ನಿಮಗೂ ಕ್ರೆಡಿಟ್ ಕಾರ್ಡ್ ಬೇಕಾ? ಪಡೆಯೋದು ಈಗ ಇನ್ನಷ್ಟು ಸುಲಭ, ಜೊತೆಗೆ ಸಾಕಷ್ಟು ಬೆನಿಫಿಟ್!
Credit Card : ನಿಮ್ಮ ಫೋನ್ ಇಂದಲೇ ಸುಲಭವಾಗಿ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ
Credit Card : ಉದ್ಯೋಗ ಮಾಡುತ್ತಿರುವವರಿಗೆ ಬ್ಯಾಂಕ್ ಅಕೌಂಟ್ (Bank Account) ವ್ಯವಹಾರಗಳು ವಹಿವಾಟುಗಳು ಜಾಸ್ತಿ ಇರುತ್ತದೆ. ವೇತನ ಪಡೆಯಲು ಬ್ಯಾಂಕ್ ಅಕೌಂಟ್ ಇರಲೇಬೇಕು. ಹಾಗೆಯೇ ಬ್ಯಾಂಕ್ ಅಕೌಂಟ್ ಇದ್ದವರು, ಕ್ರೆಡಿಟ್ ಕಾರ್ಡ್ ಪಡೆಯಲು ಬಯಸುತ್ತಾರೆ.
ಕ್ರೆಡಿಟ್ ಕಾರ್ಡ್ ಇದ್ದಷ್ಟು ಅದರಿಂದ ಸಿಗುವ ಸೌಲಭ್ಯಗಳು ಕೂಡ ಜಾಸ್ತಿಯೇ ಇರುತ್ತದೆ. ಬಹುತೇಕ ಎಲ್ಲಾ ಬ್ಯಾಂಕ್ ಗಳು (Banks) ಕೂಡ ತಮ್ಮ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಆಫರ್ ನೀಡುತ್ತದೆ. ಹೆಚ್ಚಿನ ಜನರು ಪಡೆದುಕೊಳ್ಳುತ್ತಾರೆ..
ಹೌದು, ಕೆಲಸಕ್ಕೆ ಹೋಗುವವರು ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಗಳನ್ನು ಬಳಸುತ್ತಾರೆ. ಆ ಕ್ರೆಡಿಟ್ ಕಾರ್ಡ್ ಇಂದ ಅವರು ಸಣ್ಣ ಪುಟ್ಟ ಪೇಮೆಂಟ್ ಮಾಡಬಹುದು, ಬಿಲ್ ಪಾವತಿ (Bill Payment) ಮಾಡಬಹುದು, ಈಗಾಗಲೇ ಮಾಡಿರುವ ಸಾಲಗಳ ಇಎಂಐ (Loan EMI) ಪಾವತಿ ಮಾಡಬಹುದು.
ಸ್ಟೇಟ್ ಬ್ಯಾಂಕ್ ನಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಬಡ್ಡಿಯೇ ₹35,403 ರೂಪಾಯಿ ಸಿಗಲಿದೆ! ಇಲ್ಲಿದೆ ಡೀಟೇಲ್ಸ್
ಹೀಗೆ ಬಹಳಷ್ಟು ಸೇವೆಗಳು ಸೌಲಭ್ಯಗಳು ಕ್ರೆಡಿಟ್ ಕಾರ್ಡ್ ಇಂದ ಸಿಗುತ್ತದೆ. ಟ್ರಾವೆಲ್ ಮಾಡುವುದಕ್ಕೆ ಆಫರ್, ಸಾಲಕ್ಕೆ ಆಫರ್ ಇದೆಲ್ಲವೂ ಕ್ರೆಡಿಟ್ ಕಾರ್ಡ್ ಇಂದ ಸಿಗುವ ಕಾರಣ ಹೆಚ್ಚಿನ ಜನರು ಕ್ರೆಡಿಟ್ ಕಾರ್ಡ್ ಪಡೆಯಲು ಬಯಸುತ್ತಾರೆ.
ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಬೇಕಾ ಎಂದು ನಮಗೆ ಸಾಕಷ್ಟು ಏಜೆನ್ಟ್ ಗಳಿಂದ ಕರೆ ಕೂಡ ಬರುತ್ತದೆ. ಹಾಗೆಯೇ ವಿವಿಧ ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಸಾಕಷ್ಟು ಆಫರ್ ಗಳನ್ನು ಕೂಡ ನೀಡುತ್ತದೆ.
ಆದರೆ ಕ್ರೆಡಿಟ್ ಕಾರ್ಡ್ ಪಡೆಯುವುದಕ್ಕಿಂತ ಮೊದಲು, ನೀವು ಆನ್ಲೈನ್ ಮೂಲಕವೇ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಎನ್ನುವ ವಿಷಯ ನಿಮಗೆ ಗೊತ್ತಿರಲಿ. ಹಾಗಿದ್ದರೆ ನಿಮ್ಮ ಫೋನ್ ಇಂದಲೇ ಸುಲಭವಾಗಿ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ..
ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಕಟ್ ಆಗಿ ATM ನಿಂದ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು ಗೊತ್ತಾ?
ಅಪ್ಲೈ ಮಾಡುವಾಗ ಈ ವಿಷಯ ಗಮನಿಸಿ:
*ಎಷ್ಟು ಬಗೆಯ ಕ್ರೆಡಿಟ್ ಕಾರ್ಡ್ ಗಳು ಲಭ್ಯವಿದೆ, ಅವುಗಳಿಂದ ಸಿಗುವ ಸೌಲಭ್ಯ ಏನು? ಇದೆಲ್ಲದರ ಬಗ್ಗೆ ಮೊದಲು ರೀಸರ್ಚ್ ಮಾಡಿ ತಿಳಿದುಕೊಳ್ಳಿ.
*ಕ್ರೆಡಿಟ್ ಕಾರ್ಡ್ ಪಡೆಯಲು ಮೊದಲನೆಯದಾಗಿ ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ ಮತ್ತು ಮುಖ್ಯವಾಗುತ್ತದೆ. ಇದಿಷ್ಟನ್ನ ಬಿಟ್ಟು ಇನ್ನು ಕೆಲವು ನಿಯಮಗಳಿದ್ದು, ಅವೆಲ್ಲವನ್ನೂ ಕೂಡ ತಿಳಿದುಕೊಳ್ಳುವುದು ಒಳ್ಳೆಯದು.
*ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಯುಟಿಲಿಟಿ ಬಿಲ್, ಡಿಎಲ್, ಅಡ್ರೆಸ್ ಪ್ರೂಫ್ ಇದೆಲ್ಲವೂ ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾಗುತ್ತದೆ. ಹಾಗಾಗಿ ಈ ಡಾಕ್ಯುಮೆಂಟ್ ರೆಡಿ ಇಟ್ಟುಕೊಂಡು ಅಪ್ಲೈ ಮಾಡಿದರೆ, ಬೇಗ ಕ್ರೆಡಿಟ್ ಕಾರ್ಡ್ ಸಿಗುತ್ತದೆ.
ವ್ಯಕ್ತಿ ಮೃತಪಟ್ಟ ನಂತರ ಆತನ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಏನು ಮಾಡಬೇಕು ಗೊತ್ತಾ?
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ:
*ಯಾವ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದೆಯೋ ಆ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
*ಹೋಮ್ ಪೇಜ್ ನಲ್ಲಿ ಸೇವೆಗಳು ಎನ್ನುವ ಟ್ಯಾಬ್ ನಲ್ಲಿ ಕ್ರೆಡಿಟ್ ಕಾರ್ಡ್ ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ
*ಕ್ರೆಡಿಟ್ ಕಾರ್ಡ್ ಪಡೆಯಲು ಯಾವೆಲ್ಲಾ ಮಾಹಿತಿಗಳು ಬೇಕಿದೆಯೋ ಅದನ್ನೆಲ್ಲ ಕೇಳಲಾಗುತ್ತದೆ, ಅದಕ್ಕೆಲ್ಲ ಸರಿಯಾಗಿ ಉತ್ತರಿಸಿ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕೂಡ ಇಲ್ಲಿ ಕೇಳಲಾಗುತ್ತದೆ.
*ನಿಮಗೆ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತೆ ಇದ್ದರೆ, ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತದೆ, ಅದನ್ನು ಫಿಲ್ ಮಾಡಬೇಕು.
ಬ್ಯಾಂಕ್ ಎಟಿಎಂಗೆ ಜಾಗ ಕೊಟ್ಟು ಪ್ರತಿ ತಿಂಗಳಿಗೆ ₹60 ಸಾವಿರ ಆದಾಯ ಬರುವ ಹಾಗೆ ಮಾಡ್ಕೊಳ್ಳಿ!
*ಜೊತೆಗೆ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅಪ್ಲಿಕೇಶನ್ ಸಬ್ಮಿಟ್ ಮಾಡಬೇಕು. ಕೆಲ ದಿನಗಳ ನಂತರ ನಿಮ್ಮ ಮನೆಗೆ ಕ್ರೆಡಿಟ್ ಕಾರ್ಡ್ ಬರುತ್ತದೆ
*ನೇರವಾಗಿ ಬ್ಯಾಂಕ್ ಗೆ ಹೋಗಿ, ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
Getting a credit card is now even easier, Here are the simple steps