ಈ ಬ್ಯುಸಿನೆಸ್ ಗೆ ಬಂಡವಾಳವಲ್ಲ, ನಿಮ್ಮ ಕೈಚಳಕ ಬೇಕು; ಅತಿ ಕಡಿಮೆ ಹಣ ಹಾಕಿದ್ರೆ ತಿಂಗಳಿಗೆ ಲಕ್ಷ ಲಕ್ಷ ಲಾಭ ಫಿಕ್ಸ್!
ಬೆಳಿಗ್ಗೆಯಿಂದ ಸಂಜೆ ತನಕ ಜಾಬ್ (Job) ಸಾಕಾಗಿದೆ ಎನ್ನಿಸಿ ನಿಮಗೂ ಕೂಡ ಸ್ವಂತ ಬ್ಯುಸಿನೆಸ್ (Own Business) ಮಾಡಬೇಕು ಅಂತ ಇದ್ರೆ ಇಲ್ಲಿದೆ ಒಂದು ಒಳ್ಳೆಯ ಐಡಿಯಾ (Business Idea).
ಸಾಕಷ್ಟು ಜನರಿಗೆ ಯಾವುದಾದರೂ ಕಂಪನಿಯಲ್ಲಿ ಉದ್ಯೋಗ ಮಾಡುವುದು ಬೇಸರ, ಬೆಳಿಗ್ಗೆಯಿಂದ ಸಂಜೆ ತನಕ ಜಾಬ್ (Job) ಸಾಕಾಗಿದೆ ಎನ್ನಿಸಿ ನಿಮಗೂ ಕೂಡ ಸ್ವಂತ ಬ್ಯುಸಿನೆಸ್ (Own Business) ಮಾಡಬೇಕು ಅಂತ ಇದ್ರೆ ಇಲ್ಲಿದೆ ಒಂದು ಒಳ್ಳೆಯ ಐಡಿಯಾ (Business Idea).
ಹೌದು ಸಾಮಾನ್ಯವಾಗಿ ಬ್ಯುಸಿನೆಸ್ ಮಾಡಬೇಕು ಅಂತ ಈಗಿನ ಯುವಕರು ಹೆಚ್ಚು ಇಷ್ಟಪಡುತ್ತಾರೆ, ಆದರೆ ಎಲ್ಲಾ ಬ್ಯುಸಿನೆಸ್ ಮಾಡುವುದು ಅಷ್ಟು ಸುಲಭವಲ್ಲ. ಸ್ವಂತ ಉದ್ಯೋಗ ಆರಂಭಿಸಲು ಹೆಚ್ಚು ಬಂಡವಾಳ (Investment) ಕೂಡ ಬೇಕಾಗಿರುತ್ತೆ.
ಆದರೂ ಅತಿ ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭ ಗಳಿಸುವಂತಹ ಹಾಗೂ ಜನರು ಸಾರ್ವಕಾಲಿಕವಾಗಿ ಇಷ್ಟಪಡುವಂತಹ ಈ ಒಂದು ಬ್ಯುಸಿನೆಸ್ ನೀವು ಮಾಡಬಹುದು. ಅದು ಯಾವ ಉದ್ಯಮ? ಯಾವ ರೀತಿಯ ಲಾಭ ಬರುತ್ತದೆ ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.
ಬಾಯಲ್ಲಿ ಇಟ್ರೆ ಕರಗುವಂತಹ ಈ ವಸ್ತು ತಂದುಕೊಡಬಹುದು ಲಕ್ಷ ಆದಾಯ
ಐಸ್ ಕ್ರೀಮ್ (Ice crem Business) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಅದರಲ್ಲೂ ಮಾರುಕಟ್ಟೆಯಲ್ಲಿ ಐಸ್ ಕ್ರೀಮ್ ಗೆ ಎಲ್ಲಾ ಕಾಲದಲ್ಲಿಯೂ ಬೇಡಿಕೆ ಇದ್ದೇ ಇರುತ್ತೆ. ಮಳೆಗಾಲದಲ್ಲಿ ಸ್ವಲ್ಪ ಬೇಡಿಕೆ ಕಡಿಮೆ ಇರಬಹುದು, ಆದರೆ ಐಸ್ ಕ್ರೀಮ್ ಬ್ಯುಸಿನೆಸ್ ವರ್ಷದ 365 ದಿನಗಳು ಕೂಡ ನಡೆಯುವಂತಹ ಉದ್ಯಮವಾಗಿದೆ. ಹಾಗಾಗಿ ನೀವು ಅತಿ ಕಡಿಮೆ ವಸ್ತುಗಳನ್ನು ಇಟ್ಟುಕೊಂಡು ಈ ಬ್ಯುಸಿನೆಸ್ ಆರಂಭಿಸಬಹುದು.
ಐಸ್ ಕ್ರೀಮ್ ಬ್ಯುಸಿನೆಸ್ ಗೆ ಬೇಕಾಗಿರುವ ಹೂಡಿಕೆ ಹಾಗೂ ವಸ್ತು
ನೀವು ಐಸ್ ಕ್ರೀಮ್ ತಯಾರಿಸುವ ಬ್ಯುಸಿನೆಸ್ ಆರಂಭಿಸುವುದಾದರೆ ಇದಕ್ಕೆ ಕೆಲವು ಯಂತ್ರೋಪಕರಣಗಳು, ರೆಫ್ರಿಜರೇಟರ್ ಹಾಗೂ ಮಾರ್ಕೆಟಿಂಗ್ ವಸ್ತುಗಳು ಬೇಕಾಗಬಹುದು. ಇನ್ನು ಐಸ್ ಕ್ರೀಮ್ ಉದ್ಯಮವನ್ನು ಸಣ್ಣ ಪ್ರಮಾಣದಲ್ಲಿ ಆರಂಭಿಸಲು 60 ಸಾವಿರ ರೂಪಾಯಿಗಳಿಂದ ಎರಡು ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಿದ್ರೆ ಸಾಕು.
ಇದರಲ್ಲಿ ಬೇಕಾಗಿರುವ ಮೂಲಭೂತ ಅವಶ್ಯಕತೆಗಳನ್ನು ನೀವು ಪೂರೈಸಿಕೊಳ್ಳಬಹುದು. ಇನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸುವುದಾದರೆ 3 ಲಕ್ಷದಿಂದ 15 ಲಕ್ಷ ರೂಪಾಯಿಗಳ ವರೆಗೂ ಕೂಡ ಹೂಡಿಕೆ ಮಾಡಿ ಈ ಉದ್ಯಮ ಆರಂಭಿಸಬಹುದು.
ಯಾವುದೇ ಉದ್ಯಮ ಆರಂಭಿಸುವುದು ಅಂದರೆ ಅದರಲ್ಲಿ ಲಾಭ ಇರಲೇಬೇಕು, ನೀವು ಸಣ್ಣ ಪ್ರಮಾಣದಲ್ಲಿ ಐಸ್ ಕ್ರೀಮ್ ಬ್ಯುಸಿನೆಸ್ ಆರಂಭಿಸಿದರೆ 45,000 ಗಳಿಂದ 1.25 ಲಕ್ಷ ರೂಪಾಯಿಗಳ ವರೆಗೂ ಕೂಡ ಲಾಭ ಮಾಡಬಹುದು.
ನೀವು ನಿಮ್ಮ ಉದ್ಯಮದಲ್ಲಿ ಸ್ವಲ್ಪ ಸ್ಮಾರ್ಟ್ ಆಗಿರುವುದು ಕೂಡ ಬಹಳ ಮುಖ್ಯ. ಮಾರ್ಕೆಟ್ ನಲ್ಲಿ ಇರುವುದಕ್ಕಿಂತ ಸ್ವಲ್ಪ ವಿಭಿನ್ನವಾದ ಉತ್ತಮವಾಗಿರುವ ಫ್ಲೇವರ್ ನ ಐಸ್ ಕ್ರೀಮ್ ತಯಾರಿಸಿ ಕೊಡಬಹುದು. ನಿಮ್ಮದೇ ಬ್ರಾಂಡ್ (Own Brand) ಕೂಡ ಕ್ರಿಯೇಟ್ ಮಾಡಿಕೊಂಡರೆ ಸುಲಭವಾಗಿ 2 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ಆದಾಯ ಪ್ರತಿ ತಿಂಗಳು ಗಳಿಸಬಹುದು.
ಐಸ್ ಕ್ರೀಮ್ ಉದ್ಯಮದಲ್ಲಿ (Ice Cream Business) 15 ರಿಂದ 35% ವರೆಗೂ ಆದಾಯದ ಮೇಲೆ ಲಾಭ ಪಡೆದುಕೊಳ್ಳಬಹುದು. ಆದರೆ ಐಸ್ ಕ್ರೀಮ್ ನಲ್ಲಿ ಬಳಸುವ ಹಲವು ವಸ್ತುಗಳು ಹಾಳಾಗುವಂತಹ ಆಹಾರ ಪದಾರ್ಥಗಳಾಗಿರುವುದರಿಂದ ನೀವು ಬಹಳ ಮುತುವರ್ಜಿಯಿಂದ ವೆಚ್ಚ ನಿಯಂತ್ರಣ ಮಾಡಬೇಕಾಗುತ್ತದೆ.
ಈ ಉದ್ಯಮದಲ್ಲಿ ಹೆಚ್ಚು ಅನುಭವ ಬರುತ್ತಿದ್ದಂತೆ ನಿಮಗೆ ಇನ್ನೂ ಹೆಚ್ಚಿನ ಲಾಭಗಳಿಸಿಕೊಳ್ಳಲು ಸಾಧ್ಯ. ಒಂದು ಚಿಕ್ಕ ಸ್ಥಳದಲ್ಲಿ ಆರಂಭಿಸಬಹುದಾದ ಈ ಉದ್ಯಮವನ್ನು ಜನಸಂದಣಿ ಇರುವ ಪ್ರದೇಶದಲ್ಲಿ ಆರಂಭಿಸಿದರೆ ಒಳ್ಳೆಯದು.
Earn 2 Lakh Every Month in This Best Business Idea
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Earn 2 Lakh Every Month in This Best Business Idea