ಭಾರತ ಈಗ ಡಿಜಿಟಲ್ ಇಂಡಿಯಾ (Digital India) ಆಗಿದೆ. ಹೆಚ್ಚಿನ ಜನರು UPI ಬಳಕೆ ಮಾಡಿ, ಹಣದ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ನಮ್ಮ ದೇಶದಲ್ಲಿ ಈಗ ಸಣ್ಣ ಸಣ್ಣ ಅಂಗಡಿಗಳಿಂದ ದೊಡ್ಡ ದೊಡ್ಡ ಶೋರೂಮ್ ಗಳಲ್ಲಿ ಕೂಡ ಯುಪಿಐ ಬಳಕೆ ಮಾಡಿ ಹಣದ ಪೇಮೆಂಟ್ ಮಾಡಬಹುದು.

ಆನ್ಲೈನ್ ಮೂಲಕ ಹಣ ಪಾವತಿ ಮಾಡುವುದು ಸುಲಭ ಕೂಡ, ಕೆಲವೇ ಕ್ಷಣಗಳಲ್ಲಿ ಒಂದು ಅಕೌಂಟ್ (Bank Account) ಇಂದ ಇನ್ನೊಂದು ಅಕೌಂಟ್ ಗೆ ಹಣ ವರ್ಗಾವಣೆ (Money Transfer) ಮಾಡಬಹುದು.

what to do if Money Not Came From ATM after Deduct Money From Bank Account

ಇದೆಲ್ಲವೂ ಇದ್ದರು ಸಹ ಕ್ಯಾಶ್ ಬಳಕೆ ಮಾಡುವವರ ಸಂಖ್ಯೆ ಕೂಡ ಕಡಿಮೆ ಆಗಿಲ್ಲ. ಬಹಳಷ್ಟು ಹಣಕಾಸಿನ ವಹಿವಾಟುಗಳಿಗೆ ಕ್ಯಾಶ್ ಬೇಕೇ ಬೇಕು. ಈ ರೀತಿ ಪರಿಸ್ಥಿತಿಗಳಲ್ಲಿ ಹೆಚ್ಚಿನ ಜನರು ATM ಗೆ ಹೋಗುತ್ತಾರೆ.

ಇನ್ಮುಂದೆ ಆಧಾರ್ ಕಾರ್ಡ್ ಬಳಸಿ ಇಂತಹ ಕೆಲಸ ಮಾಡಿದ್ರೆ 10,000 ದಂಡ! ಸರ್ಕಾರ ಖಡಕ್ ನಿರ್ಧಾರ

24 ಗಂಟೆಗಳ ಕಾಲ ಕೂಡ ATM ಸೌಲಭ್ಯ ಲಭ್ಯವಿರುತ್ತದೆ. ಜನರು ಸುಲಭವಾಗಿ ATM ಇಂದ ಹಣವನ್ನು ವಿತ್ ಡ್ರಾ ಮಾಡಬಹುದು. ಈಗ ಪ್ರತಿಯೊಂದು ಕಡೆ, ಎಲ್ಲಾ ಬ್ಯಾಂಕ್ ನ ATM ಲಭ್ಯವಿರುತ್ತದೆ. ಹಾಗಾಗಿ ಜನರು ಸುಲಭವಾಗಿ ಕ್ಯಾಶ್ ಪಡೆಯಬಹುದು.

ಆದರೆ ATM ಇಂದ ಹಣ ಪಡೆಯುವಾಗ ಕೆಲವೊಂದು ಸಮಸ್ಯೆ ಎದುರಾಗಬಹುದು. ATM ಕೂಡ ಒಂದು ಮಷಿನ್ ಅಷ್ಟೇ ಆಗಿದ್ದು, ಕೆಲವು ಸಮಯ ಸಂದರ್ಭಗಳಲ್ಲಿ ಅದು ಕೂಡ ತಪ್ಪು ಮಾಡುತ್ತದೆ.

ಒಮ್ಮೊಮ್ಮೆ ನೀವು ಹಣ ವಿತ್ ಡ್ರಾ (Money Withdraw) ಮಾಡಲು ಹೋಗಿ, ಎಲ್ಲಾ ಮಾಹಿತಿಗಳನ್ನು ಎಟಿಎಂ ಮಷಿನ್ ನಲ್ಲಿ ಹಾಕಿದಾಗ, ನಿಮ್ಮ ಅಕೌಂಟ್ ಇಂದ ಹಣ ಡೆಬಿಟ್ ಆಗುತ್ತದೆ, ಆದರೆ ಮಷಿನ್ ಇಂದ ಹಣ ಬರುವುದಿಲ್ಲ. ಈ ರೀತಿ ಆದಾಗ ಏನು ಮಾಡಬೇಕು?

ವ್ಯಕ್ತಿ ಮೃತಪಟ್ಟ ನಂತರ ಆತನ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಏನು ಮಾಡಬೇಕು ಗೊತ್ತಾ?

Bank ATMಅಕಸ್ಮಾತ್ ನಿಮಗೂ ಕೂಡ ಇಂಥ ಪರಿಸ್ಥಿತಿ ಎದುರಾದರೆ ಮೊದಲನೆಯದಾಗಿ ಭಯ ಪಡುವ ಅವಶ್ಯಕತೆ ಇಲ್ಲ. ಈಗಿನ ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಎಂದರೆ, ಎಲ್ಲವೂ ಆನ್ಲೈನ್ ಮೂಲಕ ನಡೆಯುವ ಕಾರಣ, ಈ ರೀತಿ ಆಗುವ ಕೆಲವೇ ನಿಮಿಷಗಳಲ್ಲಿ ಆಟೊಮ್ಯಾಟಿಕ್ ಆಗಿ ನಿಮ್ಮ ಅಕೌಂಟ್ ಗೆ ಹಣ ವಾಪಸ್ ಬಂದು ಬಿಡುತ್ತದೆ.

ಹಾಗಾಗಿ ಕೆಲ ನಿಮಿಷಗಳ ಕಾಯುವ ಕೆಲಸ ಮಾಡಬಹುದು. ಸ್ವಲ್ಪ ಹೊತ್ತು ಕಾದ ಮೇಲು ಹಣ ಬರಲಿಲ್ಲ ಎಂದರೆ, ಇನ್ನೊಂದು ಮಾರ್ಗವಿದೆ..

ಬ್ಯಾಂಕ್ ಎಟಿಎಂಗೆ ಜಾಗ ಕೊಟ್ಟು ಪ್ರತಿ ತಿಂಗಳಿಗೆ ₹60 ಸಾವಿರ ಆದಾಯ ಬರುವ ಹಾಗೆ ಮಾಡ್ಕೊಳ್ಳಿ!

ATM ನಲ್ಲೇ ಕಸ್ಟಮರ್ ಕೇರ್ ಸಪೋರ್ಟ್ ನಂಬರ್ ಇರುತ್ತದೆ, ಆ ನಂಬರ್ ಗೆ ಕರೆಮಾಡಿ ದೂರು ದಾಖಲಿಸಬಹುದು. ಯಾವ ಸಮಯಕ್ಕೆ, ಯಾವ ಬ್ಯಾಂಕ್ ಎಟಿಎಂ ನಲ್ಲಿ (Bank ATM) ಹಣ ವಿತ್ ಡ್ರಾ ಮಾಡುವಾಗ ಈ ರೀತಿಯ ಸಮಸ್ಯೆ ಆಗಿದೆ ಎಂದು ಕಸ್ಟಮರ್ ಕೇರ್ ಸರ್ವಿಸ್ ಅವರಿಗೆ ತಿಳಿಸಿದರೆ, ಅವರು ದೂರು ದಾಖಲಿಸಿಕೊಂಡು ನಿರ್ದಿಷ್ಟ ಅವಧಿಯಲ್ಲಿ ನಿಮ್ಮ ಅಕೌಂಟ್ ಗೆ ಹಣವನ್ನು ಮತ್ತೆ ಕ್ರೆಡಿಟ್ ಮಾಡುತ್ತಾರೆ. ಈ ರೀತಿ ನೀವು ಮಾಡಬಹುದು.

what to do if Money Not Came From ATM after Deduct Money From Bank Account