ಈ ಬೈಕ್ ಗೆ ಭಾರೀ ಡಿಮ್ಯಾಂಡ್! ₹5 ಸಾವಿರ ಕಟ್ಟಿ ಸಾಕು, ಮಸ್ತ್ ಮೈಲೇಜ್ ಕೊಡುತ್ತೆ - Honda Unicorn Bike

ಹೋಂಡಾ ಯುನಿಕಾರ್ನ್ ಬೈಕ್ ಈಗ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಂಡಿದೆ. ಕೇವಲ ₹5,000 EMI ಕಟ್ಟಿ ಪಡೆಯಬಹುದಾದ ಈ ಬೈಕ್, 60 ಕಿಮೀ ಮೈಲೇಜ್ ಹಾಗೂ ದೀರ್ಘ ರೇಂಜ್‌ಗಾಗಿ ಖ್ಯಾತವಾಗಿದೆ.

  • ಹೋಂಡಾ ಯುನಿಕಾರ್ನ್‌ಗೆ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್
  • ಲೀಟರ್‌ಗೆ 60 ಕಿಮೀ ಮೈಲೇಜ್, 780 ಕಿಮೀ ರೇಂಜ್
  • ತಿಂಗಳಿಗೆ ₹5,000 ಕಟ್ಟಿ ಬೈಕ್ ಖರೀದಿ ಸಾಧ್ಯ

Honda Unicorn Bike : ಬೆಂಗಳೂರು ಸೇರಿದಂತೆ ದೇಶದಾದ್ಯಂತ ಹೋಂಡಾ ಯುನಿಕಾರ್ನ್‌ಗಾಗಿ ಗ್ರಾಹಕರಲ್ಲಿ ಹೆಚ್ಚಿನ ಆಸಕ್ತಿ ಇದೆ. ಈ ಬೈಕ್ ಖರೀದಿಸಲು ಸಂಪೂರ್ಣ ಹಣ ತಕ್ಷಣ ನೀಡುವ ಅವಶ್ಯಕತೆ ಇಲ್ಲ.

ಕೇವಲ ₹10,000 ಡೌನ್ ಪೇಮೆಂಟ್ ನೀಡಿ, ಉಳಿದ ₹1.34 ಲಕ್ಷವನ್ನು 9% ಬಡ್ಡಿ ದರದೊಂದಿಗೆ (Bike Loan) 3 ವರ್ಷಗಳ ಅವಧಿಯಲ್ಲಿ EMI ರೂಪದಲ್ಲಿ ಪಾವತಿಸಬಹುದು. ತಿಂಗಳಿಗೆ ಸುಮಾರು ₹5,000 EMI ಕಟ್ಟಬೇಕಾಗುತ್ತೆ.

ಇದನ್ನೂ ಓದಿ: ಚಿನ್ನದ ಬೆಲೆ ಕಡಿಮೆ ಆಗಿದ್ದೇ ತಡ, ಮಹಿಳೆಯರಿಗೆ ಖುಷಿಯೋ ಖುಷಿ! ಇಲ್ಲಿದೆ ಇಂದಿನ ಗೋಲ್ಡ್ ರೇಟ್

ಮೈಲೇಜ್ ಮತ್ತು ರೇಂಜ್

ಈ ಬೈಕ್‌ನ ಪ್ರಮುಖ ಆಕರ್ಷಣೆ ಮೈಲೇಜ್. ARAI ಪ್ರಕಾರ, ಹೋಂಡಾ ಯುನಿಕಾರ್ನ್ ಲೀಟರ್‌ಗೆ 60 ಕಿಮೀ ಮೈಲೇಜ್ ನೀಡುತ್ತದೆ. 13 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿರುವುದರಿಂದ, ಫುಲ್ ಟ್ಯಾಂಕ್‌ನಲ್ಲಿ ಸುಮಾರು 780 ಕಿಮೀ ದೂರ ಪ್ರಯಾಣಿಸಬಹುದು. ಇದು ನಗರದಲ್ಲೂ, ದೀರ್ಘ ಪ್ರಯಾಣಗಳಲ್ಲೂ ಸಮಾನವಾಗಿ ಬಳಸಲು ಸೂಕ್ತ.

ಫೀಚರ್ಸ್ ಮತ್ತು ಎಂಜಿನ್ ಪರ್ಫಾರ್ಮೆನ್ಸ್

Honda Unicorn Bike

ಹೋಂಡಾ ಯುನಿಕಾರ್ನ್‌ನಲ್ಲಿ LED ಹೆಡ್‌ಲೈಟ್, ಸಿಂಗಲ್ ಚಾನೆಲ್ ABS, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಿವಿಧ ಬಣ್ಣಗಳ ಆಯ್ಕೆ, ಹಾಗೂ ಸುಲಭ ಕುಳಿತುಕೊಳ್ಳುವ ಸೀಟಿಂಗ್ ವ್ಯವಸ್ಥೆ ಇದೆ.

ಇದನ್ನೂ ಓದಿ: ಕೇವಲ ₹10 ಸಾವಿರಕ್ಕೆ ಎಲೆಕ್ಟ್ರಿಕ್ ಸ್ಕೂಟರ್, ಬ್ಬರೊಬ್ಬರಿ 160 ಕಿ.ಮೀ ಮೈಲೇಜ್ ಕೊಡುತ್ತೆ

162.71cc ಸಿಂಗಲ್-ಸಿಲಿಂಡರ್, 4-ಸ್ಟ್ರೋಕ್ BS-VI ಎಂಜಿನ್ ಹೊಂದಿರುವ ಇದು, 13 bhp ಪವರ್ ಮತ್ತು 14.58 Nm ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುಯಲ್ ಗಿಯರ್‌ಬಾಕ್ಸ್ ಜೋಡಣೆಗೊಂಡಿರುವ ಈ ಬೈಕ್ ಗರಿಷ್ಠ 106 ಕಿಮೀ/ಗಂ ವೇಗ ತಲುಪುತ್ತದೆ.

ಮಾರುಕಟ್ಟೆಯಲ್ಲಿ ಸ್ಪರ್ಧೆ

ಹೋಂಡಾ ಯುನಿಕಾರ್ನ್ TVS Apache RTR 160, ಬಜಾಜ್ ಪಲ್ಸರ್ 150 ಸೇರಿದಂತೆ ಜನಪ್ರಿಯ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ನೀಡುತ್ತಿದೆ. ಬೆಲೆ, ಮೈಲೇಜ್ ಹಾಗೂ ನಂಬಿಕೆ ಎಲ್ಲಾ ಸೇರಿ, ಗ್ರಾಹಕರಲ್ಲಿ ಹೆಚ್ಚಿನ ಮನ್ನಣೆ ಪಡೆದಿದೆ..

Honda Unicorn Bike demand skyrockets

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories