ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಇನ್ನೇನು ಸದ್ಯದಲ್ಲಿಯೇ ಲೋಕಸಭಾ ಚುನಾವಣೆ (Loksabha election) ಘೋಷಣೆ ಆಗಲಿದೆ, ಈ ಹಿನ್ನೆಲೆಯಲ್ಲಿ ಸರ್ಕಾರವು ಕೂಡ ವೋಟರ್ ಐಡಿ (voter ID) ವಿಚಾರದಲ್ಲಿ ಹೆಚ್ಚು ಅಲರ್ಟ್ ಆಗಿದೆ ಎನ್ನಬಹುದು.

ಹೊಸದಾಗಿ ಮತದಾರರ ಚೀಟಿ ಪಡೆದುಕೊಳ್ಳುವವರಿಗೆ ಹೊಸ ಮತದಾರ ಚೀಟಿ ಕೊಡುವುದು ಅಥವಾ ಹಳೆಯ ಚೀಟಿ ಹೊಂದಿರುವವರಿಗೆ ಅಗತ್ಯ ಇರುವ ತಿದ್ದುಪಡಿ ಮಾಡುವುದು ಕಡ್ಡಾಯ ಎಂಬುದನ್ನು ಕೂಡ ಸರ್ಕಾರ ಸೂಚಿಸಿದೆ.

ಬಡವರ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ; 2,67 ಲಕ್ಷ ಸಾಲ, ಬಡ್ಡಿಯಲ್ಲೂ ಸಬ್ಸಿಡಿ

ವೋಟರ್ ಐಡಿ ಜೊತೆಗೆ ಆಧಾರ್ ಲಿಂಕ್ (Voter ID link with Aadhaar card)

ಇತ್ತೀಚಿನ ದಿನಗಳಲ್ಲಿ ಯಾವುದೇ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ತಿಳಿದುಕೊಳ್ಳಲು ಆಧಾರ್ ಕಾರ್ಡ್ ಅನ್ನು ಇತರ ಖಾತೆ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆ, (bank account) ಪ್ಯಾನ್ ಕಾರ್ಡ್ (Pan Card), ರೇಷನ್ ಕಾರ್ಡ್ (Ration Card) ಹಾಗೂ ಇದೀಗ ವೋಟರ್ ಐಡಿ (Voter ID) ಜೊತೆಗೂ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು (voter ID Aadhar Card link mandatory) ಎನ್ನುವ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ. ಮತದಾರರ ಚೀಟಿ (ಎಪಿಕ್) ಆಧಾರದೊಂದಿಗೆ ಲಿಂಕ್ ಮಾಡಲು ಸರಳ ವಿಧಾನವೂ ಇದೆ.

ಕಡಿಮೆ ಕ್ರೆಡಿಟ್ ಸ್ಕೋರ್ ಇದ್ರೂ ಪರ್ಸನಲ್ ಲೋನ್ ಪಡೆಯೋದು ಹೇಗೆ! ಇಲ್ಲಿದೆ ಟ್ರಿಕ್ಸ್

ಎಪಿಕ್ ಜೊತೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ?

Voter ID Aadhaar Link2015ರಲ್ಲಿಯೇ ಆಧಾರ್ ಜೊತೆಗೆ ಎಪಿಕ್ ಜೋಡಣೆ ಆಗಬೇಕು ಎನ್ನುವ ನಿಯಮವನ್ನು ಜಾರಿಗೆ ತರಲಾಗಿದೆ. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಸೂಚಿಸಿತ್ತು. ನಂತರ 2019 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದ ಸರ್ಕಾರ ಮತ್ತೆ ಕೆಲವು ಶಿಫಾರಸುಗಳ ಜೊತೆಗೆ ಎಪಿಕ್ ಮತ್ತು ಆಧಾರ್ ಲಿಂಕ್ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ (supreme court) ಎದುರು ವಾದ ಮಂಡಿಸಿತ್ತು. ಇದೀಗ ಚುನಾವಣಾ ಸುಧಾರಣಾ ಮಸೂದೆಯನ್ನು ಮಂಡಿಸಿ ಆ ಮೂಲಕ ಎಪಿಕ್ ಹಾಗೂ ಆಧಾರ ಲಿಂಕ್ ಆಗುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.

ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳು! ಕಡಿಮೆ ಬಡ್ಡಿ, ಅರ್ಧಕ್ಕೆ ಅರ್ಧದಷ್ಟು ಹಣ ಉಳಿತಾಯ

ಆಧಾರ್ ಲಿಂಕ್ ಮಾಡುವುದರಿಂದ ಆಗುವ ಪ್ರಯೋಜನ! (Benefit of Aadhar voter ID link)

ಎಪಿಕ್ ಜೊತೆಗೆ ಆಧಾರ್ ಲಿಂಕ್ ಮಾಡುವುದರಿಂದ ಚುನಾವಣೆ ಸಮಯದಲ್ಲಿ ಮತದಾನದ ವಿಷಯದಲ್ಲಿ ಆಗುವ ಎಲ್ಲಾ ವಂಚನೆಗಳನ್ನು ತಡೆಯಬಹುದು. ಒಂದು ವೇಳೆ ನಿಮ್ಮ ಬಳಿ ಆಧಾರ್ ಇಲ್ಲದೆ ಇದ್ದಲ್ಲಿ ಇತರ ಯಾವುದೇ ಗುರುತಿನ ಚೀಟಿಯನ್ನು ನೀಡಿ ಜೋಡಣೆ ಮಾಡಿಕೊಳ್ಳಬಹುದು.

ಉದಾಹರಣೆಗೆ ಪ್ರಧಾನಮಂತ್ರಿ ಭಾವಚಿತ್ರ ಇರುವ ಆರೋಗ್ಯ ಕಾರ್ಡ್, ಪಾಸ್ ಪೋರ್ಟ್, ಪ್ರಧಾನ ಮಂತ್ರಿ ಆರೋಗ್ಯ ವಿಮೆ, ಸ್ಮಾರ್ಟ್ ಕಾರ್ಡ್ (health insurance smart card) ಮೊದಲದ ಯಾವುದೇ ಗುರುತಿನ ಚೀಟಿ ನೀಡಿ ಲಿಂಕ್ ಮಾಡಿಕೊಳ್ಳುವುದು.

ವರ್ಷದಲ್ಲಿ ನಾಲ್ಕು ಬಾರಿ ಹೆಸರು ಸೇರ್ಪಡೆಗೆ ಅವಕಾಶ

ಎಪಿಕ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಜೊತೆಗೆ ಇನ್ನು ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದ್ದು, ವರ್ಷದಲ್ಲಿ ನಾಲ್ಕು ಬಾರಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅವಕಾಶ ನೀಡಲಾಗಿದೆ.

18 ವರ್ಷ ತುಂಬಿದ ನಂತರ ಜನವರಿ ತಿಂಗಳಲ್ಲಿ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಮಾಡಿಕೊಡಲಾಗಿತ್ತು ಇನ್ನು ಮುಂದೆ ವರ್ಷದಲ್ಲಿ ನಾಲ್ಕು ಬಾರಿ ಅವಕಾಶವಿದ್ದು 18 ವರ್ಷ ತುಂಬಿದವರು ಜುಲೈ ಆಗಸ್ಟ್ ಸೆಪ್ಟೆಂಬರ್ ತಿಂಗಳಿನಲ್ಲಿ ಕೂಡ ಹೆಸರು ಸೇರ್ಪಡೆಗೆ ಅವಕಾಶ ಮಾಡಿಕೊಡಲಾಗಿದೆ.

ಈ ಬ್ಯಾಂಕ್ ಅಕೌಂಟ್ ಇರೋ ಗ್ರಾಹಕರಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಸಿಗುತ್ತಿದೆ ಹೆಚ್ಚಿನ ಬಡ್ಡಿ

ಎಪಿಕ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಹೇಗೆ (how to link Aadhaar card with epic)

ನೀವು ಚುನಾವಣಾ ಅಧಿಕಾರಿಗಳ (election officers) ಬಳಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಬಹುದು ಅಥವಾ ಕಚೇರಿಯಿಂದ ಕಚೇರಿಗೆ ಅಲೆಯದೆ ಕೇವಲ ಮೊಬೈಲ್ ನಲ್ಲಿ ಲಿಂಕ್ ಮಾಡಿಕೊಳ್ಳಲು ಅವಕಾಶವಿದೆ.

ಇನ್ನು ಮೊಬೈಲ್ ನಲ್ಲಿ ವೋಟರ್ಸ್ ಹೆಲ್ಪ್ ಲೈನ್ ಆಪ್ (voters helpline application) ಡೌನ್ಲೋಡ್ ಮಾಡಿಕೊಳ್ಳಿ ಅಲ್ಲಿ ಫಾರ್ಮ್ ನಂ 6ಬಿ ಆಯ್ಕೆ ಮಾಡಿಕೊಂಡು ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಹಾಕಿದ್ರೆ ಎಪಿಕ್ ಲಿಂಕ್ ಆಗುತ್ತದೆ.

ಅಧಿಕೃತ ವೆಬ್ಸೈಟ್ ಮೂಲಕವೂ ಕೂಡ ಆನ್ಲೈನ್ ನಲ್ಲಿ ಲಿಂಕ್ ಮಾಡಿಕೊಳ್ಳಲು ಅವಕಾಶವಿದೆ. ಕೊನೆಯ ದಿನಾಂಕ ಮುಗಿಯುವುದರ ಒಳಗೆ ತಕ್ಷಣವೇ ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ.

How to link Voter ID with Aadhaar Card, Here is the information

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories