ಕೆನರಾ ಬ್ಯಾಂಕ್ ನಲ್ಲಿ 3 ವರ್ಷಕ್ಕೆ ಅಂತ 1 ಲಕ್ಷ ಇಟ್ರೆ ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಡೀಟೇಲ್ಸ್
Fixed Deposit : ನಮ್ಮ ದೇಶದ ಸರ್ಕಾರಿ ಬ್ಯಾಂಕ್ ಗಳಲ್ಲಿ ಮತ್ತು ಪ್ರೈವೇಟ್ ಬ್ಯಾಂಕ್ ಗಳಲ್ಲಿ ಎರಡು ಕಡೆ ಹಿರಿಯ ನಾಗರೀಕರಿಗೆ ಒಳ್ಳೆಯ ಸೇವೆಗಳನ್ನು ಒದಗಿಸಿಕೊಡಲಾಗುತ್ತದೆ. ಇಲ್ಲಿ ನೀವು ಹೂಡಿಕೆ ಮಾಡುವ FD ಯೋಜನೆಗಳ ಮೇಲೆ ಕೆಲವು ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ಕೊಡಲಾಗುತ್ತದೆ, 60 ವರ್ಷ ಮೇಲ್ಪಟ್ಟವರಿಗೆ 7.75% ವರೆಗು FD ಮೇಲೆ ಬಡ್ಡಿದರ ಸಿಗುತ್ತದೆ.
ಇನ್ನು ಕೆಲವು ಬ್ಯಾಂಕ್ ಗಳಲ್ಲಿ 80 ವರ್ಷ ಮೇಲ್ಪಟ್ಟವರು ಕೂಡ ಹೂಡಿಕೆ ಮಾಡಿ, ಉತ್ತಮವಾದ ಬಡ್ಡಿದರ ಪಡೆಯುವ ಅವಕಾಶವಿದೆ, ಹಿರಿಯರು ವಯಸ್ಸಾದ ಕಾಲದಲ್ಲಿ ಕಷ್ಟಪಡಬಾರದು ಎನ್ನುವ ಉದ್ದೇಶ ಇದು.
ಯಾವುದೇ ಬ್ಯಾಂಕಿನಿಂದ ಲೋನ್ ತಗೊಂಡು ಕಟ್ಟದೆ ಇರೋರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ಹೊಸ ರೂಲ್ಸ್
SBI, ಕೆನರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ್, ಹೀಗೆ ಅನೇಕ ಬ್ಯಾಂಕ್ ಗಳಲ್ಲಿ ಹಿರಿಯ ನಾಗರೀಕರಿಗೆ ಉತ್ತಮವಾದ ಬಡ್ಡಿ ದರ ಕೊಡಲಾಗುತ್ತದೆ. ಇಲ್ಲಿ 1 ವರ್ಷದಿಂದ 3 ವರ್ಷದವರೆಗು ಅಥವಾ 5 ವರ್ಷದವರೆಗು ಕೂಡ ಹಿರಿಯ ನಾಗರೀಕರು FD ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಭವಿಷ್ಯದ ದೃಷ್ಟಿಯಿಂದ ನೋಡುವುದಾದರೆ, ಇದೊಂದು ಉತ್ತಮವಾದ ಆಯ್ಕೆ ಆಗಿದೆ. ಹಾಗಿದ್ದಲ್ಲಿ, ಅತಿಹೆಚ್ಚು ಬಡ್ಡಿ ಕೊಡುವ ಬ್ಯಾಂಕ್ ಗಳು ಯಾವುವು ಎನ್ನುವುದರ ಲಿಸ್ಟ್ ನೋಡೋಣ..
1. ಆಕ್ಸಿಸ್ ಬ್ಯಾಂಕ್: ಈ ಬ್ಯಾಂಕ್ ನಲ್ಲಿ ಹಿರಿಯ ನಾಗರೀಕರು 1 ಲಕ್ಷ FD ಮಾಡಿದರೆ, ಮೂರು ವರ್ಷಗಳಲ್ಲಿ 1.25 ಲಕ್ಷ ರಿಟರ್ನ್ಸ್ ಪಡೆಯುತ್ತಾರೆ. ಹಾಗೆಯೇ ಹಿರಿಯ ನಾಗರೀಕರಿಗೆ FD ಮೇಲೆ 7.60% ವರೆಗು ಬಡ್ಡಿ ಸಿಗುತ್ತದೆ.
2. ಬ್ಯಾಂಕ್ ಆಫ್ ಬರೋಡಾ : ಈ ಬ್ಯಾಂಕ್ ನಲ್ಲಿ ಕೂಡ ಹಿರಿಯ ನಾಗರೀಕರಿಗೆ ಉತ್ತಮವಾದ ಬಡ್ಡಿದರ ಸಿಗುತ್ತದೆ. ಇಲ್ಲಿ ಹಿರಿಯರ FD ಯೋಜನೆ ಮೇಲೆ 7.75% ಬಡ್ಡಿ ಕೊಡಲಾಗುತ್ತದೆ. 3 ವರ್ಷಕ್ಕೆ 1 ಲಕ್ಷ ಹೂಡಿಕೆ ಮಾಡಿದರೆ, ಮೆಚ್ಯುರಿಟಿ ವೇಳೆ ಹಿರಿಯರಿಗೆ 1.26 ಲಕ್ಷ ರೂಪಾಯಿ ರಿಟರ್ನ್ಸ್ ಬರುತ್ತದೆ.
ಬಾಡಿಗೆ ಮನೆಯಲ್ಲಿ ವಾಸ ಮಾಡೋರಿಗೆ ಹಾಗೂ ಬಾಡಿಗೆ ಕೊಟ್ಟ ಮನೆ ಓನರ್ ಗಳಿಗೂ ಇನ್ಮುಂದೆ ಹೊಸ ರೂಲ್ಸ್!
3. HDFC ಬ್ಯಾಂಕ್: ಇದು ಪ್ರೈವೇಟ್ ಸೆಕ್ಟರ್ ಬ್ಯಾಂಕ್ ಆಗಿದ್ದು, ಇಲ್ಲಿ ಹಿರಿಯ ನಾಗರೀಕರು 3 ವರ್ಷಕ್ಕೆ FD ಮಾಡಿದರೆ, 7.50% ಬಡ್ಡಿ ಬರುತ್ತದೆ. ಇಲ್ಲಿ ಹಿರಿಯರು 1 ಲಕ್ಷ ಹೂಡಿಕೆ ಮಾಡಿದರೆ, 3 ವರ್ಷಗಳ ನಂತರ 1.25 ಲಕ್ಷ ರಿಟರ್ನ್ಸ್ ಬರುತ್ತದೆ.
4. SBI : ಇದು ನಮ್ಮ ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಆಗಿದ್ದು, ಇಲ್ಲಿ ಹಿರಿಯ ನಾಗರೀಕರಿಗೆ FD ಯೋಜನೆಯ ಮೇಲೆ 7.25% ಬಡ್ಡಿ ಸಿಗುತ್ತದೆ. ಇಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ 3 ವರ್ಷಗಳ ನಂತರ 1.24 ಲಕ್ಷ ರಿಟರ್ನ್ಸ್ ಬರುತ್ತದೆ.
5. ಬ್ಯಾಂಕ್ ಆಫ್ ಇಂಡಿಯಾ: ಇದರ ಜೊತೆಗೆ ಯೂನಿಯನ್ ಬ್ಯಾಂಕ್ ಇದ್ದು, ಈ ಎರಡು ಕಡೆ ಹಿರಿಯ ನಾಗರೀಕರು FD ಮಾಡಿದರೆ ಅವರಿಗೆ 7% ಬಡ್ಡಿ ಸಿಗುತ್ತದೆ. ಇಲ್ಲಿ ಹಿರಿಯರು 1 ಲಕ್ಷ ಹೂಡಿಕೆ ಮಾಡಿದರೆ, 3 ವರ್ಷಗಳ ನಂತರ 1.23 ಲಕ್ಷ ರಿಟರ್ನ್ಸ್ ಬರುತ್ತದೆ.
ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ₹20,000 ರೂಪಾಯಿ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
6. ಕೆನರಾ ಬ್ಯಾಂಕ್: ಈ ಬ್ಯಾಂಕ್ ನಲ್ಲಿ ಹಿರಿಯ ನಾಗರೀಕರಿಗೆ FD ಮೇಲೆ 7.30% ಬಡ್ಡಿ ಕೊಡಲಾಗುತ್ತದೆ. ಇಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ, 3 ವರ್ಷಗಳ ನಂತರ 1.24 ಲಕ್ಷ ರಿಟರ್ನ್ಸ್ ಬರುತ್ತದೆ.
ಈ ರೀತಿಯ ಬಡ್ಡಿದರಗಳು ಹಿರಿಯ ನಾಗರೀಕರಿಗೆ ಸಿಗಲಿದ್ದು, ತಪ್ಪದೇ ಎಲ್ಲರೂ ಹೂಡಿಕೆ ಮಾಡಿ.
how much interest a senior citizen will get for 3 years in Canara Bank if he deposit 1 lakh
Our Whatsapp Channel is Live Now 👇