ಗಂಡನ ಆಸ್ತಿಯಲ್ಲಿ ಹೆಂಡತಿಗೆ ನಿಜಕ್ಕೂ ಎಷ್ಟು ಹಕ್ಕಿದೆ! ಇಲ್ಲಿದೆ ಮಹತ್ವದ ಮಾಹಿತಿ

Story Highlights

ಒಂದು ವೇಳೆ ಪತಿ ಮರಣ ಹೊಂದಿದರೆ ಆಗ ಆತನ ಆಸ್ತಿ (Property) ಯಾರಿಗೆ ಸಲ್ಲುತ್ತದೆ ಎನ್ನುವುದು ಇಲ್ಲಿ ಬಹಳ ಮುಖ್ಯವಾಗಿರುವ ವಿಚಾರ

ನಮ್ಮ ದೇಶದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಬೇರೆ ಬೇರೆ ಕಾನೂನುಗಳು ಜಾರಿಯಲ್ಲಿ ಇವೆ. ಈ ಕಾನೂನಿನ ಅನ್ವಯ ಆಸ್ತಿ ವಿವಾದಗಳನ್ನು ಪರಿಹರಿಸಲಾಗುತ್ತದೆ. ಆಸ್ತಿ ವಿವಾದ ಎನ್ನುವ ವಿಚಾರಕ್ಕೆ ಬಂದರೆ ನಮ್ಮ ದೇಶದಲ್ಲಿ ಶತಮಾನಗಳಿಂದಲೂ ಬಗೆಹರಿಯದೆ ಇರುವ ಆಸ್ತಿ (property) ಸಮಸ್ಯೆಗಳು ಕೂಡ ಇವೆ ಎಂದರೆ ಅತಿಶಯೋಕ್ತಿಯಲ್ಲ.

ಇತ್ತೀಚಿನ ದಿನಗಳಲ್ಲಿ ಅಂತೂ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಹಾಗೆ ಸ್ವಂತ ತಂದೆ ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ ನಡುವೆನೇ ಜಗಳ ವೈಮನಸ್ಸು, ಮನಸ್ತಾಪ ಉಂಟಾಗುತ್ತದೆ.

ಆದರೆ ನಾವು ಯಾವಾಗ ಆಸ್ತಿ ಬಗ್ಗೆ ಸರಿಯಾದ ಕಾನೂನು ತಿಳಿದುಕೊಂಡಿರುತ್ತೇವೆಯೋ ಆಗ ನಮಗೆ ಯಾರು ಮೋಸ ಮಾಡಲು ಸಾಧ್ಯವಿಲ್ಲ. ಹಾಗೂ ನಾವು ಕಾನೂನಿನ ಪ್ರಕಾರ ನಮಗೆ ಸೇರಬೇಕಾಗಿರುವ ಆಸ್ತಿಯನ್ನು ಹಿಂಪಡೆದುಕೊಳ್ಳಲು ಕೂಡ ಸಾಧ್ಯವಿದೆ.

ಈ ಮಿಷನ್ ಖರೀದಿಗೆ 45,000 ಬಂಡವಾಳ ಹಾಕಿದ್ರೆ ಪ್ರತಿ ತಿಂಗಳು 1 ಲಕ್ಷ ಆದಾಯ ಫಿಕ್ಸ್

ಗಂಡನ ಆಸ್ತಿಯಲ್ಲಿ ಹೆಂಡತಿಯ ಹಕ್ಕು! (Wife’s rights on husband property)

ಸಾಮಾನ್ಯವಾಗಿ ಆಸ್ತಿ ವಿಚಾರಕ್ಕೆ ಬಂದಾಗ ಹೆಣ್ಣು ಮಕ್ಕಳಿಗೆ ಹೆಚ್ಚಿನ ಮಹತ್ವವನ್ನು ಕೊಡಲಾಗುವುದಿಲ್ಲ ಗಂಡು ಮಕ್ಕಳೇ ವಾರಸುದಾರರು ಎನ್ನುವ ಕಲ್ಪನೆ ಸಾಕಷ್ಟು ಜನರಲ್ಲಿ ಇದೆ.

ಆದರೆ ಕಾನೂನಿನಲ್ಲಿ ಈಗಾಗಲೇ ತಿಳಿಸಿರುವಂತೆ, ಒಬ್ಬ ಗಂಡು ಮಗುವಿಗೆ ತಂದೆ ತಾಯಿಯ ಆಸ್ತಿಯಲ್ಲಿ ಎಷ್ಟು ಹಕ್ಕಿದೆಯೋ ಹೆಣ್ಣು ಮಕ್ಕಳಿಗೂ ಕೂಡ ಅಷ್ಟೇ ಪಾಲಿದೆ. ಇದನ್ನು ಅರ್ಥಮಾಡಿಕೊಳ್ಳದೆ ಅದೆಷ್ಟೋ ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುತ್ತೇವೆ.

ಗಂಡ ಹೆಂಡತಿಯ ನಡುವಿನ ಆಸ್ತಿ ವಿಚಾರವನ್ನು ನೋಡುವುದಾದರೆ, ಗಂಡನ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಹಕ್ಕಿದೆ ಎನ್ನುವುದನ್ನ ತಿಳಿದುಕೊಳ್ಳಬೇಕು. ಎಷ್ಟೋ ಸಂದರ್ಭದಲ್ಲಿ ಗಂಡನ ಜೊತೆಗೆ ಜೀವನ ಮಾಡಲು ಸಾಧ್ಯವಾಗದೆ ಹೆಂಡತಿ ಬೇರೆ ಹೋದರೆ ಗಂಡ ಆಕೆಗೆ ಜೀವನಾಂಶವನ್ನು ಕೊಡಬೇಕು. ಒಂದು ವೇಳೆ ಪತಿ ಮರಣ ಹೊಂದಿದರೆ ಆಗ ಆತನ ಆಸ್ತಿ (Property) ಯಾರಿಗೆ ಸಲ್ಲುತ್ತದೆ ಎನ್ನುವುದು ಇಲ್ಲಿ ಬಹಳ ಮುಖ್ಯವಾಗಿರುವ ವಿಚಾರ.

ನಿಮ್ಮ ಹಳೆಯ ವೋಟರ್ ಐಡಿ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಿ! ಇಲ್ಲಿದೆ ಲಿಂಕ್

property documentsಗಂಡನ ಸಂಪೂರ್ಣ ಆಸ್ತಿ ಹೆಂಡತಿಗೆ ಬರುವುದೇ?

ಇದಕ್ಕೆ ಸಾಕಷ್ಟು ಜನರಿಗೆ ಗೊಂದಲ ಇದ್ದೆ ಇರುತ್ತದೆ. ಮೊಟ್ಟ ಮೊದಲನೆದಾಗಿ ಹೆಂಡತಿ ಯಾಗಿರುವ ಹುಡುಗನ ಆಸ್ತಿ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು ಎಲ್ಲೆಲ್ಲಿ ಬ್ಯಾಂಕ್ ಖಾತೆ (Bank Account) ಇದೆ ಎಷ್ಟು ಹಣ ಹೂಡಿಕೆ ಮಾಡಿದ್ದಾರೆ ಅಥವಾ ಸೇವಿಂಗ್ಸ್ ಇಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು.

ಗಂಡನ ಆಸ್ತಿಯಲ್ಲಿ ಹೆಂಡತಿಗೆ ಸಂಪೂರ್ಣ ಹಕ್ಕಿದೆ ಆದರೆ ಆತನ ತಂದೆ-ತಾಯಿ ಬದುಕಿದ್ದರೆ ಅವರಿಗೂ ಕೂಡ ಮಗನ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ. ಇನ್ನು ಹೆಂಡತಿಯಿಂದ ಅವಳ ಮಕ್ಕಳಿಗೂ ಕೂಡ ಆಸ್ತಿ ವರ್ಗಾವಣೆ ಆಗುತ್ತದೆ.

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ

ಕೇವಲ ನಾಮಿನಿ ಆಗಿದ್ದರೆ ಸಾಲುವುದಿಲ್ಲ!

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳಲ್ಲಿ (Banks) ಯಾವುದೇ ರೀತಿಯ ಡಿಪಾಸಿಟ್ ಮಾಡುವಾಗ ನಾಮಿನಿ ಹೆಸರನ್ನು ಸೂಚಿಸುವಂತೆ ತಿಳಿಸಲಾಗುತ್ತದೆ. ಸಾಮಾನ್ಯವಾಗಿ ಗಂಡನ ಯಾವುದೇ ಆಸ್ತಿಗೆ ಹೆಂಡತಿ ನಾಮಿನಿ ಆಗಿರುತ್ತಾಳೆ. ಅಕಸ್ಮಾತ್ ಪತಿ ತೀರಿಕೊಂಡಿದ್ದು ನೀವು ಆತರ ಆಸ್ತಿಗೆ ನಾಮಿನಿ ಆಗಿದ್ದರೆ ಮಾತ್ರ ಸಾಲುವುದಿಲ್ಲ.

ಎರಡು ಲಕ್ಷಕ್ಕಿಂತ ಹೆಚ್ಚಿನ ಆಸ್ತಿಗೆ ನೀವು ನಾಮಿನಿ ಆಗಿದ್ದರೆ ಡೀಫಾಲ್ಟ್ ಆಗಿ ನಿಮ್ಮ ಕೈ ಸೇರುವುದಿಲ್ಲ. ಹಾಗೇನಾದ್ರೂ ನಿಮಗೆ ಆಸ್ತಿ ಬರಬೇಕು ಎಂದಿದ್ದರೆ ಅದಕ್ಕೆ ಕಾನೂನಿನ ಪ್ರಕಾರ ಸಾಕಷ್ಟು ಪ್ರೊಸೀಜರ್ಗಳನ್ನ ಫಾಲೋ ಮಾಡಬೇಕು. ಇದಕ್ಕಾಗಿ ನೀವು ಪರಿಣಿತ ಲಾಯರ್ ಭೇಟಿ ಮಾಡಿ ನಿಮ್ಮ ಪತಿಯ ಆಸ್ತಿಯಲ್ಲಿ ನಿಮಗೆ ಇರುವ ರೈಟ್ಸ್ ಬಗ್ಗೆ ತಿಳಿದುಕೊಂಡು ಮುಂದುವರಿಯಬಹುದು.

ಬಡವರಿಗೆ ಉಚಿತ ವಸತಿ ಯೋಜನೆ! ಅರ್ಜಿ ಸಲ್ಲಿಸಲು ಲಿಂಕ್ ಜೊತೆ ಮಾಹಿತಿ ಇಲ್ಲಿದೆ

How much right does the wife have in her husband’s property

Related Stories