ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ, ಹೊಸ ಮನೆ ಕಟ್ಟಿಕೊಳ್ಳೋಕೆ ಸಿಗುತ್ತೆ ಸಬ್ಸಿಡಿ

ಸ್ವಂತ ಮನೆ ( own house) ನಿರ್ಮಾಣ ಮಾಡುವುದಿದ್ದರೆ ಹಲವು ಬ್ಯಾಂಕ್ (Bank) ಗೃಹ ಸಾಲ (home loan) ವನ್ನು ನೀಡುತ್ತವೆ. ಗೃಹ ಸಾಲ ತೆಗೆದುಕೊಂಡು ಸುಲಭವಾಗಿ ಸ್ವಂತ ಮನೆ ನಿರ್ಮಾಣ ಮಾಡಬಹುದು.

ಇದೀಗ ಕೇಂದ್ರ ಸರ್ಕಾರ (central government) ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರು ನಿರ್ಮಾಣದ ಕನಸು ನನಸು ಮಾಡಲು ಹೊಸ ಯೋಜನೆ ಒಂದನ್ನು ಜಾರಿಗೆ ತರುತ್ತಿದ್ದು, ಲಕ್ಷಾಂತರ ಜನ ಇನ್ಮುಂದೆ ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡಬೇಕಾಗಿಲ್ಲ.

ಈ ರೀತಿ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ ಒನ್ ಟು ಡಬಲ್ ಪಿಂಚಣಿ; ಇಂದೇ ಯೋಜನೆಗೆ ಅಪ್ಲೈ ಮಾಡಿ

ಬಾಡಿಗೆದಾರರಿಗೆ ಖುಷಿ ಸುದ್ದಿ:

ಅಗಸ್ಟ್ 15 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ (pm Narendra Modi) ಅವರು ಬಾಡಿಗೆದಾರರು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಹೊಸ ನಿಯಮ ಜಾರಿಗೆ ತರುವುದಾಗಿ ಮಾಹಿತಿ ನೀಡಿದ್ದರು.

ಅದರಂತೆ ಈಗ ಸರ್ಕಾರದಿಂದ ಹೊಸ ಯೋಜನೆ ಒಂದು ಘೋಷಣೆಯಾಗಲಿದ್ದು ಇದರ ಅಡಿಯಲ್ಲಿ ನಗರ ಭಾಗದಲ್ಲಿ ಅನಧಿಕೃತ ಜಾಗದಲ್ಲಿ ಸ್ಲಮ್ ಮೊದಲಾದ ಪ್ರದೇಶದಲ್ಲಿ ಹೆಚ್ಚು ಬಾಡಿಗೆ ಕೊಟ್ಟು ಜೀವನ ನಡೆಸುತ್ತಿರುವವರು ತಮಗೆ ಸ್ವಂತ ಮನೆ ಕಟ್ಟಿಕೊಳ್ಳಲು ಈ ಯೋಜನೆ ಸಹಾಯ ಮಾಡಲಿದೆ.

ಇಂತಹ ವಿದ್ಯಾರ್ಥಿನಿಯರಿಗೆ ಸಿಗಲಿದೆ ಸ್ಕಾಲರ್ಶಿಪ್; ವರ್ಷಕ್ಕೆ ₹6 ಸಾವಿರ ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ

ವಸತಿ ಯೋಜನೆಯ ಪ್ರಯೋಜನ

Home Loan Subsidyನಗರ ಭಾಗದಲ್ಲಿ ಸುಮಾರು 2.5 ಮಿಲಿಯನ್ ಗು ಹೆಚ್ಚಿನ ಜನರಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ. ವಸತಿ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಗೃಹ ಸಾಲ (Home Loan) ತೆಗೆದುಕೊಂಡಿರುವವರಿಗೆ ಬಡ್ಡಿಯಲ್ಲಿ ಸಹಾಯಧನ ನೀಡಲಾಗುವುದು.

ಗ್ರಾಹಕರು ತೆಗೆದುಕೊಳ್ಳುವ ಗೃಹ ಸಾಲದ ಬಡ್ಡಿ ಸಹಾಯಧನಕ್ಕಾಗಿ (subsidy interest) 59,760 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ. ಇನ್ನೇನು ಸದ್ಯದಲ್ಲೇ ನಡೆಯುವ ಲೋಕಸಭಾ ಚುನಾವಣೆ ಹಾಗೂ ವಿಧಾನ ಸಭಾ ಚುನಾವಣೆಗು ಮುನ್ನ ಕೇಂದ್ರ ಸರ್ಕಾರ ಯೋಜನೆಯನ್ನು ಜಾರಿಗೆ ತಂದು ಲಕ್ಷಾಂತರ ಜನರಿಗೆ ಮನೆ ನಿರ್ಮಾಣ ಮಾಡಿಕೊಡುವ ಗುರಿ ಹೊಂದಿದೆ ಎಂದು ಸರ್ಕಾರಿ ಅಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.

ಐವತ್ತು ಲಕ್ಷಕ್ಕಿಂತ ಹೆಚ್ಚಿನ ಅಥವಾ ಕಡಿಮೆ ಸಾಲವನ್ನು ಇಪ್ಪತ್ತು ವರ್ಷಗಳ ಅವಧಿಗೆ ತೆಗೆದುಕೊಂಡರೆ ಅದರಲ್ಲಿ 9 ಲಕ್ಷ ರೂಪಾಯಿಗಳಿಗೆ 3- 6.5% ವರೆಗೆ ಬಡ್ಡಿ ಸಹಾಯಧನವನ್ನು ಸರ್ಕಾರ ನೀಡುತ್ತದೆ. ಇದನ್ನು ಫಲಾನುಭವಿಗಳಿಗೆ ಮುಂಗಡವಾಗಿ ನೀಡಲಾಗುತ್ತೆ.

ಬ್ಯಾಂಕ್ ಸಾಲ ಪಡೆದು ತೀರಿಸಲಾಗದ ಗ್ರಾಹಕರಿಗೆ ನೆಮ್ಮದಿಯ ವಿಚಾರ! ಹೊಸ ಗೈಡ್ ಲೈನ್ಸ್ ಬಿಡುಗಡೆ

50 ಲಕ್ಷಕ್ಕಿಂತ ಅಧಿಕ ಸಾಲವನ್ನು ಎರಡು ವರ್ಷಗಳ ಅವಧಿಗೆ ತೆಗೆದು ಕೊಂಡಿರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಸದ್ಯದಲ್ಲಿಯೇ ಕೇಂದ್ರ ಸರ್ಕಾರ, ಗೃಹ ಸಚಿವಾಲಯ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ.

ಮನೆಗಳ ಮೊತ್ತದ ಆಧಾರದ ಮೇಲೆ ಸಹಾಯಧನವನ್ನು ಪಡೆಯಬಹುದು. ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿ ಕೊಳಗೇರಿಯಲ್ಲಿ ಅಥವಾ ಅನಧಿಕೃತ ಜಾಗದಲ್ಲಿ ಹೆಚ್ಚು ದುಡ್ಡು ಕೊಟ್ಟು ಬದುಕುತ್ತಿರುವವರು ತಮ್ಮ ಸ್ವಂತ ಮನೆ ಕಟ್ಟಿಸಿಕೊಳ್ಳಲು ಈ ಯೋಜನೆ ಸಹಾಯಕವಾಗಲಿದೆ

ಇದನ್ನು ಮುಂದಿನ ಚುನಾವಣೆಯ (election) ಒಳಕ್ಕೆ ಜಾರಿಗೆ ತರಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 15ನೇ ತಾರೀಕಿನಂದು ತಿಳಿಸಿದ್ದರು. ವಸತಿ ಮತ್ತು ನಗರ ಅಭಿವೃದ್ಧಿ ಸಚಿವಾಲಯ ಅಥವಾ ಹಣಕಾಸು ಸಚಿವಾಲಯ ಯೋಜನೆಯ ಬಗ್ಗೆ ಇಲ್ಲಿಯವರೆಗೆ ವಿಶೇಷವಾದ ಮಾಹಿತಿಯನ್ನು ನೀಡಿಲ್ಲ.

2017ರಿಂದ 2022ರ ಅವಧಿಯಲ್ಲಿ ಕಡಿಮೆ ಆದಾಯ ಇರುವ ಬಡವರು ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು ಆ ಸಂದರ್ಭದಲ್ಲಿ 1.2 ಕೋಟಿ ಜನರಿಗೆ ಮನೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಮುಂಬರುವ ಹೊಸ ವಸತಿ ಯೋಜನೆಯ ಅಡಿಯಲ್ಲಿ ಯಾರೆಲ್ಲಾ ಯಾವ ರೀತಿ ಫಲಾನುಭವಿಗಳಾಗಬಹುದು ಎಂಬ ಹಲವು ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ.

Home Loan Subsidy Scheme

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories