ಮಾರುಕಟ್ಟೆಗೆ ಲಗ್ಗೆ ಇಟ್ಟ ಹೋಂಡಾ ಎಲೆಕ್ಟ್ರಿಕ್ ಬೈಕ್: 200 ಕಿಲೋ ಮೀಟರ್ ರೇಂಜ್, ಇಷ್ಟು ಕಡಿಮೆ ಬೆಲೆಗೆ!

ಹೋಂಡಾ ಎಕ್ಸ್ ಬ್ಲೇಡ್ ಎಲೆಕ್ಟ್ರಿಕ್ ಬೈಕ್ (Honda X-Blade Electric bike) ಹೆಚ್ಚು ವೈಶಿಷ್ಟ್ಯತೆಗಳನ್ನು ಹೊಂದಿದೆ. ಹೊಸ ಫೀಚರ್ ಗಳನ್ನು ಕೂಡ ಅಳವಡಿಸಲಾಗಿದ್ದು ಇದರ ವಿನ್ಯಾಸವು ಕೂಡ ಅಷ್ಟೇ ಉತ್ತಮವಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್ ಬೈಕ್ (Electric Bike) ಗಳದ್ದೇ ಹವಾ. ಪೆಟ್ರೋಲ್ (Petrol) ಚಾಲಿತ ಬೈಕುಗಳು ತಿಂಗಳ ವೆಚ್ಚದಲ್ಲಿ ಹೆಚ್ಚು ದುಬಾರಿ ಆಗುತ್ತಿರುವ ಕಾರಣ ಎಲೆಕ್ಟ್ರಿಕ್ ಬೈಕ್ ಗಳತ್ತ ಜನರು ಮುಗಿಬಿದ್ದಿದ್ದಾರೆ.

ಎಲೆಕ್ಟ್ರಿಕ್ ಬೈಕ್ ಗಳ ಬೇಡಿಕೆ ಆಗುತ್ತಿದ್ದಂತೆ ಎಲ್ಲಾ ಮೋಟಾರ್ ಕಂಪನಿಗಳು (Motor Company) ಕೂಡ ಪೈಪೋಟಿಯಲ್ಲಿ ಉತ್ತಮವಾದ ಎಲೆಕ್ಟ್ರಿಕಲ್ ಬೈಕ್ ತಯಾರಿಸುತ್ತಿವೆ. ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುತ್ತಿದೆ ಹಾಗಾಗಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಇದೀಗ ಹೋಂಡಾ ಕಂಪನಿ (Honda company) ತನ್ನ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ನೊಂದಿಗೆ ಮಾರುಕಟ್ಟೆಗೆ ಬರಲಿದೆ.

ಈ ಬ್ಯುಸಿನೆಸ್ ಗೆ ಬಂಡವಾಳವಲ್ಲ, ನಿಮ್ಮ ಕೈಚಳಕ ಬೇಕು; ಅತಿ ಕಡಿಮೆ ಹಣ ಹಾಕಿದ್ರೆ ತಿಂಗಳಿಗೆ ಲಕ್ಷ ಲಕ್ಷ ಲಾಭ ಫಿಕ್ಸ್!

ಮಾರುಕಟ್ಟೆಗೆ ಲಗ್ಗೆ ಇಟ್ಟ ಹೋಂಡಾ ಎಲೆಕ್ಟ್ರಿಕ್ ಬೈಕ್: 200 ಕಿಲೋ ಮೀಟರ್ ರೇಂಜ್, ಇಷ್ಟು ಕಡಿಮೆ ಬೆಲೆಗೆ! - Kannada News

ಹೋಂಡಾ ಬೈಕ್ ನ ಕ್ರೇಜ್ ಹಿಂದಿನಿಂದಲೂ ಇದೆ. ಅತ್ಯುತ್ತಮವಾದ ಕಾರ್ಯಕ್ಷಮತೆಯುಳ್ಳ ಬೈಕ್ ಗಳನ್ನು ತಯಾರಿಸಿ ತನ್ನ ಗ್ರಾಹಕರಿಗೆ ನೀಡಿದೆ ಹೋಂಡಾ! ಇದೀಗ ಅತ್ಯುತ್ತಮವಾದ ಎಲೆಕ್ಟ್ರಿಕ್ ಬೈಕ್ ಕೂಡ ಬಿಡುಗಡೆ ಮಾಡಲಿದ್ದು, ಆ ಬಗ್ಗೆ ಇಲ್ಲಿದೆ ಸಂಪೂರ್ಣ ಡೀಟೇಲ್ಸ್.

ಹೋಂಡಾ ಎಕ್ಸ್ ಬ್ಲೇಡ್ ಎಲೆಕ್ಟ್ರಿಕ್ ಬೈಕ್: (Honda X-Blade Electric bike)

ಹೋಂಡಾ ಕಂಪನಿ ತಯಾರಿಸಿರುವ ಈ ಬೈಕ್ 4500 ವ್ಯಾಟ್ ಮೋಟಾರ್ ನಲ್ಲಿ ಚಲಿಸುತ್ತದೆ. 12Kw ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು ಈ ಬೈಕ್ ಒಮ್ಮೆ ಚಾರ್ಜ್ ಮಾಡಲು 7 ಗಂಟೆ 30 ನಿಮಿಷಗಳು ಮಾತ್ರ ಸಾಕು.

ಪತ್ನಿ ಹೆಸರಿನಲ್ಲೇ ಚಿನ್ನ ಖರೀದಿ ಮಾಡಿದ್ರೂ ಭರಿಸಬೇಕಾ ಹೆಚ್ಚುವರಿ ಟ್ಯಾಕ್ಸ್; ಏನನ್ನುತ್ತೆ ತೆರಿಗೆ ನಿಯಮ?

ಹೋಂಡಾ ಎಕ್ಸ್ ಬ್ಲೇಡ್ ಎಲೆಕ್ಟ್ರಿಕ್ ಬೈಕ್ ವೈಶಿಷ್ಟ್ಯತೆ:

Honda X-Blade Electric bikeಹೋಂಡಾ ಎಕ್ಸ್ ಬ್ಲೇಡ್ ಎಲೆಕ್ಟ್ರಿಕ್ ಬೈಕ್ (Honda X-Blade Electric bike) ಹೆಚ್ಚು ವೈಶಿಷ್ಟ್ಯತೆಗಳನ್ನು ಹೊಂದಿದೆ. ಹೊಸ ಫೀಚರ್ ಗಳನ್ನು ಕೂಡ ಅಳವಡಿಸಲಾಗಿದ್ದು ಇದರ ವಿನ್ಯಾಸವು ಕೂಡ ಅಷ್ಟೇ ಉತ್ತಮವಾಗಿದೆ. ಹ್ಯಾಲೋಜನ್ ಎಲ್ ಇ ಡಿ ಲೈಟ್ ಗಳನ್ನು ಮುಂಭಾಗದಲ್ಲಿ ಅಳವಡಿಸಲಾಗಿದ್ದು, ಬೈಕ್ ನ ಲುಕ್ ಅನ್ನು ಹೆಚ್ಚಿಸುತ್ತದೆ.

ನಾಲ್ಕು ಬಣ್ಣಗಳಲ್ಲಿ ಈ ಬೈಕ್ ಲಭ್ಯವಿದೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ಕೂಡ ಹೋಂಡಾ ಹೆಚ್ಚು ಮುತುವರ್ಜಿಯಿಂದ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿದೆ. ಉತ್ತಮ ಬ್ರೇಕಿಂಗ್ ಸಿಸ್ಟಮ್ ಕೂಡ ಅಳವಡಿಸಲಾಗಿದ್ದು ಇನ್ಫೋಟೈನ್ಮೆಂಟ್ ಸಿಸ್ಟಮ್ ಲಭ್ಯವಿದೆ.

ಬ್ಯಾಟರಿ ಇಂಡಿಕೇಟರ್, ರೀಡಿಂಗ್ ಮೋಡ್, ನ್ಯಾವಿಗೇಶನ್, ಮೊಬೈಲ್ ಕನೆಕ್ಟಿವಿಟಿ ಜೊತೆಗೆ ಸರ್ವಿಸ್ ರಿಮೈಂಡರ್ ಕೂಡ ಈ ಬೈಕ್ ನಲ್ಲಿ ಕೊಡಲಾಗಿದೆ.

ರೈತರು ಇಷ್ಟೇ ಇಷ್ಟು ಜಮೀನು ಹೊಂದಿದ್ರೂ ಸಾಕು, ಪ್ರತಿ ತಿಂಗಳು ಸಿಗಲಿದೆ 3,000! ಮಧ್ಯರಾತ್ರಿಯಿಂದಲೇ ಜಾರಿ!

ಹೋಂಡಾ ಎಕ್ಸ್ ಬ್ಲೇಡ್ ಎಲೆಕ್ಟ್ರಿಕ್ ಬೈಕ್ ಬೆಲೆ ಮತ್ತು ಮೈಲೇಜ್

ಅತ್ಯುತ್ತಮವಾದ ಕಾರ್ಯಕ್ಷಮತೆಯುಳ್ಳ ಬೈಕ್ ನಲ್ಲಿ 150 ರಿಂದ 150 ಕಿಲೋ ಮೀಟರ್ ರೇಂಜ್ /ವ್ಯಾಪ್ತಿ ಪಡೆಯಬಹುದು. ಇನ್ನು ಇದರ ಎಕ್ಸ್ ಶೋರೂಮ್ ಬೆಲೆಯನ್ನು ನೋಡುವುದಾದರೆ ಸುಮಾರು 2 ಲಕ್ಷ ರೂಪಾಯಿಗಳಿಂದ ಆರಂಭವಾಗಬಹುದು.

ಸದ್ಯದಲ್ಲಿಯೇ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಎಕ್ಸ್ ಬ್ಲೇಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಲಿದ್ದು ಈಗಾಗಲೇ ಲಭ್ಯವಿರುವ ಎಲೆಕ್ಟ್ರಿಕ್ ಬೈಕ್ ಗಳಿಗೆ ನೇರವಾಗಿ ಪೈಪೋಟಿ ನೀಡಲಿದೆ.

Honda X-Blade Electric bike on Road Price, Mileage, Features

Follow us On

FaceBook Google News

Honda X-Blade Electric bike on Road Price, Mileage, Features