Business News

ಸೈಟ್, ಮನೆ, ಜಮೀನು, ಆಸ್ತಿ ಖರೀದಿಗೆ ಇನ್ಮುಂದೆ ಹೊಸ ರೂಲ್ಸ್! ಕಟ್ಟಬೇಕು ಬಾರೀ ದಂಡ

ದುಡಿಯುತ್ತಿರುವ ಯಾವುದೇ ವ್ಯಕ್ತಿ ತನ್ನ ಬಳಿ ಸ್ವಲ್ಪವಾದರೂ ಜಮೀನು (Land) ಅಥವಾ ಜಾಗ ಇರಬೇಕು ತನ್ನದೇ ಆಗಿರುವ ಸ್ವಂತ ಮನೆ (own house) ಕಟ್ಟಿಸಬೇಕು ಎಂದು ಬಯಸುವುದು ಸಹಜ, ಅದೇ ಕಾರಣಕ್ಕೆ ಸಾಲ (Loan) ಮಾಡಿದರೂ ಸರಿ ಸ್ವಂತ ಮನೆ ಖರೀದಿ ಮಾಡುತ್ತಾರೆ.

ಇನ್ನು ಸೈಟು, ಮನೆ, ಜಮೀನು ಯಾವುದನ್ನೇ ಖರೀದಿ (property purchase) ಮಾಡಿದರು ಅದು ಒಂದು ಪ್ರಮುಖ ಆಸ್ತಿಯಾಗಿ ನಿಮ್ಮ ಬಳಿ ಉಳಿದುಕೊಳ್ಳುತ್ತದೆ, ಅದರಲ್ಲೂ ಕೆಲವು ಪ್ರಮುಖ ಜಾಗದಲ್ಲಿ ನೀವು ಜಾಗ ಖರೀದಿ ಮಾಡಿದರೆ ಅದರ ವ್ಯಾಲ್ಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಹೋಗುತ್ತದೆ. ನೀವು ಈ ವರ್ಷ ಖರೀದಿ ಮಾಡಿದ ಜಮೀನು ಅಥವಾ ಜಾಗದ ಬೆಲೆ ಮುಂಬರುವ ವರ್ಷಗಳಲ್ಲಿ ಮೂರು ಪಟ್ಟು ಜಾಸ್ತಿ ಆಗಿರುತ್ತದೆ.

Big update for those who have a house in government land

ಗೂಗಲ್ ಪೇ ಇಂದಲೇ ಪಡೆಯಿರಿ 1 ಲಕ್ಷ ರೂಪಾಯಿವರೆಗೆ ಸಾಲ! ಒಂದೇ ಕ್ಲಿಕ್

ಆಸ್ತಿ ಖರೀದಿ, ಮಾರಾಟದ ನಿಯಮ (New rules on property purchase, sales)

ಯಾವುದೇ ರೀತಿಯ ಚರಾಸ್ತಿ ಅಥವಾ ಸ್ಥಿರಾಸ್ತಿ ಖರೀದಿಸುವಾಗ ಹಾಗೂ ಮಾರಾಟ ಮಾಡುವಾಗ ಅದಕ್ಕೆ ಅದರದ್ದೇ ಆದ ನಿಯಮಗಳು ಇವೆ. ಒಂದು ವೇಳೆ ನೀವು ಈ ನಿಯಮಗಳನ್ನು ಮೀರಿ ಆಸ್ತಿಯನ್ನು ನಿಮ್ಮದಾಗಿಸಿಕೊಳ್ಳಲು ಬಯಸಿದರೆ ಅದರಿಂದ ತೊಂದರೆಯೇ ಹೆಚ್ಚು.

ಆಸ್ತಿ ಖರೀದಿ ಮಾಡುವವರು ಮಾತ್ರವಲ್ಲ, ಮಾರಾಟ ಮಾಡುವವರು (property sellers) ಕೂಡ ಆಸ್ತಿ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲವಾದರೆ ಆಸ್ತಿ ನೋಂದಣಿ (property registration) ಯ ಸಮಯದಲ್ಲಿ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ ಆಸ್ತಿ ಮಾರಾಟ ಮಾಡುವಾಗ ಯಾವ ಪ್ರಮುಖ ನಿಯಮವನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂಬುದನ್ನು ನೋಡೋಣ.

ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ತಲಾ 5,000 ರೂಪಾಯಿ ಪಿಂಚಣಿ

Property Documentsಇದಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ! (Cash transaction)

ಯಾವುದೇ ಭೂಮಿ ಜಮೀನು ಅಥವಾ ಮನೆ ಮಾರಾಟ ಮಾಡುವುದಿದ್ದರೆ 19,999 ರೂಪಾಯಿಗಳಿಗಿಂತ ಹೆಚ್ಚಿನ ನಗದು ವಹಿವಾಟು ನಡೆಸುವಂತಿಲ್ಲ. 20,000 ಕ್ಕಿಂತ ಹೆಚ್ಚಿನ ಹಣಕಾಸಿನ ವ್ಯವಹಾರವಾಗಿದ್ದರೆ ಅದನ್ನು ದಾಖಲೆಗಳ ಸಮೇತ ಆನ್ಲೈನಲ್ಲಿಯೇ ಮಾಡಬೇಕು ಅಥವಾ ಬ್ಯಾಂಕಿಗೆ ಹೋಗಿ ಚೆಕ್ ಬರೆಯುವುದರ ಮೂಲಕ ಹಣ ಕೊಡಬೇಕು. ಇದನ್ನು ಹೊರತುಪಡಿಸಿ, ರೂ.20,000 ಕ್ಕಿಂತ ಹೆಚ್ಚಿನ ನಗದು ವಹಿವಾಟು ಮಾಡುವಂತಿಲ್ಲ.

ನಿಮ್ಮ ಬ್ಯಾಂಕ್ ಖಾತೆ ನೀವು ಬಳಸದೇ ಇದ್ದರೆ ಆ ಹಣ ಯಾರ ಪಾಲಾಗುತ್ತೆ ಗೊತ್ತಾ?

ಆಸ್ತಿ ಖರೀದಿ ನಿಯಮಗಳಲ್ಲಿ ಬದಲಾವಣೆ! (Rules changed in property purchase)

ಆದಾಯ ತೆರಿಗೆ ಕಾಯ್ದೆ (income tax act) 269SS, 269T, 271D ಮತ್ತು 271E ಸೆಕ್ಷನ್ ಗಳನ್ನು 2015ರಲ್ಲಿ ಬದಲಾವಣೆ ಮಾಡಲಾಗಿದೆ. ಈ ನಿಯಮಗಳ ಪ್ರಕಾರ ನೀವು ಎಷ್ಟೇ ಮೌಲ್ಯದ ಆಸ್ತಿ ಮಾರಾಟ ಮಾಡಿದರೂ ಕೂಡ 20,000 ಕ್ಕಿಂತ ಹೆಚ್ಚಿನ ನಗದು ಮಾಡುವಂತಿಲ್ಲ.

ದೇಶದ ಆದಾಯ ತೆರಿಗೆ ಇಲಾಖೆ ಇಂತಹ ಹಣಕಾಸಿನ ವ್ಯವಹಾರದ ಮೇಲೆ ಒಂದು ಕಣ್ಣಿಟ್ಟಿರುತ್ತದೆ. ಹಾಗಾಗಿ ಆಸ್ತಿ ಮಾರಾಟದ ಸಮಯದಲ್ಲಿ ಪಡೆದುಕೊಳ್ಳುವ ಕ್ಯಾಶ್ ಅಥವಾ ನಗದು 20,000 ಮೇಲಿದ್ದರೆ ಅದಕ್ಕೆ ಬಾರಿ ದೊಡ್ಡ ಪ್ರಮಾಣದಲ್ಲಿ ದಂಡ (penalty) ಪಾವತಿಸಬೇಕಾಗುತ್ತದೆ. ದೇಶದಲ್ಲಿ ಅಕ್ರಮ ವಹಿವಾಟು ತಡೆಗಟ್ಟುವ ಸಲುವಾಗಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

ಹಾಗಾಗಿ ಇನ್ನು ಮುಂದೆ ಯಾವುದೇ ರೀತಿಯ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವುದಿದ್ದರೆ ಎರಡು ಬಾರಿ ಯೋಚಿಸಿ. ಯಾವುದೇ ರೀತಿಯ ವಂಚನೆ ಆಗದೆ ಇರುವ ರೀತಿಯಲ್ಲಿ, ನಿಮ್ಮ ಹಣ ವೇಸ್ಟ್ ಆಗದೆ ಇರುವ ರೀತಿಯಲ್ಲಿ ಆಸ್ತಿ ಖರೀದಿ ಮಾಡಿ. ನೋಂದಣಿ ನಿಯಮಗಳ ಬಗ್ಗೆ ತಿಳಿದುಕೊಂಡು ಹಣಕಾಸಿನ ವ್ಯವಹಾರ ಮಾಡಿದರೆ ಹೆಚ್ಚು ಸೂಕ್ತ.

New rules for buying site, house, land, property

Our Whatsapp Channel is Live Now 👇

Whatsapp Channel

Related Stories