Business News

ಗೂಗಲ್ ಪೇ ಇಂದಲೇ ಪಡೆಯಿರಿ 1 ಲಕ್ಷ ರೂಪಾಯಿವರೆಗೆ ಸಾಲ! ಒಂದೇ ಕ್ಲಿಕ್

ಇನ್ನು ಮುಂದೆ ಗೂಗಲ್ ಪೇ (Google Pay) ಮೂಲಕ ನೀವು ಪೇಮೆಂಟ್ ಮಾಡುವುದು ಮಾತ್ರವಲ್ಲದೆ 15,000 ಗಳಿಂದ ರೂ.1 ಲಕ್ಷಗಳ ವರೆಗೆ ಸಾಲ ಸೌಲಭ್ಯವನ್ನು (Google Pay Loan) ಕೇವಲ ಕೆಲವೇ ನಿಮಿಷಗಳಲ್ಲಿ ಪಡೆಯಬಹುದು.

ಇಂದು ಯಾವುದೇ ರೀತಿಯ ಹಣಕಾಸು ವ್ಯವಹಾರ (Financial transaction) ಕ್ಕೆ ನಾವು ಬ್ಯಾಂಕ್ (bank) ವರೆಗೆ ಪಾದ ಬೆಳೆಸುವ ಅಗತ್ಯವೇ ಇಲ್ಲ, ಕುಳಿತ ಜಾಗದಲ್ಲಿ ಕಾಲ್ ಮೇಲೆ ಕಾಲ್ ಹಾಕಿಕೊಂಡು, ಕೈಯಲ್ಲಿ ಒಂದು ಮೊಬೈಲ್ (mobile) ಹಿಡಿದುಕೊಂಡು ಎಲ್ಲಾ ರೀತಿಯ ಹಣಕಾಸಿನ ವ್ಯವಹಾರವನ್ನು ಮಾಡಬಹುದು.

Best Opportunity To Earn Money With Google Pay

ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ತಲಾ 5,000 ರೂಪಾಯಿ ಪಿಂಚಣಿ

ಉದಾಹರಣೆಗೆ ಹಣ ಪಾವತಿ ಮಾಡುವುದನ್ನು ತೆಗೆದುಕೊಳ್ಳಿ, ಯುಪಿಐ (UPI) ಮೂಲಕ ಗೂಗಲ್ ಪೇ, ಪೇಟಿಎಂ, ಅಮೆಜಾನ್ ಪೆ ಹೀಗೆ ಮೊದಲಾದ ಥರ್ಡ್ ಪಾರ್ಟಿ ಅಪ್ಲಿಕೇಶನ್ (Third party application) ಮೂಲಕ ಕ್ಷಣಮಾತ್ರದಲ್ಲಿ ಪಾವತಿ ಮಾಡಿಬಿಡುತ್ತೇವೆ.

ಇನ್ನು ಮುಂದೆ ಹಣ ಪಾವತಿ ಮಾಡುವುದು ಮಾತ್ರವಲ್ಲದೆ, ನೀವು ಯಾವುದೇ ದಾಖಲೆಗಳನ್ನು ಕೂಡ ಕೊಡದೆ ನಿಂತ ಜಾಗದಲ್ಲಿಯೇ ಸಾಲ (Loan) ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು.

ಗೂಗಲ್ ಪೇ ಸಾಲ (loan by Google pay)

ತುರ್ತು ಪರಿಸ್ಥಿತಿಯಲ್ಲಿ ಮಾತ್ರ ನಾವು ಹೆಚ್ಚಾಗಿ ಸಾಲ ಪಡೆಯುತ್ತೇವೆ. ಆದರೆ ಇಂತಹ ಸಂದರ್ಭದಲ್ಲಿ ಬ್ಯಾಂಕಿಗೆ ಹೋಗಿ ಹೆಚ್ಚು ಸಮಯ ವ್ಯರ್ಥ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಸಾಲ ಪಡೆದುಕೊಳ್ಳುವ ಪ್ರಕ್ರಿಯೆ (loan process) ಈಗ ಇನ್ನಷ್ಟು ಸುಲಭವಾಗಿದ್ದು ನೀವು ಸ್ಮಾರ್ಟ್ ಫೋನ್ (smartphone) ನಲ್ಲಿ ಇರುವ ಗೂಗಲ್ ಪೇ ಅಪ್ಲಿಕೇಶನ್ ಮೂಲಕವೇ ಒಂದು ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು.

ನಿಮ್ಮ ಬ್ಯಾಂಕ್ ಖಾತೆ ನೀವು ಬಳಸದೇ ಇದ್ದರೆ ಆ ಹಣ ಯಾರ ಪಾಲಾಗುತ್ತೆ ಗೊತ್ತಾ?

ಯಾರಿಗೆ ಸಿಗಲಿದೆ ಗೂಗಲ್ ಪೇ ಸಾಲ? (Who can apply)

ತನ್ನ ಗ್ರಾಹಕರಿಗೆ ತ್ವರಿತ ರೂ.15,000ಗಳಿಂದ 1 ಲಕ್ಷಗಳ ವರೆಗೆ ಸಾಲ ನೀಡಲು ಮುಂದಾಗಿದೆ. ಸಣ್ಣ ವ್ಯಾಪಾರ (small businessman) ಮಾಡುವವರು ಈ ಸಾಲ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು.

ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕೆ ಬೇಕಾಗಿರುವ ತುರ್ತು ವಸ್ತುಗಳನ್ನು ಖರೀದಿ ಮಾಡಲು ಗೂಗಲ್ ಪೇ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಇದು ತ್ವರಿತವಾಗಿ ಸಿಗುವ ಸಾಲವಾಗಿದ್ದು, ನಿಮಗೆ ಅನುಮೋದನೆ ಸಿಕ್ಕ ನಂತರ ಕೆಲವೇ ಕ್ಷಣಗಳಲ್ಲಿ ಖಾತೆಗೆ (Bank Account) ಹಣ ಜಮಾ ಆಗುತ್ತದೆ.

ಚಿನ್ನದ ಬೆಲೆ ನಿರಂತರ ಇಳಿಕೆ, ಚಿನ್ನಾಭರಣ ಖರೀದಿಗೆ ಅಂಗಡಿ ಮುಂದೆ ಜನವೋ ಜನ

Google Pay Loanದಾಖಲೆಗಳಿಲ್ಲದ ಸಾಲ! (No guarantee needed)

ಗೂಗಲ್ ಪೇಯಲ್ಲಿ ಸಾಲ ಮಾಡುವುದಕ್ಕೆ ಏನೆಲ್ಲಾ ದಾಖಲೆಗಳನ್ನು ಕೊಡಬೇಕಾಗುತ್ತದೆ ಎನ್ನುವ ಗೊಂದಲ ನಿಮ್ಮಲ್ಲಿ ಇದ್ದರೆ, ಬೇಸಿಕ್ ದಾಖಲೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಅಡಮಾನ ಇಡುವ ಅಗತ್ಯವಲ್ಲ.

ಇಲ್ಲಿ ಮುಖ್ಯವಾಗಿ ಗ್ರಾಹಕರ ಕ್ರೆಡಿಟ್ ಸ್ಕೋರ್ (credit score) ಆಧಾರದ ಮೇಲೆ ಸಾಲ ಸಿಗುತ್ತದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ 750ಕ್ಕೂ ಮೀರಿ ಇದ್ದರೆ ಅಂತವರಿಗೆ ಸುಲಭವಾಗಿ, ಅತಿ ವೇಗವಾಗಿ ಸಾಲ ಮಂಜೂರಾಗುತ್ತದೆ.

ಇನ್ನು ಗೂಗಲ್ ಪೇ, ತನ್ನ ಗ್ರಾಹಕರಿಗೆ ನೇರವಾಗಿ ಸಾಲ ಸೌಲಭ್ಯ ನೀಡುವುದಿಲ್ಲ. ಬದಲಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) , ಆಕ್ಸಿಸ್ ಬ್ಯಾಂಕ್ (Axis Bank) ನಂತಹ ಬ್ಯಾಂಕುಗಳ ಜೊತೆಗೆ ಟೈ- ಅಪ್ ಆಗಿದ್ದು, ಅವರಿಂದ ಗ್ರಾಹಕರಿಗೆ ಹಣ ತಲುಪಿಸುವ ಕೆಲಸ ಮಾಡುತ್ತದೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್; ಅಪ್ಲೈ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್

ಗೂಗಲ್ ಪೇ ಸಾಲವನ್ನು ಇಂಥವರು ಮಾತ್ರ ಪಡೆದುಕೊಳ್ಳಬಹುದು!

*ಈ ಸಾಲ ಪ್ರಮುಖವಾಗಿ ಸಣ್ಣ ವ್ಯಾಪಾರಿಗಳಿಗೆ ನೀಡಲಾಗುತ್ತದೆ.

*ಗೂಗಲ್ ಪೇ ಸಾಲ ಪಡೆದುಕೊಳ್ಳಲು ಭಾರತೀಯ ನಿವಾಸಿ ಆಗಿರಬೇಕು.

*ಗೂಗಲ್ ಪೇ ಗ್ರಾಹಕರಾಗಿರಬೇಕು. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.

*ಹೊಸದಾಗಿ ಗೂಗಲ್ ಪೇ ಖಾತೆ ತೆರೆದು ತಕ್ಷಣ ಸಾಲ ಸೌಲಭ್ಯ ಪಡೆಯಲು ಸಾಧ್ಯವಿಲ್ಲ.

*ಸಾಲಗಾರರು ಡೀಫಾಲ್ಟರ್ (Loan defaulter) ಆಗಿರಬಾರದು.

ಸ್ವಂತ ವ್ಯಾಪಾರಕ್ಕೆ ಸರ್ಕಾರವೇ ನೀಡುತ್ತೆ 50 ಲಕ್ಷದ ತನಕ ಸಾಲ! ಅಪ್ಲೈ ಮಾಡಿ

ಗೂಗಲ್ ಪೇ ಸಾಲ ಪಡೆದುಕೊಳ್ಳುವುದು ಹೇಗೆ?(how to get Google Pay Loan)

ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆಗೆಯಿರಿ, ಸ್ವಲ್ಪ ಸ್ಕ್ರೋಲ್ ಡೌನ್ ಮಾಡಿದ್ರೆ ಲೋನ್ಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಈಗ ನಿಮಗೆ ಎಷ್ಟು ಸಾಲ ಬೇಕು, ಬಡ್ಡಿ ದರ ಎಷ್ಟು ಎನ್ನುವುದನ್ನು ತಿಳಿದುಕೊಂಡು ಪ್ರತಿ ತಿಂಗಳು ಎಷ್ಟು ಈ ಎಂ ಐ (EMI) ಪಾವತಿಸಬೇಕು ಎಂಬುದನ್ನು ನೋಡಿಕೊಳ್ಳಿ. ಬಳಿಕ ಅಗತ್ಯ ಇರುವ ಮಾಹಿತಿ ನೀಡಿ ಸಾಲ ಪಡೆಯಬಹುದು.

Get a loan of up to 1 lakh rupees from Google Pay

Our Whatsapp Channel is Live Now 👇

Whatsapp Channel

Related Stories