ಚಿನ್ನದ ಬೆಲೆ ಗಗನ್ನಕ್ಕೇರಿರುವ ಈ ಟೈಮಲ್ಲಿ ಮನೆಯಲ್ಲಿ ಎಷ್ಟು ಬಂಗಾರ ಇಟ್ಟುಕೊಳ್ಳಬಹುದು ಗೊತ್ತಾ?

Gold Limit: ಮನೆಯಲ್ಲಿ ಎಷ್ಟು ಬಂಗಾರ ಇಟ್ಟುಕೊಳ್ಳಬಹುದು ಎಂಬ ಗೊಂದಲ ಹಲವರಲ್ಲಿದೆ. ಆದಾಯ ತೆರಿಗೆ ಇಲಾಖೆ ನೀಡಿರುವ CBDT ನಿಯಮಗಳ ಪ್ರಕಾರ, ಮಹಿಳೆಯರು ಹಾಗೂ ಪುರುಷರು ಇಟ್ಟುಕೊಳ್ಳಬಹುದಾದ ಬಂಗಾರದ ಮಿತಿ ಸ್ಪಷ್ಟವಾಗಿದೆ.

Gold Limit at Home: ಭಾರತೀಯರ ಜೀವನದಲ್ಲಿ ಬಂಗಾರ ಕೇವಲ ಲೋಹವಲ್ಲ; ಅದು ಭಾವನೆ, ಸಂಪ್ರದಾಯ ಮತ್ತು ಭದ್ರತೆಯ ಸಂಕೇತ. ಮದುವೆ, ಹಬ್ಬ, ಕುಟುಂಬ ಪರಂಪರೆಯ ಭಾಗವಾಗಿ ಬಹುತೇಕ ಮನೆಗಳಲ್ಲಿ ಬಂಗಾರ ಸಂಗ್ರಹ ಇರುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದರಿಂದ, “ಮನೆಯಲ್ಲಿರುವ ಬಂಗಾರಕ್ಕೆ ತೆರಿಗೆ ಸಮಸ್ಯೆ ಬರಬಹುದಾ?” ಎಂಬ ಪ್ರಶ್ನೆ ಸಾಮಾನ್ಯವಾಗಿದೆ.

ಆದಾಯ ತೆರಿಗೆ ನಿಯಮ ಏನು ಹೇಳುತ್ತದೆ?

ಈ ಗೊಂದಲಕ್ಕೆ ಉತ್ತರ ನೀಡುವುದು CBDT Instruction No.1916 (1994). ಈ ನಿಯಮವು, ಮನೆಯಲ್ಲಿರುವ ಬಂಗಾರವನ್ನು ಅಕ್ರಮ ಎಂದು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಮುಖ್ಯವಾಗಿ, ಆದಾಯ ತೆರಿಗೆ ದಾಳಿ (Section 132) ಸಂದರ್ಭದಲ್ಲಿ, ಸಂಪ್ರದಾಯಬದ್ಧವಾಗಿ ಇಟ್ಟುಕೊಂಡಿರುವ ಆಭರಣಗಳನ್ನು ವಶಪಡಿಸಿಕೊಳ್ಳಬಾರದು ಎಂದು ಸೂಚಿಸುತ್ತದೆ.

ಎಷ್ಟು ಬಂಗಾರ ಇಟ್ಟುಕೊಳ್ಳಬಹುದು?

CBDT ಮಾರ್ಗಸೂಚಿಗಳ ಪ್ರಕಾರ:

  1. ವಿವಾಹಿತ ಮಹಿಳೆ: 500 ಗ್ರಾಂವರೆಗೆ
  2. ಅವಿವಾಹಿತ ಮಹಿಳೆ: 250 ಗ್ರಾಂವರೆಗೆ
  3. ಪುರುಷ ಸದಸ್ಯ: 100 ಗ್ರಾಂವರೆಗೆ

ಈ ಮಿತಿಯೊಳಗಿನ ಬಂಗಾರಕ್ಕೆ ಖರೀದಿ ಬಿಲ್ ತಕ್ಷಣ ನೀಡಲಾಗದಿದ್ದರೂ, ತೆರಿಗೆ ಅಧಿಕಾರಿಗಳು ಅದನ್ನು ವಶಪಡಿಸಿಕೊಳ್ಳುವಂತಿಲ್ಲ.

ಗಮನಿಸಬೇಕಾದ ಮುಖ್ಯ ಅಂಶ

ಈ ನಿಯಮವು “ಮಿತಿ ಮೀರಿ ಬಂಗಾರ ಇಟ್ಟುಕೊಳ್ಳಬಾರದು” ಎಂದು ಹೇಳುವುದಿಲ್ಲ. ಬದಲಾಗಿ, ದಾಳಿಗಳ ಸಮಯದಲ್ಲಿ ಎಷ್ಟು ಪ್ರಮಾಣದ ಬಂಗಾರ ಸುರಕ್ಷಿತ ಎಂಬುದನ್ನು ಮಾತ್ರ ಸ್ಪಷ್ಟಪಡಿಸುತ್ತದೆ. ಕುಟುಂಬದ ಸಾಮಾಜಿಕ ಸ್ಥಿತಿ, ಸಂಪ್ರದಾಯ, ವಾರಸತ್ವದ ಹಿನ್ನೆಲೆ ಇದ್ದಲ್ಲಿ ಹೆಚ್ಚಿನ ಬಂಗಾರಕ್ಕೂ ಸಮರ್ಥನೆ ನೀಡಬಹುದು.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories