ಈ ಬ್ಯಾಂಕ್ ಅಕೌಂಟ್ ಇದ್ದು ಜೀರೋ ಬ್ಯಾಲೆನ್ಸ್ ಇದ್ರೂ ಪರವಾಗಿಲ್ಲ, ಸಿಗುತ್ತೆ ₹10,000 ರೂಪಾಯಿ!
ಈ ಅಕೌಂಟ್ ನಲ್ಲಿ ಜೀರೋ ಬ್ಯಾಲೆನ್ಸ್ (Bank Balance) ಇದ್ದರು ಅಕೌಂಟ್ ಆಕ್ಟಿವ್ (Bank Account) ಆಗಿರುತ್ತದೆ.
ಕೇಂದ್ರ ಸರ್ಕಾರದ ಮೂಲಕ ಪಿಎಮ್ ನರೇಂದ್ರ ಮೋದಿ ಅವರು ಜನ್ ಧನ್ ಖಾತೆಯನ್ನು ದೇಶದ ಜನರು ತೆರೆಯಬೇಕು ಎಂದು ಸೂಚನೆ ನೀಡಿದರು. ಈ ಖಾತೆಯ ಮೂಲಕ ದೇಶದ ಬಡವರು, ಹಳ್ಳಿಗರು ಕೂಡ ಬ್ಯಾಂಕ್ ಸೇವೆಯ (Banking) ಸೌಲಭ್ಯ ಹೊಂದಬೇಕು, ಸರ್ಕಾರದಿಂದ ಸಿಗುವ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ಈ ಒಂದು ಜನ್ ಧನ್ ಖಾತೆಯನ್ನು ಜಾರಿಗೆ ತರಲಾಯಿತು.
ಪಿಎಮ್ ಮೋದಿ ಅವರ ಯೋಜನೆಯ ರೀತಿಯಲ್ಲೇ ಇಂದು ಕೋಟ್ಯಾಂತರ ಜನರು ಜನ್ ಧನ್ ಖಾತೆ ತೆರೆದಿದ್ದು, ಈ ಅಕೌಂಟ್ ನಲ್ಲಿ ಜೀರೋ ಬ್ಯಾಲೆನ್ಸ್ (Bank Balance) ಇದ್ದರು ಅಕೌಂಟ್ ಆಕ್ಟಿವ್ (Bank Account) ಆಗಿರುತ್ತದೆ.
ನಿಮಗೂ ಕ್ರೆಡಿಟ್ ಕಾರ್ಡ್ ಬೇಕಾ? ಪಡೆಯೋದು ಈಗ ಇನ್ನಷ್ಟು ಸುಲಭ, ಜೊತೆಗೆ ಸಾಕಷ್ಟು ಬೆನಿಫಿಟ್!
ಸರ್ಕಾರದ ಈ ಒಂದು ಯೋಜನೆಯ ಮೂಲಕ ಜನ್ ಧನ್ ಖಾತೆಯನ್ನು ತೆರೆದಿರುವವರಿಗೆ, ಸರ್ಕಾರದ ಯೋಜನೆಯ ಸೌಲಭ್ಯದ ಹಣವನ್ನು ಇದೇ ಅಕೌಂಟ್ ಗೆ ತಲುಪುತ್ತದೆ. ಈ ರೀತಿಯಾಗಿ ಜನರು ಸರ್ಕಾರದ ಯಾವುದೇ ಯೋಜನೆಯ ಸೌಲಭ್ಯವನ್ನು ಪಡೆಯಬೇಕು ಎಂದರೆ, ಅದರ ಹಣ ನೇರವಾಗಿ ಅವರ ಖಾತೆಗೆ ತಲುಪುವ ಕಾರಣ, ಇಲ್ಲಿ ಇನ್ಯಾರು ಕೂಡ ಜನರಿಗೆ ಮೋಸ ಮಾಡಲು ಆಗುವುದಿಲ್ಲ. ಹೀಗಾಗಿ ಜನರು ನಿಶ್ಚಿಂತೆ ಇಂದ ಇರಬಹುದು.
ಸರ್ಕಾರದ ಈ ಮಾತನ್ನು ಕೇಳಿದ ಭಾರತ ದೇಶದ ಕೋಟ್ಯಾಂತರ ಜನರು ಜನ್ ಧನ್ ಖಾತೆಯನ್ನು ಶುರು ಮಾಡಿದ್ದಾರೆ. ಈ ಅಕೌಂಟ್ ಮೂಲಕ ಸರ್ಕಾರದ ಸೌಲಭ್ಯಗಳನ್ನು ಮಾತ್ರ ಪಡೆಯಬೇಕಾ ಅಥವಾ ವೈಯಕ್ತಿಕ ಹಣಕಾಸಿನ ಚಟುವಟಿಕೆಗಳನ್ನು ಕೂಡ ನಡೆಸಬಹುದಾ ಎನ್ನುವ ಕುತೂಹಲ ಮತ್ತು ಪ್ರಶ್ನೆ ಜನರಲ್ಲಿದೆ, ಅದರ ಬಗ್ಗೆ ಕೂಡ ಇಂದು ತಿಳಿದುಕೊಳ್ಳೋಣ.
ಜನ್ ಧನ್ ಖಾತೆ ಹೊಂದಿರುವವರಿಗೆ ಪಿಎಮ್ ಕಿಸಾನ್ ಯೋಜನೆ, ಪೆನ್ಶನ್ ಯೋಜನೆ (Pension Scheme) ಇವುಗಳ ಹಣ ನೇರವಾಗಿ ಬ್ಯಾಂಕ್ ಖಾತೆಗೆ ತಲುಪುತ್ತದೆ.
ಸ್ಟೇಟ್ ಬ್ಯಾಂಕ್ ನಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಬಡ್ಡಿಯೇ ₹35,403 ರೂಪಾಯಿ ಸಿಗಲಿದೆ! ಇಲ್ಲಿದೆ ಡೀಟೇಲ್ಸ್
ಜನ್ ಧನ್ ಖಾತೆಯಲ್ಲಿ ನೀವು ಇಡುವ ಹಣಕ್ಕೆ ಉತ್ತಮ ಬಡ್ಡಿದರ ಸಿಗುತ್ತದೆ. ಇದರ ಜೊತೆಗೆ ಜನರಿಗೆ ಅನುಕೂಲ ಅಗುವಂಥ ಮತ್ತೊಂದು ವಿಷಯ ಏನು ಎಂದರೆ, ಜನ್ ಧನ್ ಖಾತೆ ಹೊಂದಿರುವ ವ್ಯಕ್ತಿಗಳಿಗೆ ಇನ್ನೊಂದು ಸೌಲಭ್ಯವಿದೆ. ಅದು ಏನು ಎಂದರೆ, ಈ ಅಕೌಂಟ್ ನಲ್ಲಿ 2000 ರೂಪಾಯಿಯ ಓವರ್ ಡ್ರಾಫ್ಟ್ ಸೌಲಭ್ಯ ಸಿಗುತ್ತದೆ.
ಹಾಗೆಯೇ 2 ಲಕ್ಷದಷ್ಟು ಆಕ್ಸಿಡೆಂಟ್ ಇನ್ಷುರೆನ್ಸ್ (Insurance) ಕೂಡ ಜನ್ ಧನ್ ಖಾತೆ ಇರುವವರಿಗೆ ಸಿಗುತ್ತದೆ ಎನ್ನುವುದು ಮತ್ತೊಂದು ಸೌಲಭ್ಯ ಆಗಿದೆ..ಓವರ್ ಡ್ರಾಫ್ಟ್ ಎಂದರೆ ನಿಮ್ಮ ಅಕೌಂಟ್ ನಲ್ಲಿ ಸೊನ್ನೆ ಬ್ಯಾಲೆನ್ಸ್ (Zero Balance) ಇದ್ದಾಗಲು ಸಹ ಈ ಹಣವನ್ನು ನೀವು ಬಳಸಿಕೊಳ್ಳಬಹುದು.
ಬ್ಯಾಂಕ್ ಅಕೌಂಟ್ನಲ್ಲಿ ಹಣ ಕಟ್ ಆಗಿ ATM ನಿಂದ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು ಗೊತ್ತಾ?
ಓವರ್ ಡ್ರಾಫ್ಟ್ ಮೊತ್ತವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಿ ಕ್ಲಿಯರ್ ಮಾಡಿದರೆ, ಬಳಿಕ 10 ಸಾವಿರ ರೂಪಾಯಿಗಳಷ್ಟು ಓವರ್ ಡ್ರಾಫ್ಟ್ ಬಳಸುವುದಕ್ಕೆ ಅವಕಾಶ ಸಿಗುತ್ತದೆ. ನೀವು ಪಡೆದ ಹಣ ಮರುಪಾವತಿಗೆ ಎಷ್ಟು ದಿನ ತೆಗೆದುಕೊಳ್ಳುತ್ತೀರೋ, ಅಷ್ಟು ದಿನಕ್ಕೆ ಮಾತ್ರ ಬಡ್ಡಿ ಕಟ್ಟಬೇಕು. ಹಣ ಉಪಯೋಗಿಸಿಲ್ಲ ಎಂದರೆ, ಅದಕ್ಕೆ ಶುಲ್ಕ ಪಾವತಿ ಮಾಡುವ ಹಾಗಿಲ್ಲ.
ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ಪ್ಯಾನ್ ಕಾರ್ಡ್, ವೋಟರ್ ಐಡಿ ಈ ಎಲ್ಲಾ ದಾಖಲೆ ಇದ್ದರೆ, ಜನ್ ಧನ್ ಖಾತೆಯನ್ನು ಸುಲಭವಾಗಿ ತೆರೆಯಬಹುದು.
you will get 10,000 Rupees, Even with zero balance in this bank account