ವಸತಿ ಯೋಜನೆ! ಬಡವರ ಸ್ವಂತ ಮನೆ ಕಟ್ಟುವ ಕನಸು ನನಸಾಗುವ ಕಾಲ ಬಂತು
ಕೇಂದ್ರ ಸರ್ಕಾರ (central government) ಹಾಗೂ ರಾಜ್ಯ ಸರ್ಕಾರಗಳು (state government) ದೇಶದಲ್ಲಿ ವಾಸಿಸುವ ಜನರಿಗೆ ಸ್ವಂತ ಸೂರು (own house) ನಿರ್ಮಿಸಿ ಕೊಡುವ ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತಂದಿವೆ.
ಪ್ರಧಾನಮಂತ್ರಿಯ ಆವಾಸ್ ಯೋಜನೆ (PM aawas Yojana) ಇರಬಹುದು ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi housing scheme) ಇರಬಹುದು, ಹೀಗೆ ಬೇರೆ ಬೇರೆ ಯೋಚನೆಗಳ ಮೂಲಕ ಬಡವ ಹಾಗೂ ಹಿಂದುಳಿದ ಕುಟುಂಬಗಳಿಗೆ ಅನುಕೂಲವಾಗುವಂತೆ ಸ್ವಂತ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ.
ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದೆ ಇದ್ರೆ ಭಾರೀ ದಂಡ!
ಇದೀಗ ಸುಮಾರು ಒಂದು ಲಕ್ಷ ಮನೆಗಳ ದರ ಇಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ (financially backward class family) ಸುಮಾರು ಒಂದು ಲಕ್ಷ ಕುಟುಂಬಗಳಿಗೆ 1BHK ಮನೆಯನ್ನು ಒದಗಿಸಿ ಕೊಡಲು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ಇದರ ಅಡಿಯಲ್ಲಿ ಅತಿ ಕಡಿಮೆ ಬೆಲೆಗೆ ಹಿಂದುಳಿದ ಕುಟುಂಬಗಳು ಮನೆ ಖರೀದಿಸಿ ತಮ್ಮ ಸ್ವಂತ ಮನೆಯಲ್ಲಿ ಜೀವನ ನಡೆಸಬಹುದು.
ವಸತಿ ಯೋಜನೆಯ ದರ ಇಳಿಕೆ ಮಾಡಿ!
ಇಂಡಿಯನ್ ಫ್ರೀಡಂ ಪ್ಯಾಂಥರ್ಸ್ (Indian freedom panthers) ನ ಉಪಾಧ್ಯಕ್ಷ ಅರುಣ್ ಕುಮಾರ್ ಡಿ, ಹಾಗೂ ಹೋರಾಟಗಾರ್ತಿ ಬಿ ಟಿ ಲಲಿತ ನಾಯಕ್ ತಮ್ಮ ಮನವಿಯಲ್ಲಿ ವಸತಿ ದರ ಇಳಿಕೆ ಮಾಡುವಂತೆ ಆಗ್ರಹಿಸಿದ್ದಾರೆ.
ಗೂಗಲ್ ಪೇ ಇಂದಲೇ ಪಡೆಯಿರಿ 1 ಲಕ್ಷ ರೂಪಾಯಿವರೆಗೆ ಸಾಲ! ಒಂದೇ ಕ್ಲಿಕ್
ಮನವಿಯಲ್ಲಿ ಏನಿದೆ?
ವಸತಿ ಯೋಜನೆ ಬಡವರಿಗೆ ಸೂರು ಒದಗಿಸಿ ಕೊಡುವ ಸಲುವಾಗಿ ಆರಂಭಿಸಿರುವ ಯೋಜನೆ ಆಗಿದೆ. ಆದರೆ ಇದೇ ಯೋಜನೆ ಇಂದು ಬಡವರಿಗೆ ದೊಡ್ಡ ಹೊರೆ ಆಗುತ್ತಿದೆ. ಇದಕ್ಕೆ ಮುಖ್ಯವಾದ ಕಾರಣ, ವಸತಿ ಯೋಜನೆಗೆ ಬಡವರು ಪ್ರತಿ ತಿಂಗಳು 8 ರಿಂದ 10,000ಗಳನ್ನು ಪಾವತಿ ಮಾಡಬೇಕು. ದಿನವೂ ದುಡಿದು ತಿನ್ನುವವರ ಬಳಿ ಇಷ್ಟು ಹಣ ಬರಲು ಸಾಧ್ಯವೇ ಇಲ್ಲ ಹಾಗಾಗಿ ಪ್ರತಿ ತಿಂಗಳು ಪಾವತಿ ಮಾಡಲಾಗುತ್ತಿರುವ ಮೊತ್ತ ಬಡವರಿಗೆ ದೊಡ್ಡ ಹೊರೆಯಾಗಿದೆ.
ಬ್ಯಾಂಕಿನಿಂದ ಸಾಲ (bank loan) ಪಡೆದುಕೊಂಡಿದೆ ಪ್ರತಿ ತಿಂಗಳು ಎಂಟರಿಂದ ಹತ್ತು ಸಾವಿರ ರೂಪಾಯಿಗಳನ್ನು ಬಡವರು ಪಾವತಿ ಮಾಡಬೇಕು. ಇದು ವಸತಿ ಫಲಾನುಭವಿಗಳಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.
ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ತಲಾ 5,000 ರೂಪಾಯಿ ಪಿಂಚಣಿ
ವಸತಿ ಯೋಜನೆ ಫಲಾನುಭವಿಗಳಿಗೆ ಸುಲಭವಾಗಿ ಸಿಗುವಂತೆ ಸರ್ಕಾರ ಮಾಡಬೇಕು. ಬ್ಯಾಂಕ್ ಗಳಲ್ಲಿ, ಸಿಬಿಲ್ ಸ್ಕೋರ್ (CIBIL score) ಮತ್ತಿತರ ಕಾರಣಕ್ಕೆ ಸಾಲ ನೀಡದೆ ನಿರಾಕರಿಸಬಾರದು.
ಜಿ ಎಸ್ ಟಿ (GST) ಯನ್ನು ವಿಧಿಸಬಾರದು ಹಾಗೂ ಬಡ ವಸತಿ ಫಲಾನುಭವಿಗಳ ಸಾಲದ ಮೊತ್ತಕ್ಕೆ ಪ್ರತಿ ತಿಂಗಳು ಪಾವತಿ ಮಾಡಬೇಕಾದ ಹಣ 3,000 ರೂ. ಮೀರದಂತೆ ಇರಬೇಕು ಎಂದು ಸರ್ಕಾರ ಮನವಿ ಮಾಡಲಾಗಿದೆ.
ಒಟ್ಟಿನಲ್ಲಿ ವಸತಿ ಯೋಜನೆ ಬಡವರಿಗೆ ಸ್ವಂತ ನಿರ್ಮಾಣ ಮಾಡಿಕೊಳ್ಳಲು, ಸಹಾಯಕವಾಗಬೇಕೆ ಹೊರತು, ವಸತಿ ಯೋಜನೆಗಾಗಿ ಬಡವರಿಗೆ ಪಾವತಿ ಮಾಡುವ ಹಣದ ಹೊರೆಯೇ ಜಾಸ್ತಿ ಆಗಬಾರದು ಎನ್ನುವುದು ಹಲವರ ಅಂಬೋಣ.
Housing Scheme, build own house Through this Scheme
Our Whatsapp Channel is Live Now 👇