ನಿಮ್ಮ ಸಿಲಿಂಡರ್‌ನಲ್ಲಿ ಇನ್ನು ಎಷ್ಟು ಗ್ಯಾಸ್ ಉಳಿದಿದೆ ಅಂತ ಚೆಕ್ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್
ನಿಮ್ಮ ಸಿಲಿಂಡರ್ ನಲ್ಲಿ ಗ್ಯಾಸ್ ಎಷ್ಟಿದೆ? ಯಾವಾಗ ಖಾಲಿ ಆಗಬಹುದು ಎಂದು ತಿಳಿದುಕೊಳ್ಳುವುದು ನಿಮಗೆ ಸಹಾಯ ಮಾಡುತ್ತದೆ. ಇಂದು ನಿಮ್ಮ ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ತಿಳಿಯುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ಪಡೆಯೋಣ.
ಈಗ ಹಳ್ಳಿಗಳಿಂದ ಸಿಟಿಯವರೆಗೂ ಎಲ್ಲರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಇದ್ದೇ ಇದೆ. ಗ್ಯಾಸ್ ಸಿಲಿಂಡರ್ ಗಳನ್ನೇ ಬಳಸಿ ಹೆಚ್ಚಿನ ಜನರು ಅಡುಗೆ ಮಾಡುತ್ತಾರೆ. ಸರ್ಕಾರ ಕೂಡ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್ (Free Gas Connection) ಕೊಡುವಂಥ ಯೋಜನೆಗಳನ್ನು ಜಾರಿಗೆ ತಂದಿದೆ, ಗ್ಯಾಸ್ ಸಿಲಿಂಡರ್ ಗಳ ಮೇಲೆ ಭಾರಿ ಸಬ್ಸಿಡಿಯನ್ನು ಕೂಡ ನೀಡುತ್ತಿದೆ.
ಹಾಗಾಗಿ ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು ತಪ್ಪಲ್ಲ. ಆದರೆ ಗ್ಯಾಸ್ ಸಿಲಿಂಡರ್ ಬಳಕೆ ವಿಚಾರದಲ್ಲಿ ಕೆಲವು ಸಮಸ್ಯೆಗಳು ಕೂಡ ಎದುರಾಗುತ್ತದೆ.
ಹೌದು, ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವಾಗ ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ಗ್ಯಾಸ್ ಖಾಲಿ ಆಗುತ್ತದೆ. ಅದರಲ್ಲೂ ಅಡುಗೆ ಮಾಡುವಂಥ ಸಮಯದಲ್ಲಿ ಗ್ಯಾಸ್ ಖಾಲಿ ಆಗಿ ಹೋದರೆ, ಅಂದು ಇಡೀ ದಿನ ಕಷ್ಟ ಆಗುತ್ತದೆ ಎಂದರೆ ತಪ್ಪಲ್ಲ. ಈ ಥರದ ಪರಿಸ್ಥಿತಿಗಳನ್ನು ನಿಭಾಯಿಸುವುದು ಕೂಡ ಕಷ್ಟ ಎಂದು ಹೇಳಬಹುದು.
ಈ ಬ್ಯಾಂಕ್ ಅಕೌಂಟ್ ಇದ್ದು ಜೀರೋ ಬ್ಯಾಲೆನ್ಸ್ ಇದ್ರೂ ಪರವಾಗಿಲ್ಲ, ಸಿಗುತ್ತೆ ₹10,000 ರೂಪಾಯಿ!
ಹಾಗಾಗಿ ನಿಮ್ಮ ಸಿಲಿಂಡರ್ ನಲ್ಲಿ ಗ್ಯಾಸ್ ಎಷ್ಟಿದೆ? ಯಾವಾಗ ಖಾಲಿ ಆಗಬಹುದು ಎಂದು ತಿಳಿದುಕೊಳ್ಳುವುದು ನಿಮಗೆ ಸಹಾಯ ಮಾಡುತ್ತದೆ. ಇಂದು ನಿಮ್ಮ ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ತಿಳಿಯುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ಪಡೆಯೋಣ.
ಡಬಲ್ ಸಿಲಿಂಡರ್ ಇರುವವರಿಗೆ ಈ ಸಮಸ್ಯೆ ಇಲ್ಲ
ಒಂದು ವೇಳೆ ಮನೆಯಲ್ಲಿ ಡಬಲ್ ಸಿಲಿಂಡರ್ ಇಟ್ಟುಕೊಂಡಿದ್ದರೆ, ಆಗ ಇಂಥ ಸಮಸ್ಯೆ ಎದುರಾಗುವುದಿಲ್ಲ. ಒಂದು ಸಿಲಿಂಡರ್ ಖಾಲಿ ಆದಾಗ ಇನ್ನೊಂದು ಸಿಲಿಂಡರ್ ಅನ್ನು ಫಿಕ್ಸ್ ಮಾಡಿಕೊಂಡು, ಅಡುಗೆ ಕೆಲಸ ಮುಂದುವರೆಸಬಹುದು.
ಆದರೆ ಸಿಂಗಲ್ ಸಿಲಿಂಡರ್ ಇರುವವರಿಗೆ ಇದು ಕಷ್ಟ, ಒಮ್ಮೆ ಸಿಲಿಂಡರ್ ಖಾಲಿ ಆದರೆ, ಹೊಸದಾಗಿ ಬರುವವರೆಗೂ ಕಾಯಬೇಕು. ಅಥವಾ ಇನ್ನೊಬ್ಬರ ಹತ್ತಿರ ಸಿಲಿಂಡರ್ ಅನ್ನು ಕೇಳಿ ಪಡೆದುಕೊಂಡಿರಬೇಕು. ಈ ಸಮಸ್ಯೆಗಳು ಇರುವ ಕಾರಣ ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ ಇದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು.
ನಿಮಗೂ ಕ್ರೆಡಿಟ್ ಕಾರ್ಡ್ ಬೇಕಾ? ಪಡೆಯೋದು ಈಗ ಇನ್ನಷ್ಟು ಸುಲಭ, ಜೊತೆಗೆ ಸಾಕಷ್ಟು ಬೆನಿಫಿಟ್!
ಗ್ಯಾಸ್ ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂದು ತಿಳಿಯಲು ಕೆಲವು ವಿಧಾನಗಳನ್ನು ಅನುಸರಿಸಬೇಕು. ಕೆಲವರು ಸಿಲಿಂಡರ್ ಅನ್ನು ಅಲ್ಲಾಡಿಸಿ ನೋಡುತ್ತಾರೆ, ಇನ್ನು ಕೆಲವರು ಸಿಲಿಂಡರ್ ಎತ್ತಿ ನೋಡುತ್ತಾರೆ, ತೂಕದ ಆಧಾರದ ಮೇಲೆ ಎಷ್ಟು ಗ್ಯಾಸ್ ಇರಬಹುದು ಎಂದು ತಿಳಿಯುವ ಪ್ರಯತ್ನ ಮಾಡುತ್ತಾರೆ.
ಆದರೆ ಇನ್ನೂ ಸುಲಭವಾಗಿ ತಿಳಿಯಬಹುದಾದ ಇನ್ನೊಂದು ಮಾರ್ಗವಿದೆ. ಒಂದು ಬಟ್ಟೆಯನ್ನು ಒದ್ದೆ ಮಾಡಿಕೊಂಡು, ಅದರಿಂದ ಗ್ಯಾಸ್ ಸಿಲಿಂಡರ್ ಅನ್ನು ಚೆನ್ನಾಗಿ ಒರೆಸಿ. 2 ಅಥವಾ 3 ನಿಮಿಷಗಳ ಬಳಿಕ ಸಿಲಿಂಡರ್ ಒಣಗುವುದಕ್ಕೆ ಶುರುವಾಗುತ್ತದೆ.
ಕೆಲವು ಭಾಗಗಳಲ್ಲಿ ಇದ್ದ ತೇವ ಕಡಿಮೆ ಆಗುತ್ತಾ ಬರುತ್ತದೆ. ತಕ್ಷಣವೇ ಸಿಲಿಂಡರ್ ಒಣಗಿದರೆ, ಇನ್ನು ಗ್ಯಾಸ್ (Gas Stove) ಇದೆ ಎಂದು ಅರ್ಥ, ನಿಧಾನವಾಗಿ ಒಣಗುತ್ತಾ ಬಂದರೆ ಗ್ಯಾಸ್ ಕಡಿಮೆ ಇದೆ ಎಂದು ಅರ್ಥ. ಅರ್ಧ ಸಿಲಿಂಡರ್ ಬೇಗ ಒಣಗಿ, ಇನ್ನರ್ಧ ಸಿಲಿಂಡರ್ ನಿಧಾನವಾಗಿ ಒಣಗುತ್ತಿದೆ ಎಂದರೆ, ಅರ್ಧ ಸಿಲಿಂಡರ್ ತುಂಬಿದೆ, ಅರ್ಧ ಸಿಲಿಂಡರ್ ಖಾಲಿ ಇದೆ ಎಂದು ಅರ್ಥ.
ಸ್ಟೇಟ್ ಬ್ಯಾಂಕ್ ನಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಬಡ್ಡಿಯೇ ₹35,403 ರೂಪಾಯಿ ಸಿಗಲಿದೆ! ಇಲ್ಲಿದೆ ಡೀಟೇಲ್ಸ್
ಮತ್ತೊಂದು ವಿಧಾನ, ಗ್ಯಾಸ್ ಸ್ಟವ್ ನ ಜ್ವಾಲೆಯ ಬಣ್ಣ ಗಮನಿಸುವುದು, ಹೌದು ಅಡುಗೆ ಮಾಡುವಾಗ ಸ್ಟವ್ ನ ಜ್ವಾಲೆಯ ಬಣ್ಣ ನೀಲಿ ಇದ್ದರೆ, ಆಗ ಇನ್ನು ಅನಿಲ ಇದೆ. ಯಾವುದೇ ಸಮಸ್ಯೆ ಇಲ್ಲ ಎಂದು ಅರ್ಥ.
ಒಂದು ವೇಳೆ ಹಳದಿ ಅಥವಾ ಕೆಂಪು ಬಣ್ಣಕ್ಕೆ ತಿರುಗಿದರೆ, ಆಗ ಗ್ಯಾಸ್ ಸಿಲಿಂಡರ್ ಮುಗಿಯುವ ಹಂತಕ್ಕೆ ಬಂದಿದೆ, ಹೊಸ ಸಿಲಿಂಡರ್ ಬುಕ್ ಮಾಡಬೇಕು ಎಂದು ಅರ್ಥ. ಈ ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ ಇದೆ ಎಂದು ತಿಳಿದುಕೊಳ್ಳಬಹುದು.
How to check how much gas is left in your Gas cylinder, Here are the tips