₹10 ಲಕ್ಷ ಲೋನ್‌ಗೆ EMI ಎಷ್ಟು? ಬಡ್ಡಿ ಎಷ್ಟು ಕಟ್ಟಬೇಕಾಗುತ್ತೆ? ಹೀಗೆ ಲೆಕ್ಕ ಮಾಡಿ!
ಪರ್ಸನಲ್ ಲೋನ್ ಪಡೆಯುವ ಮೊದಲು ಯಾವ ಬ್ಯಾಂಕ್ ಉತ್ತಮ ಬಡ್ಡಿದರ ನೀಡುತ್ತದೆ? ಎಷ್ಟು EMI ಬರುತ್ತದೆ? ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಸರಿಯಾಗಿ ಯೋಜನೆ ಮಾಡದೆ ಸಾಲ ಪಡೆದರೆ ನಿಮ್ಮ ಆರ್ಥಿಕ ಹೊರೆ ಹೆಚ್ಚಾಗಬಹುದು
- ಸಾಲದ ಅವಧಿ ಮತ್ತು ಬಡ್ಡಿದರವು EMI ಮೇಲೆ ದೊಡ್ಡ ಪ್ರಭಾವ ಬೀರುತ್ತವೆ
- ಹೆಚ್ಚಿನ ಅವಧಿಗೆ ಸಾಲ ಪಡೆದರೆ EMI ಕಡಿಮೆಯಾಗುತ್ತದೆ, ಆದರೆ ಒಟ್ಟು ಬಡ್ಡಿ ಹೆಚ್ಚು
- ಸಾಲಪಡೆಯುವ ಮುನ್ನ ಲೆಕ್ಕಾಚಾರ ಮಾಡಿ, ತಜ್ಞರ ಸಲಹೆ ಪಡೆಯುವುದು ಉತ್ತಮ
ಪರ್ಸನಲ್ ಲೋನ್ ತೆಗೆದುಕೊಳ್ಳುವ ಮುನ್ನ
Personal Loan : ಪ್ರತಿ ತಿಂಗಳು ಸ್ಥಿರ ಆದಾಯ ಹೊಂದಿರುವವರು ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಸಹಜ. ಮದುವೆ, ಮನೆ ಪುನಃ ನಿರ್ಮಾಣ, ವೈದ್ಯಕೀಯ ವೆಚ್ಚ ಅಥವಾ ಇನ್ನಿತರ ಖರ್ಚುಗಳಿಗೆ ಪರ್ಸನಲ್ ಲೋನ್ ಉತ್ತಮ ಆಯ್ಕೆಯಾಗಬಹುದು.
ಆದರೆ, EMI ಲೆಕ್ಕಾಚಾರ ತಿಳಿದಿರದೆ ಸಾಲ ಪಡೆಯುವುದು ಆತುರದ ನಿರ್ಧಾರವಾಗಬಹುದು. ಸಾಲದ ಮೊತ್ತ, ಬಡ್ಡಿದರ ಮತ್ತು ಅವಧಿ ಈ ಮೂರೂ ಅಂಶಗಳು ನಿಮ್ಮ EMI ಗಾತ್ರವನ್ನು ನಿರ್ಧರಿಸುತ್ತವೆ.
200 ರೂಪಾಯಿ ನೋಟು ರದ್ದು! ನೋಟುಗಳ ಬಗ್ಗೆ RBI ಕೊಟ್ಟ ಎಚ್ಚರಿಕೆ ಏನು?
ಪರ್ಸನಲ್ ಲೋನ್ (Personal Loan) ಪಡೆಯುವ ಮೊದಲು ಯಾವ ಬ್ಯಾಂಕ್ ಉತ್ತಮ ಬಡ್ಡಿದರ ನೀಡುತ್ತದೆ? ಎಷ್ಟು EMI ಬರುತ್ತದೆ? ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಸರಿಯಾಗಿ ಯೋಜನೆ ಮಾಡದೆ ಸಾಲ ಪಡೆದರೆ ನಿಮ್ಮ ಆರ್ಥಿಕ ಹೊರೆ ಹೆಚ್ಚಾಗಬಹುದು
₹10 ಲಕ್ಷ ಪರ್ಸನಲ್ ಲೋನ್‌ಗೆ ಎಷ್ಟು EMI?
₹10 ಲಕ್ಷ ಪರ್ಸನಲ್ ಲೋನ್ ಪಡೆಯಲು, ಬಡ್ಡಿದರ 11% ಆಗಿದ್ದರೆ ವಿವಿಧ ಅವಧಿಗಳಿಗೆ EMI ಈ ರೀತಿಯಾಗಿರುತ್ತದೆ:
ಅವಧಿ | EMI (₹) |
---|---|
1 ವರ್ಷ | ₹88,381 |
2 ವರ್ಷ | ₹46,607 |
3 ವರ್ಷ | ₹32,738 |
4 ವರ್ಷ | ₹25,845 |
5 ವರ್ಷ | ₹21,742 |
ಅವಧಿ ಕಡಿಮೆಯಾದಷ್ಟು EMI ಹೆಚ್ಚಿರುತ್ತದೆ, ಆದರೆ ಒಟ್ಟು ಬಡ್ಡಿ ಕಡಿಮೆಯಾಗುತ್ತದೆ. ಹೀಗಾಗಿ ನಿಮ್ಮ ಬಜೆಟ್‌ಗೆ ತಕ್ಕಂತೆ ಸಾಲ ಅವಧಿಯನ್ನು ಆಯ್ಕೆ ಮಾಡುವುದು ಮುಖ್ಯ.
EMI ಲೆಕ್ಕ ಹಾಕುವ ಸೂತ್ರ ಮತ್ತು ಬಳಕೆಯ ವಿಧಾನ
EMI ಲೆಕ್ಕ ಹಾಕಲು, ಪರ್ಸನಲ್ ಲೋನ್ ಕ್ಯಾಲ್ಕುಲೇಟರ್ ಬಳಸಬಹುದು. ಲೋನ್ ಮೊತ್ತ, ಬಡ್ಡಿದರ ಮತ್ತು ಅವಧಿ ನಮೂದಿಸಿ ಎಷ್ಟು EMI ಕಟ್ಟಬೇಕಾಗುತ್ತದೆ ಎಂಬ ಲೆಕ್ಕ ಸುಲಭವಾಗಿ ಕಂಡುಹಿಡಿಯಬಹುದು.
ಹೋಮ್ ಲೋನ್ ಪಡೆಯೋ ಮುನ್ನ ಈ 5 ತಪ್ಪುಗಳನ್ನ ತಪ್ಪಿಸಿ! ಇಲ್ಲವೇ ನೀವು ಹಳ್ಳಕ್ಕೆ ಬಿದ್ದಂತೆ
ಸಾಲ ಪಡೆಯುವ ಮುನ್ನ ಎಚ್ಚರಿಕೆ!
ಸಾಲ ಪಡೆಯುವುದು ಹಗುರ ತೀರ್ಮಾನವಲ್ಲ. ಹೀಗಾಗಿ ಬ್ಯಾಂಕ್‌ಗಳ ಹೋಲಿಕೆ ಮಾಡಿ, ಬಡ್ಡಿದರ, ಸೀಕ್ರೆಟ್ ಚಾರ್ಜ್ ಮತ್ತು ಬೇರೆ ನಿಯಮಗಳು ಏನಿವೆ ಎಂಬುದು ಪರೀಕ್ಷಿಸಿ. ಸಾಲ ಮುಗಿಯುವವರೆಗೂ ಹಣಕಾಸಿನ ಶಿಸ್ತು ಕಾಪಾಡುವುದು ಮುಖ್ಯ.
How to Calculate EMI for Personal Loan
Our Whatsapp Channel is Live Now 👇