Business News

ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಭರ್ಜರಿ ಸಬ್ಸಿಡಿ! ಬಂಪರ್ ಕೊಡುಗೆ ಮಿಸ್ ಮಾಡ್ಕೋಬೇಡಿ

PM Kisan Tractor Scheme : ನಮ್ಮ ಭಾರತದಲ್ಲಿ ಆಧುನಿಕ ಕೃಷಿ ಪದ್ದತಿಗೆ ಇಂದು ಹೆಚ್ಚಿನ ಆಸಕ್ತಿಯನ್ನು ವಹಿಸಲಾಗುತ್ತಿದೆ. ಇಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತರಾಗಿದ್ದು ಇದರಿಂದ ಬರುವ ಆದಾಯದ ಮೂಲಕವೇ ಬದುಕು ನಿರ್ಮಿಸಿ ಕೊಂಡಿದ್ದಾರೆ.

ಇಂದು ಹಿರಿಯ ರೈತರಷ್ಟೆ ಅಲ್ಲ, ಯುವಕರು ಕೂಡ ಕೃಷಿ (Agriculture) ಮಾಡಲು ಆಸಕ್ತಿ ವಹಿಸಿದ್ದಾರೆ. ಇಂದು ಕೃಷಿ ಅಂತ ಬಂದಾಗ ಮೈ ದುಡಿದು ಕೆಲಸ ಮಾಡಬೇಕು ನಿಜ, ಆದರೆ ಆಧುನಿಕ ಕೃಷಿ ಪದ್ದತಿ ಯಿಂದ ರೈತರಿಗೆ ಕೆಲಸ ಸುಲಭ ವಾಗಿದೆ.

Huge subsidy under PM Kisan Tractor Scheme

ಹಾಗಾಗಿ ಇಂದು ರೈತರಿಗೆ ಹೊಲಗಳಲ್ಲಿ ಕೆಲಸ ಮಾಡಲು ಮುಖ್ಯವಾಗಿ ಟ್ರಾಕ್ಟರ್ ಗಳು ಅಗತ್ಯವಾಗಿ ಬೇಕಿರಲಿದೆ.‌ ಕೃಷಿ ಕೆಲಸವನ್ನು ಸುಲಭವಾಗಿ ಮಾಡಲು ಎಲ್ಲಾ ರೈತರ ಅಗತ್ಯ ಸಾಧನ ಎಂದೇ ‌ಹೇಳಬಹುದು. ಹೀಗಾಗಿ ಆರ್ಥಿಕವಾಗಿ ಹಿಂದುಳಿದ ರೈತರಿಗೆ ಟ್ರಾಕ್ಟರ್ ಖರೀದಿ (Buy Tractor) ಮಾಡಲು ಸಹಾಯ ಧನ ನೀಡಲಾಗುತ್ತದೆ.

ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ₹2000 ರೂಪಾಯಿ ಸಿಗಲಿದೆ! ಪಿಎಂ ಕನ್ಯಾ ಯೋಜನೆ ಬಗ್ಗೆ ಸ್ಪಷ್ಟನೆ

ಹಾಗಾಗಿ ರೈತರು ಸಹಾಯಧನ ಪಡೆಯಲು ಏನು ಮಾಡಬೇಕು ಎಂದು ತಿಳಿಯಲು ಈ‌ ಲೇಖನ ಪೂರ್ತಿಯಾಗಿ ಓದಿ. ಹೌದು ರೈತರಿಗಾಗಿ ಸರ್ಕಾರ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯಡಿ ಸಹಾಯಧನ ಪಡೆಯಬಹುದು‌.

ಸಬ್ಸಿಡಿ ದರ ಸಿಗಲಿದೆ

ಟ್ರಾಕ್ಟರ್ ಖರೀದಿ ಮಾಡುವ ರೈತರಿಗೆ ಶೇಕಡಾ 50 ರಷ್ಟು ಸಬ್ಸಿಡಿ (Subsidy Loan) ಸಿಗಲಿದೆ. ರೈತನು ಯಾವುದೇ ಕಂಪನಿಯ ಟ್ರ್ಯಾಕ್ಟರ್ ಗಳನ್ನು ಖರೀದಿ ಮಾಡುದಾದರೆ ಅರ್ಧ ದರ ನೀಡಿದರೆ ಸಾಕು, ಉಳಿದ ಅರ್ಧದಷ್ಟು ಹಣವನ್ನು ಸರ್ಕಾರವು ಸಬ್ಸಿಡಿಯಾಗಿ ನೀಡಲಿದೆ. ಇದರಿಂದ ರೈತರು ಸುಲಭ ವಾಗಿ ಟ್ರ್ಯಾಕ್ಟರ್ ಖರೀದಿ ‌ಮಾಡಬಹುದು.

ದೇಶದ ರೈತರಿಗಾಗಿ ಬಂತು ಕ್ರೆಡಿಟ್ ಕಾರ್ಡ್ ಸೌಲಭ್ಯ! ಸಿಗಲಿದೆ ₹50,000 ತನಕ ಸುಲಭ ಸಾಲ

PM Kisan Tractor Schemeಈ ದಾಖಲೆ ಬೇಕು

*ಆಧಾರ್ ಕಾರ್ಡ್
*ಜಮೀನಿನ ದಾಖಲೆ ಪತ್ರ
*ಅರ್ಜಿದಾರರ ಗುರುತಿನ ಚೀಟಿ, *ವೋಟರ್ ಐಡಿ
*ಪ್ಯಾನ್ ಕಾರ್ಡ್
*ಪಾಸ್‌ಪೋರ್ಟ್ ಸೈಜ್ ಪೋಟೋ
*ಬ್ಯಾಂಕ್ ಖಾತೆ ವಿವರಗಳು (Bank Account Details)

ಪ್ಯಾನ್ ಕಾರ್ಡ್ ಕುರಿತು ಹೊಸ ರೂಲ್ಸ್ ಜಾರಿಗೆ ತಂದ ಕೇಂದ್ರ ಸರ್ಕಾರ; ಇಂದಿನಿಂದಲೇ ಅನ್ವಯ!

ಈ ಷರತ್ತು ಇದೆ

*ಅರ್ಜಿದಾರನು ಭಾರತೀಯ ನಾಗರೀಕ ನಾಗಿದ್ದು ಇಲ್ಲಿ ವಾಸ ಮಾಡುತ್ತಿರಬೇಕು.
*ಅರ್ಜಿ ಹಾಕಲು ರೈತನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 60 ವರ್ಷ ಒಳಗೆ ಇರಬೇಕು.
*ಆದಾಯ ವಾರ್ಷಿಕ 1.5 ಲಕ್ಷಕ್ಕಿಂತ ಮೀರಬಾರದು
*ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರಬೇಕು,ಇದಕ್ಕೆ ಬೇಕಾದ ದಾಖಲೆ ಇರಬೇಕು.
*ಅರ್ಜಿದಾರ ಇತರ ಯಾವುದೇ ಸಬ್ಸಿಡಿ ಪಡೆದಿರಬಾರದು.

ಹಾಗಾಗಿ ರೈತರು ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಅರ್ಜಿ ಹಾಕಲು ಈ ವೆಬ್‌ಸೈಟ್ www.pmkisan.gov.in ಅಥವಾ ತಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ ಯೋಜನೆಯ ಲಾಭ ಪಡೆಯಬಹುದು.

Huge subsidy under PM Kisan Tractor Scheme

Our Whatsapp Channel is Live Now 👇

Whatsapp Channel

Related Stories