ಬಾಡಿಗೆ ಮನೆಯಲ್ಲಿ ವಾಸ ಮಾಡೋರಿಗೆ ಹಾಗೂ ಬಾಡಿಗೆ ಕೊಟ್ಟ ಮನೆ ಓನರ್ ಗಳಿಗೂ ಇನ್ಮುಂದೆ ಹೊಸ ರೂಲ್ಸ್!
ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ಮತ್ತು ಬಾಡಿಗೆ ಮನೆಯ ಓನರ್ ಗಳು ಎಲ್ಲರಿಗು ಕೂಡ ಸರ್ಕಾರ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆ ನಿಯಮಗಳು ಏನೇನು ಎಂದು ಪೂರ್ತಿಯಾಗಿ ತಿಳಿದುಕೊಳ್ಳೋಣ
ಬೆಂಗಳೂರು (Bengaluru) ಇದೊಂದು ಮಹಾನಗರ, ನಮ್ಮ ದೇಶದಲ್ಲೇ ಅತಿದೊಡ್ಡ ಐಟಿ ಹಬ್ ಬೆಂಗಳೂರು ಆಗಿದೆ. ದೇಶದ ಮತ್ತು ವಿಶ್ವದ ಹಲವು ಕಡೆಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವವರು ಇದ್ದಾರೆ. ಅಂಥವರು ಹೆಚ್ಚಾಗಿ ಬಾಡಿಗೆ ಮನೆಯಲ್ಲಿ (Rent House) ಇರುತ್ತಾರೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಏನು ಕಮ್ಮಿ ಇಲ್ಲ, ಎಲ್ಲಿ ಬೇಕಾದರೂ ಬಾಡಿಗೆ ಮನೆ (Rented House) ಸಿಗುತ್ತದೆ, ಆದರೆ ಬಾಡಿಗೆ ತುಂಬಾ ಜಾಸ್ತಿ ಇರುತ್ತದೆ. ಹಾಗೆಯೇ ಬಾಡಿಗೆ ಮನೆಯಲ್ಲಿ ಕೆಲವು ಸಮಸ್ಯೆಗಳು ಕೂಡ ಇರುತ್ತದೆ.
ಹೌದು, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ವ್ಯಕ್ತಿಗಳಿಗೆ ಕೆಲವು ಸಾರಿ ಓನರ್ ಗಳಿಂದ ತೊಂದರೆ ಆಗುತ್ತದೆ, ಇನ್ನು ಕೆಲವು ಸಾರಿ ಬಾಡಿಗೆ ಮನೆಯಲ್ಲಿ ಇರುವವರೇ ಓನರ್ ಗಳಿಗೆ ಸಮಸ್ಯೆ ಕೊಟ್ಟಿರುವ ಉದಾಹರಣೆಗಳು ಕೂಡ ಇದೆ.
ಹಾಗಾಗಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ಮತ್ತು ಬಾಡಿಗೆ ಮನೆಯ ಓನರ್ ಗಳು ಎಲ್ಲರಿಗು ಕೂಡ ಸರ್ಕಾರ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆ ನಿಯಮಗಳು ಏನೇನು ಎಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..\
9, 10 ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹75,000 ಸ್ಕಾಲರ್ಶಿಪ್! ಸರ್ಕಾರದಿಂದ ಹೊಸ ಯೋಜನೆ
ಹೊಸ ನಿಯಮ
*ಬಾಡಿಗೆ ಕೊಡೋದು ಸ್ವಲ್ಪ ಲೇಟ್ ಆದ ತಕ್ಷಣ ವಿದ್ಯುತ್ (Electricity) ನಿಲ್ಲುಸುವುದು, ನೀರು (Water) ನಿಲ್ಲಿಸುವುದು ಈ ರೀತಿ ಮಾಡೋ ಹಾಗಿಲ್ಲ. ಒಂದು ವೇಳೆ ಮಾಡಿದರೆ ನೀವು ಓನರ್ ವಿರುದ್ಧ ಕಂಪ್ಲೇಂಟ್ ಕೊಡಬಹುದು.
*ಯಾವುದೇ ವಿಷಯ ಆಗಿರಲಿ ಓನರ್ ಗಳು ಯಾವಾಗೆಂದರೆ ಆಗ ಮನೆಗೆ ಬರುವ ಹಾಗಿಲ್ಲ. 24 ಗಂಟೆಗಳ ಮೊದಲೇ ಮನೆಗೆ ಬರುವುದಾಗಿ ಮಾಹಿತಿ ನೀಡಬೇಕು.
*ಬಾಡಿಗೆ ಪಡೆದಿರುವ ವ್ಯಕ್ತಿಯ ಇಡೀ ಕುಟುಂಬಕ್ಕೆ ಈ ಎಲ್ಲಾ ನಿಯಮಗಳ ಸಂಪೂರ್ಣ ಹಕ್ಕು ಇರುತ್ತದೆ. ಅವರಿಗೂ ಕೂಡ ಇದು ಅನ್ವಯಿಸುತ್ತದೆ.
ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ₹20,000 ರೂಪಾಯಿ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಬಾಡಿಗೆ ಮನೆಗೆ ಹೋಗುವ ಮೊದಲು ಈ ನಿಯಮಗಳನ್ನು ತಿಳಿದುಕೊಳ್ಳಿ.
ಇದು ಬಾಡಿಗೆದಾರರಿಗೆ ಇರುವ ನಿಯಮಗಳಾಗಿದೆ. ಇದರ ಜೊತೆಗೆ ಇನ್ನು ಕೆಲವು ನಿಯಮಗಳು ಇದೆ. ಕೆಲವು ಜಾಗಗಳಲ್ಲಿ ಹಾಗೂ ಕೆಲವು ಅಪಾರ್ಟ್ಮೆಂಟ್ ಗಳಲ್ಲಿ ಅವಿವಾಹಿತರಿಗೆ ಬಾಡಿಗೆ ಮನೆ ಕೊಡುವುದಿಲ್ಲ ಎನ್ನುವ ನಿಯಮ ಕೂಡ ಇದೆ. ಅದನ್ನು ಕೂಡ ತಿಳಿದುಕೊಳ್ಳಿ.
ಹಾಗೆಯೇ ಒಂದು ಮನೆಯಲ್ಲಿ 1 ವರ್ಷಕ್ಕಿಂತ ಹೆಚ್ಚಿನ ಸಮಯ ಬಾಡಿಗೆಗೆ ಇರುತ್ತೀರಿ ಎಂದರೆ, ಅದಕ್ಕಾಗಿ ನೀವು ಅಗ್ರಿಮೆಂಟ್ ಮಾಡಿಸಿಕೊಳ್ಳುವುದು ಒಳ್ಳೆಯದು, ಈ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
*ಬಾಡಿಗೆ ಹಣ ಎಷ್ಟಿರುತ್ತದೆಯೋ, ಅದರಲ್ಲಿ 50% ಹಣವನ್ನು Maintenance ಗಾಗಿ ಪಡೆದುಕೊಳ್ಳಬಹುದು ಎನ್ನುವ ವಿಷಯ, ಹಲವು ಜನರಿಗೆ ಗೊತ್ತಿಲ್ಲ. ಇದನ್ನು ಎಲ್ಲರೂ ತಿಳಿದುಕೊಳ್ಳುವುದು ಒಳ್ಳೆಯದು.
ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಕೇಂದ್ರದಿಂದ ಸಿಗಲಿದೆ ₹20 ಲಕ್ಷ ಸಾಲ! ಅರ್ಜಿ ಸಲ್ಲಿಸಿ
*ನಮ್ಮ ರಾಜ್ಯದಲ್ಲಿ ಮನೆಯ ಓನರ್ ಗಳು ಬಾಡಿಗೆ ಜಾಸ್ತಿ ಮಾಡಬೇಕು ಎಂದರೆ, 3 ತಿಂಗಳ ಮೊದಲೇ ಬಾಡಿಗೆದಾರರಿಗೆ ತಿಳಿಸಿರಬೇಕು. ಇದು ನಿಯಮ ಆಗಿದೆ, ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ರೀತಿಯ ನಿಯಮಗಳಿವೆ.
*ನೀವು ರೆಂಟ್ ಅಗ್ರಿಮೆಂಟ್ ನಲ್ಲಿ (Rent Agreement) ಬಾಡಿಗೆ ಎಷ್ಟು ಎಂದು ಬರೆಸಿರುತ್ತೀರೋ, ಅದರಲ್ಲಿ 5% ಇಂದ 10% ಮೊತ್ತವನ್ನು ಮಾತ್ರ ಒಂದು ಸಾರಿಗೆ ಬಾಡಿಗೆ ಜಾಸ್ತಿ ಮಾಡಬಹುದು. ಅದಕ್ಕಿಂತ ಜಾಸ್ತಿ ಮಾಡುವ ಹಾಗಿಲ್ಲ..
New rules for those who live in a rented house and for the owners of rented houses