ್ ಅಥವಾ ಇನ್ಯಾವುದೇ ಲೋನ್ ಪಡೆದರೂ ಕೂಡ, ನಿಮ್ಮ ಕ್ರೆಡಿಟ್ ಸ್ಕೋರ್ ಜಾಸ್ತಿ ಇರಬೇಕು. ಆದರೆ ಗೋಲ್ಡ್ ಲೋನ್ ಗೆ ಇದರ ಅಗತ್ಯವಿಲ್ಲ.
ಕ್ರೆಡಿಟ್ ಸ್ಕೋರ್ ಕಳಪೆ ಆಗಿದ್ದರೂ ಕೂಡ ಗೋಲ್ಡ್ ಲೋನ್ ಸಿಗುತ್ತದೆ. ಇಲ್ಲಿ ನೀವು ಅಲ್ಪಾವಧಿ ಸಾಲ ಪಡೆಯಲಿದ್ದೀರಿ, ಹಾಗೆಯೇ 50 ಲಕ್ಷದವರೆಗೂ ಗೋಲ್ಡ್ ಮೇಲೆ ಸಾಲ ಪಡೆಯಬಹುದು. ಸರಿಯಾದ ಸಮಯಕ್ಕೆ ಸಾಲ ಪಾವತಿ ಮಾಡಿದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಇಂಪ್ರೂವ್ ಆಗುತ್ತದೆ.. ಹಾಗೆಯೇ ಕಡಿಮೆ ಸಮಯದಲ್ಲಿ ಈ ಲೋನ್ ಸಿಗುತ್ತದೆ..
ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ₹5 ಲಕ್ಷ ಇಟ್ಟರೆ ಬರೋಬ್ಬರಿ ₹15 ಲಕ್ಷ ಸಿಗುತ್ತೆ! ಬಂಪರ್ ಯೋಜನೆ
ಗೋಲ್ಡ್ ಲೋನ್ ಗೆ ಎಷ್ಟು ಬಡ್ಡಿ?
ಇನ್ನು ಗೋಲ್ಡ್ ಲೋನ್ ಪಡೆಯುವುದಕ್ಕೆ ಬಡ್ಡಿದರ ಕಡಿಮೆ ಇರಲಿದೆ ಎಂದು ಮಾಹಿತಿ ಸಿಕ್ಕಿದ್ದು, 10 ಇಂದ 11% ವರೆಗು ಬಡ್ಡಿ ವಿಧಿಸಲಾಗುತ್ತದೆ. ಇಲ್ಲಿ ಸಾಲ ಹೇಗೆ ಕೊಡಲಾಗುತ್ತದೆ ಎಂದರೆ, ಇಲ್ಲಿ 1 ಗ್ರಾಮ್ ಅಪರಂಜಿ ಚಿನ್ನಕ್ಕೆ ₹2000 ವರೆಗು ಸಾಲ ಪಡೆಯಬಹುದು.
ಸರ್ಕಾರದ ಬ್ಯಾಂಕ್ ಗಳು ಮತ್ತು NBFT ಗಳಲ್ಲಿ ನಿಮಗೆ ಗೋಲ್ಡ್ ಲೋನ್ ಲಭ್ಯವಿರುತ್ತದೆ. ನಿಮ್ಮ ಚಿನ್ನ ಎಷ್ಟು ಶುದ್ಧವಾಗಿದೆ ಎನ್ನುವುದರ ಮೇಲೆ ಈ ಸಾಲದ ಮೊತ್ತ ನಿಗದಿ ಅಗುತ್ತದೆ ಎಂದು ಮಾಹಿತಿ ಸಿಕ್ಕಿದೆ.
If you want a gold loan, you don’t need a CIBIL score anymore
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.