ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದೆ ಇದ್ರೆ ಭಾರೀ ದಂಡ!
Bank Balance : ಡಿಜಿಟಲ್ ವರ್ಗಾವಣೆ (digital transaction) ಆರಂಭವಾದ ನಂತರ ದೇಶದ ಬಹುತೇಕ ಎಲ್ಲರೂ ಬ್ಯಾಂಕ್ ಖಾತೆ (bank account) ಮಾಡಿಕೊಂಡಿದ್ದಾರೆ.
Bank Balance : ಡಿಜಿಟಲ್ ವರ್ಗಾವಣೆ (digital transaction) ಆರಂಭವಾದ ನಂತರ ದೇಶದ ಬಹುತೇಕ ಎಲ್ಲರೂ ಬ್ಯಾಂಕ್ ಖಾತೆ (bank account) ಮಾಡಿಕೊಂಡಿದ್ದಾರೆ. ಹಾಗೂ ಈಗಲೂ ಮಾಡಿಕೊಳ್ಳುತ್ತಿದ್ದಾರೆ.
ಇದರ ಜೊತೆ ಬ್ಯಾಂಕುಗಳು ಸಹ ತಮ್ಮ ವ್ಯವಹಾರ ಹೆಚ್ಚಿಸಿಕೊಳ್ಳುವ ಸಲುವಾಗಿ ಗ್ರಾಹಕರಿಗೆ ಹೊಸ ಹೊಸ ಆಫರ್ಗಳನ್ನು ಪರಿಚಯಿಸುತ್ತಿವೆ.
ಇದರ ಲಾಭ ಪಡೆಯುವ ಸಲುವಾಗಿಯೂ ಹಲವರು ಬ್ಯಾಂಕ್ ಖಾತೆ ಹೊಂದುತ್ತಿದ್ದಾರೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಗ್ರಾಹಕರಿಗೆ ಖಡಕ್ ಎಚ್ಚರಿಕೆ ನೀಡಿದ್ದು ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ (minimum balance) ಹೊಂದಿರಲೇ ಬೇಕು ಎಂದು ಸೂಚನೆ ನೀಡಿದೆ.
ಇದೀಗ ಹಣಕಾಸಿನ ವಹಿವಾಟು (money transaction) ಎಂದರೆ ಬ್ಯಾಂಕ್ನ ಮೂಲಕವೇ ಎನ್ನುವಲ್ಲಿಗೆ ಬ್ಯಾಂಕ್ ನ್ನು ಅವಲಂಭಿಸಿದ್ದೇವೆ. ಹಾಗಾಗಿ ಒಬ್ಬ ವ್ಯಕ್ತಿ ಒಂದು ಬ್ಯಾಂಕ್ ಖಾತೆಯನ್ನಾದರೂ ಹೊಂದಿರಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಸೈಟ್, ಮನೆ, ಜಮೀನು, ಆಸ್ತಿ ಖರೀದಿಗೆ ಇನ್ಮುಂದೆ ಹೊಸ ರೂಲ್ಸ್! ಕಟ್ಟಬೇಕು ಬಾರೀ ದಂಡ
ಇದೀಗ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ (scholarship), ಉದ್ಯೋಗಸ್ಥರಿಗೆ ನೀಡುವ ಸಂಬಳ (salary) , ಹಿರಿಯ ನಾಗರೀಕರಿಗೆ ನೀಡುವ ಪಿಂಚಣಿ (pension), ಸರ್ಕಾರದಿಂದ ಸಿಗುವ ಆರ್ಥಿಕ ಸಹಾಯಗಳನ್ನು ಸಹ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ಉದ್ದೇಶಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ (PM Narendra Modi ji) ಅವರು ಜನ್ ಧನ್ ಖಾತೆ ಆರಂಭಿಸಲು ಮನವಿ ಮಾಡಿದ್ದರು. ಇದೀಗ ಅದು ಬಹಳ ಉಪಕಾರಿಯಾಗಿದೆ.
ಈ ಹಿಂದಯೆಲ್ಲ ಬ್ಯಾಂಕ್ ಖಾತೆ ಆರಂಭಿಸಲು ಒಂದಿಷ್ಟು ಹಣ ಪಾವತಿ ಮಾಡಬೇಕಾಗಿತ್ತು. ನಂತರ ಆ ಹಣ ಆ ವ್ಯಕ್ತಿಯ ಖಾತೆಗೆ ಜಮಾ ಆಗುತ್ತಿತ್ತು. ಆದರೆ ಜನ್ ಧನ್ ಯೋಜನೆ (jandhan Yojana) ಅಡಿಯಲ್ಲಿ ಶೂನ್ಯ ದರದಲ್ಲಿ ಬ್ಯಾಂಕ್ ಖಾತೆ ಆರಂಭಿಸಬಹುದಾಗಿದೆ.
ಇಂತಹ ಖಾತೆಯಲ್ಲಿ ಒಂದು ವೇಳೆ ಹಣ ಇಡಲು ಸಾಧ್ಯವಾಗಿಲ್ಲ ಎಂದರೆ ಬ್ಯಾಂಕ್ಗಳು ಆ ಖಾತೆಯನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗುವುದಿಲ್ಲ. ಈ ಒಂದು ಅವಕಾಶ ಬಿಟ್ಟರೆ ಬೇರೆ ಎಲ್ಲ ಖಾತೆ ಆರಂಭಿಸಲು ಬ್ಯಾಂಕುಗಳು ನಿಯಮಗಳನ್ನು ವಿಧಿಸಿವೆ.
ಗೂಗಲ್ ಪೇ ಇಂದಲೇ ಪಡೆಯಿರಿ 1 ಲಕ್ಷ ರೂಪಾಯಿವರೆಗೆ ಸಾಲ! ಒಂದೇ ಕ್ಲಿಕ್
ಒಂದೊಂದು ಬ್ಯಾಂಕ್ ಒಂದೊಂದು ನಿಯಮ ಹೊಂದಿವೆ. ಅದರ ಪ್ರಕಾರ ಒಂದೊಂದು ಬ್ಯಾಂಕ್ನಲ್ಲಿ ಕನಿಷ್ಠ 1೦೦೦ ರೂ. ಬ್ಯಾಲೆನ್ಸ್ (bank balance) ನೀವು ಮೆಂಟೈನ್ ಮಾಡಬೇಕಾಗುತ್ತದೆ. ಇದಕ್ಕಿಂತ ಕಡಿಮೆ ಆದಲ್ಲಿ ಅವು ದಂಡ ವಿಧಿಸುತ್ತವೆ. ಹೀಗೆ ಕಡಿತಗೊಳ್ಳುತ್ತ ಹೋಗಿ ನಿಮ್ಮ ಖಾತೆಯಲ್ಲಿ ಮೈನಸ್ ಬ್ಯಾಲೆನ್ಸ್ ಆಗುವ ಸಾಧ್ಯತೆ ಇದೆ.
ಈ ಪರಿಸ್ಥಿತಿಯಲ್ಲಿ ನೀವು ನಿಮ್ಮ ಖಾತೆಗೆ ಹಣ ಹಾಕಿದಾಗ ಕೂಡಲೇ ಅದನ್ನು ದಂಡಕ್ಕೆ ಕಡಿತಗೊಳಿಸಲಾಗುತ್ತದೆ. ಈ ಕುರಿತು ಸಾಕಷ್ಟು ದೂರುಗಳು ಕೇಳಿಬಂದಿವೆ. ಇದನ್ನು ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಸೂಚನೆಯ ಮೇರೆಗೆ ಮಾಡುತ್ತಿವೆ.
ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ತಲಾ 5,000 ರೂಪಾಯಿ ಪಿಂಚಣಿ
ಆರ್ಬಿಐ ಸೂಚಿಸಿರುವ ಮಿನಿಮಂ ಬ್ಯಾಲೆನ್ಸಗಳು – (minimum balance)
ಎಸ್ಬಿಐ ಬ್ಯಾಂಕ್ (SBI Bank)
ಗ್ರಾಮೀಣ ಬ್ಯಾಂಕ್ಗಳಲ್ಲಿ ಮಿನಿಮಂ ಬ್ಯಾಲೆನ್ಸ್ 1000 ರೂ. ನಗರ ಪ್ರದೇಶದಲ್ಲಿ 2000 ರೂ.
ಎಚ್ಡಿಎಫ್ಸಿ ಬ್ಯಾಂಕ್: (HDFC Bank)
ಗ್ರಾಮೀಣ ಭಾಗದ ಬ್ಯಾಂಕ್ಗಳಲ್ಲಿ 2500 ರೂ. ನಗರದ ಪ್ರದೇಶದಲ್ಲಿ 5೦೦೦ ರೂ. ಮೆಟ್ರೊ ನಗರಗಳಲ್ಲಿ 10000 ರೂ.
ಐಸಿಐಸಿಐ ಬ್ಯಾಂಕ್ (ICICI Bank)
ಗ್ರಾಮೀಣ ಭಾಗದ ಬ್ಯಾಂಕ್ಗಳಲ್ಲಿ 2500 ರೂ. ನಗರದ ಪ್ರದೇಶದಲ್ಲಿ 5೦೦೦ ರೂ. ಹಾಗೂ ಮೆಟ್ರೋ ನಗರದಲ್ಲಿ 10000 ರೂ.
ಪಂಜಾಬ್ ನ್ಯಾಶನಲ್ ಬ್ಯಾಂಕ್:
ಗ್ರಾಮೀಣ ಭಾಗದ ಶಾಖೆಗಳಲ್ಲಿ 1000 ರೂ. ನಗರದ ಪ್ರದೇಶದ ಶಾಖೆಗಳಲ್ಲಿ 2000 ರೂ. ಮೆಟ್ರೋ ನಗರದ ಶಾಖೆಗಳಲ್ಲಿ 5000 ರೂ.
ಕೆನರಾ ಬ್ಯಾಂಕ್: (Canara Bank)
ಗ್ರಾಮೀಣ ಭಾಗದ ಶಾಖೆಗಳಲ್ಲಿ 500 ರೂ. ನಗರದ ಶಾಖೆಗಳಲ್ಲಿ 2000 ರೂ. ಮಿನಿಮಂ ಬ್ಯಾಲೆನ್ಸ್ ನಿಗದಿ ಮಾಡಲಾಗಿದೆ.
Penalty if you don’t have minimum balance in your bank account