ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಈ ತಪ್ಪನ್ನು ಮಾಡಬೇಡಿ! ಓನರ್ ನಿಮ್ಮ ಮೇಲೆ ಹಾಕ್ತಾರೆ ಕೇಸ್!

Story Highlights

ಬಾಡಿಗೆ ಪಡೆಯಲು ತೊಂದರೆ ಆಗುತ್ತಿದ್ದರೆ ಓನರ್ ಗಳು ಕಾನೂನಿನ ಮೊರೆ ಹೋಗಿ ಬಾಡಿಗೆ ಪಡೆದುಕೊಳ್ಳಬಹುದು.

ನಮ್ಮಲ್ಲಿ ಎಲ್ಲರ ಹತ್ತಿರವು ಸ್ವಂತ ಮನೆ (Own House) ಇರುವುದಿಲ್ಲ, ಹಲವಾರು ಜನರು ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡುತ್ತಾರೆ. ಆದರೆ ಹಲವು ಸಾರಿ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಕುಟುಂಬಕ್ಕೆ ಓನರ್ ಜೊತೆಗೆ ಜಗಳ ಆಗುತ್ತಲೇ ಇರುತ್ತದೆ.

ಅದಕ್ಕೆ ಕಾರಣ, ಬಾಡಿಗೆ ಮನೆಯವರು ಸರಿಯಾಗಿ ಬಾಡಿಗೆ ಕೊಡುವುದಿಲ್ಲ ಎನ್ನುವುದಾಗಿರುತ್ತದೆ.. ಸಮಯಕ್ಕೆ ಸರಿಯಾಗಿ ಬಾಡಿಗೆ ಕೊಡುವುದಿಲ್ಲ ಅಥವಾ ಬಾಡಿಗೆಯ ಹಣವನ್ನು ನಿರ್ಧಿಷ್ಟ ಸಮಯಕ್ಕೆ ಹೆಚ್ಚಿಸಿದಾಗ, ಅದನ್ನು ಪಾವತಿ ಮಾಡುವುದಿಲ್ಲ ಎನ್ನುವುದು ಬಹುತೇಕ ಎಲ್ಲಾ ಮನೆಯ ಓನರ್ (House Owner) ಗಳ ಸಮಸ್ಯೆ ಆಗಿದೆ.

ಒಂದು ವೇಳೆ ಮನೆಯ ಓನರ್ ಗಳಿಗೆ ಬಾಡಿಗೆ ಸರಿಯಾಗಿ ಬರುತ್ತಿಲ್ಲ ಎಂದರೆ, ಬಾಡಿಗೆದಾರರಿಂದ ಬಾಡಿಗೆ ಹಣವನ್ನು (House Rent) ಪಡೆಯಲು ಕೆಲವು ದಾರಿಗಳು ಕೂಡ ಇದೆ. ಬಾಡಿಗೆ ಪಡೆಯಲು ತೊಂದರೆ ಆಗುತ್ತಿದ್ದರೆ ಓನರ್ ಗಳು ಕಾನೂನಿನ ಮೊರೆ ಹೋಗಿ ಬಾಡಿಗೆ ಪಡೆದುಕೊಳ್ಳಬಹುದು.

ನಿಮ್ಮ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬ ಇದೆಯಾ? ಹಾಗಿದ್ರೆ ಸರ್ಕಾರ ನಿಮಗೆ ಕೊಡುತ್ತೆ ಕೈತುಂಬಾ ಹಣ

ಕಾನೂನಿನಲ್ಲಿ  ಬಾಡಿಗೆದಾರರು (Rent House Law) ಮತ್ತು ಮನೆಗಳ ಓನರ್ ಗಳಿಗಾಗಿಯೇ ಹಲವು ನಿಯಮಗಳಿವೆ.. ಅವುಗಳ ಬಗ್ಗೆ ಮಾಹಿತಿ ಪಡೆದು, ಬಾಡಿಗೆಗೆ ಇರುವವರಿಂದ ಬಾಡಿಗೆ ಹಣ ಬರುವ ಹಾಗೆ ಮಾಡಿಕೊಳ್ಳಬಹುದು.

ಒಂದು ವೇಳೆ ನಿಮ್ಮ ಮನೆಯಲ್ಲಿ ಬಾಡಿಗೆಗೆ ಇರುವವರು ಬಾಡಿಗೆ ಹಣವನ್ನು ಕೊಡುತ್ತಿಲ್ಲ ಎನ್ನುವುದಾದರೆ, ನಿಮ್ಮ ಬಾಡಿಗೆ ಹಣ ಪಡೆಯಲು ನೀವು ಮನೆ ಬಾಡಿಗೆಗೆ ಕೊಡುವಾಗ ಮಾಡಿಕೊಂಡಿರುವ ರೆಂಟ್ ಅಗ್ರಿಮೆಂಟ್ (Rent Agreement) ಬಹಳ ಮುಖ್ಯವಾಗಿ ಬೇಕಾಗುತ್ತದೆ.

Home Rent agreementರೆಂಟ್ ಅಗ್ರಿಮೆಂಟ್ ನಲ್ಲಿ ಬಾಡಿಗೆ ಬಗ್ಗೆ ಎಲ್ಲಾ ಮಾಹಿತಿ ಇರುತ್ತದೆ, ನೀವು ಕೊಟ್ಟಿರುವ ದಿನ ಯಾವುದು, ಬಾಡಿಗೆ ಕೊಡುವುದಕ್ಕೆ ಕೊನೆಯ ದಿನಾಂಕ ಯಾವುದು? ಒಂದು ವೇಳೆ ಬಾಡಿಗೆ ಪಾವತಿ ಮಾಡದೆ ಇದ್ದರೆ ಯಾವೆಲ್ಲಾ ಪರಿಣಾಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ? ಹೀಗೆ ಎಲ್ಲಾ ಮಾಹಿತಿ ಕೂಡ ರೆಂಟ್ ಅಗ್ರಿಮೆಂಟ್ ನಲ್ಲಿ ಇರುತ್ತದೆ.

ಈ ಅಗ್ರಿಮೆಂಟ್ ನ ಪ್ರಕಾರ ನಿಮ್ಮ ಮನೆಯಲ್ಲಿ ಬಾಡಿಗೆಗೆ ಇರುವವರು ಬಾಡಿಗೆ ಕೊಡದೆ ಇದ್ದ ವೇಳೆ ಅವರಿಗೆ ನೀವು ಕಾನೂನಾತ್ಮವಾಗಿ ನೋಟೀಸ್ (Legal Notice) ಕೂಡ ಕಳಿಸಬಹುದು.

LIC ಮತ್ತೊಂದು ಹೊಸ ಯೋಜನೆ.. ಕೇವಲ ₹250 ಹೂಡಿಕೆ ಮಾಡಿದ್ರೆ ಸಾಕು ₹52 ಲಕ್ಷ ಆದಾಯ! ಕಡಿಮೆ ಹೂಡಿಕೆ ಹೆಚ್ಚು ಲಾಭ

ನೀವು ಕಳಿಸುವ ನೋಟಿಸ್ ನಲ್ಲಿ ಎಷ್ಟು ಸಮಯದ ಬಾಡಿಗೆ ಪಾವತಿ ಮಾಡಿಲ್ಲ? ಬಾಡಿಗೆ ಪಾವತಿಯ ಗಡುವಿನ ಸಮಯ, ಹಾಗೂ ಅನುಸರಣೆಯ ಪರಿಣಾಮ ಇದೆಲ್ಲವೂ ಸಹ ಇರಬೇಕು. ಈ ಎಲ್ಲವೂ ಸಹ 1872ರ ಕಾಯ್ದೆಯ ಅಡಿಯಲ್ಲಿ ಉಲ್ಲೇಖಿಸಲಾಗಿರುವ ಎಲ್ಲಾ ಸೂಚನೆಗಳನ್ನು ಪಾಲಿಸಿರಬೇಕು.

ಬಾಡಿಗೆದಾರರಿಗೆ ಲೀಗಲ್ ನೋಟಿಸ್ ಕಳಿಸಿದ ನಂತರ ಕೂಡ ಬಾಡಿಗೆದಾರರು ಬಾಡಿಗೆ ಹಣವನ್ನು ಪಾವತಿ ಮಾಡದೆ ಹೋದರೆ, ಆಗ ಅವರ ಮೇಲೆ ನೀವು ಕೋರ್ಟ್ ನಲ್ಲಿ ಕೇಸ್ ದಾಖಲಿಸಬಹುದು.

ಕೇಸ್ ಆರಂಭದಲ್ಲಿ ಕೆಳಗಿನ ಕೋರ್ಟ್ ನಲ್ಲಿ ನಿಮ್ಮ ಕೇಸ್ ನಡೆಯುತ್ತದೆ. ಒಂದು ವೇಳೆ ನೀವು ಬಾಡಿಗೆ ಪಡೆಯುವ ಅರ್ಹತೆ ಹೊಂದಿದ್ದರೆ, ಹಾಗೆಯೇ ಅಗ್ರಿಮೆಂಟ್ ನಲ್ಲಿರುವ ಎಲ್ಲಾ ಷರತ್ತುಗಳನ್ನು (Rent Agreement Rules)ನೀವು ಪೂರೈಸಿದ್ದು ನಿಮ್ಮ ತಪ್ಪಿಲ್ಲ ಎಂದು ಸಾಬೀತಾದರೆ, ಕೋರ್ಟ್ ನಿಮ್ಮ ಪರವಾಗಿ ತೀರ್ಪು ಕೊಡುತ್ತದೆ.

ಚಿನ್ನದ ಬೆಲೆ ಏಕಾಏಕಿ 20% ಕಡಿತ, ಬೆಳ್ಳಿ ಬೆಲೆ 200 ರೂಪಾಯಿ ಏರಿಕೆ! ಚಿನ್ನ ಖರೀದಿಗೆ ಇದುವೇ ಒಳ್ಳೆಯ ಸಮಯ

Home Rent agreement rules latest news

Related Stories